ಸೆ. 16 , 17 ರಂದು ಕಲ್ಯಾಣ ಕರ್ನಾಟಕ ಉತ್ಸವ-2026 ಕಾರ್ಯಕ್ರಮ... ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ-2026ರ ಅಂಗವಾಗಿ ಇದೇ ಸೆಪ್ಟೆಂಬರ್ 16 ಮತ್ತು 17 ರಂದು ಕಲಬುರಗಿ ನಗರದಲ್ಲಿ ಆಯೋಜಿಸಲಾಗಿರುವ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಯುವಜನರು, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಜನರೊಂದಿಗೆ ಸಂಭ್ರಮಿಸುವ ಉದ್ದೇಶದಿಂದ ಕಲಬುರಗಿ ನಗರದ ವಿವಿಧ ವೇದಿಕೆಗಳಲ್ಲಿ ಎರಡು ದಿನಗಳ ಕಾಲ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 79ನೇ ಕಲ್ಯಾಣ ಕರ್ನಾಟಕ ಉತ್ಸವ ನಮ್ಮ ಭಾಗದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಮತ್ತು ಪ್ರತಿಭೆಯನ್ನು ಒಟ್ಟಾಗಿ ಸಂಭ್ರಮಿಸುವ ಜನರ ಉತ್ಸವಾಗಿರಲಿದೆ. ಕಲಬುರಗಿ ನಗರದ ಹಾಗೂ ಜಿಲ್ಲೆಯ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು” ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದ್ದಾರೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಿ, ನಮ್ಮ ಕಲಾವಿದರು ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಸೆಪ್ಟೆಂಬರ್ 16 ಮತ್ತು 17ರಂದು ಕಲಬುರಗಿ ನಗರವೇ ಉತ್ಸವದ ಸಂಭ್ರಮದಲ್ಲಿ ಕಂಗೊಳಿಸಲಿದ್ದು, ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೇ ಈ ಉತ್ಸವದ ಯಶಸ್ಸು ಎಂದು ಸಚಿವರು ತಿಳಿಸಿದ್ದಾರೆ. *ಸೆಪ್ಟೆಂಬರ್ 16ರ ಕಾರ್ಯಕ್ರಮಗಳು:* ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ ಸ್ಥಳೀಯ ಪ್ರತಿಭೆಗಳಿಂದ ಕಲಾ ಪ್ರದರ್ಶನ, ನಂತರ ಶಾಸ್ತ್ರೀಯ ನೃತ್ಯ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದ 'ಸ್ಟ್ರೀಟ್ ಫೆಸ್ಟಿವಲ್' ಗೆ ಚಾಲನೆ ನೀಡಲಾಗುತ್ತದೆ. ರಾತ್ರಿ 8.30 ರಿಂದ 10 ಗಂಟೆ ವರೆಗೆ ಸವಾರಿ ಬ್ಯಾಂಡ್ ತಂಡ ಕಲಾ ರಸಿಕರಿಗೆ ಸಂಗೀತ ಉಣಬಡಿಸಲಿದೆ. ಇನ್ನು ಅಪ್ಪನ ಕೆರೆಯಲ್ಲಿ ಸಂಜೆ 7 ರಿಂದ 8.30 ಗಂಟೆ ವರೆಗೆ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಪ್ರದರ್ಶನ ನಡೆಯಲಿದೆ. 