ಧಮ್ಮಚಕ್ಕ ಪವತ್ತನ ಅಂಗವಾಗಿ ಚಾತುರಾರ್ಯ ಧಮ್ಮ ಸಾವಕ ಚೇತಿಯಾ ಲೋಕಾರ್ಪಣೆ ಹಾಗೂ ರಸ್ತೆ ಗುದ್ದಲಿ ಪೂಜೆ... ವರದಿ. ಅನಿಲ್ ಕುಮಾರ್. ಗೂಳಿಪುರ ಯಳಂದೂರು. ತಾಲ್ಲೂಕಿನ ಮಹಾವನ ಬುದ್ಧ ವಿಹಾರ ಹೊನ್ನೂರು- ಕೆಸ್ತೂರು ಮಾರ್ಗ ಮಧ್ಯ ಮಹಾವನ ಬುದ್ಧ ವಿಹಾರದಲ್ಲಿ ಮಹಾವನ ಎಜುಕೇಶನಲ್ ಅಂಡ್ ಚಾರಿಟಬಲ್ ಸೊಸೈಟಿ ವತಿಯಿಂದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮಹಾವನ ಬುದ್ಧ ವಿಹಾರದ ಬಿಕ್ಕುಗಳು ಬುದ್ಧರತ್ನರವರು ಮಾತನಾಡಿ ಇದೇ ಭಾನುವಾರದಂದು ದಮ್ಮಚಕ್ಕ ಪವತ್ತನ ಅಂಗವಾಗಿ ಚಾತುರಾರ್ಯ ಧಮ್ಮ ಸಾವಕ ಚೇತಿಯಾ ಲೋಕಾರ್ಪಣೆ ಮತ್ತು ಮಹಾವನ ರಸ್ತೆಯ ಗುದ್ದಲಿ ಪೂಜೆ ಕಾರ್ಯವನ್ನು ಗಣ್ಯಾತಿ ಗಣ್ಯರು ನೆರವೇರಿಸುವುದರಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಮುಖ್ಯ ಅತಿಥಿಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮೊದಲಿಗೆ ಬಿಕ್ಕು ಸಂಘಕ್ಕೆ ಆಹಾರ ಧಾನ, ಬುದ್ಧ ವಂದನೆ,ತ್ರಿಸರಣ ಪಂಚಶೀಲ ಗ್ರಹಣ,ಚಾತುರಾರ್ಯ ಧಮ್ಮ ಸಾವಕ ಚೇತಿಯಾ ಲೋಕಾರ್ಪಣೆ, ಧ್ಯಾನ ಧಮ್ಮ ಪ್ರವಚನ, ಮಹಾವನ ರಸ್ತೆಯ ಗುದ್ದಲಿ ಪೂಜೆ ಹಾಗೂ ವಿಶೇಷ ನಿರ್ಮಾತೃ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಹಾಗೂ ಹೊನ್ನೂರು -ಕೆಸ್ತೂರು ಗ್ರಾಮದ ಯಜಮಾನರುಗಳು, ಕುಲಸ್ಥರು, ಮುಖಂಡರು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಹಾಗೂ ಜಿಲ್ಲಾ ಮತ್ತು ತಾಲೂಕು ಸರ್ವ ಬೌದ್ಧ ಭೀಮ ಉಪಾಸಕರು / ಉಪಾಸಿಕ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ವರದಿ. ಅನಿಲ್ ಕುಮಾರ್. ಗೂಳಿಪುರ
ಧಮ್ಮಚಕ್ಕ ಪವತ್ತನ ಅಂಗವಾಗಿ ಚಾತುರಾರ್ಯ ಧಮ್ಮ ಸಾವಕ ಚೇತಿಯಾ ಲೋಕಾರ್ಪಣೆ ಹಾಗೂ ರಸ್ತೆ ಗುದ್ದಲಿ ಪೂಜೆ... ವರದಿ. ಅನಿಲ್ ಕುಮಾರ್. ಗೂಳಿಪುರ ಯಳಂದೂರು. ತಾಲ್ಲೂಕಿನ ಮಹಾವನ ಬುದ್ಧ ವಿಹಾರ ಹೊನ್ನೂರು- ಕೆಸ್ತೂರು ಮಾರ್ಗ ಮಧ್ಯ ಮಹಾವನ ಬುದ್ಧ ವಿಹಾರದಲ್ಲಿ ಮಹಾವನ ಎಜುಕೇಶನಲ್ ಅಂಡ್ ಚಾರಿಟಬಲ್ ಸೊಸೈಟಿ ವತಿಯಿಂದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮಹಾವನ ಬುದ್ಧ ವಿಹಾರದ ಬಿಕ್ಕುಗಳು ಬುದ್ಧರತ್ನರವರು ಮಾತನಾಡಿ ಇದೇ ಭಾನುವಾರದಂದು ದಮ್ಮಚಕ್ಕ ಪವತ್ತನ ಅಂಗವಾಗಿ ಚಾತುರಾರ್ಯ ಧಮ್ಮ ಸಾವಕ ಚೇತಿಯಾ ಲೋಕಾರ್ಪಣೆ ಮತ್ತು ಮಹಾವನ ರಸ್ತೆಯ ಗುದ್ದಲಿ ಪೂಜೆ ಕಾರ್ಯವನ್ನು ಗಣ್ಯಾತಿ ಗಣ್ಯರು ನೆರವೇರಿಸುವುದರಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಮುಖ್ಯ ಅತಿಥಿಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ
ಕಾರ್ಯಕ್ರಮದಲ್ಲಿ ಮೊದಲಿಗೆ ಬಿಕ್ಕು ಸಂಘಕ್ಕೆ ಆಹಾರ ಧಾನ, ಬುದ್ಧ ವಂದನೆ,ತ್ರಿಸರಣ ಪಂಚಶೀಲ ಗ್ರಹಣ,ಚಾತುರಾರ್ಯ ಧಮ್ಮ ಸಾವಕ ಚೇತಿಯಾ ಲೋಕಾರ್ಪಣೆ, ಧ್ಯಾನ ಧಮ್ಮ ಪ್ರವಚನ, ಮಹಾವನ ರಸ್ತೆಯ ಗುದ್ದಲಿ ಪೂಜೆ ಹಾಗೂ ವಿಶೇಷ ನಿರ್ಮಾತೃ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಹಾಗೂ ಹೊನ್ನೂರು -ಕೆಸ್ತೂರು ಗ್ರಾಮದ ಯಜಮಾನರುಗಳು, ಕುಲಸ್ಥರು, ಮುಖಂಡರು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಹಾಗೂ ಜಿಲ್ಲಾ ಮತ್ತು ತಾಲೂಕು ಸರ್ವ ಬೌದ್ಧ ಭೀಮ ಉಪಾಸಕರು / ಉಪಾಸಿಕ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ವರದಿ. ಅನಿಲ್ ಕುಮಾರ್. ಗೂಳಿಪುರ
- ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನಗೌಡ ಹುಟ್ಟುಹಬ್ಬ: ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನಗೌಡ ಹುಟ್ಟುಹಬ್ಬ: ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಚಾಮರಾಜನಗರ: ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನಗೌಡ ಅವರ ಹುಟ್ಟುಹಬ್ಬ ಅಂಗವಾಗಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಜಿಲ್ಲಾಧ್ಯಕ್ಷ ಅಜಯ್ ಅರಕಲವಾಡಿ ಅವರ ನೇತೃತ್ವದಲ್ಲಿ ಚಾಮರಾಜೇಶ್ವರ ದೇವಸ್ಥಾನ ಚಂದನಗೌಡ ಅವರ ಹೆಸರಿನಲ್ಲಿ ಆರ್ಚನೆ ಮಾಡಿಸಿ ವಿಶೇಷ ಸಲ್ಲಿಸಲಾಯಿತು. ನಂತರ ದೇವಸ್ಥಾನ ಮುಂಭಾಗದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಅಜಯ್ ಅರಕಲವಾಡಿ ಮಾತನಾಡಿ, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನಗೌಡ ಅವರ ಹುಟ್ಟುಹಬ್ಬ ಅಂಗವಾಗಿ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಅವರ ಹೆಸರಿನಲ್ಲಿ ಆರ್ಚನೆ ಮಾಡಿಸಿ,ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಚಂದನಗೌಡ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಿ ಕರಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಮಹದೇವಪ್ಪ, ಅನಿಲ್, ಮನೋಜ್, ಲೋಕೇಶ್, ಮಂಜು, ವಿನೋದ್ ಇತರರು ಹಾಜರಿದ್ದರು.4
- ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕುಡಿಯುವ ನೀರಿಗಾಗಿ ಹೋರಾಟ ಕರ್ನಾಟಕ ರಾಜ್ಯ ರೈತ ಸಂಘದಿಂದ ಚಾಮರಾಜನಗರದಲ್ಲಿ ಕುಡಿಯುವ ನೀರಿಗಾಗಿ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿ ಅವರಿಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು1
- ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ : ತಮಿಳುನಾಡಿಗೆ ಹೋಗುವ ಹೆದ್ದಾರಿ ತಡೆದು ರೈತರ ಪ್ರತಿಭಟನೆ ಚಾಮರಾಜನಗರ, ಜು.31: ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಇಂದು (ಜು.31) ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಸೋಮವಾರಪೇಟೆ ಪೆಟ್ರೋಲ್ ಬಂಕ್ ಸಮೀಪ ನಡೆಯಲಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ರೈತರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸಮರ್ಪಕ ಮಳೆಯಿಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದು ರಾಜ್ಯದ ಹಿತಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.1
- ಮೂರನೇ ಆಷಾಢ ಶುಕ್ರವಾರ ಅಂಗವಾಗಿ 2000 ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ ಮೈಸೂರು, ಜು.31: ಮೈಸೂರಿನಲ್ಲಿ ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಗ್ಯಾರೇಜ್ ಹಾಗೂ ಟ್ಯಾಂಕರ್ ಮಾಲೀಕರ ಸಂಘದ ವತಿಯಿಂದ ಸುಮಾರು 2000 ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ನಗರದ ಪ್ರಮುಖ ವೃತ್ತದ ಸಮೀಪ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ಯಾರೇಜ್‌ಗಳ ಮಾಲೀಕರು, ಟ್ಯಾಂಕರ್ ಮಾಲೀಕರು, ಚಾಲಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಆಷಾಢ ಶುಕ್ರವಾರವನ್ನು ವಿಶೇಷವಾಗಿ ದೇವಿ ಆರಾಧನೆಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಪೂಜೆ, ಅಲಂಕಾರ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಬಳಿಕ ಅನ್ನಸಂತರ್ಪಣೆ ಆರಂಭಿಸಲಾಯಿತು. ಬಡವರು, ಕೂಲಿ ಕಾರ್ಮಿಕರು, ಪ್ರಯಾಣಿಕರು ಹಾಗೂ ಅಗತ್ಯವಿರುವ ಜನರಿಗೆ ಊಟ ವಿತರಿಸಲಾಯಿತು. ಕಾರ್ಯಕ್ರಮದ ಆಯೋಜಕರು ಮಾತನಾಡಿ, ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಪ್ರತಿವರ್ಷವೂ ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗ್ಯಾರೇಜ್ ಮತ್ತು ಟ್ಯಾಂಕರ್ ವೃತ್ತಿಯಲ್ಲಿ ತೊಡಗಿರುವ ಎಲ್ಲರೂ ಒಗ್ಗಟ್ಟಿನಿಂದ ಈ ಸೇವಾ ಕಾರ್ಯದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಅನ್ನಸಂತರ್ಪಣೆಯಲ್ಲಿ ಅನ್ನ, ಸಾಂಬಾರ್, ಪಲ್ಯ, ಪಾಯಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗಿತ್ತು. ಸೇವೆ ಸಲ್ಲಿಸಿದ ಸ್ವಯಂಸೇವಕರು ಶಿಸ್ತಿನಿಂದ ಊಟ ವಿತರಣೆ ಮಾಡಿ ಭಕ್ತರ ಮೆಚ್ಚುಗೆ ಪಡೆದರು. ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮವನ್ನು ಪ್ರಶಂಸಿಸಿ, ಧಾರ್ಮಿಕ ಆಚರಣೆಯ ಜೊತೆಗೆ ಮಾನವೀಯ ಸೇವೆಯೂ ಸಮಾಜದಲ್ಲಿ ಬೆಳೆಬೇಕು ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಇಂತಹ ಸೇವಾ ಚಟುವಟಿಕೆಗಳು ಸಾಮರಸ್ಯ ಮತ್ತು ಸಹಕಾರದ ಸಂಕೇತವಾಗಿವೆ ಎಂದು ಅವರು ಹೇಳಿದರು.2
- ಪಟ್ಟಣದಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಳವಳ್ಳಿ : ಲಯನ್ಸ್ ಕ್ಲಬ್ ಆಫ್ ಮಳವಳ್ಳಿ ನಾಡಪ್ರಭು ಸಂಸ್ಥೆಯ 2026 - 27 ನೇ ಸಾಲಿನ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭ ಶುಕ್ರವಾರ ಜರುಗಿತು. ಮಧ್ಯಾಹ್ನ 1.30 ರ ಸಮಯದಲ್ಲಿ ಪಟ್ಟಣದ ಹೊರ ವಲಯದ ಮೂಗನ ಕೊಪ್ಪಲು ಗ್ರಾಮದ ಬಳಿ ನಡೆದ ಆಕರ್ಷಕ ಸಮಾ ರಂಭದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಲ. ಟಿ ಎಸ್ ಚಂದ್ರು, ಕಾರ್ಯದರ್ಶಿಯಾಗಿ ಈರೇಶ್, ಖಜಾಂಚಿಯಾಗಿ ಎನ್ ರವಿ, ಉಪಾಧ್ಯಕ್ಷರಾಗಿ ಗಿರೀಶ್, ರಾಜೇಶ್ ಗೌಡ, ಕ್ಲಬ್ ನ ಕೋ ಆರ್ಡಿನೇಟರ್ ಆಗಿ ಅಣ್ಣೇಗೌಡರು, ಮೆಂಬರ್ ಶಿಫ್ ಛೇರ್ಮೆನ್ ಆಗಿ ಆರ್ ಎನ್ ಮಹೇಶ್, ಸರ್ವೀಸ್ ಛೇರ್ಮೆನ್ ಆಗಿ ಶಾಬುಲಿಂಗ ಸ್ವಾಮಿ, ಮಾರುಕಟ್ಟೆ ಹಾಗೂ ಕಮ್ಯೂನಿಕೇಷನ್ ಮುಖ್ಯಸ್ಥ ರಾಗಿ ರಘು, ನಿರ್ಧೇಶಕರಾಗಿ ಮಲ್ಲಿಕಾರ್ಜುಯ್ಯ, ಅಣ್ಣೇ ಗೌಡ್ರು, ಕೆ ಚಂದ್ರು ಎನ್ ನಂದೀಶ್ ಅಧಿಕಾರ ವಹಿಸಿ ಕೊಂಡರು. ಕ್ಲಬ್ ನ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ. ಜಿ ಎ ರಮೇಶ್ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಭೋದಿಸಿದರು. ಈ ವೇಳೆ ಮಾತನಾಡಿದ ಅವರು ಲಯನ್ಸ್ ಕ್ಲಬ್ ನ್ನು ಪ್ರತ್ಯೇಕ ವಿಭಾಗಗ ಳಾಗಿ ಮಾಡಿಕೊಂಡು ಸದಸ್ಯರ ಸಂಖ್ಯೆಗಳನ್ನು ಕಡಿಮೆ ಮಾಡಿ ಕೊಳ್ಳುವ ಬದಲಾಗಿ ಎಲ್ಲಾ ಕ್ಲಬ್ ಗಳು ಒಟ್ಟಾಗಿ ಸೇರಿದರೆ ಸದಸ್ಯ ರ ಬಲ ಹೆಚ್ಚಳದ ಜೊತೆಗೆ ದೊಡ್ಡ ಮಟ್ಟದಲ್ಲಿ ಕ್ಲಬ್ ನ ಸೇವಾ ಕಾರ್ಯಗಳನ್ನು ಸಹಕಾರಿಯಾಗುವುದರಿಂದ ಈ ನಿಟ್ಟಿನ ಎಲ್ಲಾ ಕ್ಲಬ್ ನ ಮುಖಂ ಡರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಲ್ಟಿಪಲ್ ಕೌನ್ಸಿಲ್ ಛೇರ್ಮೆನ್ ಡಾ. ಎನ್ ಕೃಷ್ಣೇ ಗೌಡ ಅವರು ಕ್ಲಬ್ ನ ಸೇವಾ ಕಾರ್ಯಗಳು ಸದಸ್ಯರು ಹಾಗೂ ದಾನಿಗಳ ಧನಸಹಾಯದಿಂದ ನಡೆಯಬೇಕೆ ಹೊರತು ಯಾವುದೇ ಸರ್ಕಾರಿ ಹಾಗೂ ಸಂಸ್ಥೆಗಳ ನೆರವು ದೊರಕುವು ದಿಲ್ಲ ಹೀಗಾಗಿ ಸದಸ್ಯರು ತಮ್ಮ ದುಡಿಮೆಯ ಅಲ್ಪ ಭಾಗವನ್ನು ಸಂಸ್ಥೆಯ ಸೇವಾ ಚಟುವಟಿಕೆ ಗಳಿಗೆ ಮೀಸಲಿಡಬೇಕು ಎಂದರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಟಿ ಎಸ್ ಚಂದ್ರು ಅವರು ಮಾತನಾಡಿ ತಮ್ಮ ಅಧಿಕಾರವ ಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸಮಾಜ ಸೇವಾ ಕಾರ್ಯಗ ಳನ್ನು ನಡೆಸುವ ಗುರಿ ಹೊಂದಿದ್ದು ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು. ನೂತನ ಸದಸ್ಯರಿಗೆ ಜಿಲ್ಲಾ ಉಪ ರಾಜ್ಯಪಾಲರಾದ ಎಂ ಸಿದ್ದೇಗೌಡ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿದರು. ಇದೇ ವೇಳೆ ಸಮಾಜ ಸೇವಕ ಚಿಕ್ಕ ಮರಿಗೌಡ ಅವರನ್ನು ಸನ್ಮಾನಿಸ ಲಾಯಿತು. ಆರ್ಗೆನಿಕ್ ಫಾರಂ ನ ಜಿಲ್ಲಾ ಛೇರ್ಮೆನ್ ಲ. ಅಣ್ಣೇಗೌಡ, ನಿರ್ಗಮಿತ ಅಧ್ಯಕ್ಷರಾದ ಮಂಚಯ್ಯ, ಜಿಲ್ಲಾ ಕೋ ಆರ್ಡಿನೇಟರ್ ಎಂ ವಿ ನಂದೀಶ್, ಜಯಕುಮಾರ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.1
- All About,Greatfull and Thankful for Our #CEO #KarnatakaStateBoardOfAuqaf #Bengaluru for his Performance of Duty Regards *ಭಾರತ ನಲ್ಲಿ ವೈರಲ್*1
- ಮೈಸೂರು: ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ "ಶ್ರದ್ಧಾಂಜಲಿ ಮತ್ತು ಗೀತಾ ಗಾಯನ" ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು. ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು. ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು. ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು. ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.3
