*ಕಂಪ್ಲಿಯಲ್ಲಿ ಪ.ಜಾತಿ, ಪ.ಪಂಗಡದ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತ ವಸ್ತು ಪ್ರದರ್ಶನ ಉದ್ಘಾಟಿಸಿ ಶಾಸಕ ಜೆ.ಎನ್.ಗಣೇಶ್ ಅಭಿಮತ* *ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಮ್ಮ ಹೆಮ್ಮೆ* ಬಳ್ಳಾರಿ,ಜ.11: ಬಡವರ ಪರ ನಿಲ್ಲುವ ಏಕೈಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ನಮ್ಮ ಕಾಂಗ್ರೆಸ್ ಸರ್ಕಾರ ನಮ್ಮ ಹೆಮ್ಮೆಯಾಗಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅಭಿಮತ ವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಡವರ, ದೀನದಲಿತರ, ರೈತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಜನಪ್ರಿಯವಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡುವರೆ ವರ್ಷ ಪೂರೈಸಿದ್ದು, ರಾಜ್ಯದಲ್ಲಿ ಆಶ್ವಾಸನೆ ನೀಡಿದಂತಹ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿ ಜನರ ಜೀವನಮಟ್ಟವನ್ನು ಸುಧಾರಿಸಿದ್ದು, ನುಡಿದಂತೆ ನಡೆದುಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಯುವನಿಧಿ ಸೇರಿದಂತೆ ಐದು ಯೋಜನೆಗಳನ್ನು ಜಾರಿಗೊಳಿಸಿ ಬಡವರ ವರದಾನವಾಗಿ ಅವರ ಆರ್ಥಿಕಾಭಿವೃದ್ಧಿಗೆ ಕೈಗನ್ನಡಿಯಾಗಿದೆ ಎಂದು ಬಿಂಬಿಸಿದರು. *ಕಂಪ್ಲಿ ಕ್ಷೇತ್ರ ಅಭಿವೃದ್ಧಿಯತ್ತ:* ಕಂಪ್ಲಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಕೊಡುಗೆ ನೀಡಿದೆ. ಅದೇರೀತಿಯಾಗಿ ಕುಡಿಯುವ ನೀರು, ಗ್ರಂಥಾಲಯ, ರಸ್ತೆ, ಕೆರೆಗಳ ಅಭಿವೃದ್ಧಿ, ಏತ ನೀರಾವರಿ, 100 ಬೆಡ್ ಆಸ್ಪತ್ರೆ, ಮಿನಿ ವಿಧಾನಸೌಧ ನಿರ್ಮಾಣ, ತಾಪಂ ಕಚೇರಿ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಂಪ್ಲಿ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು. ಕೆಲಸಗಳು ಮಾತನಾಡುತ್ತವೆ. ಟೀಕೆ-ಪ್ರಹಾರಗಳು ಸಾಯುತ್ತವೆ. ಅವೆಲ್ಲವುಗಳನ್ನು ಮೆಟ್ಟಿನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ದೇಶದಲ್ಲಿಯೇ ಮಾದರಿ ಸರ್ಕಾರವಾಗಿದೆ. ಈ ಸರ್ಕಾರದಲ್ಲಿ ಶಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರಲ್ಲದೆ, ಜನರು ಮುಂಬರುವ ದಿನಗಳಲ್ಲಿ ಜನಾಶೀರ್ವಾದ ಮಾಡುವ ಮೂಲಕ ಕೆಲಸ ಮಾಡುವ ಅವಕಾಶ ನೀಡಬೇಕು ಎಂದು ಹೇಳಿದರು. ಈ ವೇಳೆ ಕಂಪ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸರಾವ್, ಕಂಪ್ಲಿ ತಹಶೀಲ್ದಾರರಾದ ಜೂಗಲ ಮಂಜುನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ ಗುರುರಾಜ, ಬೆರಳಚ್ಚುಗಾರ ಹನುಮೇಶ್.ಹೆಚ್., ಛಾಯಾಗ್ರಾಹಕ ಶ್ರೀಧರ್ ಕಾವಲಿ, ವಾಹನ ಚಾಲಕ ಮಲ್ಲೇಶಪ್ಪ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಕಂಪ್ಲಿ ವಿಭಾಗದ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಇದ್ದರು.
*ಕಂಪ್ಲಿಯಲ್ಲಿ ಪ.ಜಾತಿ, ಪ.ಪಂಗಡದ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತ ವಸ್ತು ಪ್ರದರ್ಶನ ಉದ್ಘಾಟಿಸಿ ಶಾಸಕ ಜೆ.ಎನ್.ಗಣೇಶ್ ಅಭಿಮತ* *ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಮ್ಮ ಹೆಮ್ಮೆ* ಬಳ್ಳಾರಿ,ಜ.11: ಬಡವರ ಪರ ನಿಲ್ಲುವ ಏಕೈಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ನಮ್ಮ ಕಾಂಗ್ರೆಸ್ ಸರ್ಕಾರ ನಮ್ಮ ಹೆಮ್ಮೆಯಾಗಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅಭಿಮತ ವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ
ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಡವರ, ದೀನದಲಿತರ, ರೈತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಜನಪ್ರಿಯವಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡುವರೆ ವರ್ಷ ಪೂರೈಸಿದ್ದು, ರಾಜ್ಯದಲ್ಲಿ ಆಶ್ವಾಸನೆ ನೀಡಿದಂತಹ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿ ಜನರ ಜೀವನಮಟ್ಟವನ್ನು ಸುಧಾರಿಸಿದ್ದು, ನುಡಿದಂತೆ ನಡೆದುಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಯುವನಿಧಿ ಸೇರಿದಂತೆ ಐದು ಯೋಜನೆಗಳನ್ನು ಜಾರಿಗೊಳಿಸಿ ಬಡವರ
ವರದಾನವಾಗಿ ಅವರ ಆರ್ಥಿಕಾಭಿವೃದ್ಧಿಗೆ ಕೈಗನ್ನಡಿಯಾಗಿದೆ ಎಂದು ಬಿಂಬಿಸಿದರು. *ಕಂಪ್ಲಿ ಕ್ಷೇತ್ರ ಅಭಿವೃದ್ಧಿಯತ್ತ:* ಕಂಪ್ಲಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಕೊಡುಗೆ ನೀಡಿದೆ. ಅದೇರೀತಿಯಾಗಿ ಕುಡಿಯುವ ನೀರು, ಗ್ರಂಥಾಲಯ, ರಸ್ತೆ, ಕೆರೆಗಳ ಅಭಿವೃದ್ಧಿ, ಏತ ನೀರಾವರಿ, 100 ಬೆಡ್ ಆಸ್ಪತ್ರೆ, ಮಿನಿ ವಿಧಾನಸೌಧ ನಿರ್ಮಾಣ, ತಾಪಂ ಕಚೇರಿ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಂಪ್ಲಿ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು. ಕೆಲಸಗಳು ಮಾತನಾಡುತ್ತವೆ. ಟೀಕೆ-ಪ್ರಹಾರಗಳು ಸಾಯುತ್ತವೆ. ಅವೆಲ್ಲವುಗಳನ್ನು ಮೆಟ್ಟಿನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ದೇಶದಲ್ಲಿಯೇ ಮಾದರಿ ಸರ್ಕಾರವಾಗಿದೆ. ಈ ಸರ್ಕಾರದಲ್ಲಿ ಶಾಸಕನಾಗಿ ಕೆಲಸ
ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರಲ್ಲದೆ, ಜನರು ಮುಂಬರುವ ದಿನಗಳಲ್ಲಿ ಜನಾಶೀರ್ವಾದ ಮಾಡುವ ಮೂಲಕ ಕೆಲಸ ಮಾಡುವ ಅವಕಾಶ ನೀಡಬೇಕು ಎಂದು ಹೇಳಿದರು. ಈ ವೇಳೆ ಕಂಪ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸರಾವ್, ಕಂಪ್ಲಿ ತಹಶೀಲ್ದಾರರಾದ ಜೂಗಲ ಮಂಜುನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ ಗುರುರಾಜ, ಬೆರಳಚ್ಚುಗಾರ ಹನುಮೇಶ್.ಹೆಚ್., ಛಾಯಾಗ್ರಾಹಕ ಶ್ರೀಧರ್ ಕಾವಲಿ, ವಾಹನ ಚಾಲಕ ಮಲ್ಲೇಶಪ್ಪ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಕಂಪ್ಲಿ ವಿಭಾಗದ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಇದ್ದರು.
