Shuru
Apke Nagar Ki App…
ಪೊಲೀಸರ ಜೊತೆ ಉದ್ಧಟತನ; ದರ್ಶನ್ ಅಭಿಮಾನಿಗೆ ಕಪಾಳಮೋಕ್ಷ ಬೆಂಗಳೂರು: ನಟ ದರ್ಶನ್ ನಿವಾಸದ ಬಳಿ ಕರ್ತವ್ಯ ನಿರತ ಪೊಲೀಸರ ಸೂಚನೆಗಳನ್ನು ಮೀರಿ, ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಅಭಿಮಾನಿಯೊಬ್ಬನಿಗೆ ಪೊಲೀಸರು ಸ್ಥಳದಲ್ಲೇ ಬಿಸಿ ಮುಟ್ಟಿಸಿದ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳ ಗುಂಪಿನಲ್ಲಿ ಈ ವ್ಯಕ್ತಿ ಸೇರಿದ್ದ ಎನ್ನಲಾಗಿದೆ. 'ಇಂದೇ ದರ್ಶನ್ ಅವರನ್ನು ಭೇಟಿ ಮಾಡಬೇಕು' ಎಂದು ಹಠ ಹಿಡಿದು ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನಿಗೆ ಸಮಾಧಾನಪಡಿಸಲು ಮತ್ತು ಅಲ್ಲಿಂದ ತೆರಳಲು ಸೂಚಿಸಿದರು. ಆದರೆ, ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಆತ ಪೊಲೀಸರ ಮಾತಿಗೆ ಬೆಲೆ ಕೊಡದೆ ಉದ್ಧಟತನ ಪ್ರದರ್ಶಿಸಿದ್ದಾನೆ. ಪರಿಸ್ಥಿತಿ ಮಿತಿಮೀರುತ್ತಿದ್ದಂತೆ, ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಅಶಿಸ್ತಿನ ವರ್ತನೆಗೆ ಕಡಿವಾಣ ಹಾಕಲು ಪೊಲೀಸರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Anil

More news from ಕರ್ನಾಟಕ and nearby areas
- ಬೆಂಗಳೂರು: ರಾಜಾಜಿನಗರದ ಎಚ್‌ಡಿಎಫ್‌ಸಿ (HDFC) ಹೋಮ್ ಲೋನ್ ಕಚೇರಿ ಮುಂಭಾಗ ನಿನ್ನೆ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ (26) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12:45ರ ಸುಮಾರಿಗೆ ಯೋಗೇಶ್ವರಿ ಊಟಕ್ಕೆ ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:30ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.1
- VIDEO: ಅತಿವೇಗದ ಬೈಕ್ ಡಿಕ್ಕಿಗೆ ವಿದ್ಯುತ್ ಕಂಬವೇ ತುಂಡು ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಸವಾರ ಮತ್ತು ಹಿಂಬದಿಯ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ವಿದ್ಯಾರ್ಥಿಗಳಾದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ.....2
- बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत। बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।1
- ದೊಡ್ಡಬಳ್ಳಾಪುರ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು. ಸರ್ಜಾಪುರ ಮೂಲದ ನಯನ (19 ) ಮೃತ ವಿದ್ಯಾರ್ಥಿನಿ. ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ. ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು. ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ1
- कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।1
- pani ke fayde1
- Ramzan tournament..kolar aluminfield.1
- ಕರ್ನಾಟಕದ ಸಲೂನ್ ಒಂದರಲ್ಲಿ ಸಿಬ್ಬಂದಿ ಮತ್ತು ಗ್ರಾಹಕನ ನಡುವೆ ಭಾಷೆಯ ವಿಚಾರವಾಗಿ ನಡೆದ ವಾಗ್ವಾದ ಭಾರಿ ಚರ್ಚೆಗೆ ಕಾರಣವಾಗಿದೆ. ಸಲೂನ್‌ನಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ ಇದ್ದಾರೆಯೇ ಎಂದು ಕೇಳಿದ್ದಕ್ಕೆ, ಹಿಂದಿ ಮಾತನಾಡುತ್ತಿದ್ದ ಮಹಿಳಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿದೆ. ಈ ಘಟನೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ, ಮತ್ತೊಂದು ವೀಡಿಯೋ ಪ್ರಕಟವಾಗಿದ್ದು ಅದರಲ್ಲಿ ಆ ಮಹಿಳೆ ಸ್ಥಳೀಯರ ಕ್ಷಮೆಯಾಚಿಸಿದ್ದಾರೆ. ಭಾಷಾ ಗೌರವದ ವಿಚಾರವಾಗಿ ಈ ಘಟನೆ ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.1