Shuru
Apke Nagar Ki App…
ಹಿಪ್ಪರಗಿ ಬ್ಯಾರೇಜ್ ಗೆಟ್ ತುಂಡಾಗಿ ಅಪಾರ ಪ್ರಮಾಣದ ನೀರು ಹೊರಕ್ಕೆ. ಅಥಣಿ :ಅಥಣಿ ಹಾಗೂ ಜಮಖಂಡಿ ತಾಲೂಕಿನ ಜೀವನಾಡಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಜಲಾಶಯದ ಗೇಟೊಂದು ತುಂಡಾಗಿದ್ದು ಅಪಾರ ಪ್ರಮಾಣದ ನೀರು ಹೊರ ಹೋಗುತ್ತಿದೆ. ಈ ಕುರಿತು ಈಗಾಗಲೇ ಸ್ಥಳಕ್ಕೆ ಅಥಣಿ ಹಾಗು ಜಮಖಂಡಿ ತಾಲೂಕಿನ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸ್ಥಳಕ್ಕೆ ಭೇಟಿ ನೀಡಿದ್ದು ಶೀಘ್ರ ಆಂಧ್ರದಿಂದ ತಜ್ಞರನ್ನು ಕರೆಸಿ ನೀರು ಪೋಲಾಗುತ್ತಿರುವುದನ್ನು ತಡೆಯಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಒಂದು ಟಿಎಂಸಿ ಅಷ್ಟು ನೀರು ಹರಿದು ಹೊರ ಹೋಗಿದೆ.
Dr RAMANNA.S.D
ಹಿಪ್ಪರಗಿ ಬ್ಯಾರೇಜ್ ಗೆಟ್ ತುಂಡಾಗಿ ಅಪಾರ ಪ್ರಮಾಣದ ನೀರು ಹೊರಕ್ಕೆ. ಅಥಣಿ :ಅಥಣಿ ಹಾಗೂ ಜಮಖಂಡಿ ತಾಲೂಕಿನ ಜೀವನಾಡಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಜಲಾಶಯದ ಗೇಟೊಂದು ತುಂಡಾಗಿದ್ದು ಅಪಾರ ಪ್ರಮಾಣದ ನೀರು ಹೊರ ಹೋಗುತ್ತಿದೆ. ಈ ಕುರಿತು ಈಗಾಗಲೇ ಸ್ಥಳಕ್ಕೆ ಅಥಣಿ ಹಾಗು ಜಮಖಂಡಿ ತಾಲೂಕಿನ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸ್ಥಳಕ್ಕೆ ಭೇಟಿ ನೀಡಿದ್ದು ಶೀಘ್ರ ಆಂಧ್ರದಿಂದ ತಜ್ಞರನ್ನು ಕರೆಸಿ ನೀರು ಪೋಲಾಗುತ್ತಿರುವುದನ್ನು ತಡೆಯಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಒಂದು ಟಿಎಂಸಿ ಅಷ್ಟು ನೀರು ಹರಿದು ಹೊರ ಹೋಗಿದೆ.
More news from ಕರ್ನಾಟಕ and nearby areas
- ದೀರ್ಘಾವಧಿ ಮುಖ್ಯಮಂತ್ರಿ ನುಡಿದಂತೆ ನಡೆದ ಸರ್ಕಾರ ಹರಿಕಾರ ಸಿ ಎಂ ಸಿದ್ದರಾಮಯ್ಯ : ಮುಖಂಡ ಗಜಾನನ ಮಂಗಸೂಳಿ ಅಥಣಿ: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ದಲಿತ, ಹಿಂದುಳಿದ ವರ್ಗಗಳು, ರೈತರು ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ಹೊರಹೊಮ್ಮಿದ ಸಿದ್ದರಾಮಯ್ಯ ಅವರು ರೆಕಾರ್ಡ್ ಅವಧಿಯ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ಹೇಳಿದರು ಅಥಣಿ ಪಟ್ಟಣದಲ್ಲಿ ಅತಿ ಹೆಚ್ಚು ದೀರ್ಘ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿದ್ದರಾಮಯ್ಯನವರಿಗೆ ಅಭಿನಂದಿಸಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು ನಂತರ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸುದ್ದಿಗಾರರೊಂದಿಗೆ ಮಾತನಾಡಿ ಸಿ ಎಂ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೇಮ ಯೋಜನೆಗಳು, ಪಂಚ ಗ್ಯಾರಂಟಿ ಯೋಜನೆಗಳಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ನೇರ ಸ್ಪಂದನೆ ನೀಡಿದ್ದಾರೆ. ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯ ಮತ್ತು ಸಮಾವೇಶಿತ ಅಭಿವೃದ್ಧಿಯೇ ಅವರ ಆಡಳಿತದ ಮುಖ್ಯ ಲಕ್ಷಣಗಳಾಗಿವೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನವು ಹೋರಾಟ, ಸಹನಶೀಲತೆ ಮತ್ತು ಜನಸೇವೆ ಎಂಬ ಮೌಲ್ಯಗಳ ಪ್ರತಿಬಿಂಬವಾಗಿದೆ. ದಾಖಲೆ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಅವರ ಸಾಧನೆ ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಇಡೀ ದೇಶದಲ್ಲಿ 57 ಕೇಂದ್ರೀಯ ವಿದ್ಯಾಲಯಗಳನ್ನು ಮಂಜೂರು ಮಾಡಲಾಗಿದೆ. ಅಥಣಿ ತಾಲೂಕಿನ ಶಿನ್ನಾಳ ಗ್ರಾಮಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ಅತ್ಯಂತ ಸಂತಸ ಸಂಗತಿ. ಕೇಂದ್ರೀಯ ವಿದ್ಯಾಲಯದ ಸ್ಥಾಪನೆಗೆ ಸಂಸದೆ ಪ್ರಿಯಾಂಕ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ಪರಿಶ್ರಮ ಹೆಚ್ಚಾಗಿದೆ ಜೊತೆಗೆ ಮಾಜಿ ಸಂಸದರು ಹಾಗೂ ಶಾಸಕರ ಶ್ರಮವು ಇದರಲ್ಲಿ ಅಡಗಿದೆ. ಕಾರ್ಯಕರ್ತರು ಯಾವುದೇ ಗೊಂದಲವನ್ನು ಮಾಡದೆ ವಿನಾಕಾರಣ ಏನಾದರು ಗೊಂದಲ ಸೃಷ್ಠಿ ಮಾಡುವ ಪ್ರಯತ್ನ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ಹೇಳಿದರು. ಈ ವೇಳೆ ಕಾಂಗ್ರೇಸ್ ಮುಖಂಡರಾದ ಬಸವರಾಜ ಬುಟಾಳೆ, ಅನೀಲ ಸುಣದೊಳ್ಳಿ, ರಾವಸಾಹೇಬ ಐಹೋಳೆ, ಪ್ರಮೋದ ಬಿಳ್ಳೂರ, ಸುನೀಲ ಸಂಕ, ಸಿದ್ದಾರ್ಥ ಸಿಂಗೆ, ಸಂಜು ಕಾಂಬಳೆ, ಸುರೇಶಗೌಡ ಪಾಟೀಲ, ನೇಮಿನಾಥ ನಂದೇಶ್ವರ, ಸೈಯದ್ ಅಮಿನ್ ಗದ್ಯಾಳ, ತೋಶಿಫ ಸಾಂಗಲಿಕರ, ಶಿವಾನಂದ ಸೌದಾಗರ, ವಿಜಯ ಕಾಂಬಳೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು1
- ರೈತ ಫಲಾನುಭವಿಗೆ ಟ್ರ್ಯಾಕ್ಟರ ವಿತರಿಸಿದ ಸಿ.ಆರ್.ಒ.ಡಾ.ರಾಜು ಗಸ್ತಿ1
- Post by Sandeep Rathod1
- ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಹವ್ಯಾಸಿ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇಲ್ಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ, ಚಿನ್ನದ ಪದಕಗಳನ್ನು ಗೆದ್ದುತಂದು ವಿಜಯಪುರದ ಕೀರ್ತಿಯನ್ನು ಎಲ್ಲೆಡೆ ಬೆಳಗಿದ್ದಾರೆ. ವಿಜಯಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ ಗಳು ತಯಾರಾಗುತ್ತಿದ್ದಾರೆ. ಇವರಿಗೆ ಅಭ್ಯಾಸ ಮಾಡಲು ಸೌಲಭ್ಯಗಳ ಕೊರತೆ ಇತ್ತು. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಗುಣಮಟ್ಟದ ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ನಮ್ಮ ವಿಜಯಪುರದಲ್ಲಿ ನಿರ್ಮಿಸಿದ್ದು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಇವರು ಸ್ಥಳ ಪರಿವೀಕ್ಷಣೆ ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜು ಬಿರಾದಾರ ಸೇರಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.1
- ಸಚಿವೆ ಹೆಬ್ಬಾಳಕರ್ ಪುತ್ರನ ಕಾರು ಚಾಲಕನ ಮೇಲೆ ಚಾಕು ಇರಿತ ಪ್ರಕರಣ *ಚಾಕು ಇರಿದು ಓಡಿಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ*1
- समाज में पिता को बच्चों का रक्षक माना जाता है. लेकिन कर्नाटक के चिक्कमगलुरु जिले के बिरूर से एक ऐसी घटना सामने आई है, जिसने मानवता को शर्मसार कर दिया है. यहां एक पिता ने अपनी ही नाबालिग बेटी को महज 5 हजार की लालच में वेश्यावृत्ति के नरक में धकेल दिया. इस घिनौने अपराध में लड़की की अपनी नानी भी शामिल थी. पुलिस ने अब तक पिता और नानी समेत 12 आरोपियों को गिरफ्तार कर लिया है.1
- near gadag tol naka1
- ಹಿಪ್ಪರಗಿ ಬ್ರಿಡ್ಜ್ ಗೇಟ್ ಕಟ್ ! 5 ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಹೊಣೆ.ರೈತ ಮುಖಂಡ ಹಳ್ಳೂರ ಆಕ್ರೋಶ1