logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಳ್ನಾವರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಬೀದಿ ಬದಿ ವ್ಯಾಪಾರಿಗಳ ತಿಳುವಳಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬೀದಿ ಬದಿ ವ್ಯಾಪಾರಿಗಳಿಗೆ ತಿಳುವಳಿಕೆ ಕಾರ್ಯಕ್ರಮ " ಬೀದಿ ಬದಿ ವ್ಯಾಪಾರಿಗಳ ಬದುಕು ಹಸನಾಗಬೇಕು " ಅಳ್ನಾವರ (ಧಾರವಾಡ ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗೆ ಜಾರಿ ಮಾಡಿದ ಎಲ್ಲ ಸೌಲಭ್ಯಗಳು ಸರಿಯಾಗಿ ದೊರಕಬೇಕು. ಶ್ರಮಜೀವಿಗಳಾದ ಅವರ ಬದುಕು ಸದಾ ಹಸನಾಗಿರಬೇಕು ಎಂದು ಜಿಲ್ಲ ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ರವಿ ಮುನವಳ್ಳಿ ಹೇಳಿದರು. ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ನಡೆದ ಪಿಎಂ ಸ್ವನಿಧಿ ಸಮೃದ್ದಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ದೊರೆಯುವ ಸೌಲಭ್ಯಗಳು ಮತ್ತು ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ನಿಮಗಾಗಿ ಇರುವ ಎಲ್ಲ ಯೋಜನೆಗಳ ಮಾಹಿತಿ ನೀಡಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಂದಡೆ ಸೇರಿಸಿ ನಿಮಗಾಗಿ ಮಾಹಿತಿ ಹಂಚಲು ಹಮ್ಮಿಕೊಂಡ ಕಾರ್ಯಾಗಾರದ ಲಾಭ ಪಡೆದುಕೊಂಡು ಮುಂದೆ ಬನ್ನಿ ಎಂದರು. ಈ ಕಾರ್ಯಾಗಾರದಲ್ಲಿ ಪಿಎಂ ಸ್ವನಿಧಿ ಅರ್ಹತಾ ದಾಖಲಾತಿ, ಕ್ರೆಡಿಟ್ ಕಾರ್ಡ ಸೌಲಭ್ಯ, ಸಾಲ ಸೌಲಭ್ಯ, ಸಾಮಾಜಿನ ಆರ್ಥಿಕ ಸಮೀಕ್ಷೆ, ಸಾಲದ ಅವಧಿ, ಮರು ಪಾವತಿ, ಡಿಜಿಟಲ್ ಕಾರ್ಡ ಯೋಜನೆ, ಜನಧನ ಯೋಜನೆ, ಸಾಮಾಜಿಕ ಭದ್ರತಾ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು. ವಿವಿದ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಪಟ್ಟಣ ಪಂಚಾಯಿತಿ ಸಮುದಾಯ ಅಭಿವೃದ್ದಿ ಅಧಿಕಾರಿ ನಾಗರಾಜ ಗುರ್ಲಹುಸೂರ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಎಸ್. ಪಾಟೀಲ, ಮಧುಸೂದನ ಕೆರೂರು, ಎಂ.ಎಸ್. ಬೆಂತೂರ, ಶಿಲ್ಪಾ ತರಗಾರ, ವಿ. ಸಂಗೀತಾ, ಎಸ್.ದೀಪಕ, ನಾಗೇಶ ಒಡೆಯರ, ಚೆನ್ನಮ್ಮ ಪಾಟೀಲ ಇದ್ದರು.

