logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನಿರ್ಭೀತಿಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಲಿದೆ: ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ವಿಶೇಷವಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ನಿರ್ಭೀತಿ ಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಿರಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರೇರಣಾ ಹಾಗೂ ಪೋಷಕ ಶಿಕ್ಷಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ ಜಾಗತಿಕ ಮಹಾನಗರವಾಗಿ ಬೆಳೆಯಲಿದೆ. 2033ಕ್ಕೆ ಮೆಟ್ರೋ ಸೇವೆ ಇಲ್ಲಿಗೆ ಬರಲಿದೆ.ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆ ಆಗಲಿವೆ. ಇಲ್ಲೆಲ್ಲಾ ಉದ್ಯೋಗ ಪಡೆಯಬೇಕಾದರೆ ಚೆನ್ನಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣ ರಾಗಬೇಕು. ನೀವು ಪಿಯುಸಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು. ಯಾರೂ ಕೂಡ ಫೇಲ್ ಆಗಬೇಡಿ ಎಂದು ಕಿವಿ ಮಾತು ಹೇಳಿದರು. ಗುರುಗಳ ಮಾರ್ಗದರ್ಶನ, ಸತತ ಪರಿಶ್ರಮ ನಿಮ್ಮದಾಗಿದ್ದರೆ ಗೆಲುವು ನಿಮ್ಮದಾಗಲಿದೆ. ಕಗ್ಗಲ್ಲು ಶಿಲ್ಪಿಯ ಕೈಗೆ ಸಿಕ್ಕರೆ ಶಿಲೆಯಾಗಿ ಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ. ಒಳ್ಳೆಯ ಶಿಲ್ಪಿಯ ಕೈಗೆ ಸಿಗಲಿಲ್ಲ ಎಂದರೆ, ಗುರುಗಳ ಮಾತು ಕೇಳಿಸಿಕೊಳ್ಳಲಿಲ್ಲ ಎಂದರೆ ಅದೇ ಗುಡಿಯ ಎದುರು ಆ ಕಲ್ಲು ಮೆಟ್ಟಿಲಾಗಬೇಕಾಗುತ್ತದೆ. ಪರಿಶ್ರಮವೇ ನಿಮ್ಮ ಭವಿಷ್ಯ ನಿರ್ಧರಿಸುವ ಮಾನದಂಡ. ಮೈಗಳ್ಳತನ ಬಿಟ್ಟು ಓದಿ ಪರೀಕ್ಷೆ ಬರೆಯಿರಿ ಎಂದರು. ಉನ್ನತ ಅಂಕಗಳನ್ನು ಪಡೆದರೆ ಅಧಿಕಾರಿಯಾಗಿ ಕೆಲಸ ಮಾಡಬಬಹುದಷ್ಟೆ. ಕಡಿಮೆ ಅಂಕ ಬಂದಾಕ್ಷಣ ಭವಿಷ್ಯವೇ ಇಲ್ಲ ಎಂದು ಕೊರಗಬೇಕಿಲ್ಲ. ಕಡಿಮೆ ಅಂಕಗಳನ್ನು ಪಡೆದವರು ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಂಸ್ಥೆಗಳನ್ನು ಕಟ್ಟು ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ನಮ್ಮ ಕ್ಷೇತ್ರದ ವಿದ್ಯಾರ್ಥಿಯೇ ಆಗಿರಲಿ ಎಂದು ಭಗವಂತನಲ್ಲಿ ಬೇಡುತ್ತೇನೆ. ಹೆತ್ತವರಿಗೆ ಗುರು ಗಳಿಗೆ ಗೌರವ ಕೊಟ್ಟು ಶಿಕ್ಷಣವನ್ನು ತಪಸ್ಸಿನಂತೆ ಪಡೆದರೆ ಕೀರ್ತಿವಂತರಾಗಿ ಬಾಳುತ್ತೀರಿ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಜೀವನದ ಮೊದಲ ಘಟ್ಟ.ಇದಕ್ಕೆ ಹೆದರುವ ಅಗತ್ಯವಿಲ್ಲ,ಮೊದಲ ಪರೀಕ್ಷೆಯಲ್ಲಿ ಪಾಸಾಗಿಯೇ ತೀರುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಿ.ಮಾಡುವ ಕೆಲಸದಲ್ಲಿ ನಂಬಿಕೆಯಿಡಿ, ಮನಸ್ಸಿಟ್ಟು ಓದಿ, ಅರ್ಥ ಮಾಡಿ ಕೊಂಡು ಓದಿ, ಅಪ್ಪ ಅಮ್ಮನ ಕಷ್ಟ, ಕುಟುಂಬದ ಸ್ಥಿತಿಗತಿ ನೆನೆಪಿಗೆ ತಂದುಕೊಂಡು ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಾಗದು.ವಿಜಯ ಕಟ್ಟಿಟ್ಟ ಬುತ್ತಿ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್‌ಭಟ್ ಮಾತನಾಡಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ಜಿಲ್ಲೆಯ ಶ್ರೇಣಿಯನ್ನು ಮೇಲಕ್ಕೆತ್ತಬೇಕು.ನೀವು ಹೀಗೆ ಮಾಡುತ್ತೀರೆಂಬ ವಿಶ್ವಾಸ ಜಿಲ್ಲಾಡಳಿತಕ್ಕೆ, ಶಾಲಾ ಶಿಕ್ಷಣ ಇಲಾಖೆಗೆ ಇದೆ. ಎಲ್ಲರಿಗೂ ಶುಭವಾಗಲಿ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಕ ರಮೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಅಮರ್‌ ನಾರಾಯಣ ಸ್ವಾಮಿ, ಬಿಇಒ ಸುಕನ್ಯ ,ಹೆನ್ರಿ ಪ್ರಸನ್ನ ಕುಮಾರ್, ನಾಗಭೂಷಣ್ ಮತ್ತಿತರರು ಇದ್ದರು. ಮಕ್ಕಳೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬುದು ನೀವು ಈ ಹಿಂದೆ ಬರೆದಿರುವ ಪರೀಕ್ಷೆಯಂತೆ ಒಂದು ಸಾಮಾನ್ಯ ಪರೀಕ್ಷೆಯಷ್ಟೆ. 8, 9ನೇ ತರಗತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಗುರುಗಳ ಮಾರ್ಗದರ್ಶನದಲ್ಲಿ ಇದಕ್ಕೂ ಮಾಡಿಕೊಳ್ಳಿ. ಹಬ್ಬಹರಿದಿನಗಳಲ್ಲಿ ಹೇಗೆ ಸಂತೋಷದಿಂದ ಅದರ ಎಲ್ಲಾ ಕಾರ್ಯಚಟವಟಿಕೆಗಳಲ್ಲಿ ಭಾಗಿಯಾಗುತ್ತೀರೋ ಅದೇ ರೀತಿ ಪರೀಕ್ಷೆಗೂ ಹಬ್ಬದ ಸಂತೋಷ ಸಂಭ್ರಮ ಉಳಿಸಿಕೊಳ್ಳಿ. ಪರೀಕ್ಷೆ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ, ಆತಂಕ ರಹಿತ ಮನಸ್ಸಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಆತ್ಮ ವಿಶ್ವಾಸದಲ್ಲಿ ಪರೀಕ್ಷೆ ಬರೆದರೆ ಖಚಿತವಾದ ಫಲಿತಾಂಶ ನಿಮ್ಮದಾಗಲಿದೆ. ಜಿ.ಪ್ರಭು ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.