- ಶಿಡ್ಲಘಟ್ಟ: ಕೊಟ್ಟ ಮಾತಿನಂತೆ ರೈತರ ಭೂಮಿಯನ್ನು ಉಳಿಸಿಕೊಟ್ಟಿದ್ದೇನೆ: ಶಾಸಕ ಬಿ ಎನ್ ರವಿಕುಮಾರ್1
- ಮಳವಳ್ಳಿ ತಾಲೂಕಿನ ಕಿಡಿಗೇಡಿಗಳ ದುಷ್ಕೃತ್ಯಕ್ಕೆ 15 ಕುರಿ ಒಂದು ಟಗರು ಸಾವು : ಕುಟುಂಬಸ್ಥರ ಅಕ್ರಂದನ ಮಳವಳ್ಳಿ ತಾಲೂಕಿನ ಚೆನ್ನಪಳ್ಳೆ ಕೊಪ್ಪಲು ಗ್ರಾಮದ ಜವನಿ ಸಿದ್ದಯ್ಯನವರ ಮಗ ಕರಿಯಪ್ಪನವರಿಗೆ ಸೇರಿದ 15 ಕುರಿ ಹಾಗೂ ಒಂದು ಟಗರು ವಿಷ ಪ್ರಾಸನದಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಜರುಗಿದೆ . ಯಾರೋ ಕಿಡಿಗೇಡಿಗಳು ಕರಿಯಪ್ಪನವರ ಇತ್ತಲಿನಲ್ಲಿ ಇರಿಸಿದ್ದ ಕುಡಿಯುವ ನೀರಿನ ಬಕೇಟಿಗೆ ವಿಷವನ್ನು ಹಾಕಿದ್ದು ,ಕುರಿಗಳು ದಿನನಿತ್ಯದಂತೆ ಬಕೇಟಿನಲ್ಲಿದ್ದ ನೀರನ್ನು ಕುಡಿದ ನಂತರ ವಿಲವಿಲನೆ ಒದ್ದಾಡಿ ಅಸುನೀಗಿರುತವೆ ಕಣ್ಣೆದುರೆ ತಾವು ಸಾಕಿದ ಕುರಿಗಳು ಸಾಯುತ್ತಿರುವುದನ್ನು ನೋಡಿ ಕರಿಯಪ್ಪನವರ ಕುಟುಂಬ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ.. ಲಕ್ಷಾಂತರ ರೂಗಳ ಕುರಿಗಳು ತನ್ನೆದುರೆ ಸತ್ತಿರುವುದು ಆ ಬಡ ಕುಟುಂಬಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ. ಈ ಕಿಡಿಗೇಡಿತನದ ಕೃತ್ಯ ನಡೆಸಿದ ಪಾಪಿಗಳಿಗೆ ಗ್ರಾಮಸ್ಥರು ಶಾಪವನ್ನು ಹಾಕುತ್ತಿದ್ದಾರೆ . ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಬಡ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮುಂದಾಗಿ ಸಂಕಷ್ಟದಲ್ಲಿ ಸಿಲುಕು ಇರುವ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ1
- ಮಲೆಮಹದೇಶ್ವರ ಬೆಟ್ಟದಲ್ಲಿ ಯುವತಿಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ ದೊರಕಿದ್ದು, ಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ಆತನನ್ನು ಪತ್ತೆಹಚ್ಚಿ ಸರ ವಶಕ್ಕೆ ಪಡೆದು ವಾರಸುದಾರರರಿಗೆ ಹಿಂತಿರುಗಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಚ್ಚಪ್ಪನ ಕೊಪ್ಪಲು ಗ್ರಾಮದ ಚಂದ್ರು ಕುಟುಂಬದವರು ಡಿ. 27ರಂದು ಮಹದೇಶ್ವರಬೆಟ್ಟಕ್ಕೆ ಆಗಮಿಸಿದ್ದರು. ಇವರ ಮಗಳು 15 ಗ್ರಾಂ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಬಳಿಕ ಡಿ. 28ರಂದು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ಚಂದ್ರು ಚಿನ್ನದ ಸರ ಹುಡುಕಿಕೊಡುವಂತೆ ದೂರು ದಾಖಲಿಸಿದ್ದರು. ಬಳಿಕ ಇನ್ಸ್‌ಪೆಕ್ಟರ್ ಜಗದೀಶ್ ಮಾರ್ಗದರ್ಶನದಲ್ಲಿ ಕಾನ್ಸಟೇಬಲ್‌ಗಳಾದ ಮಹೇಶ್, ರಮೇಶ್, ರವಿ ತಂಡ ಬೆಟ್ಟದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮೈಸೂರು ಮೂಲದ ವ್ಯಕ್ತಿಗೆ ಚಿನ್ನದ ಸರ ಸಿಕ್ಕಿರುವುದು ಖಾತರಿಯಾಗಿ, ಆತನ ಬಗ್ಗೆ ಪರಿಶೀಲಿಸಿದಾಗ ಆತ ಡಾರ್ಮೆಂಟರಿಯಲ್ಲಿ ಉಳಿದುಕೊಂಡಿದ್ದನು. ಅಲ್ಲಿ ಆತ ನೀಡಿದ್ದ ಮೊಬೈಲ್ ನಂಬರ್‌ಗೆ ಪೊಲೀಸರು ಕರೆ ಮಾಡಿ ಸಂಪರ್ಕಿಸಿದಾಗ ಮೈಸೂರಿನ ಚಿನ್ನಸ್ವಾಮಿ ಎಂದು ತಿಳಿದು ಬಂದಿದೆ. ಈತ ಕುಟುಂಬದ 45 ಜನರೊಂದಿಗೆ ಬೆಟ್ಟಕ್ಕೆ ಆಗಮಿಸಿದ್ದಾಗ ಪರ ಮಾಡುವ ಸ್ಥಳದಲ್ಲಿ ಚಿನ್ನದ ಸರ ದೊರಕಿತ್ತು ಎಂದು ತಿಳಿಸಿದ್ದಾನೆನ್ನಲಾಗಿದೆ1
- ಚಾಮರಾಜನಗರ ನ್ಯೂಸ್ ಪ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಕುಂದುಕೊರತೆ ಸಭೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಸಿ.ಪಿ ಐ. ಜಿ.ಕೆ.ಸುಬ್ರಹ್ಮಣ್ಯ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶದ ಕಾನೂನು ಬಲಿಷ್ಠವಾಗಿದ್ದು ಕಾನೂನು ಮೀರಿ ಅಪರಾಧ ಕೃತ್ಯ ಮಾಡುವ ಯಾವುದೆ ವ್ಯಕ್ತಿ ಸಮಾಜದಲ್ಲಿ ಎಷ್ಟೆ ದೊಡ್ಡವರಾಗಿದ್ದರೂ ಅವರ ವಿರುದ್ಧ ದೂರು ಬಂದರೆ ಅವರನ್ನು ಬಂಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ , ಗ್ರಾಮೀಣ ಪ್ರದೇಶಗಳಲ್ಲಿ ಜಾತಿಗಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಮುಖ್ಯವಾಗಿ ಪ್ರಕರಣ ದಾಖಲಾಗಬೇಕು. ಒಬ್ಬ ವ್ಯಕ್ತಿಗೆ ಒಂದು ಸಮುದಾಯದ ಅಥವಾ ಒಂದು ಜಾತಿಯ ವ್ಯಕ್ತಿಗಳಿಂದ ಅಥವಾ ಹಲವರಿಂದ ತೊಂದರೆಯಾಗುತ್ತಿದ್ದರೆ ಅಂತವರು ಧೈರ್ಯದಿಂದ ಮುಂದೆ ಬಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ ಮುಲಾಜಿಲ್ಲದೆ ಅಂಥಾ ಪ್ರಕರಣಕ್ಕೆ ನಮ್ಮ ಇಲಾಖೆ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ದಲಿತ ಮುಖಂಡರುಗಳು ಮತ್ತು ವಾಲ್ಮೀಕಿ ಸಮುದಾಯದ ಮುಖಂಡರುಗಳು ಮಾತನಾಡಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನದ ನಿಲುಗಡೆ, ಪೋಲಿಸ್ ಚೋಕಿಯಲ್ಲಿ ಪೋಲಿಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು, ಅಗರ ಗ್ರಾಮದಲ್ಲಿ ಆಟೋಗಳು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಗ್ರಾಮೀಣ ಭಾಗದಲ್ಲಿ ಬಿಟ್ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು, ಗ್ರಾಮೀಣ ಭಾಗದಲ್ಲಿ ಅಕ್ರಮ ಮಧ್ಯ ಮಾರಾಟ ಕಡಿವಾಣ ಹಾಕಬೇಕು, ಪಟ್ಟಣದ ಬಳೆಪೇಟೆಯಲ್ಲಿ ಅಕ್ರಮ ಲಾಟರಿ ದಂಧೆ ನಿಯಂತ್ರಿಸಬೇಕು, ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು, ಸೇರಿದಂತೆ ದಲಿತ ಮುಖಂಡರು ಪರಿಶಿಷ್ಟ ಜನಾಂಗದ ಮುಖಂಡರು ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗೋಪು ಆಗಿ ಮಾಹಿತಿ ನೀಡಿ ಗ್ರಾಮೀಣ ಪ್ರದೇಶದಲ್ಲಿಯೂ ಇಂಥಾ ಸಭೆಗಳು ಪೊಲೀಸ್ ಇಲಾಖೆಯಿಂದ ಆಯೋಜನೆ ಮಾಡಬೇಕು ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ಪಿಎಸ್ಐ. ಎಸ್. ಕೆ. ಆಕಾಶ್, ಅಗರ ಪೊಲೀಸ್ ಠಾಣೆಯ ಪಿಎಸ್ಐ. ಎನ್.ಕರಿಬಸಪ್ಪ, ago ಪೊಲೀಸ್ ಸಿಬ್ಬಂದಿಗಳು, ವಿವಿಧ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪರಿಶಿಷ್ಟ ಪಂಗಡಗಳ ಮುಖಂಡರುಗಳು ಹಾಜರಿದ್ದರು ಮುಖಂಡರುಗಳು ಹಾಜರಿದ್ದರು. ವರದಿ. ಎಸ್ ಪುಟ್ಟಸ್ವಾಮಿ ಹೊನ್ನೂರು4
- *ಭಾರತ ನಲ್ಲಿ ವೈರಲ್*1
- ಹನೂರು ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ. ಹನೂರು :ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀರೂಪ ರವರು ಅಧಿಕಾರ ವಹಿಸಿಕೊಂಡು ನಂತರ ಮೊದಲ ಬಾರಿಗೆ ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣಕ್ಕೆ ಆಗಮಿಸಿದ, ತಾಲೂಕಿನಲ್ಲಿರುವ ಕುಡಿಯುವ ನೀರು, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಯನ್ನ ಆಲಿಸಿದರು. ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಲು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿ.ಪಂ.ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋನಾ ರೋತ್, ತಾಲೂಕು ದಂಡಾಧಿಕಾರಿ ಚೈತ್ರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರ ಅಮ್ಜಾದ್ ಖಾನ್, ರಾಜಣ್ಣ, ಕೂಡಲೂರು ವೆಂಕಟೇಶ್, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಮಣಿಗರ್ ಪ್ರಸಾದ್, ಬಸವಣ್ಣ, ಸದಾಶಿವ ಸೇರಿದಂತೆ ಹಲವು ರೈತರು ಇದ್ದರು.4
- ಗ್ರಾಮಕ್ಕೆ ಯಾರು ಬಾರದಂತೆ ಕಳ್ಳೆ ಮುಳ್ಳು ಬೇಲಿ ಹಾಕಿ ದಿಗ್ಭಂಧನ... ಕಾವಲುಗಾರರ ನೇಮಕ. ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ನಗಂಗೆರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಮಾಡಲಾಗಿತ್ತಿದೆ.. ಈ ಗ್ರಾಮದ ಜನರು ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ಶೂನ್ಯದ ಮಾರಮ್ಮ ಜಾತ್ರೆ ಮಾಡುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಬುಡಕಟ್ಟು ಸಂಸ್ಕೃತಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಗ್ರಾಮದ ಪ್ರತಿ ದಿಕ್ಕಿನ ಮಾರ್ಗಗಳಿಗೂ ಕಳ್ಳೆ ಮುಳ್ಳು ಬೇಲಿ ಹಾಕಿ ಗ್ರಾಮಕ್ಕೆ ಬೇರೆ ಯಾರು ಬಾರದಂತೆ ದಿಗ್ಭಂಧನ ಹಾಕುತ್ತಾರೆ. ಜನವರಿ 12ರವರೆಗೆ ಮಾರ್ಗಗಳು ಬಂದ್ ಆಗಿರುತ್ತವೆ. ಗ್ರಾಮದಿಂದ ಯಾವುದೇ ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ ಎಂಬ ನಿಯಮಗಳಿವೆ. ಉತ್ಸವದ ಸಂದರ್ಭದಲ್ಲಿ ಆರೋಗ್ಯ, ಶಾಂತಿ, ಸುವ್ಯವಸ್ಥೆ ಮತ್ತು ದೈವ ಭಾವನೆ, ನೆಮ್ಮದಿಗಾಗಿ ಈ ಆಚರಣೆ ಜಾರಿಯಲ್ಲಿದೆ ಯಾರೂ ಹೊರಗೆ, ಒಳಗೆ ಬರುವಂತ್ತಿಲ್ಲ ನಗರಂಗೆರೆ ಗ್ರಾಮದ ಶೂನ್ಯದ ಮಾರಮ್ಮ ಉತ್ಸವವನ್ನು ಐದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ರಸ್ತೆಗೆ ಸಾರು (ಮುಳ್ಳು ಬೇಲಿ) ಹಾಕಿ ಸರದಿ ಪ್ರಕಾರ ಕಾವಲುಗಾರರು ಇರುತ್ತಾರೆ. ಊರಿನಿಂದ ಯಾವುದೇ ವಸ್ತು ಹೊರಗೆ ಹೋಗುವಂತಿಲ್ಲ. ಹೊರಗಿನವರು ಊರೊಳಕ್ಕೆ ಬರುವಂತಿಲ್ಲ. ಪ್ರತಿಯೊಬ್ಬರನ್ನು ಸಹ ಚೆಕ್ ಮಾಡಿ ಬಿಡಲಾಗುತ್ತದೆ. ಜ.13ರಂದು ನಾಳೆ ಮಂಗಳವಾರ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಬಳಿಕ ಭಕ್ತರು ಬಂದು ದರ್ಶನ ಪಡಯಬಹುದಾಗಿದೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಕಾಲಾನುಕಾಲದಿಂದ ಐದು ವರ್ಷಕ್ಕೊಮ್ಮೆ ದೇವಿಯ ಉತ್ಸವ ನಡೆದುಕೊಂಡು ಬಂದಿದೆ. ಅಲ್ಲದೆ ಇಡೀ ಊರಿಗೆ ಮುಳ್ಳು ಬೇಲಿ ಹಾಕುವ ವಿಶಿಷ್ಟ ಆಚರಣೆಯನ್ನೂ ಆಚರಿಸಲಾಗುತ್ತಿದೆ. ಆ ಮೂಲಕ ಈ ವಿಶಿಷ್ಟ ಮಾರಿಕಾಂಬ ದೇವಿಯ ಉತ್ಸವ ನಾಡಿನ ಗಮನ ಸೆಳೆದಿದೆ... ಸುರೇಶಬೆಳಗೆರೆ1
- ಶಿಡ್ಲಘಟ್ಟ ರಾಷ್ಟ್ರೀಯ ಹೆದ್ದಾರಿ–234ರಲ್ಲಿ ಭೀಕರ ಅಪಘಾತ! ನಿಲ್ಲಿಸಿದ್ದ ಮಿನಿ ಟ್ರಾಕ್ಟರ್ ಟಿಟಿ ವಾಹನ ಡಿಕ್ಕಿ – ಓರ್ವ ಸಾವು!1