on 11 March
user_Vineetmiskin Alnavar
Vineetmiskin Alnavar
Photographer Alnavar, Dharwad•
on 11 March
5e0232aa-c07f-41e1-89c2-f90dc8379a8d

ಅಳ್ನಾವರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಬೀದಿ ಬದಿ ವ್ಯಾಪಾರಿಗಳ ತಿಳುವಳಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬೀದಿ ಬದಿ ವ್ಯಾಪಾರಿಗಳಿಗೆ ತಿಳುವಳಿಕೆ ಕಾರ್ಯಕ್ರಮ " ಬೀದಿ ಬದಿ ವ್ಯಾಪಾರಿಗಳ ಬದುಕು ಹಸನಾಗಬೇಕು " ಅಳ್ನಾವರ (ಧಾರವಾಡ ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗೆ ಜಾರಿ ಮಾಡಿದ ಎಲ್ಲ ಸೌಲಭ್ಯಗಳು ಸರಿಯಾಗಿ ದೊರಕಬೇಕು. ಶ್ರಮಜೀವಿಗಳಾದ ಅವರ ಬದುಕು ಸದಾ ಹಸನಾಗಿರಬೇಕು ಎಂದು ಜಿಲ್ಲ ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ರವಿ ಮುನವಳ್ಳಿ ಹೇಳಿದರು. ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ನಡೆದ ಪಿಎಂ ಸ್ವನಿಧಿ ಸಮೃದ್ದಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ದೊರೆಯುವ ಸೌಲಭ್ಯಗಳು ಮತ್ತು ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ನಿಮಗಾಗಿ ಇರುವ ಎಲ್ಲ ಯೋಜನೆಗಳ ಮಾಹಿತಿ ನೀಡಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಂದಡೆ ಸೇರಿಸಿ ನಿಮಗಾಗಿ ಮಾಹಿತಿ ಹಂಚಲು ಹಮ್ಮಿಕೊಂಡ ಕಾರ್ಯಾಗಾರದ ಲಾಭ ಪಡೆದುಕೊಂಡು ಮುಂದೆ ಬನ್ನಿ ಎಂದರು. ಈ ಕಾರ್ಯಾಗಾರದಲ್ಲಿ ಪಿಎಂ ಸ್ವನಿಧಿ ಅರ್ಹತಾ ದಾಖಲಾತಿ, ಕ್ರೆಡಿಟ್ ಕಾರ್ಡ ಸೌಲಭ್ಯ, ಸಾಲ ಸೌಲಭ್ಯ, ಸಾಮಾಜಿನ ಆರ್ಥಿಕ ಸಮೀಕ್ಷೆ, ಸಾಲದ ಅವಧಿ, ಮರು ಪಾವತಿ, ಡಿಜಿಟಲ್ ಕಾರ್ಡ ಯೋಜನೆ, ಜನಧನ ಯೋಜನೆ, ಸಾಮಾಜಿಕ ಭದ್ರತಾ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು. ವಿವಿದ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಪಟ್ಟಣ ಪಂಚಾಯಿತಿ ಸಮುದಾಯ ಅಭಿವೃದ್ದಿ ಅಧಿಕಾರಿ ನಾಗರಾಜ ಗುರ್ಲಹುಸೂರ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಎಸ್. ಪಾಟೀಲ, ಮಧುಸೂದನ ಕೆರೂರು, ಎಂ.ಎಸ್. ಬೆಂತೂರ, ಶಿಲ್ಪಾ ತರಗಾರ, ವಿ. ಸಂಗೀತಾ, ಎಸ್.ದೀಪಕ, ನಾಗೇಶ ಒಡೆಯರ, ಚೆನ್ನಮ್ಮ ಪಾಟೀಲ ಇದ್ದರು.