- ಧ್ರುವನಾರಾಯಣ್ ಒಬ್ಬ ಶ್ರೇಷ್ಠ ರಾಜನೀತಿ ತಜ್ಞ : ಸಾಹಿತಿ ಹನೂರು ಚೆನ್ನಪ್ಪ ಚಾಮರಾಜನಗರ ಜಿಲ್ಲಾ ಬೌದ್ಧ ಕವಿಗೋಷ್ಠಿ, ಸೊಸ್ಲೆ ಗಂಗಾಧರ ವಿರಚಿತ ಬೋಧಿಸಂ ಪುಸ್ತಕ ಬಿಡುಗಡೆ ಚಾಮರಾಜನಗರ: ದಿವಗಂತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಜಿಲ್ಲೆಯ ಚಹರೆ ಬದಲಾಯಿಸಿದಂತಹ ಒಬ್ಬ ಶ್ರೇಷ್ಠ ರಾಜನೀತಿ ತಜ್ಞ ಎಂದು ಸಾಹಿತಿ ಹನೂರು ಚೆನ್ನಪ್ಪ ಬಣ್ಣಿಸಿದರು.. ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ ವತಿಯಿಂದ ಆರ್.ಧ್ರುವನಾರಾಯಣ್ ರವರ 65ನೇ ಹುಟ್ಟುಹಬ್ಬ ಅಂಗವಾಗಿ ನಡೆದ ಚಾಮರಾಜನಗರ ಜಿಲ್ಲಾ ಬೌದ್ಧ ಕವಿಗೋಷ್ಠಿ, ಸೊಸ್ಲೆ ಗಂಗಾಧರ ವಿರಚಿತ ಬೋಧಿಸಂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಜನತೆಗೆ ಏನು ಅವಶ್ಯಕತೆ ಇದೆ ಎಂಬುವುದನ್ನು ಅಧ್ಯಯನ ಮಾಡಿ ಅದಕ್ಕೆ ತಕ್ಕಂತೆ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ತಮ್ಮ ದಿನವನ್ನು ಜನರೊಟ್ಟಿಗೆ ಕಳೆದಂತಹ ಒಬ್ಬ ಶ್ರೇಷ್ಠ ರಾಜಕೀಯಪಟು. ಅವರ ಹೆಜ್ಜೆ ಗುರುತುಗಳು ಇಡೀ ಜಿಲ್ಲೆಯಲ್ಲಿ ಸಾರ್ಥಕತೆಯನ್ನು ಉಳಿಸಿಕೊಂಡಿವೆ. ಆಗಾಗಿ ಅವರ ಸ್ಮರಣೀಯ ಮಾಡುವಂತಹ ಈ ಒಂದು ಕಾರ್ಯಕ್ರಮ ಅವಿಸ್ಮರಣೀಯ ಎಂದರು. ಜಿಲ್ಲೆಯಲ್ಲಿ ಬೌದ್ಧ ವಿದ್ಯಾನಿಲಯದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದರು. ಅದನ್ನು ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಮಾಡೋಣ. ಅಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಮಾಡುವ ಮೂಲಕ ಜನತೆಗೆ ವಿಶೇಷ ಕೊಡುಗೆ ಕೊಡಬೇಕು ಎಂಬ ತುಡಿತ ಅವರಲ್ಲಿತ್ತು. ಆಗಾಗಿ ಅವರ ಹೆಜ್ಜೆ ಗುರುತು ಅಲ್ಲೂ ನೋಡಬಹುದು. ಜಿಲ್ಲೆಯ ಅಭಿವೃದ್ಧಿಯ ಜೊತೆಜೊತೆಗೆ ಕ್ಷೇತ್ರದ ಜನತೆಗೆ ಏನು ಬೇಕು ಎಂಬ ಹುಡುಕಾಟ ಇದೆಯಲ್ಲಿ ಅದು ನಿಜಕ್ಕೂ ಎಲ್ಲರಿಗೂ ಮಾದರಿ ಆಗಬೇಕು. ಆಗಾಗಿ ಅವರ ಒಂದು ಸ್ಮರಣೆ ಔಚಿತ್ಯಪೂರ್ಣ. ಅವರ ಹುಟ್ಟುಹಬ್ಬವನ್ನು ಭೌದ್ಧ ಕವಿಗೋಷ್ಠಿಯ ಮೂಲಕ ಆಚರಣೆ ಮಾಡುತ್ತಿರುವುದು ಅತ್ಯಂತ ಹೆಮ್ಮೆ ಸಂಗತಿಯಾಗಿದೆ ಎಂದರು. ಸಾಹಿತಿ ಸೋಸ್ಲೆ ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಉಪನ್ಯಾಸಕ ಮೂಕಳ್ಳಿ ಬಸವಣ್ಣ ಆಶಯ ನುಡಿ ಮಾಡಿದರು. ತಾ.ಪಂ.ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಚೇತನ ಕಲಾವಾಹಿನಿ ಜಿ.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್, ಜೆ.ಬಿ.ರಾಜೇಶ್, ಉಪನ್ಯಾಸಕ ಗುರುರಾಜು ಯರಗನಹಳ್ಳಿ, ಕವಿ ಡಾ.ಶಿವರಾಜು ಬೂದಿತಿಟ್ಟು, ಉಪನ್ಯಾಸಕ ಕುಮಾರ್ ಚಿಕ್ಕಹೊಳೆ, ಮಂಗಲ ಶಿವಣ್ಣ, ಎಂ.ಎನ್.ಮಹದೇವು, ಎಂ.ಪುಟ್ಟಸ್ವಾಮಿ, ಡಾ.ಮಹದೇವಕುಮಾರ್, ಡಾ.ಮಲ್ಲಿಕಾರ್ಜುನ ಇತರರು ಭಾಗವಹಿಸಿದ್ದರು.4