ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ* *ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ* ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಸೆಂಟ್ರಲ್ ಕಾಲೇಜಿನ ಗಡಿಯಾರ ಗೋಪುರದ ಅವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಕೆ. ವಿದ್ಯಾಕುಮಾರಿಯವರು ಭಾರತೀಯ ಸಮಾಜದ ಸರ್ವತೋಮುಖ ಪ್ರಗತಿಗೆ ಅಂಬೇಡ್ಕರ್ ಅವರ ಕೊಡುಗೆ ಅತ್ಯಮೂಲ್ಯವೆಂದು ಬಣ್ಣಿಸಿದರು. ಜಾತಿ ವಿನಾಶದ ಗುರಿ ಸಾಧನೆಗಾಗಿ ಶ್ರಮಿಸಿದ ಅಂಬೇಡ್ಕರ್ ದಮನಿತ ಜನರ ದನಿಯಾಗಿ ಸಂವಿಧಾನದ ಹಕ್ಕುಗಳ ಮೂಲಕ ಸಮಾನ ಅವಕಾಶ ಒದಗಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿದರೆಂದು ಅವರು ವಿವರಿಸಿದರು. ಕಾರ್ಮಿಕರಿಗೆ ಎಂಟು ಗಂಟೆಯ ಕೆಲಸ ಮತ್ತು ಉತ್ತಮ ಜೀವನ ಗುಣಮಟ್ಟ ಖಾತರಿಪಡಿಸುವ ಶಾಸನಗಳನ್ನು ರಚಿಸಿದ ಅಂಬೇಡ್ಕರ್ ರವರ ಕಾಣಿಕೆಯನ್ನು ಶ್ರಮಜೀವಿ ವರ್ಗ ಮರೆಯುವಂತಿಲ್ಲವೆಂದು ಅವರು ಅಭಿಪ್ರಾಯಪಟ್ಟರು. ಮಹಿಳೆಯರಿಗೂ ಸಮಾನತೆ ಹಾಗೂ ಆಸ್ತಿ ಹಕ್ಕು ದೊರಕಿಸಲು ಹಿಂದೂ ಕೋಡ್ ಬಿಲ್ ಮಂಡಿಸಿ ಸಂಸತ್ತಿನಲ್ಲಿ ಅಗತ್ಯ ಬೆಂಬಲ ಲಭಿಸದಿದ್ದಾಗ ಮಂತ್ರಿ ಪದವಿಯನ್ನೇ ತ್ಯಜಿಸಿದರೆಂದು ಅವರು ವಿವರಿಸಿದರು. ಉನ್ನತ ಶಿಕ್ಷಣದ ಹಂತದಲ್ಲಿ ಸದ್ಯ ಕೇವಲ ಶೇ.28 ರಷ್ಟು ಮಾತ್ರ ದಾಖಲಾತಿಯಿರುವ ಬಗ್ಗೆ ಅವರು ಉಲ್ಲೇಖಿಸಿದರು. ಜಾತಿ-ಧರ್ಮ ತಾರತಮ್ಯ ಮೀರಿದ ಸಮಾಜ ನಿರ್ಮಾಣದತ್ತ ಯುವ ಪೀಳಿಗೆ ಪರಿಶ್ರಮಿಸಬೇಕೆಂದು ಅವರು ಪ್ರೇರೇಪಿಸಿದರು. ಅಂಬೇಡ್ಕರ್ ರವರ ಬಹುಶಿಸ್ತೀಯ ಚಿಂತನಶೀಲ ಬರವಣಿಗೆಗಳ ಕುರಿತು ಗಂಭೀರ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದ ಅವರು ಸಾಮಾಜಿಕ ಬದ್ಧತೆಯ ನೈತಿಕ ನೆಲೆಗಟ್ಟಿನ ಜೀವನ ಸಾಗಿಸಲು ಸಂಕಲ್ಪ ಕೈಗೊಳ್ಳುವಂತೆ ಹುರಿದುಂಬಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ.ರಮೇಶ್ .ಬಿ. ಮಾತನಾಡಿ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸದಾ ಸದೃಢವಾಗಿರುವಂತೆ ಎಚ್ಚರ ವಹಿಸುವ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ ಎಂದು ತಿಳಿಸಿದರು. ಸರ್ವರಿಗೂ ಸಮಾನ ಮತದಾನದ ಹಕ್ಕು ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್ ರವರು ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಜಾಗೃತಿ ಮೂಡಿಸಲು ಅಪಾರವಾಗಿ ಶ್ರಮಿಸಿದರೆಂದು ಅವರು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಖ್ಯಾತ ಹರಿಕಥಾ ವಿದ್ವಾನ್ ಕಲಾಶ್ರೀ ಲಕ್ಷ್ಮಣದಾಸ್ ಅಂಬೇಡ್ಕರ್ ರವರ ಜೀವನ ವೃತ್ತಾಂತ ಕುರಿತ ಜನಕಥಾ ಕೀರ್ತನೆಯನ್ನು ಪ್ರಸ್ತುತಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ.ಆರ್.ಜಲಜಾ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಶ್ವವಿದ್ಯಾನಿಲಯದ ಕುಲಸಚಿವರಾದ ನವೀನ್ ಜೋಸೆಫ್.ಎ., ಕುಲಸಚಿವ ( ಮೌಲ್ಯಮಾಪನ) ಪ್ರೊ.ರಮೇಶ. ಬಿ.ಕುಡೇನಟ್ಟಿ, ವಿತ್ತಾಧಿಕಾರಿಗಳಾದ ಎಂ.ವಿ.ವಿಜಯಲಕ್ಷ್ಮಿ, ಸಿಂಡಿಕೇಟ್ ಸದಸ್ಯರಾದ ಡಾ. ಎಸ್.ನಾಗರಾಜ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ಡಾ. ಕೃಷ್ಣಮೂರ್ತಿ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಗೋಪಿ.ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು. ವಾಣಿಶ್ರೀ ವಂದಿಸಿದರು.