More news from ಕರ್ನಾಟಕ and nearby areas
  • ಮಹಾನ್ ವ್ಯಕ್ತಿಗಳನ್ನು ಜಾತಿಯ ಬಣ್ಣ ಬಳಿದು ಸಂಕುಚಿತ ದೃಷ್ಟಿಯಿಂದ ನೋಡುವ ಭಾವನೆ ಹೋಗಬೇಕು. ಅಥಣಿ :ಈ ನಾಡಿನಲ್ಲಿ ಬಸವಣ್ಣನಂತ ವರು ಮಹಾನ್ ಸಮಾಜ ಪರಿವರ್ತಕರು ಈ ನಾಡಿನಲ್ಲಿ ಜನಿಸಿ ಮೇಲು, ಕೀಳು,ಹೋಗಲಾಡಿಸಲು ಯತ್ನಿಸಿದರು.ಇಂದು ಮಹಾನ್ ವ್ಯಕ್ತಿಗಳನ್ನು ಜಾತಿಯ ಬಣ್ಣ ಬಳಿದು ಸಂಕುಚಿತ ದೃಷ್ಟಿಯಿಂದ ನೋಡುವ ಭಾವನೆ ಹೋಗಬೇಕು. ಅಂಬೇಡ್ಕರ್ ಚಿಂತನೆಗಳನ್ನು ಇಂದು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕಳವಳ ವ್ಯಕ್ತಪಡಿಸಿದರು. ಅವರು ಅಥಣಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಮಸ್ತ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ 135 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.ಶಿಕ್ಷಣವು ಹಾಲಿನಂತೆ, ಅದನ್ನು ಕುಡಿದವನು ಘರ್ಜಿಸಲೇಬೇಕು" ಎಂಬ ಅವರ ಮಾತು ಇಂದಿನ ದಿನ ನಾವು ಎಷ್ಟು ಜನರಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇವೆ.ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಅಂದೇ ಮನಗಂಡಿದ್ದರು. ಇಂದು ಪ್ರತಿಯೊಬ್ಬ ದಲಿತರು ಬಾಬಾಸಾಹೇಬರ ಆಶಯದಂತೆ ಶಿಕ್ಷಣ, ಸಂಘಟನೆ ಗುರಿ ಈಡೇರಿಸಲು ನೀವೆಲ್ಲ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ.ಶೀಘ್ರ 1 ಕೋಟಿ ರೂ ಗಳ ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ಆರಂಭ ಮಾಡುತ್ತೇವೆ.ಓದುವ ಮಕ್ಕಳು ಕಡಿಮೆ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ ಲೈಬ್ರರಿಯಲ್ಲಿ ಅಭ್ಯಾಸ ಮಾಡಲಿ. ಈಗಾಗಲೇ ನಮ್ಮ ಮಕ್ಕಳಿಗೆ ಪಶು ವೈದ್ಯಕೀಯ ಮಹಾವಿದ್ಯಾಲಯ ಆರಂಭವಾಗಿದೆ , ಕೃಷಿ ಕಾಲೇಜು ಶೀಘ್ರದಲ್ಲಿ ಆರಂಭವಾಗಲಿದೆ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಾವು ಜಾರಿಗೆ ತರಬೇಕು ಎಂದು ಹೇಳಿದ ಅವರು ಬರುವ ಜೂನ್ ನಲ್ಲಿ ಕೊಟ್ಟಲಗಿ, ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಹಾಗೂ ಬಸವೇಶ್ವರಏತ ನೀರಾವರಿ ಯೋಜನೆ ಮುಖ್ಯಮಂತ್ರಿಗಳ ಮೂಲಕ ಉದ್ಘಾಟನೆ ಹಾಗೂ ಕೃಷಿ ಕಾಲೇಜು ಭೂಮಿ ಪೂಜೆ ನೇರವೆ ರಿಸಲಾಗುವುದು. ಐದು ಕಡೆಯಲ್ಲಿ 110 ಕೆ ವಿ ವಿದ್ಯುತ್ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು. ಅಥಣಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು, ಪಟ್ಟಣದಲ್ಲಿ 260 ಕಿಮಿ ಕೇಬಲ್ ಮೂಲಕ ವಿದ್ಯುತ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಬರುವ ದಿನಮಾನದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ತರುವ ಕೆಲಸ ಮಾಡೋಣ ಎಂದು ಹೇಳಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ,ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಉಪನ್ಯಾಸಕರಾಗಿ ಆಗಮಿಸಿದ ಸುಭಾಸ ನಾಟಿಕಾರ, ಪಂಚಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ದಾರ್ಥ ಸಿಂಗೆ ಮಾತನಾಡಿ ದರು. ಈ ವೇಳೆ ದತ್ತಾ ವಾಸ್ಟರ್, ತಹಸೀಲ್ದಾರ್ ಸಿದರಾಯ ಭೋಸಗಿ, ಪ್ರಶಾಂತ ಮುನ್ನೊಳಿ, ಶಿವಾನಂದ ಕಲ್ಲಾಪುರ, ಅಶೋಕ ಗುಡಿಮನಿ,ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರು ಪರಶುರಾಮ ಪತ್ತಾರ, ಎಂ ಆರ್ ಮುಂಜೆ, ರಾವಸಾಬ ಐಹೊಳೆ, ಕಲ್ಲೇಶ ಮಡ್ಡಿ, ಬಸವರಾಜ ನಾಯಿಕ ಸೇರಿದಂತೆ ತಾಲೂಕಿನ ಸಮಸ್ತ ಜನತೆ ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಎಸ್ ಎಸ್ ಎಲ್ ಸಿ, ಪಿ ಯು ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
    4
    ಮಹಾನ್ ವ್ಯಕ್ತಿಗಳನ್ನು ಜಾತಿಯ ಬಣ್ಣ ಬಳಿದು ಸಂಕುಚಿತ ದೃಷ್ಟಿಯಿಂದ ನೋಡುವ ಭಾವನೆ ಹೋಗಬೇಕು.
ಅಥಣಿ :ಈ ನಾಡಿನಲ್ಲಿ ಬಸವಣ್ಣನಂತ ವರು ಮಹಾನ್ ಸಮಾಜ ಪರಿವರ್ತಕರು ಈ ನಾಡಿನಲ್ಲಿ ಜನಿಸಿ ಮೇಲು, ಕೀಳು,ಹೋಗಲಾಡಿಸಲು ಯತ್ನಿಸಿದರು.ಇಂದು ಮಹಾನ್ ವ್ಯಕ್ತಿಗಳನ್ನು ಜಾತಿಯ ಬಣ್ಣ ಬಳಿದು ಸಂಕುಚಿತ ದೃಷ್ಟಿಯಿಂದ ನೋಡುವ ಭಾವನೆ ಹೋಗಬೇಕು. ಅಂಬೇಡ್ಕರ್ ಚಿಂತನೆಗಳನ್ನು ಇಂದು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕಳವಳ ವ್ಯಕ್ತಪಡಿಸಿದರು.
ಅವರು ಅಥಣಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಮಸ್ತ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ 135 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.ಶಿಕ್ಷಣವು ಹಾಲಿನಂತೆ, ಅದನ್ನು ಕುಡಿದವನು ಘರ್ಜಿಸಲೇಬೇಕು" ಎಂಬ ಅವರ ಮಾತು ಇಂದಿನ ದಿನ ನಾವು ಎಷ್ಟು ಜನರಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇವೆ.ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ  ಮೂಲಕ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಅಂದೇ ಮನಗಂಡಿದ್ದರು. ಇಂದು ಪ್ರತಿಯೊಬ್ಬ ದಲಿತರು ಬಾಬಾಸಾಹೇಬರ ಆಶಯದಂತೆ ಶಿಕ್ಷಣ, ಸಂಘಟನೆ ಗುರಿ ಈಡೇರಿಸಲು ನೀವೆಲ್ಲ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ.ಶೀಘ್ರ 1 ಕೋಟಿ ರೂ ಗಳ ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ಆರಂಭ ಮಾಡುತ್ತೇವೆ.ಓದುವ ಮಕ್ಕಳು ಕಡಿಮೆ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ ಲೈಬ್ರರಿಯಲ್ಲಿ ಅಭ್ಯಾಸ ಮಾಡಲಿ. ಈಗಾಗಲೇ ನಮ್ಮ ಮಕ್ಕಳಿಗೆ ಪಶು ವೈದ್ಯಕೀಯ ಮಹಾವಿದ್ಯಾಲಯ ಆರಂಭವಾಗಿದೆ , ಕೃಷಿ ಕಾಲೇಜು ಶೀಘ್ರದಲ್ಲಿ ಆರಂಭವಾಗಲಿದೆ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ನಾವು ಜಾರಿಗೆ ತರಬೇಕು ಎಂದು ಹೇಳಿದ ಅವರು  ಬರುವ ಜೂನ್ ನಲ್ಲಿ ಕೊಟ್ಟಲಗಿ, ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಹಾಗೂ ಬಸವೇಶ್ವರಏತ  ನೀರಾವರಿ  ಯೋಜನೆ ಮುಖ್ಯಮಂತ್ರಿಗಳ ಮೂಲಕ ಉದ್ಘಾಟನೆ ಹಾಗೂ ಕೃಷಿ ಕಾಲೇಜು ಭೂಮಿ ಪೂಜೆ ನೇರವೆ ರಿಸಲಾಗುವುದು. ಐದು ಕಡೆಯಲ್ಲಿ 110 ಕೆ ವಿ ವಿದ್ಯುತ್ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು. ಅಥಣಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು, ಪಟ್ಟಣದಲ್ಲಿ 260 ಕಿಮಿ ಕೇಬಲ್ ಮೂಲಕ ವಿದ್ಯುತ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಬರುವ ದಿನಮಾನದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ತರುವ ಕೆಲಸ ಮಾಡೋಣ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ,ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಉಪನ್ಯಾಸಕರಾಗಿ ಆಗಮಿಸಿದ ಸುಭಾಸ ನಾಟಿಕಾರ, ಪಂಚಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ದಾರ್ಥ ಸಿಂಗೆ ಮಾತನಾಡಿ ದರು. ಈ ವೇಳೆ ದತ್ತಾ ವಾಸ್ಟರ್, ತಹಸೀಲ್ದಾರ್ ಸಿದರಾಯ ಭೋಸಗಿ, ಪ್ರಶಾಂತ ಮುನ್ನೊಳಿ, ಶಿವಾನಂದ ಕಲ್ಲಾಪುರ, ಅಶೋಕ ಗುಡಿಮನಿ,ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರು ಪರಶುರಾಮ ಪತ್ತಾರ, ಎಂ ಆರ್ ಮುಂಜೆ, ರಾವಸಾಬ ಐಹೊಳೆ, ಕಲ್ಲೇಶ ಮಡ್ಡಿ, ಬಸವರಾಜ ನಾಯಿಕ ಸೇರಿದಂತೆ ತಾಲೂಕಿನ ಸಮಸ್ತ ಜನತೆ ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಎಸ್ ಎಸ್ ಎಲ್ ಸಿ, ಪಿ ಯು ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    12 min ago
  • Post by Iranna Tarnal
    2
    Post by Iranna Tarnal
    user_Iranna Tarnal
    Iranna Tarnal
    ನಿಡಗುಂದಿ, ವಿಜಯಪುರ, ಕರ್ನಾಟಕ•
    3 hrs ago
  • ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ವಿಧಾನಪರಿಷತ್‌ ಹಾಗೂ ಬಾಗಲಕೋಟೆಯಲ್ಲಿ ಲಿಂಗಾಯತ ಸಮುದಾಯದ ಮುಖಂಡರಿಗೆ ಪಕ್ಷ ಟಿಕೆಟ್ ನೀಡಿತ್ತು. ಹೀಗಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಕ್ಕೆ ಅವಕಾಶ ಕಲ್ಪಿಸಿತು. ಇದನ್ನು ಎಲ್ಲರೂ ಒಪ್ಪಿ, ಒಗ್ಗೂಡಿ ಉಪಚುನಾವಣೆ ಎದುರಿಸಿದ್ದೇವೆ. ಎಲ್ಲ ವರ್ಗದ ಜನಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ' ಎಂದರು 'ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ. ವಿನಯ್‌ಕುಮಾ‌ರ್ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪಕ್ಷದ ಕೆಲ ಮುಖಂಡರು ಗೊಂದಲ ಉಂಟಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ವಿನಯ್‌ಕುಮಾ‌ರ್ ಅವರಿಗೆ ಜಿಲ್ಲೆಯಲ್ಲಿ ಯಾವ ಕ್ಷೇತ್ರವೂ ಖಾಲಿ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. 'ದಾವಣಗೆರೆ ಉತ್ತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಹಲವರು ಅವಕಾಶಕ್ಕಾಗಿ ಕಾದು ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವಿನಯ್‌ಕುಮಾ‌ರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಬೇಕಿದ್ದರೆ ಪಕ್ಷೇತರರಾಗಿ ಕಣಕ್ಕೆ ಇಳಿಯಲಿ' ಎಂದರು.
    1
    ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ  ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 
'ವಿಧಾನಪರಿಷತ್‌ ಹಾಗೂ ಬಾಗಲಕೋಟೆಯಲ್ಲಿ ಲಿಂಗಾಯತ ಸಮುದಾಯದ ಮುಖಂಡರಿಗೆ ಪಕ್ಷ ಟಿಕೆಟ್ ನೀಡಿತ್ತು. ಹೀಗಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಕ್ಕೆ ಅವಕಾಶ ಕಲ್ಪಿಸಿತು. ಇದನ್ನು ಎಲ್ಲರೂ ಒಪ್ಪಿ, ಒಗ್ಗೂಡಿ ಉಪಚುನಾವಣೆ ಎದುರಿಸಿದ್ದೇವೆ. ಎಲ್ಲ ವರ್ಗದ ಜನಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ' ಎಂದರು
'ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ. ವಿನಯ್‌ಕುಮಾ‌ರ್ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪಕ್ಷದ ಕೆಲ ಮುಖಂಡರು ಗೊಂದಲ ಉಂಟಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ವಿನಯ್‌ಕುಮಾ‌ರ್ ಅವರಿಗೆ ಜಿಲ್ಲೆಯಲ್ಲಿ ಯಾವ ಕ್ಷೇತ್ರವೂ ಖಾಲಿ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