8.30 ಗಂಟೆಗೆ ಮುಖ್ಯಮಂತ್ರಿಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ರಾತ್ರಿ 9 ರಿಂದ 9.30 ಗಂಡೆ ವರೆಗೆ 3ಡಿ ಲೈಟ್ ಶೋ ಮತ್ತು ಡ್ರೋನ್ ಶೋ ಸಹ ನಡೆಯಲಿದೆ. *ಸೆಪ್ಟೆಂಬರ್ 17ರ ಕಾರ್ಯಕ್ರಮಗಳು:* ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿಗಳಿಂದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಆದರೆ ಡ್ಯಾನ್ಸ್ ಕರ್ನಾಟಕ ಡ್ತಾನ್ಸ್ ತಂಡದಿಂದ ಅಂದು ಪರೇಡ್ ಮೈದಾನದಲ್ಲಿ ಬೆಳಿಗ್ಗೆ 8 ರಿಂದ 11 ಗಂಟೆ ವರೆಗೆ ಸಮೂಹ ನೃತ್ಯ ಹಾಗೂ ಖ್ಯಾತ ಕಲಾವಿದ ವಿಲಾಸ್ ನಾಯಕ್ ಅವರಿಂದ ಲೈವ್ ಪೇಂಟಿಂಗ್ ಕಾರ್ಯಕ್ರಮ ನಡೆಯಲಿದೆ. ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸಂಜೆ 6.30 ರಿಂದ 8 ಗಂಟೆ ವರೆಗೆ ಗಣೇಶ ವಂದನೆ, ವಿವೇಕ ಮರಳಿಧರನ್ ಅವರಿಂದ ಸ್ಟ್ಯಾಂಡಪ್ ಕಾಮಿಡಿ, ಸ್ಟೆಪ್ ಎನ್ ಸ್ಟೈಲ್ ತಂಡದಿಂದ ಸಮಕಾಲಿನ ನೃತ್ಯ, ಎಸ್.ಸೋನುವೇಣು ಗೋಪಾಲ ಅವರಿಂದ ಸ್ಟ್ಯಾಂಡಪ್ ಕಾಮಿಡಿ ಹಾಗೂ ರಾತ್ರಿ 8 ರಿಂದ 10 ಗಂಟೆ ವರೆಗೆ ಬೆಂಗಳೂರು ಮೂಲದ ಅಕೌಸ್ಟಿಕ್ ಸಾಗಾ ತಂಡವು ಬಹುಭಾಷಾ ಬ್ಯಾಂಡ್ ಪ್ರಸ್ತುತಪಡಿಸಲಿದೆ. ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ 8 ಗಂಟೆ ವರೆಗೆ ನೃತ್ಯ ಕಾರ್ಯಕ್ರಮ, ಸುಗಮ ಸಂಗೀತ, ನೃತ್ಯ ಕಾರ್ಯಕ್ರಮ, ಸೃಷ್ಠಿ ಅವರಿಂದ ಸ್ಟ್ಯಾಂಡಪ್ ಕಾಮಿಡಿ ನಡೆಯಲಿದೆ. ರಾತ್ರಿ 8 ರಿಂದ 10 ಗಂಟೆ ವರೆಗೆ ಝೀ ಕನ್ನಡ ಸರೆಗಮಪಾ ತಂಡದಿಂದ ಸಂಗೀತ ಪ್ರದರ್ಶನ ನಡೆಯಲಿದೆ. ಅಪ್ಪನ ಕೆರೆಯಲ್ಲಿ ಸಂಜೆ 7 ರಿಂದ ರಾತ್ರಿ 9.30 ಗಂಟೆ ವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ.

- ಕಲಬುರಗಿ: ಬಿಜೆಪಿ ಅವರು ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ರಾಜಿನಾಮೆ ನೀಡ್ತೆನೆ- ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ-B.Y ವಿಜಯೇಂದ್ರ , R. ಅಶೋಕ್ ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ನೀಡ್ತೆನೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಮಾತನಾಡಿ ವಂದೇ ಮಾತರಂ ಎರಡು ಚರಣ ಹಾಡಲು ಸರ್ಕಾರ ನಿರ್ಣಯ ಮಾಡಿತು, ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಬಿಜೆಪಿಯವರಿಗೆ ಹೋರಾಟ ಮಾಡಲು ಯಾವ ವಿಷಯ ಇಲ್ಲ ಹಾಗಾಗಿ ವಂದೇ ಮಾತರಂ ಗೀತೆಯ ಬಗ್ಗೆ ಹೋರಾಟ ಮಾಡಲು ಹೊರಟಿದ್ದಾರೆ. ವಿಜಯೇಂದ್ರ ಹಾಗೂ ಅಶೋಕ್ ಅವರು ಯಾವುದೇ ಪೇಪರ್, ಟೆಲಿ ಪ್ರಾಂಪ್ಟರ್ ಬಳಸಿಕೊಳ್ಳದೆ ನಾಲ್ಕು ಚರಣ ತಕ್ಷಣ ಹಾಡಿ ತೋರಿಸಲಿ. ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದುರು ಇನ್ನು ಬಿಜೆಪಿ ಶಾಸಕರಿಗೂ ಕೂಡ ವಿಧಾನ ಸಭೆಯಲ್ಲಿ ಪ್ರತ್ಯೇಕವಾಗಿ ವಂದೇ ಮಾತರಂ ಹಾಡಲು ಅನುವು ಮಾಡಿಕೊಂಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಅವೆರಲ್ಲರೂ ಕೂಡ ಕಂಠ ಪಾಠ ಮಾಡಿ ಹಾಡಲಿ ಎಂದ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು1
- ಕಾಳಗಿಯಲ್ಲಿ ಬರಗಾಲ ಘೋಷಣೆಗೆ ಆಗ್ರಹಿಸಿ ಬಿಜೆಪಿ,ಯಿಂದ ಪ್ರತಿಭಟನೆ ಕಾಳಗಿ : ಪಟ್ಟಣದಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ಬರಗಾಲ ಘೋಷಣೆ ಮಾಡುವಂತೆ ಶಾಸಕ ಡಾ ಅವಿನಾಶ್ ಜಾಧವ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ರೈತರು ಬೃಹತ್ ಪ್ರತಿಭಟನೆ ಮಾಡಿದರು. ಕಾಳಗಿ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ಚಿಂಚೋಳಿ- ಕಾಳಗಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.1
- #ಭಾರತೀಯ ಜನತಾ ಪಕ್ಷ #ಅಫಜಲಪುರ ಮಂಡಲ ವತಿಯಿಂದ ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ.1
- ಕಾಂಗ್ರೆಸ್ ಹಿರಿಯ ನಾಯಕ ತನ್ವಿರ್ ಸೇಠ ರವರಿಗೆ ಉತ್ತಮ ಸ್ಥಾನಮಾನ ನೀಡಲು ಅಸ್ಲಾಂ ಮತ್ತೂರ್ ಒತ್ತಾಯ1
- *ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ...* 500 ಮನೆಗಳ ಕಾರ್ಯಾದೇಶ ತಡೆಹಿಡಿದಿರುವುದನ್ನು ಖಂಡಿಸಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ. #ಗೊಬ್ಬುರ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ... 500 ಮನೆಗಳ ಕಾರ್ಯಾದೇಶ ತಡೆಹಿಡಿದಿರುವುದನ್ನು ಖಂಡಿಸಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ.1
- ಬಡವರಿಗೆ ಅನ್ಯಾಯ ಮಾಡುತ್ತಿರುವ ಶಾಸಕ ಸುಪುತ್ರರ ಅಧಿಕಾರದ ಕಾಲ ಅಂತ್ಯಕ್ಕೆ ಬಂದಿದೆ-ಸಿದ್ದು ದೇವತ್ಕಲ ವಾಗ್ದಾಳಿ ಬಡವರಿಗೆ ಅನ್ಯಾಯ ಮಾಡುತ್ತಿರುವ ಶಾಸಕ ಸುಪುತ್ರರ ಅಧಿಕಾರದ ಕಾಲ ಅಂತ್ಯಕ್ಕೆ ಬಂದಿದೆ-ಸಿದ್ದು ದೇವತ್ಕಲ ವಾಗ್ದಾಳಿ1
- ರಾತ್ರಿಯಾದರೂ ನಿರಂತರ ರೈತರ ಹೋರಾಟ. ರಸ್ತೆಯುದ್ದಕ್ಕೂ ನಿಂತ ವಾಹನಗಳು ಸೇಡಂನಲ್ಲಿ ರೈತರು ತಮ್ಮ ಬೇಡಿಕೆಗಳಿಗಾಗಿ ಬೃಹತ್ ಹೋರಾಟ ನಡೆಸಿದ್ದಾರೆ. ಚಿಂಚೋಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ನಿರಂತರ ಪ್ರತಿಭಟನೆಗೆ ಇಳಿದಿದ್ದಾರೆ. ರಾತ್ರಿಯಾದರೂ ಸಹ ರೈತರು ರಸ್ತೆ ತಡೆಯಲ್ಲಿ ತೊಡಗಿದ್ದು, ಕಿಮಿಗಟ್ಟಲೆ ವಾಹನಗಳು ನಿಂತಿವೆ.1
- ಕಲಬುರಗಿ:ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ-ಹೆಚ್ ಡಿಕೆ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು ಬಿಡದಿ ವಿಚಾರ ಡೈವಟ್೯ ಮಾಡೋಕೆ ಜೈಲು ರೈಡ್ ಮಾಡಿಲ್ಲ ನಾನು ಕೇವಲ ನಾಲ್ಕು ಸೆಲ್ ನ ಗೃಹ ಮಂತ್ರಿ ಅಲ್ಲ ಎಂದು ಹೆಚ್ ಡಿಕೆ ಹೇಳಿಕೆಗೆ ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀರುಗೇಟು ನೀಡಿದ್ದಾರೆ. ರಾಜ್ಯದ ಹಲವು ಜೈಲುಗಳ ಮೇಲೆ ರೇಡ್ ಮಾಡಿದ್ದೆವೆ. ಅದನ್ನ ನಾವು ಮಾಡಬಾರದ? ಪ್ರಜ್ವಲ್ ನಿರಂತರವಾಗಿ ಪೋನ್ ನಲ್ಲಿ ಮಾತನಾಡಿದ್ದು ಯಾರಿಗೆ? ಇಷ್ಟೆಲ್ಲಾ ಮಾತನಾಡೋರು ಯಾಕೆ ಮಾಹಿತಿ ನೀಡಿಲ್ಲ. ಕುಟುಂಬದವರ ಜೊತೆ ತಾನೇ ಆತ ಮಾತನಾಡಿದ್ದು. ಹಾಸನದಲ್ಲಿ ಏನಾಗಿತ್ತು ಅದರ ಬಗ್ಗೆ ಒಂದು ಭಾರಿಯಾದ್ರು ಮಾತನಾಡಿದ್ದಾರಾ..? ಮೊದಲು ಆ ಕುಟುಂಬಗಳಿಗೆ ಕ್ಷೆಮೆ ಕೇಳಬೇಕು. ಆ ನೊಂದ ಹೆಣ್ಮಕ್ಕಳ ಕ್ಷೇಮೆ ಕೇಳಲಿ. ವಿಜಯದಶಮಿಯಿಂದ ಯುದ್ದ ಸ್ಟಾಟ್೯ ಎಂದ ಹೆಚ್ ಡಿಕೆ ಹೇಳಿಕೆ ವಿಚಾರ. ಮಾತನಾಡಿದ ಅವರು ಅಲ್ಲೋಲ ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ ಅಂತ ವ್ಯಂಗ್ಯವಾಡಿದ ಪ್ರಿಯಾಂಕ್. ನಮ್ಮ ಕುಟುಂಬವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನೋ ಹೆಚ್ ಡಿಕೆ ಹೇಳಿಕೆ ಯಾರು ಪ್ರಯತ್ನ ಮಾಡ್ತಿದ್ದಾರೆ. ನಾವ್ಯಕೆ ಅದನ್ನ ಮಾಡೋಣ ಟಿ.ನರಸಿಪುರ ಇನ್ಸಪೆಕ್ಟರ್ ವಿರದ್ದು ಹಳೇ ಕೇಸ್ ವಿಚಾರ.ಅವರ ಮೇಲೆ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಇದಕ್ಕೂ ಏನ್ ಸಂಬಂಧ. ಗಣೇಶ ವಿಚಾರವಾಗಿ ಅವರ ಇಲಾಖೆಯ ಎಸ್ ಓಪಿ ಹೇಳಬಾರದಾ..? ಅವರ ಮೇಲೆ ಆರೋಪ ಇದ್ರೆ ದೂರು ಕೊಡಲಿ. ನಾವೇ ತನೀಖೆ ಮಾಡ್ತೆವೆ. ಅದು ಬಿಟ್ಟು ಆ ಮಾಜಿ ಸಂಸದರು ಏನಾದ್ರು ಮಾಡಿದ್ರೆ ನಡಿಯುತ್ತಾ..? ನಮ್ಮ ಸಂಭ್ರಮ ಬೇರೆಯವರಿಗೆ ಆತಂಕ ಆಗಬಾರದು. ಎಲ್ಲರೂ ವಿಜೃಂಭ್ರಣೆಯಿಂದ ಹಬ್ಬ ಮಾಡಿ. ಇವರಿಗೆ ಬೆಂಕಿ ಹಚ್ಚೋದೆ ಕೆಲಸ ಎಂದು ಕಿಡಿಕಾರಿದರು ಉಮರ ಖಾಲಿದ್ ಅವರನ್ನ ರಾಷ್ಟ್ರೀಯವಾದಿ ಅಂತ ಹರಿಪ್ರಸಾದ್ ಬಿಂಬಿಸೋ ವಿಚಾರಯು ಮಾತನಾಡಿದ ಅವರು ಉಮರ್ ಖಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ. ಯಾಕೆ ಕೇಂದ್ರ ಸರ್ಕಾರ ಟ್ರಯಲ್ ಮಾಡ್ತಿಲ್ಲ, ಟ್ರಯಲ್ ಮಾಡಿ ಕೋಟ್೯ ಘೋಷಣೆ ಮಾಡಲಿ. ಅವಾಗ ಎಲ್ಲರೂ ಆತ ಅಪರಾಧಿ ಅಂತ ಒಪ್ಪಕೊಳ್ಳುತ್ತಾರೆ. ಬಿಜೆಪಿ ಹೇಳಿದ್ರೆ ನಾವು ಒಪ್ಕೊಳ್ಳಬೇಕಾ.? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು1