logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನೂತನ ಜಿಲ್ಲಾ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡಲು ಕೇಂದ್ರದ ನಾಯಕರಿಂದ ಸಭೆ: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ನೂತನವಾಗಿ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ನಾಯಕರು ಸಭೆ ಕರೆದಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಸುರ್ಜೇವಾಲ ಅವರು ಆಗಮಿಸಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. ನಾಳೆಯಿಂದ (ಗುರುವಾರ) 3 ದಿನಗಳ ಕಾಲ ವಿವಿಧ ಜಿಲ್ಲೆಗಳ ಪ್ರವಾಸದ ಬಗ್ಗೆ ಕೇಳಿದಾಗ, "ಇಂದಿನಿಂದ (ಬುಧವಾರ) ಕಲಬುರಗಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರವಾಸ ಮಾಡಲಿದ್ದೇನೆ. ವಿಧಾನ ಮಂಡಲ ಅಧಿವೇಶನದಲ್ಲಿ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಲಿದೆ" ಎಂದರು.

1 day ago
user_ಶಿವನಿ
ಶಿವನಿ
Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
1 day ago

ನೂತನ ಜಿಲ್ಲಾ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡಲು ಕೇಂದ್ರದ ನಾಯಕರಿಂದ ಸಭೆ: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ನೂತನವಾಗಿ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ನಾಯಕರು ಸಭೆ ಕರೆದಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಸುರ್ಜೇವಾಲ ಅವರು ಆಗಮಿಸಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. ನಾಳೆಯಿಂದ (ಗುರುವಾರ) 3 ದಿನಗಳ ಕಾಲ ವಿವಿಧ ಜಿಲ್ಲೆಗಳ ಪ್ರವಾಸದ ಬಗ್ಗೆ ಕೇಳಿದಾಗ, "ಇಂದಿನಿಂದ (ಬುಧವಾರ) ಕಲಬುರಗಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರವಾಸ ಮಾಡಲಿದ್ದೇನೆ. ವಿಧಾನ ಮಂಡಲ ಅಧಿವೇಶನದಲ್ಲಿ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಲಿದೆ" ಎಂದರು.

More news from ಕರ್ನಾಟಕ and nearby areas
  • ಗಣಪತಿ ಮೆರವಣಿಗೆಯಲ್ಲಿ ಮಚ್ಚು, ಚಾಕು ಹಿಡಿದು ಯುವಕರ ಹುಚ್ಚಾಟ| Veega News Kannada ಗಣಪತಿ ಮೆರವಣಿಗೆಯಲ್ಲಿ ಮಚ್ಚು, ಚಾಕು ಹಿಡಿದು ಯುವಕರ ಹುಚ್ಚಾಟ
    1
    ಗಣಪತಿ ಮೆರವಣಿಗೆಯಲ್ಲಿ ಮಚ್ಚು, 
ಚಾಕು ಹಿಡಿದು ಯುವಕರ ಹುಚ್ಚಾಟ| Veega News Kannada 
ಗಣಪತಿ ಮೆರವಣಿಗೆಯಲ್ಲಿ ಮಚ್ಚು, 
ಚಾಕು ಹಿಡಿದು ಯುವಕರ ಹುಚ್ಚಾಟ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ ಶಾಸಕಿ‌ ಮಂಜುಳಾ‌ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ‌ ಸೇವಾಕಾರ್ಯ ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ‌ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ ಮಹದೇವಪುರ ಕ್ಷೇತ್ರದಲ್ಲಿ ‌ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ ದೇಶದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ
    1
    ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ
ಶಾಸಕಿ‌ ಮಂಜುಳಾ‌ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ 
ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ   
ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ 
ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ‌ ಸೇವಾಕಾರ್ಯ  
ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ  
ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ‌ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ 
ಮಹದೇವಪುರ ಕ್ಷೇತ್ರದಲ್ಲಿ ‌ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ  
ದೇಶದ  ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು
ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ:ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಬೆಂಗಳೂರು:ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ ನಡೆದಿದ್ದು,ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ರಾಗಿಣಿ ಡ್ಯಾನ್ಸ್‌ಗೆ ಕೆಆರ್ ಪುರದ ಜನತೆ ಫಿದಾ ಆಗಿದ್ದಾರೆ.ಶ್ರೀ ಕೋಟೆ ವೆಂಕಟೇಶ್ವರ ಗೆಳೆಯರ ಬಳಗದಿಂದ ಅದ್ದೂರಿ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಈ ವೇಳೆ ಮಾತನಾಡಿದ ನಟಿ ರಾಗಿಣಿ ,ಗಣೇಶ ಹಬ್ಬ ಆಚರಣೆ ಅಂದ್ರೆ ತುಂಬಾನೇ ಖುಷಿ ನಮ್ಮ ಮನೆ ದೇವರು.ಇನ್ನೂ ಕೆಆರ್ ಪುರ ಭಾಗ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಏರಿಯಾ.ಈ ಭಾಗದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ ಸಂತಸ ತಂದಿದೆ.ಇದೇ ರೀತಿ ಗಣೇಶೋತ್ಸವ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ನಟಿ ರಾಗಿಣಿಗೆ ಹೇಳಿದ್ದಾರೆ.ಈ ವೇಳಿ ನಟಿ ರಾಗಿಣಿಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಆಯೋಜಕರಾದ ನಿಖಿಲ್ ಹಾಗೂ ದರ್ಶನ್ ಸಾಥ್ ನೀಡಿದರು.
    1
    ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ:ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್
ಬೆಂಗಳೂರು:ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ ನಡೆದಿದ್ದು,ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ರಾಗಿಣಿ ಡ್ಯಾನ್ಸ್‌ಗೆ  ಕೆಆರ್ ಪುರದ ಜನತೆ ಫಿದಾ ಆಗಿದ್ದಾರೆ.ಶ್ರೀ ಕೋಟೆ ವೆಂಕಟೇಶ್ವರ ಗೆಳೆಯರ ಬಳಗದಿಂದ ಅದ್ದೂರಿ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಈ ವೇಳೆ ಮಾತನಾಡಿದ ನಟಿ ರಾಗಿಣಿ ,ಗಣೇಶ ಹಬ್ಬ ಆಚರಣೆ ಅಂದ್ರೆ ತುಂಬಾನೇ ಖುಷಿ  ನಮ್ಮ ಮನೆ ದೇವರು.ಇನ್ನೂ ಕೆಆರ್ ಪುರ ಭಾಗ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಏರಿಯಾ.ಈ ಭಾಗದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ ಸಂತಸ ತಂದಿದೆ.ಇದೇ ರೀತಿ ಗಣೇಶೋತ್ಸವ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ನಟಿ ರಾಗಿಣಿಗೆ ಹೇಳಿದ್ದಾರೆ.ಈ ವೇಳಿ ನಟಿ ರಾಗಿಣಿಗೆ  ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಆಯೋಜಕರಾದ ನಿಖಿಲ್ ಹಾಗೂ ದರ್ಶನ್ ಸಾಥ್ ನೀಡಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ : ನಿಖಿಲ್ ಕುಮಾರಸ್ವಾಮಿ ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ದಿಸಲಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು. ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದರು.
    1
    ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ : ನಿಖಿಲ್ ಕುಮಾರಸ್ವಾಮಿ
ರಾಮನಗರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ದಿಸಲಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು.
ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದರು.
    user_Ramanagsra News
    Ramanagsra News
    Photographer ರಾಮನಗರ, ರಾಮನಗರ, ಕರ್ನಾಟಕ•
    57 min ago
  • ಮುಂದಿನ ವಿಧಾನ ಸಭಾ ಚುನಾವಣೆಗೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ - ನಿಖಿಲ್ ಕುಮಾರಸ್ವಾಮಿ ರಾಮನಗರ -- ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ ಮಾಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಛೇರಿಗೆ ಬೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಮನಗರ ದಿಂದ ಸ್ಪರ್ಧೆ ವಿಚಾರವಾಗಿ ಈಗಾಗಲೇ  ಸ್ಪಷ್ಟವಾಗಿ ಹೇಳಿದ್ದೀನಿ, ಅದರಲ್ಲಿ ಅನುಮಾನ ಇಲ್ಲ.‌ ಇಲ್ಲಿನ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪುಗಳು ಕಾರ್ಯಕರ್ತರ ಮನಸ್ಸಿನಿಂದ ಮಾಸಿಲ್ಲ.ಅದಕ್ಕೆ ಒಂದು ಒಳ್ಳೆ ಫಲಿತಾಂಶದ ಮೂಲಕ ಅವರಿಗೆ ಉತ್ಸಾಹ ತುಂಬುವ ಮೂಲ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ನಮ್ಮ ಶಾಸಕರ ಆಯ್ಕೆಯಾಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಸದ್ಯ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು. ಅವರಿಗೆ ಶಕ್ತಿ ತುಂಬಿದಾಗ ಮಾತ್ರ ವಿಧಾನಾಸಭೆ ಹಾಗೂ ಲೋಕಸಭೆ ಚುನಾವಣೆಗೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಕೆಲವೊಂದು ಕಡೆ ಜೆಡಿಎಸ್ ಗೆ ಹಿನ್ನಲೆ ಆಗಿದೆ.ಆದ್ರೆ ಹಿನ್ನಡೆ-ಮುನ್ನಡೆ ಯಾವುದು ಶಾಶ್ವತ ಅಲ್ಲ. ಅದು ಕೇವಲ ತಾತ್ಕಾಲಿಕ, ಬದಲಾವಣೆ ಜೊತೆ ನಾವು ಮತ್ತೆ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ  ರಾಜ್ಯ ಪ್ರವಾಸ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆನೆ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡ್ತೀನಿ. ಸರ್ಕಾರ ಬಂದು 3 ವರ್ಷ ಆಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗ್ತಿಲ್ಲ. ಸಿಎಂ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದಿದ್ದಾರೆ.ಅದರಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಕೇವಲ 102 ತಾಲೂಕುಗಳನ್ನ ಮಾತ್ರ ಬರಪಿಡಿತ ಅಂತ ಘೋಷಣೆ ಮಾಡಿದ್ದಾರೆ. ಉಳಿದ ತಾಲೂಕುಗಳಲ್ಲಿ ಬರ ಇಲ್ವಾ.? ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗಿದೆ. ಹಾಗಾಗಿ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು‌
    1
    ಮುಂದಿನ ವಿಧಾನ ಸಭಾ ಚುನಾವಣೆಗೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ - ನಿಖಿಲ್ ಕುಮಾರಸ್ವಾಮಿ 
ರಾಮನಗರ -- ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ದೆ ಮಾಡುವುದಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಛೇರಿಗೆ ಬೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಮನಗರ ದಿಂದ ಸ್ಪರ್ಧೆ ವಿಚಾರವಾಗಿ ಈಗಾಗಲೇ  ಸ್ಪಷ್ಟವಾಗಿ ಹೇಳಿದ್ದೀನಿ, ಅದರಲ್ಲಿ ಅನುಮಾನ ಇಲ್ಲ.‌ ಇಲ್ಲಿನ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪುಗಳು ಕಾರ್ಯಕರ್ತರ ಮನಸ್ಸಿನಿಂದ ಮಾಸಿಲ್ಲ.ಅದಕ್ಕೆ ಒಂದು ಒಳ್ಳೆ ಫಲಿತಾಂಶದ ಮೂಲಕ ಅವರಿಗೆ ಉತ್ಸಾಹ ತುಂಬುವ ಮೂಲ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ನಮ್ಮ ಶಾಸಕರ ಆಯ್ಕೆಯಾಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸದ್ಯ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು. ಅವರಿಗೆ ಶಕ್ತಿ ತುಂಬಿದಾಗ ಮಾತ್ರ ವಿಧಾನಾಸಭೆ ಹಾಗೂ ಲೋಕಸಭೆ ಚುನಾವಣೆಗೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಕೆಲವೊಂದು ಕಡೆ ಜೆಡಿಎಸ್ ಗೆ ಹಿನ್ನಲೆ ಆಗಿದೆ.ಆದ್ರೆ ಹಿನ್ನಡೆ-ಮುನ್ನಡೆ ಯಾವುದು ಶಾಶ್ವತ ಅಲ್ಲ. ಅದು ಕೇವಲ ತಾತ್ಕಾಲಿಕ, ಬದಲಾವಣೆ ಜೊತೆ ನಾವು ಮತ್ತೆ ಪ್ರಯತ್ನ ಮಾಡಬೇಕು.
ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ  ರಾಜ್ಯ ಪ್ರವಾಸ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆನೆ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡ್ತೀನಿ. ಸರ್ಕಾರ ಬಂದು 3 ವರ್ಷ ಆಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗ್ತಿಲ್ಲ. ಸಿಎಂ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದಿದ್ದಾರೆ.ಅದರಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಕೇವಲ 102 ತಾಲೂಕುಗಳನ್ನ ಮಾತ್ರ ಬರಪಿಡಿತ ಅಂತ ಘೋಷಣೆ ಮಾಡಿದ್ದಾರೆ. ಉಳಿದ ತಾಲೂಕುಗಳಲ್ಲಿ ಬರ ಇಲ್ವಾ.? ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗಿದೆ. ಹಾಗಾಗಿ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು‌
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    53 min ago
  • ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು. ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.
    1
    ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ.

ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. 
ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. 

ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. 
“ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.

ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು.

ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.
ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ.
ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. 
ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. 
ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. 
“ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.
ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.
    user_Kg. shivakumar
    Kg. shivakumar
    Local News Reporter ಕೋಲಾರ, ಕೋಲಾರ, ಕರ್ನಾಟಕ•
    4 hrs ago
  • ಸಿಡಿಲು ಬಡಿದು ಮನೆಯ ಮೇಲ್ಚಾವಣಿ, ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕನಕಪುರ: ತಾಲೂಕಿನ ತಾವರಗಟ್ಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸುರಿದ ಭಾರಿ ಮಳೆ, ಗುಡುಗು–ಸಿಡಿಲಿಗೆ ಮನೆಯೊಂದಕ್ಕೆ ಸಿಡಿಲು ಬಡಿದು ಮೇಲ್ಚಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಘಟನೆ ನಡೆದಿದೆ. ಗ್ರಾಮದ ರಮೇಶ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮೊದಲನೇ ಮಹಡಿಯ ಮೇಲ್ಚಾವಣಿ ಹಾನಿಗೊಳಗಾಗಿದ್ದು, ಸೋಲಾರ್ ವ್ಯವಸ್ಥೆ, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ. ಸಿಡಿಲಿನ ತೀವ್ರತೆಗೆ ಸೋಲಾರ್ ಉಪಕರಣಗಳು ಪುಡಿಪುಡಿಯಾಗಿದ್ದು, ಮನೆಯ ಮೇಲ್ಚಾವಣಿ ಮೇಲೆ ಕಂದಕ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಹಲವು ಉಪಕರಣಗಳು ಹಾನಿಗೊಳಗಾಗಿದ್ದು, ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಡಿಲು ಮನೆಯ ಮೊದಲನೇ ಮಹಡಿಗೆ ಸಿಡಿಲು ಬಡಿದ ವೇಳೆ ಕುಟುಂಬದ ಸದಸ್ಯರೆಲ್ಲರೂ ಕೆಳ ಮಹಡಿಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಮರಳೇ ಬೇಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಬಡಿದು ಮನೆಗೆ ಉಂಟಾಗಿರುವ ಹಾನಿಯ ಸಂಪೂರ್ಣ ಅಂದಾಜು ಮಾಡಿಸಿ, ತಾಲೂಕು ಆಡಳಿತದ ಮೂಲಕ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
    1
    ಸಿಡಿಲು ಬಡಿದು ಮನೆಯ ಮೇಲ್ಚಾವಣಿ, ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ
ಕನಕಪುರ: ತಾಲೂಕಿನ ತಾವರಗಟ್ಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸುರಿದ ಭಾರಿ ಮಳೆ, ಗುಡುಗು–ಸಿಡಿಲಿಗೆ ಮನೆಯೊಂದಕ್ಕೆ ಸಿಡಿಲು ಬಡಿದು ಮೇಲ್ಚಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಘಟನೆ ನಡೆದಿದೆ.