'ದಾವಣಗೆರೆ ಉತ್ತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಹಲವರು ಅವಕಾಶಕ್ಕಾಗಿ ಕಾದು ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವಿನಯ್‌ಕುಮಾ‌ರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಬೇಕಿದ್ದರೆ ಪಕ್ಷೇತರರಾಗಿ ಕಣಕ್ಕೆ ಇಳಿಯಲಿ' ಎಂದರು.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    21 hrs ago
  • ಮುದ್ದೇಬಿಹಾಳ.. 135 ನೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ವಿಜ್ಜರಣೆಮೆಯಿಂದ ಆಚರಿಸಲಾಯಿತ್ತು. ಮುದ್ದೇಬಿಹಾಳದ ಗಣ್ಯ ವ್ಯಕ್ತಿಗಳು ಅಂಬೇಡ್ಕರವರ ಜಯಂತೋತ್ಸವಕ್ಕೆ ಮುಖ್ಯ ಅತಿಥಿ ಸಿ ಎಸ್ ನಾಡಗೌಡ ಮತ್ತು ಎಲ್ಲಾ D S S ಸಂಗದವರು ಹಾಜರ ಇದ್ದರು. ಇಂದಿರಾ ನಗರದ ಮಾಜಿ ಮೆಂಬರ್ ಆದ ಶಿವು ಶಿವಪುರ ಮತ್ತು ಸಿದ್ದು ತಳಹಳ್ಳಿ ಹಾಗೂ ಪೀಲಕಮ್ಮ ನಗರದ ಅಶೋಕ್ ಪಾದಗಟ್ಟಿ ನಾಗೇಶ್ ಭಜಂತ್ರಿ ಈರಣ್ಣ ತಾರನಾಳ ಹನುಮಂತ ಹೊಸಮನಿ ಹರಳಯ್ಯ ಸಮಾಜದ ಅಧ್ಯಕ್ಷರಾದ ಭಗವಂತ ಕಬಾಡೆ ಎಲ್ಲಾ ವ್ಯಕ್ತಿಗಳು ಹಾಜರಿದ್ದರು
    1
    ಮುದ್ದೇಬಿಹಾಳ.. 135 ನೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ವಿಜ್ಜರಣೆಮೆಯಿಂದ ಆಚರಿಸಲಾಯಿತ್ತು. ಮುದ್ದೇಬಿಹಾಳದ  ಗಣ್ಯ ವ್ಯಕ್ತಿಗಳು ಅಂಬೇಡ್ಕರವರ ಜಯಂತೋತ್ಸವಕ್ಕೆ ಮುಖ್ಯ ಅತಿಥಿ ಸಿ  ಎಸ್ ನಾಡಗೌಡ ಮತ್ತು ಎಲ್ಲಾ D S S  ಸಂಗದವರು ಹಾಜರ ಇದ್ದರು. ಇಂದಿರಾ ನಗರದ ಮಾಜಿ ಮೆಂಬರ್ ಆದ ಶಿವು    ಶಿವಪುರ ಮತ್ತು ಸಿದ್ದು ತಳಹಳ್ಳಿ ಹಾಗೂ ಪೀಲಕಮ್ಮ ನಗರದ  ಅಶೋಕ್ ಪಾದಗಟ್ಟಿ   ನಾಗೇಶ್ ಭಜಂತ್ರಿ ಈರಣ್ಣ ತಾರನಾಳ ಹನುಮಂತ ಹೊಸಮನಿ  ಹರಳಯ್ಯ ಸಮಾಜದ ಅಧ್ಯಕ್ಷರಾದ ಭಗವಂತ ಕಬಾಡೆ ಎಲ್ಲಾ ವ್ಯಕ್ತಿಗಳು ಹಾಜರಿದ್ದರು
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    15 min ago
  • ನಾಗಠಾಣಕೃಷ್ಣ ಮೇಲ್ದಂಡೆ ಸಂತ್ರಸ್ತರಿಗಾಗಿ ಲೋಕ ಅದಾಲತ್ ವಿಜಯಪುರದಲ್ಲಿ ಸೋಮವಾರದಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಹರೀಶ್ ಎ ಅವರು ಮಾಹಿತಿ ನೀಡಿದಂತೆ, ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಸರ್ಕಾರ ಸ್ವತಃ ಸ್ವಾಧೀನಪಡಿಸಿಕೊಂಡ ಭೂಸಂತರಿಗಾಗಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ ಎರಡು ತಿಂಗಳ ಕಾಲ ಈ ಅದಾಲತ್ ನಡೆಯಲಿದ್ದು, ಸಂತ್ರಸ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
    1
    ನಾಗಠಾಣಕೃಷ್ಣ ಮೇಲ್ದಂಡೆ ಸಂತ್ರಸ್ತರಿಗಾಗಿ ಲೋಕ ಅದಾಲತ್
ವಿಜಯಪುರದಲ್ಲಿ ಸೋಮವಾರದಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಹರೀಶ್ ಎ ಅವರು ಮಾಹಿತಿ ನೀಡಿದಂತೆ, ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಸರ್ಕಾರ ಸ್ವತಃ ಸ್ವಾಧೀನಪಡಿಸಿಕೊಂಡ ಭೂಸಂತರಿಗಾಗಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ ಎರಡು ತಿಂಗಳ ಕಾಲ ಈ ಅದಾಲತ್ ನಡೆಯಲಿದ್ದು, ಸಂತ್ರಸ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    5 hrs ago
  • ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಎನ್ ಆರ್ ಪುರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿಲು ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಆಗಮಿಸಿದರು ಅವರನ್ನು ಕೆ ಆರ್ ಐ ಡಿ ಎಲ್ ಅಧ್ಯಕ್ಷರು ಹಾಗೂ ಭದ್ರಾವತಿಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಕೆ ಸಂಗಮೇಶ್ವರ ಹಾಗೂ ಪಂಚ ಗ್ಯಾರಂಟಿ ಅಧ್ಯಕ್ಷರಾದ ಬಿಎಸ್ ಗಣೇಶ್ ಅವರು ಸ್ವಾಗತಿಸಿದರು
    2
    ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ಅವರು ಎನ್ ಆರ್ ಪುರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿಲು ವಿಶೇಷ ವಿಮಾನದಲ್ಲಿ  ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಆಗಮಿಸಿದರು ಅವರನ್ನು ಕೆ ಆರ್ ಐ ಡಿ ಎಲ್ ಅಧ್ಯಕ್ಷರು ಹಾಗೂ ಭದ್ರಾವತಿಯ ವಿಧಾನಸಭಾ ಕ್ಷೇತ್ರದ  ಶಾಸಕರಾದ ಬಿಕೆ ಸಂಗಮೇಶ್ವರ ಹಾಗೂ ಪಂಚ ಗ್ಯಾರಂಟಿ ಅಧ್ಯಕ್ಷರಾದ ಬಿಎಸ್ ಗಣೇಶ್ ಅವರು  ಸ್ವಾಗತಿಸಿದರು
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    18 hrs ago
  • ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶಿರೂರು ಗ್ರಾಮದ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಬಿರು ಬೇಸಿಗೆಯಲ್ಲಿ ನವಲಗುಂದ ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ಕುರಿತು ಧಾರವಾಡ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಚಂದ್ರೇಗೌಡ ದಸ್ತಿ, ಬಸನಗೌಡ ಪಾಟೀಲ್, ನಿಂಗಪ್ಪ ಗೋಕುಲ, ಪರಪ್ಪ ನಂದಿಹಳ್ಳಿ, ಪರ್ವತಗೌಡ ರಾಮನಗೌಡ, ಫಕ್ಕಿರಪ್ಪ ತೋಟದ ಸೇರಿದಂತೆ ಇತರರಿದ್ದರು.
    1
    ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶಿರೂರು ಗ್ರಾಮದ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಬಿರು ಬೇಸಿಗೆಯಲ್ಲಿ ನವಲಗುಂದ ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ಕುರಿತು ಧಾರವಾಡ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಚಂದ್ರೇಗೌಡ ದಸ್ತಿ, ಬಸನಗೌಡ ಪಾಟೀಲ್, ನಿಂಗಪ್ಪ ಗೋಕುಲ, ಪರಪ್ಪ ನಂದಿಹಳ್ಳಿ, ಪರ್ವತಗೌಡ ರಾಮನಗೌಡ, ಫಕ್ಕಿರಪ್ಪ ತೋಟದ ಸೇರಿದಂತೆ ಇತರರಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    13 hrs ago
  • ದಾವಣಗೆರೆ : ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅಹಿಂದ ನಾಯಕ ವಿನಯ್ ಕುಮಾರ್ ಹೇಳಿದರು.
    1
    ದಾವಣಗೆರೆ : ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅಹಿಂದ ನಾಯಕ ವಿನಯ್ ಕುಮಾರ್ ಹೇಳಿದರು.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    21 hrs ago
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.