Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಮಳವಳ್ಳಿ.ಡಿ.೧೭ ರಂದು ೧೦೬೬ನೇ ಸುತ್ತೂರು ಜಯಂತಿ ಮಹೋತ್ಸವ ರಾಷ್ಟçಪತಿಗಳಿಂದ ಉದ್ಘಾಟನೆ-ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಹೇಳಿಕೆ • ಸುತ್ತೂರು ಜಯಂತಿ ಮಹೋತ್ಸವ ಹಿನ್ನೆಲೆ-ತಾಲೂಕು ಮಟ್ಟದ ಅದಿಕಾರಿಗಳ-ಜಯಂತಿ ಮಹೋತ್ಸವದ ಸಮಿತಿ ಪದಾಧಿಕಾರಿಗಳ ಸಭೆ ಮಳವಳ್ಳಿ:ಸುತತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ಅಂಗವಾಗಿ ಡಿ.೧೭ ರಂದು ರಾಷ್ಟçಪತಿಗಳು ಅಗಮಿಸಲಿದ್ದಾರೆಂದು ಶಾಸಕರು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇAದ್ರಸ್ವಾಮಿ ತಿಳಿಸಿದರು. ರಾಷ್ಟçಪತಿಗಳು ವಿಮಾನದಿಂದ ಇಳಿಯುವ ಸ್ಥಳ,ಜಯಂತಿ ನಡೆಯುತ್ತಿರುವ ವೇದಿಕೆ ನಿರ್ಮಾಣದ ಸ್ಥಳಕ್ಕೆ ಬೇಟಿ ನೀಡಿದ ಪರಿಶೀಲನೆ ನಡೆಸಿ ನಂತರ ಪಟ್ಟಣದ ತಾಲೂಕು ಪಂಚಾಯತ್ ಕಛೇರಿಯಲ್ಲಿ ಜಯಂತಿ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಅಧಿಕೃತ ಮಾಹಿತಿ ನೀಡಿ ಮಾತನಾಡಿದ ಅವರು ಡಿ.೧೬ ರಂದು ಸುತ್ತೂರು ಕ್ಷೇತ್ರದಿಂದ ಅದಿಜಗದ್ಗುರುಗಳರವರ ಉತ್ಸವಮೂರ್ತಿಯನ್ನು ಡಿ.೧೬ ರಂದು ಮಂಗಳವಾರ ಬರಮಾಡಿಕೊಳ್ಳಲಾಗುವುದು.ಡಿ.೧೭ರಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳ ದಿವ್ಯ ಸಮ್ಮುಖದಲ್ಲಿ, ರಾಜ್ಯಪಾಲರಾದ ಥಾವರ್‌ಚಂದ್‌ಗೆಹ್ಲೋತ್‌ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರ ಉಪಸ್ಥಿತಿಯಲ್ಲಿ, ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿಮುರ್ಮುರವರು ಬೆಳಿಗ್ಗೆ ೧೧ ಗಂಟೆಗೆ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವವವನ್ನು ಸಂಪ್ರದಾಯಬದ್ದವಾಗಿ ಉದ್ಘಾಟಿಸಲಿದ್ದಾರೆಂದರು. ಡಿ.೨೦ರAದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗಮಿಸುವರು,ಡಿ.೨೧ರಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾg ಬಾಗವಹಿಸುವರು,ಜಯಂತಿ ಮಹೋತ್ಸವಕ್ಕೆ ,ರಾಜ್ಯದ ಹಲವು ಮಠಾಧೀಶರುಗಳು,.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರುಗಳು,ಜನಪ್ರತಿನಿಧಿಗಳು,ಸಾಹಿತಿಗಳು,ಕಲಾವಿದರು,ಚಲನಚಿತ್ರ ನಟರುಗಳು,ಸರ್ವ ಪಕ್ಷಗಳ ಗಣ್ಯವಕ್ತಿಗಳು, ಮುಖಂಡರು ಬಾಗವಹಿಸುವರೆಂದರು. ವೈವಿದ್ಯಮಯ ಕಾರ್ಯಕ್ರಮಗಳು: ಡಿ.೧೬ ರಿಂದ ಡಿ.೨೨ ರವರೆಗೆ ನಡೆಯಲಿರುವ ಜಯಂತಯಿ ಮಹೋತ್ಸವದಲ್ಲಿ ಬೆಳಿಗ್ಗೆ ಯಿಂದ ಸಂಜೆಯವರೆಗೂ ಕೃಷಿ,ತೋಟಗಾರಿಕೆ,ಸಾವಯವ ಕೃಷಿ,ಶೈಕ್ಷಣಕ,ಆರೋಗ್ಯ,ಧಾರ್ಮಿಕ ವಿಷಯಗಳ ಸಂಭAದಿತ ವಸ್ತುಪ್ರದರ್ಶನ,ಪುಸ್ತಕ ಮಳಿಗೆ ಅಟೋಟಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು,ಮನರಂಜನೆ,ವಚನಗಾಯನ,ಜಾನಪದ ಉತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದರು. ಸೇವಕರಾಗಿ ಕೆಲಸ ನಿರ್ವಹಿಸಿ: ಸುತ್ತೂರು ಜಯಂತಿ ಮಹೋತ್ಸವ ಪಟ್ಟಣದಲ್ಲಿ ನಡೆಯುತ್ತಿರುವುದು,ರಾಷ್ಟçಪತಿಗಳು ಅಗಮಿಸುತ್ತಿರುವುದು ಈ ಬಾಗದ ಜನರ ಪುಣ್ಯವಾಗಿದೆ,ಸುತ್ತೂರು ಮಠದ ಪರಂಪರೆಯAತೆ ಸಂಪ್ರದಾಯಬದ್ದವಾಗಿ ಯಾವುದೆ ಸಣ್ಣಪುಟ್ಟ ಲೋಪಬಾರದಂತೆ ನಾನು-ನೀನು ಎನ್ನದೆ ಪಕ್ಷ-ಬೇದ ಮರೆತು,ರಾಜಕಾರಣ ಬಿಟ್ಟು,ಸರ್ವ ಸಮುದಾಯದ ಜನರು ಒಗ್ಗಟ್ಟಿನಿಂದ ಸೇವಕರಂತೆ ಕೆಲಸ ನಿರ್ವಹಿಸಿ,ಅಗಮಿಸುವ ಗಣ್ಯವ್ಯಕ್ತಿಗಳ ಅತಿಥಿ ಸತ್ಕಾರದಲ್ಲಿ,ದಾಸೋಹ ಸೇವೆಯಲ್ಲಿ ತೃಪ್ತಿದಾಯಕ ಸೇವೆ ನೀಡಿ ಎಂದ ಅವರು ಪ್ರತಿಯೊಬ್ಬರೂ ಜವಬ್ದಾರಿಯುತವಾಗಿ ಜಯಂತಿ ಯಶಸ್ವಿಗೆ ಗುರುಭಕ್ತಿಯಿಂದ ಸೇವೆ ಮಾಡೋಣವೆಂದರು. ತಾಲೂಕು ಮಟ್ಟದ ಅಧಿಕಾರಿಗಳ ಸಭೆ:ಜಯಂತಿ ಕುರಿತು ಪ್ರತ್ಯೇಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಮಾತನಾಡಿ,ರಾಷ್ಟçಪತಿಗಳ ಅಗಮನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ,ವಾಹನ ಪಾರ್ಕಿಂಗ್ ವ್ಯವಸ್ಥೆ, ಪಟ್ಟಣದ ಸ್ವಚ್ಚತೆ,ರಸ್ತೆಯ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳ ತೆರವು,ಜಯಂತಿ ಮಹೋತ್ಸವದ ಯಶಸ್ವಿಗೆ ಪೂರಕವಾಗಿ ಅಗತ್ಯವಾದ ಮೂಲಭೂತ ಸೌಲಭ್ಯ ಒದಗಿಸುವುದು,ವಿದ್ಯುತ್ ಅಡಚಣೆ ಇರದಂತೆ ಕ್ರಮ,ಅಗ್ನಿಶಾಮಕ ಠಾಣೆಗಳ ಜವಬ್ದಾರಿ,ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯವರು ಪಟ್ಟಣದ ಸೌಂದರ್ಯವನ್ನು ಹಸಿರು ಗಿಡಗಳ ತೋರಣಗಳಿಂದ ನಿರ್ವಹಣೆ, ಆರೋಗ್ಯ ಇಲಾಖೆ ಸದಾ ಸಿದ್ದತೆಯಲ್ಲಿರುವುದರ ಬಗ್ಗೆ ಸಲಹೆ ಸೂಚನೆ ನೀಡಿದ ಅವರು ೭ ದಿನಗಳ ಜಯಂತಿ ಯಶಸ್ವಿಗೆ ಸಕಲ ಸಿದ್ದತೆಯೊಂದಿಗೆ ಸುತ್ತೂರು ಜಯಂತಿ ಮಹೋತ್ಸವವನ್ನು ಹಬ್ಬದಂತೆ ಸಂಭ್ರಮಿಸುವAತೆ ಸೂಚನೆ ನೀಡಿದರು. ಜಯಂತಿ ಮಹೋತ್ಸವದ ಸಮಿತಿ ಸಭೆ:ಈ ಸಂದರ್ಭದಲ್ಲಿ ಜಯಂತಿ ಮಹೋತ್ಸವದ ಸಮಿತಿಯ ಸಭೆ ಪ್ರತೈಕವಾಗಿ ನಡೆಸಿ ಮಾತನಾಡಿಒದ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ನಾನು ಕ್ಷೇತ್ರದಲ್ಲಿ ಲಭ್ಯವರುವುದಿಲ್ಲ,ಆದರೆ ಜಯಂತಿ ಮಹೋತ್ಸವ ಯಾವುದೆ ತೊಂದರೆಯಾಗದAತೆ ಸುಲಲಿತವಾಗಿ ನಡೆಯಲು ಸಮಿತಿಗೆ ಏನು ಸಹಕಾರ ಬೇಕು ತಿಳಿಸಿ,ಎಲ್ಲ ಸಹಕಾರವನ್ನು ನೀಡಲು ಬದ್ದನಾಗಿದ್ದೆನೆ.ಸಮಿತಿಯವರು ಜವಬ್ದಾರಿ ತೆಗೆದುಕೊಂಡು ಗೊಂದಲವಿಲ್ಲದAತೆ ರಾಜಕಾರಣವಿಲ್ಲದಂತೆ,ಜಯAತಿ ಮಹೋತ್ಸವಕ್ಕೆ ಚ್ಯುತಿ ಬರದಂತೆ ಕೆಲಸ ನಿರ್ವಹಿಸಬೇಕು ಎಂದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು,ಸುತ್ತೂರು ಜಯಂತಿ ಮಹೋತ್ಸವದ ಸಮಿತಿಯ ಪದಾಧಿಕಾರಿಗಳು,ಜೆ.ಎಸ್.ಎಸ್.ವಿದ್ಯಾಪೀಠದ ಅದಿಕಾರಿಗಳು,ಸರ್ವ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.1
- ಹನೂರಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮ. ಹನೂರು : ಈ ದೇಶ ಕಂಡಂತಹ ಮಹಾನ್ ಚೇತನ ಹಾಗೂ ಇಡೀ ಮನುಕುಲದ ಸಮಾಜಕ್ಕೆ ನ್ಯಾಯ ಒದಗಿಸಿ ಕೊಟ್ಟಂತಹ ವಿಶ್ವ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಡೀ ದೇಶಕ್ಕೆ ಮಾದರಿ ನಾಯಕ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು. ಪಟ್ಟಣದ ಬಾಬಾ ಸಾಹೇಬ ಅಂಬೇಡ್ಕರ್ ರವರ ಪರಿನಿರ್ವಾಣ ದಿನದ ಪ್ರಯುಕ್ತ ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಂಡಿದ್ದ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನಗಳನ್ನು ಸಲ್ಲಿಸಿ ನಂತರ ಮಾತನಾಡಿದರು. ಈ ಸಮಾಜದಲ್ಲಿ ಶೋಷಣೆಗೆ ಒಳಗಾದವರು ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಧ್ವನಿ ಎತ್ತಿದ ಅವರಿಗೆ ನ್ಯಾಯ ಕೊಡಿಸಿದ ಮಹಾನ್ ಚೇತನ. ಇಂತಹ ನಾಯಕನ ಪರಿಶ್ರಮದ ಫಲವಾಗಿ ಸಂವಿಧಾನ ಜಾರಿಗೆ ಬಂದು, ಪ್ರಸ್ತುತ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಅಧಿಕಾರಿ ಚಲಾವಣೆ ಮಾಡುವಂತಾಗಿದೆ. ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಮನೋಭಾವನೆ ಬಿತ್ತಿ ಬೆಳೆದ ವ್ಯಕ್ತಿ ಇಂತಹ ಮಹಾನಾಯಕನ ಪಡೆದ ಭಾರತ ದೇಶವೆ ಧನ್ಯ ಎಂದರು. ಮೊoಬತ್ತಿ ಬೆಳಗಿಸಿ ಮೆರವಣಿಗೆ : ಬಾಬಾ ಸಾಹೇಬರನ್ನು ಕಳೆದುಕೊಂಡoತಹ ಈ ದಿನವನ್ನು ಕಪ್ಪು ದಿನ ಎಂದು ಆಚರಣೆ ಮಾಡಲಾಗುತ್ತದೆ. ಹಾಗಾಗಿ ರಾತ್ರಿ ಮೊoಬತ್ತಿ ಹಿಡಿದು ಅಂಬೇಡ್ಕರ್ ಭವನ ದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಜಾಥಾ ಮಾಡುವ ಮೂಲಕ ಬಾಬಾ ಸಾಹೇಬರಿಗೆ ನಮನಗಳನ್ನು ಎಲ್ಲರೂ ಸಲ್ಲಿಸಿದರು. ಇದೇ ಸಮಯದಲ್ಲಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯರಾದ ಸಿದ್ದರಾಜು, ಗೌತಮ್ ಶಾಲೆಯ ಕಾರ್ಯದರ್ಶಿ ರವೀಂದ್ರ, ಯಜಮಾನರುಗಳಾದ ಮಹೇಶ್, ಮಹಾದೇವಯ್ಯ,ಪುಟ್ಟರಾಜು, ಮುಖಂಡರುಗಳಾದ ಮಂಜೇಶ್ ಗೌಡ,ಚಿನ್ನವೆಂಕಟ್,ವಿಜಯ್ ಕುಮಾರ್,ಗೋಪಾಲ್ ನಾಯಕ,ಎಸ್. ಆರ್ ಮಹದೇವ್, ವೆಂಕಟೇಶ್, ನಾಗರಾಜು, ಮಧು ಸೇರಿದಂತೆ ವಿವಿಧ ಸಮುದಾಯದ ಮುಖಂಡರುಗಳು ಹಾಜರಿದ್ದರು.4
- ಕೊಳ್ಳೇಗಾಲ ಸುದ್ದಿ : ಹೆಚ್. ಕೃಷ್ಣಸ್ವಾಮಿ ಮೆಮೋರಿಯಲ್ ಟ್ರಸ್ಟ್, ರೋಟರಿ ಮಿಡ್ ಟೌನ್,ರೋಟರಿ ಲಯನ್ಸ್ ಕ್ಲಬ್ ಮತ್ತು ಕನ್ನಡ ಜೀ ವಾಹಿನಿ ಹಾಗೂ ಕೊಳ್ಳೇಗಾಲದ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಎಂ ಜಿ ಎಸ್ ವಿ ಕಾಲೇಜು ಮೈದಾನದಲ್ಲಿ ಡಿಸೆಂಬರ್ ತಿಂಗಳ 19 ಮತ್ತು 20 ರಂದು ಎರಡು ದಿನಗಳ ಕಾಲ ನಮ್ಮೂರ ಕನ್ನಡ ಹಬ್ಬ ಹಾಗೂ ಆರಕ್ಷಕರಿಗೆ ನಮನ ವಿಜಯ ಗಾನ ಎಂಬ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಹೆಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಹಾಗೂ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೇಮಲತಾ ಕೃಷ್ಣಸ್ವಾಮಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವರ್ಷವೂ ಸಹ ಜೀ ಕನ್ನಡ ವಾಹಿನಿ ಸಹಯೋಗದೊಂದಿಗೆ ಅರ್ಜುನ್ ಜನ್ಯ ಅವರ ಸಂಗೀತ ಮನೋರಂಜನಾ ಕಾರ್ಯಕ್ರಮ ನಡೆಸಲಾಗಿತ್ತು. ನಿರೀಕ್ಷೆಗೂ ಮೀರಿದ ಯಶಸ್ಸು ಮತ್ತು ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಈ ವರ್ಷವೂ ಸಹ ಖ್ಯಾತ ಗಾಯಕ ವಿಜಯಪ್ರಕಾಶ್ ರವರ ರಸಮಂಜರಿ ಕಾರ್ಯಕ್ರಮ ವಿರುತ್ತದೆ, ಕೊಳ್ಳೇಗಾಲದಲ್ಲಿ ಎರಡು ದಿನಗಳ ಕಾಲ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಮತ್ತು ಸುತ್ತಲಿನ ಗ್ರಾಮೀಣ ಜನತೆಗೆ ಉತ್ತಮ ಮನೋರಂಜನೆ ನೀಡಬೇಕು ಎಂಬುದು ನಮ್ಮ ಸದುದ್ದೇಶವಾಗಿದೆ ಎಂದರು. ದಸರ ಸಂಧರ್ಭದಲ್ಲಿ ನಡೆಯುವ ಯುವ ದಸರಾ ಮನೋರಂಜನಾ ಕಾರ್ಯಕ್ರಮ ಎಷ್ಟೋ ಜನರು ನೋಡಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ಯುವ ದಸರಾ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿ ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಉತ್ತಮ್ಮಸಾಧನೆಗೈದ ಪೋಲೀಸರಿಗೆ ನಮನ ಕಾರ್ಯಕ್ರಮ ಸಹ ನಡೆಸಲಾಗುತ್ತಿದೆ. ಹಾಗೇಯೇ ಎಲ್ಲಾ ತಂದೆ ತಾಯಂದಿರಿಗೆ ಅರ್ಪಣೆಯಾಗುವ ರೀತಿಯಲ್ಲಿ ಎರಡು ಸುಮಧುರ ಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಎರಡೂ ದಿನಗಳ ಕಾಲ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಜನಪ್ರತಿನಿಧಿಗಳು , ಸಿನಿಮಾತಾರೆಯರು ಭಾಗವಹಿಸಲಿದ್ದು ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಹರ್ಷ, ಶಿವಾನಂದ, ನಾಗರಾಜು, ಪುಟ್ಟರಸಶೆಟ್ಡಿ, ಸಂಪತ್ತು, ರಾಜೇಶ್ ಇನ್ನೂ ಅನೇಕರು ಇದ್ದರು.1
- ದಾಸ ಶ್ರೇಷ್ಠ ಶ್ರೀ ಕನಕ ದಾಸ ಜಯಂತಿ ಹಾಗೂ ಬೀರೇಶ್ವರ ಉತ್ಸವ. ಚಾಮರಾಜನಗರ /ಜಿಲ್ಲೆಯ ಹನೂರು ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ಇಂದು ನಡೆಯಿತು ಈ ಸಂಧರ್ಭದಲ್ಲಿ ಕನಕ ದಾಸ ಜಯಂತಿ ಜೊತೆಗೆ ಬೀರೇಶ್ವರ ಉತ್ಸವದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು ನಾನಾ ಭಾಗದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು ದೇವರಿಗೆ ವಿಶೇಷ ಅಲಂಕಾರ, ತೆಂಗಿನ ಕಾಯಿ ಒಡೆಯುವ ಪವಾಡ, ಬಸವನ ಪೂಜೆ, ಗಂಗಾಪೂಜೆ, ವೀರಗಾಸೆ ಕುಣಿತ, ಅಗ್ನಿಕೊಂಡ ಪ್ರವೇಶ, ಭಜನೆ ಮತ್ತು ಕೋಲಾಟಗಳು ನಡೆಯಿತು ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು ನೂರಾರು ಭಕ್ತರು ಪಾಲ್ಗೊಂಡಿದ್ದರು .ಮಹಾಮಂಗಳಾರಾತಿ, ಪ್ರಸಾದ ವಿನಿಯೋಗ ಮತ್ತು ಅನ್ನದಾಸೋಹವೂ ಆಯೋಜನೆಯಾಗಿತ್ತು.ಇದರ ಜೊತೆಗೆ ಕನಕ ದಾಸರ ಜಯಂತಿಯು ನಡೆಯಿತು.ದಾಸ ಶ್ರೇಷ್ಠ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ ಊರಿನಲ್ಲಿ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತು. ನಂತರ ಹನೂರು ಕ್ಷತ್ರದ ಜನಪ್ರಿಯ ಶಾಸಕರಾದ ಎಂ ಆರ್ ಮಂಜುನಾಥ್ ಭಾಗಿಯಾಗಿ ಜಯಂತಿ ಹಾಗೂ ಉತ್ಸವ ಯಶಸ್ವಿ ಗೊಳಿಸಿದರು. ಈ ಸಂಧರ್ಭದಲ್ಲಿ ಚಂದ್ರಶೇಖರ್, ಕೆ ಮಹದೇವು ಮಣಗಳ್ಳಿ ರಾಜಶೇಖರ್,ತಮ್ಮಯ ಗೌಡ, ಕುಮಾರ, ನಾಗೆಗೌಡ , ಕೆ. ಮಾದೇಗೌಡ ಹೆಚ್ ಶಿವರಾಮೇಗೌಡ ,ರಾಜು, ಕನಕ ಸೇವಾ ಬಳಗ ಮಣಗಳ್ಳಿ ಗುರುಮೂರ್ತಿ ಫೋಟೋ ಗ್ರಾಫರ್ ಮಣಗಹಳ್ಳಿ ಇನ್ನಿತರರು ಇದ್ದರು4
- ಚಳ್ಳಕೆರೆ ಜಾನಪದ ಸಂಭ್ರಮವು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಪ್ರಮುಖ ಭಾಗವಾಗಿದೆ. ಇದು ನಮ್ಮ ಸಮಾಜದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಪ್ರದರ್ಶಿಸುತ್ತದೆ. ಎಂದು ಬಾಪೂಜಿ ಕಾಲೇಜಿನ ಪ್ರಾಂಶುಪಾಲರಾದ ಬಾಬು ಹೇಳಿದರು.ನಗರದ ಬಾಪೂಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಅವರು ಮಾತನಾಡಿ,ಜಾನಪದ ಸಂಸ್ಕೃತಿಯು ಆಧುನಿಕತೆಯ ಪ್ರಭಾವದಿಂದಾಗಿ ಕಣ್ಮರೆಯಾಗುತ್ತಿದೆ ಎಂಬ ವಾದವಿದೆ. ನಗರೀಕರಣ, ಜಾಗತೀಕರಣ ಮತ್ತು ಡಿಜಿಟಲೀಕರಣದಂತಹ ಅಂಶಗಳು ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಪ್ರಭಾವಿಸುತ್ತಿವೆ.ಆಧುನಿಕತೆಯ ಪ್ರಭಾವ*: ಹೊಸ ತಂತ್ರಜ್ಞಾನಗಳು ಮತ್ತು ಮಾಧ್ಯಮಗಳು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಬದಲಾಯಿಸುತ್ತಿವೆ.ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆಯು ಸಾಂಪ್ರದಾಯಿಕ ಸಂಸ್ಕೃತಿಯನ್ನು ಕಳೆದುಕೊಳ್ಳಲು ಇದು ಸಹ ಕಾರಣವಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಸಾಂಪ್ರದಾಯಿಕ ಸಂಸ್ಕೃತಿಗಿಂತ ಆಧುನಿಕ ಸಂಸ್ಕೃತಿಯನ್ನು ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ.ಆದಾಗ್ಯೂ, ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.. ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಕ ಕಲೆಗಳನ್ನು ಪ್ರದರ್ಶನ ಮಾಡಿದರು...1
- Post by Abraham2
- *ಭಾರತ ನಲ್ಲಿ ವೈರಲ್*1