- KOLAR KI.AWAAZ KOUSAR NEWS1
- ಹನೂರು ತಾಲೂಕಿನ ಪಿಜಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿ, ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಸಮಸ್ಯೆಯಿಂದ ಬೇಸತ್ತ ಮಹಿಳೆಯರು ಬುಧವಾರ ಖಾಲಿ ಬಿಂದಿಗೆಗಳನ್ನು ಹಿಡಿದು ತಮ್ಮ ಆಕ್ರೋಶ ಮತ್ತು ನೋವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, “ಎರಡನೇ ವಾರ್ಡ್‌ನಲ್ಲಿ ವಾಸಿಸುವ ಕ್ರಿಶ್ಚಿಯನ್ ಸಮುದಾಯದ ಜನರು ನೀರಿನ ಕೊರತೆಯಿಂದ ದಿನನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ. ಕುಡಿಯಲು ನೀರಿಲ್ಲದೆ, ಶೌಚಾಲಯಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ತೀವ್ರ ಸಂಕಷ್ಟ ಅನುಭವಿಸುತ್ತಿದ್ದೇವೆ,” ಎಂದು ಹೇಳಿದರು. “ನಾವು ಅಲ್ಪಸಂಖ್ಯಾತರು. ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ. ನಮಗೆ ಬೇರೆ ಏನೂ ಬೇಡ, ಕುಡಿಯಲು ನೀರು ಕೊಟ್ಟರೆ ಸಾಕು,” ಎಂದು ಮಹಿಳೆಯರು ಕಳವಳ ವ್ಯಕ್ತಪಡಿಸಿದರು.1
- ಕೊಳ್ಳೇಗಾಲ. ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನದಂದು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕರ ಮಾಡದೇ ಅಪಮಾನ ಎಸಗಿರುವುದನ್ನು ಖಂಡಿಸಿ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಹಾಗೂ ಪದಾಧಿಕಾರಿಗಳು ಜಮಾಯಿಸಿ ಶಿರೆಸ್ತದಾರ್ ಕೃಪಕಾರ್ ರವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಮಾತನಾಡಿ ಪ್ರಜಾಪ್ರಭುತ್ವದ ಪಿತಾಮಹ, ರಾಷ್ಟ್ರನಾಯಕ ಡಾ. ಅಂಬೇಡ್ಕರ್‌ರವರ 135ನೇ ಜಯಂತಿಯನ್ನು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಗೌರವ ಪೂರ್ವಕವಾಗಿ ಆಚರಣೆ ಮಾಡುತ್ತೀರುವುದು ನಮ್ಮೇಲ್ಲರಿಗೂ ತಿಳಿದಿರುವು ನಿಮಗೂ ಸಹ ತಿಳಿದಿಲಿದೆ. ಆದರೆ ಕೊಳ್ಳೇಗಾಲ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ಕೂಡ ಆಚರಣೆ ಮಾಡಿದೆ ಆದರೆ ಕೆಲವು ತಾಲ್ಲೂಕಿನ ವಿವಿಧ ಇಲಾಖೆಗಳು ನಿಯಮ ವಾಗಿ ದೀಪಾಲಂಕರ ಮಾಡದೆ, ಕಾಟಚಾರಕ್ಕೆ ಜಯಂತಿಯನ್ನು ಮಾಡಿರುತ್ತಾರೆ, ಹಾಗಾಗಿ ಇಂತವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ, ಉಪಾಧ್ಯಕ್ಷರು ಮೊಹಮ್ಮದ್ ಅಬ್ಜಲ್, ಯೂನುಸ್ ಪಾಷ, ಪ್ರಧಾನ ಕಾರ್ಯದರ್ಶಿ ನಾಗರಾಜು, ಚೇತನ್, ಚಂದನ್ ಇದ್ದರು.1
- ಹನೂರಿನಲ್ಲಿ ಇಂದು ರೈತರ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ: ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ. ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. "ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.. ಈ ಸಂದರ್ಭದಲ್ಲಿ ಅವತಾರ್ ಶಿವ ರೈತ ಸಂಘದ ಯುವ ಸದಸ್ಯರು ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೂರು ತಿಂಗಳಿಗೆ ಒಮ್ಮೆ ಸಭೆ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ಕಾಡಿನ ಪ್ರಾಮುಖ್ಯತೆ ಹಾಗೂ ರೈತರಿಗೆ ಇದರ ಮಹತ್ವ ತಿಳಿಸಿ ಹಾಗೂ ಕಾಡ್ಗಿಚ್ಚು ಇದರ ಬಗ್ಗೆ ಸಭೆಗಳು ಮಾಡಿಸಿ ರೈತರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.4
- 135 TH BIRTH ANNIVERSARY OF DR. BR AMBEDKAR SAHEB BY KARNATAKA RASHTRA SAMITI PAKSHA1
- *ಭಾರತ ನಲ್ಲಿ ವೈರಲ್*1
- ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರೋಪ ಹೊರಿಸಿದ್ದ ಮಹಿಳೆಯು ಸೋಮವಾರ ವಿಡಿಯೋ ಬಿಡುಗಡೆ ಮಾಡಿ ತನ್ನ ಹಿಂದಿನ ಹೇಳಿಕೆಯನ್ನು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ. ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ, ಸ್ವಾಮೀಜಿ ಜೊತೆ ಗುರು–ಭಕ್ತಿಯ ಸಂಬಂಧ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತನ್ನ ಹೆಸರಿನಲ್ಲಿ ಯಾರೋ ಸುಳ್ಳು ದೂರು ದಾಖಲಿಸಿದ್ದಾರೆ, ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಹೊಸ ಹೇಳಿಕೆ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದ್ದು, ಪೊಲೀಸರು ವಿಡಿಯೋ ಹಾಗೂ ದೂರು ಸಂಬಂಧಿತ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.1
- ಕೌದಳ್ಳಿ ಗ್ರಾಮದ ಮನೆಗಳಲ್ಲಿ ಕಳ್ಳರು ಬೀಗದ ಹಣ ಚಿನ್ನಭರಣವನ್ನು ಕಳವು ಮಾಡಿರುವ ಘಟನೆ ಜರುಗಿದೆ ಗ್ರಾಮದ ಮೊದಲಿಯರು ಬೀದಿಗಯಲ್ಲಿ ಮೂರು ಮನೆಗಳನ್ನು ಯಾರೋ ಕಳ್ಳರು ಬೀಗ ಹೊಡೆದಿದ್ದು ಅದರಲ್ಲಿ ಪಳನಿ ಅಮ್ಮ ಬಿನ್ ಕೃಷ್ಣ ಮೊದಲಿಯ ರ್ ಎಂಬುವರ ಮನೆಯಲ್ಲಿ ka 10 v3245 Honda Activa ಕಳ್ಳತನ ಆಗಿರುತ್ತದೆ ಹಾಗೂ ಮನೆಯ ಒಳಗಡೆ ಎರಡು ಬೀರುಗಳ ನು ಹೊಡೆದಿರುತ್ತಾರೆ ಹಾಗೂ ಮಾದೇಶ ಬಿನ್ ನಾಗ ಮೊದಲಿಯರು ರವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ ಅಲ್ಲಿ ಯಾವುದೇ ವಸ್ತುಗಳು ಹೋಗಿರುವುದಿಲ್ಲ ಎಂಬುದಾಗಿ ಅವರೇ ತಿಳಿಸಿರುತ್ತಾರೆ ನಂತರ ಮಾದಪ್ಪ ಮೊದಲಿಯರ್ ಎಂಬುವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ, ಅವರುಗಳು ಮನೆಯಲ್ಲಿ ಇರುವುದಿಲ್ಲ ಈ ಸಂಬಂಧ ಸ್ಥಳಕ್ಕೆಬಪೊಲೀಸರು ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮಕ್ಯೆಗೊಂಡಿದ್ದಾರೆ1
- ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ: ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ. ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. "ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.4