Shuru
Apke Nagar Ki App…
ಗೃಹಲಕ್ಷ್ಮಿ ಹಣದಿಂದ ಹಸು ಖರೀದಿ. ಹಾಲಿಂದ ಬರುವ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿ.. 18 ತಿಂಗಳ ಗೃಹಲಕ್ಷ್ಮಿ ಹಣದಿಂದ ಹಸು ಖರೀದಿ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾದ ಗೃಹಲಕ್ಷ್ಮಿಯಿಂದ ಕೊಂಡುಕೊಂಡ ಹಸು. ಇತರೆ ಗುಹಾಲಕ್ಷ್ಮೀ ಫಲಾನುಭವಿಗಳಿಗೆ ಮಾದರಿಯಾದ ಕುರುಡಿಹಳ್ಳಿ ಕವಿತಾ
ಬೆಳಗೆರೆ ನ್ಯೂಸ್
ಗೃಹಲಕ್ಷ್ಮಿ ಹಣದಿಂದ ಹಸು ಖರೀದಿ. ಹಾಲಿಂದ ಬರುವ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿ.. 18 ತಿಂಗಳ ಗೃಹಲಕ್ಷ್ಮಿ ಹಣದಿಂದ ಹಸು ಖರೀದಿ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾದ ಗೃಹಲಕ್ಷ್ಮಿಯಿಂದ ಕೊಂಡುಕೊಂಡ ಹಸು. ಇತರೆ ಗುಹಾಲಕ್ಷ್ಮೀ ಫಲಾನುಭವಿಗಳಿಗೆ ಮಾದರಿಯಾದ ಕುರುಡಿಹಳ್ಳಿ ಕವಿತಾ
More news from ಕರ್ನಾಟಕ and nearby areas
- ಮಲ್ಲೂರಹಟ್ಟಿ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಬೀಕರ ಅಪಘಾತ ನಡೆದು ಮಲ್ಲೂರಹಟ್ಟಿ ಗ್ರಾಮದ ಬೈಕ್ ಸವಾರ 19 ವರ್ಷದ ತಿಪ್ಪೇಸ್ವಾಮಿ ಸ್ಥಳದಲ್ಲೆ ಮೃತಪಟ್ಟಿದ್ದು ಇನ್ನೊಬ್ಬ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ1
- ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ ಹಣ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರಿಂದ ಪ್ರತಿಭಟನೆ: ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಚಳ್ಳಕೆರೆ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಗುದ್ದಾಟಗಳಿಂದಾಗಿ ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗುತ್ತಿದ್ದು ಮಧ್ಯ ಕರ್ನಾಟಕದ ಚಿತ್ರದುರ್ಗ ತುಮಕೂರು ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಈಗಾಗಲೇ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡಿ ಹಲವು ವರ್ಷಗಳ ಕಳೆದರೂ ಸಹ ಇದುವರೆಗೂ ಬಿಡುಗಡೆ ಮಾಡಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ಹಣ ಬಿಡುಗಡೆ ಮಾಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಬೆಳೆ ಬೇಯಿಸಿಕೊಂಡು ಕಾಲಹರಣ ಮಾಡಿಕೊಂಡು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಈಗಾಗಲೇ ರೈತ ಸಂಘ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಭೆ ನಡೆಸಿದ್ದು ಮುಂದಿನ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದ ವೇಳೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಎಲ್ಲಾ ರೈತ ಸಂಘಟನೆಗಳ ಸದಸ್ಯರು ಒಗ್ಗಟ್ಟಾಗಿ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ಜಿಲ್ಲೆ, ಬರಪೀಡಿತ ಜಿಲ್ಲೆಯಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು ರಾಜಕೀಯ ಮುಖಂಡರು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ರೈತರನ್ನು ವಲೈಸಲು ಭದ್ರಾ ಮೇಲ್ದಂಡೆ ಯೋಜನೆ ಜಾರಿಯ ಬಗ್ಗೆ ಮಾತನಾಡುತ್ತಾರೆ ಆದರೆ ಇದುವರೆಗೂ ಜಾರಿಗೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸದರು ಶಾಸಕರು ವಿಫಲರಾಗಿದ್ದಾರೆ ಈ ಭಾಗದ ರೈತರು ಶೇಂಗಾ ತೊಗರಿ ಮೆಕ್ಕೆಜೋಳ ಈರುಳ್ಳಿ ಟೊಮೆಟೊ ಗಳಂತಹ ಬೆಳೆಗಳನ್ನು ಅವಲಂಬಿಸಿದ್ದು ಮಳೆಯ ಅಭಾವದಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಜಿಲ್ಲೆಯಲ್ಲಿ ಜಾರಿಯಾದರೆ ಜಿಲ್ಲೆಯ ಕೆರೆಗಳು ತುಂಬಿ ರೈತರಿಗೆ ಜೀವನಾಡಿ ಯಾಗುತ್ತವೆ ಇದುವರೆಗೂ ಸುಮಾರು 10.000 ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಖರ್ಚಾಗಿದ್ದು ಆದರೂ ಸಹ ಯೋಜನೆ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ ಯೋಜನೆ ವಿಳಂಬವಾದಂತೆಲ್ಲ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿದ್ದು ತ್ವರಿತ ಗತಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ 5300 ಕೋಟಿ ಬಿಡುಗಡೆ ಮಾಡಬೇಕು ಹಾಗೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆಗೊಳಿಸಿದರೆ ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಂಡು ರೈತರ ಬಾಳು ಹಸನಾಗುತ್ತದೆ ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಂಘಟನೆಗಳ ಸದಸ್ಯರು ವಿವಿಧ ಸಂಘಟನೆಗಳ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿ ಜಿಲ್ಲೆಯನ್ನು ಬಂದ್ ಮಾಡುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರೈತ ಮುಖಂಡರು ಉಪಸ್ಥಿತರಿದ್ದರು.1
- Post by ದಯಾನಂದ ಡಿ ಎಚ್1
- ಭದ್ರಾವತಿ: ನಗರದ ಹಿರಿಯ ಹೋರಾಟ ಗಾರ, ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಡಿ.ಸಿ ಮಾಯಣ್ಣ(92) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಕೆಲವು ದಿನಗಳಿಂದ ಅನಾ ರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯ ನಿವೃತ್ತಿ ಹೊಂದಿದ್ದರು. ಆರಂಭದಿಂದಲೂ ಕಾರ್ಮಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದು, ಪ್ರಸ್ತುತ ಸಿಪಿಐ ರಾಜ್ಯ ಸಮಿತಿ ಸದಸ್ಯ ರಾಗಿದ್ದರು. ಕಾರ್ಮಿಕ ಹೋರಾಟಗಳಲ್ಲಿ ಮಾತ್ರವಲ್ಲದೆ ಪ್ರಗತಿಪರ ಸಂಘಟನೆಗಳ ಬಹುತೇಕ ಹೋರಾಟಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ವಿವಿಧ ರಾಜಕೀಯ ಪಕ್ಷಗಳ, ಪ್ರಗತಿಪರ ಹಾಗು ದಲಿತ ಮತ್ತು ಕಾರ್ಮಿಕ ಸಂಘಟನೆಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಮಿಕ ಹೋರಾಟಗಾರು, ಕಾರ್ಮಿಕ ವರ್ಗದವರು, ಡಿ.ಸಿ ಮಾಯಣ್ಣ ಅಭಿಮಾನಿ ಬಳಗದವರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು ಜಾತಿ-ಬೇಧ, ಪಕ್ಷ ಬೇಧ ಮರೆತು ಸಂತಾಪ ಸೂಚಿಸಿದ್ದಾರೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಯಿಂದ ಡಿ.ಸಿ.ಮಾಯಣ್ಣನವರ ಹಿರಿಯೂರಿನ ನಿವಾಸದವರೆಗೂ ಡಿ.ಸಿ ಮಾಯಣ್ಣನವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಡಿ.ಸಿ ಮಾಯಣ್ಣನವರ ಅಂತ್ಯ ಸಂಸ್ಕಾರ ಶನಿವಾರ ಸಂಜೆ ಹಿರಿಯೂರಿನ ಅವರ ತೋಟದಲ್ಲಿ ನೆರವೇರಲಿದೆ.2
- ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾ... ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಜನಾರ್ಧನ ರೆಡ್ಡಿ ಸಾಕ್ಷಿ ನಾಶಪಡಿಸಲು ರಾಜಶೇಖರ್ ಮೃ*ತದೇಹವನ್ನ ಹೂಳುವ ಬದಲು ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಶಾನದ ಸಿಬ್ಬಂದಿ ಮಾತನಾಡಿರೋ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ1
- ಮದುವೆ ಮಾಡಿಲ್ಲ ಎಂದು ಹೆತ್ತ ತಂದೆಯನ್ನೇ ಕೊಂದ ಪಾಪಿ ಮಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿ ಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿ1
- ಅನ್ನವನ್ನು ನಾವು ದೇವರೆಂದೇ ಪೂಜಿಸುತ್ತೆವೆ.1
- ತಳುಕಿನಲ್ಲಿ ಸರಣಿ ಕಳ್ಳತನ ಬೆಚ್ಚಿ ಬಿದ್ದ ಜನ.. ಚಳ್ಳಕೆರೆ: ತಾಲ್ಲೂಕಿನ ತಳಕು ಗ್ರಾಮದಲ್ಲಿ ಸರಣಿಕಳ್ಳತನವಾಗಿದ್ದು ಒಂದು ಗೊಬ್ಬರದ ಅಂಗಡಿ ಹಾಗೂ ಪ್ರಾವಿಜನ್ ಸ್ಟೋರ್ ಬೀಗ ಮುರಿದು ಒಳ್ಳ ನುಗ್ಗಿದ ಕಳ್ಳ ಕೈಗಿ ಸಿಕ್ಕ 3 ಸಾವಿರ ಹಣ ಕಳ್ಳತನ ಮಾಡಿದ್ದು ಉಳಿದಂತೆ 5 ಗೂಡಂಗಡಿಗಳ ಬೀಗ ಮುರಿದಿದ್ದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾನೆ.. ಕಳ್ಳನ ಚಲನ ಒಲನ ಕೆಲವು ಕಡೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಿತು ತಜ್ಞರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..1