ಗ್ರಾಮದ ರಮೇಶ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮೊದಲನೇ ಮಹಡಿಯ ಮೇಲ್ಚಾವಣಿ ಹಾನಿಗೊಳಗಾಗಿದ್ದು, ಸೋಲಾರ್ ವ್ಯವಸ್ಥೆ, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ.
ಸಿಡಿಲಿನ ತೀವ್ರತೆಗೆ ಸೋಲಾರ್ ಉಪಕರಣಗಳು ಪುಡಿಪುಡಿಯಾಗಿದ್ದು, ಮನೆಯ ಮೇಲ್ಚಾವಣಿ ಮೇಲೆ ಕಂದಕ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಹಲವು ಉಪಕರಣಗಳು ಹಾನಿಗೊಳಗಾಗಿದ್ದು, ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಡಿಲು ಮನೆಯ ಮೊದಲನೇ ಮಹಡಿಗೆ ಸಿಡಿಲು ಬಡಿದ ವೇಳೆ ಕುಟುಂಬದ ಸದಸ್ಯರೆಲ್ಲರೂ ಕೆಳ ಮಹಡಿಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಮರಳೇ ಬೇಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಡಿಲು ಬಡಿದು ಮನೆಗೆ ಉಂಟಾಗಿರುವ ಹಾನಿಯ ಸಂಪೂರ್ಣ ಅಂದಾಜು ಮಾಡಿಸಿ, ತಾಲೂಕು ಆಡಳಿತದ ಮೂಲಕ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
    user_ಶಿವು.ಎಸ್ ದೊಡ್ಡಆಲಹಳ್ಳಿ
    ಶಿವು.ಎಸ್ ದೊಡ್ಡಆಲಹಳ್ಳಿ
    Local News Reporter ಕನಕಪುರ, ರಾಮನಗರ, ಕರ್ನಾಟಕ•
    5 hrs ago
  • ಪ್ರೇಮದ ಹೆಸರಲ್ಲಿ ಲಕ್ಷಾಂತರ ಹಣ ಕಳೆದುಕೊಂಡ ಟ್ಯಾಟೂ ಆರ್ಟಿಸ್ಟ್ ಮದುವೆ ವಿಚಾರಕ್ಕೆ ಗಲಾಟೆ; ಮಹಿಳೆಯಿಂದ ಹಲ್ಲೆ ಆರೋಪ ಪ್ರೇಮದ ಹೆಸರಲ್ಲಿ ಲಕ್ಷಾಂತರ ಹಣ ಕಳೆದುಕೊಂಡ ಟ್ಯಾಟೂ ಆರ್ಟಿಸ್ಟ್ ಮದುವೆ ವಿಚಾರಕ್ಕೆ ಗಲಾಟೆ; ಮಹಿಳೆಯಿಂದ ಹಲ್ಲೆ ಆರೋಪ
    1
    ಪ್ರೇಮದ ಹೆಸರಲ್ಲಿ ಲಕ್ಷಾಂತರ ಹಣ ಕಳೆದುಕೊಂಡ ಟ್ಯಾಟೂ ಆರ್ಟಿಸ್ಟ್
ಮದುವೆ ವಿಚಾರಕ್ಕೆ ಗಲಾಟೆ; ಮಹಿಳೆಯಿಂದ ಹಲ್ಲೆ ಆರೋಪ
ಪ್ರೇಮದ ಹೆಸರಲ್ಲಿ ಲಕ್ಷಾಂತರ ಹಣ ಕಳೆದುಕೊಂಡ ಟ್ಯಾಟೂ ಆರ್ಟಿಸ್ಟ್
ಮದುವೆ ವಿಚಾರಕ್ಕೆ ಗಲಾಟೆ; ಮಹಿಳೆಯಿಂದ ಹಲ್ಲೆ ಆರೋಪ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.