9 hrs ago
user_Venkey Manu
Venkey Manu
ಪ್ರಕರ್ತರು ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
9 hrs ago
ed41b014-b12c-4cfe-b172-b9af45376073

ನಿರ್ಭೀತಿಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಲಿದೆ: ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ವಿಶೇಷವಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ನಿರ್ಭೀತಿ ಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಿರಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರೇರಣಾ ಹಾಗೂ ಪೋಷಕ ಶಿಕ್ಷಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ ಜಾಗತಿಕ ಮಹಾನಗರವಾಗಿ ಬೆಳೆಯಲಿದೆ. 2033ಕ್ಕೆ ಮೆಟ್ರೋ ಸೇವೆ ಇಲ್ಲಿಗೆ ಬರಲಿದೆ.ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆ ಆಗಲಿವೆ. ಇಲ್ಲೆಲ್ಲಾ ಉದ್ಯೋಗ ಪಡೆಯಬೇಕಾದರೆ ಚೆನ್ನಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣ ರಾಗಬೇಕು. ನೀವು ಪಿಯುಸಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು. ಯಾರೂ ಕೂಡ ಫೇಲ್ ಆಗಬೇಡಿ ಎಂದು ಕಿವಿ ಮಾತು ಹೇಳಿದರು. ಗುರುಗಳ ಮಾರ್ಗದರ್ಶನ, ಸತತ ಪರಿಶ್ರಮ ನಿಮ್ಮದಾಗಿದ್ದರೆ ಗೆಲುವು ನಿಮ್ಮದಾಗಲಿದೆ. ಕಗ್ಗಲ್ಲು ಶಿಲ್ಪಿಯ ಕೈಗೆ ಸಿಕ್ಕರೆ ಶಿಲೆಯಾಗಿ ಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ. ಒಳ್ಳೆಯ ಶಿಲ್ಪಿಯ ಕೈಗೆ ಸಿಗಲಿಲ್ಲ ಎಂದರೆ, ಗುರುಗಳ ಮಾತು ಕೇಳಿಸಿಕೊಳ್ಳಲಿಲ್ಲ ಎಂದರೆ ಅದೇ ಗುಡಿಯ ಎದುರು ಆ ಕಲ್ಲು ಮೆಟ್ಟಿಲಾಗಬೇಕಾಗುತ್ತದೆ. ಪರಿಶ್ರಮವೇ ನಿಮ್ಮ ಭವಿಷ್ಯ ನಿರ್ಧರಿಸುವ ಮಾನದಂಡ. ಮೈಗಳ್ಳತನ ಬಿಟ್ಟು ಓದಿ ಪರೀಕ್ಷೆ ಬರೆಯಿರಿ ಎಂದರು. ಉನ್ನತ ಅಂಕಗಳನ್ನು ಪಡೆದರೆ ಅಧಿಕಾರಿಯಾಗಿ ಕೆಲಸ ಮಾಡಬಬಹುದಷ್ಟೆ. ಕಡಿಮೆ ಅಂಕ ಬಂದಾಕ್ಷಣ ಭವಿಷ್ಯವೇ ಇಲ್ಲ ಎಂದು ಕೊರಗಬೇಕಿಲ್ಲ. ಕಡಿಮೆ ಅಂಕಗಳನ್ನು ಪಡೆದವರು ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಂಸ್ಥೆಗಳನ್ನು ಕಟ್ಟು ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ನಮ್ಮ ಕ್ಷೇತ್ರದ ವಿದ್ಯಾರ್ಥಿಯೇ ಆಗಿರಲಿ ಎಂದು ಭಗವಂತನಲ್ಲಿ ಬೇಡುತ್ತೇನೆ. ಹೆತ್ತವರಿಗೆ ಗುರು ಗಳಿಗೆ ಗೌರವ ಕೊಟ್ಟು ಶಿಕ್ಷಣವನ್ನು ತಪಸ್ಸಿನಂತೆ ಪಡೆದರೆ ಕೀರ್ತಿವಂತರಾಗಿ ಬಾಳುತ್ತೀರಿ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಜೀವನದ ಮೊದಲ ಘಟ್ಟ.ಇದಕ್ಕೆ ಹೆದರುವ ಅಗತ್ಯವಿಲ್ಲ,ಮೊದಲ ಪರೀಕ್ಷೆಯಲ್ಲಿ ಪಾಸಾಗಿಯೇ ತೀರುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಿ.ಮಾಡುವ ಕೆಲಸದಲ್ಲಿ ನಂಬಿಕೆಯಿಡಿ, ಮನಸ್ಸಿಟ್ಟು ಓದಿ, ಅರ್ಥ ಮಾಡಿ ಕೊಂಡು ಓದಿ, ಅಪ್ಪ ಅಮ್ಮನ ಕಷ್ಟ, ಕುಟುಂಬದ ಸ್ಥಿತಿಗತಿ ನೆನೆಪಿಗೆ ತಂದುಕೊಂಡು ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಾಗದು.ವಿಜಯ ಕಟ್ಟಿಟ್ಟ ಬುತ್ತಿ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್‌ಭಟ್ ಮಾತನಾಡಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ಜಿಲ್ಲೆಯ ಶ್ರೇಣಿಯನ್ನು ಮೇಲಕ್ಕೆತ್ತಬೇಕು.ನೀವು ಹೀಗೆ ಮಾಡುತ್ತೀರೆಂಬ ವಿಶ್ವಾಸ ಜಿಲ್ಲಾಡಳಿತಕ್ಕೆ, ಶಾಲಾ ಶಿಕ್ಷಣ ಇಲಾಖೆಗೆ ಇದೆ. ಎಲ್ಲರಿಗೂ ಶುಭವಾಗಲಿ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಕ ರಮೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಅಮರ್‌ ನಾರಾಯಣ ಸ್ವಾಮಿ, ಬಿಇಒ ಸುಕನ್ಯ ,ಹೆನ್ರಿ ಪ್ರಸನ್ನ ಕುಮಾರ್, ನಾಗಭೂಷಣ್ ಮತ್ತಿತರರು ಇದ್ದರು. ಮಕ್ಕಳೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬುದು ನೀವು ಈ ಹಿಂದೆ ಬರೆದಿರುವ ಪರೀಕ್ಷೆಯಂತೆ ಒಂದು ಸಾಮಾನ್ಯ ಪರೀಕ್ಷೆಯಷ್ಟೆ. 8, 9ನೇ ತರಗತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಗುರುಗಳ ಮಾರ್ಗದರ್ಶನದಲ್ಲಿ ಇದಕ್ಕೂ ಮಾಡಿಕೊಳ್ಳಿ. ಹಬ್ಬಹರಿದಿನಗಳಲ್ಲಿ ಹೇಗೆ ಸಂತೋಷದಿಂದ ಅದರ ಎಲ್ಲಾ ಕಾರ್ಯಚಟವಟಿಕೆಗಳಲ್ಲಿ ಭಾಗಿಯಾಗುತ್ತೀರೋ ಅದೇ ರೀತಿ ಪರೀಕ್ಷೆಗೂ ಹಬ್ಬದ ಸಂತೋಷ ಸಂಭ್ರಮ ಉಳಿಸಿಕೊಳ್ಳಿ. ಪರೀಕ್ಷೆ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ, ಆತಂಕ ರಹಿತ ಮನಸ್ಸಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಆತ್ಮ ವಿಶ್ವಾಸದಲ್ಲಿ ಪರೀಕ್ಷೆ ಬರೆದರೆ ಖಚಿತವಾದ ಫಲಿತಾಂಶ ನಿಮ್ಮದಾಗಲಿದೆ. ಜಿ.ಪ್ರಭು ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.

More news from ಕರ್ನಾಟಕ and nearby areas
  • ಒಳಮೀಸಲಾತಿಯಿಂದ ಭೋವಿ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ:ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಎಂ.ವಿ.ಕೃಷ್ಣಪ್ಪ ಬಾಗೇಪಲ್ಲಿ:- ನ್ಯಾ.ನಾಗಮೋಹನದಾಸ್ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ ವಿಭಾಗಿಸಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಅಸಮರ್ಪಕವಾಗಿದೆ . ಸಿ ವರ್ಗಕ್ಕೆ ಸೇರಿದ ಭೋವಿ, ಬಂಜಾರ, ಕೊರಮ, ಕೋರಚ ಸೇರಿ 59 ಅಲೆಮಾರಿ ಸಮುದಾಯಗಳಿಗೆ ಕೇವಲ 5% ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಎಂ.ವಿ.ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರ ಬಂಜಾರ, ಭೋವಿ, ಕೊರಮ, ಕೊರಚ ಸೇರಿ 63 ಜಾತಿಗಳಿಗೆ ಅನ್ಯಾಯ ಮಾಡಿದೆ. ಈ ಹಿಂದೆ ಕೇವಲ ನಾಲ್ಕು ಜಾತಿಗಳಿಗೆ ಬೊಮ್ಮಾಯಿ ಸರಕಾರ 4.5% ಮೀಸಲಾತಿ ನೀಡಿತ್ತು. ಈಗ ಕಾಂಗ್ರೆಸ್ ಸರಕಾರ ರದ್ದು ಪಡಿಸಿ, 63 ಜಾತಿಗಳಿಗೆ ಕೇವಲ 5% ಮೀಸಲಾತಿ ನೀಡಿದೆ. ಇದರ ವಿರುದ್ಧ ಪಕ್ಷಪಾತವಾಗಿ ಒಟ್ಟಾಗಿ ಹೋರಾಟ ಮಾಡಬೇಕು ಎಂದರು. ಒಳಮೀಸಲಾತಿಯಿಂದ ಭೋವಿ, ಬಂಜಾರ (ಲಂಬಾಣಿ), ಕೊರಮ, ಕೊರಚ, ಸಮಗಾರ, ಚರ್ಮಕಾರ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗವುದು ಎಂದು ಅವರು ಎಚ್ಚರಿಕೆ ನೀಡಿದರು. ಒಳಮೀಸಲಾತಿಯಿಂದ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಿ, ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದಲ್ಲಿ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಈ ಕ್ರಿಯೆಯಲ್ಲಿ ಎಲ್ಲ ಸಮುದಾಯಗಳೂ ಒಟ್ಟಾಗಬೇಕು’ ಎಂದು ಕರೆ ನೀಡಿದರು. ಪರಿಶಿಷ್ಟ ಜಾತಿಗಳಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 7 ರಷ್ಟು ಮೀಸಲಾತಿ ಘೋಷಣೆಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಮನವಿ ಮಾಡಬೇಕು ಎಂದು ಒತ್ತಾಯಿಸಬೇಕು ಎಂದು ಹೇಳಿದರು. ಬಾಗೇಪಲ್ಲಿ ತಾಲ್ಲೂಕು ಭೋವಿ ಸಂಘದ ಜಿಲ್ಲಾದ್ಯಕ್ಷ ಪಿ.ಡಿ.ವೆಂಕಟರವಣ ಮಾತನಾಡಿ ಒಳಮೀಸಲಾತಿ ರಹಿತ ಹಳೆ ಮೀಸಲಾತಿಗೆ ‘ಬಲಗೈ’ ಆಗ್ರಹ ‘ಒಳಮೀಸಲಾತಿ ಹಂಚಿಕೆ ಸಂಬಂಧಿಸಿದಂತೆ ಗೊಂದಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆ ಆಗುವವರೆಗೆ ಒಳ ಮೀಸಲಾತಿರಹಿತವಾಗಿ ಹಳೆ ಮೀಸಲಾತಿಯನ್ನು (ಶೇ 15) ಜಾರಿಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರ ಮನವಿ ಮಾಡಿದರು ‘ಒಟ್ಟು ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸಿರುವುದಕ್ಕೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್‌ ಶೇ 50ರ ಮೀಸಲಾತಿಯಲ್ಲಿ ನೇಮಕಾತಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಒಳ ಮೀಸಲಾತಿ ಹಂಚಿಕೆ ವಿಷಯವೂ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಒಳ ಮಿಸಲಾತಿರಹಿತವಾಗಿ ಹಳೆ ಮೀಸಲಾತಿಯಡಿ ನೇಮಕಾತಿ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ಹೊಸ ಜಾತಿ ಪ್ರಮಾಣಪತ್ರದ ಜೊತೆ ಹಳೆಯ ಜಾತಿ ಪ್ರಮಾಣಪತ್ರವನ್ನು ಪರಿಗಣಿಸುವಂತೆ ಆದೇಶ ಹೊರಡಿಸಬೇಕು ವಿವಿಧ ಇಲಾಖೆಗಳು ನೇಮಕಾತಿಗೆ ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪ‍ಡಿಸಿ ಮರು ಅಧಿಸೂಚನೆ ಹೊರಡಿಸಲು ಸೂಕ್ತ ಆದೇಶ ಹೊರಡಿಸಬೇಕು ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳು ಬಲಗೈ ಗುಂಪಿನಲ್ಲಿ ಉದ್ಯೋಗ ಶಿಕ್ಷಣ ಮತ್ತು ಇತರ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಆಯೋಗ ಸಲ್ಲಿಸಿರುವ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುವುದರಿಂದ ಅದನ್ನು ತಿರಸ್ಕರಿಸಬೇಕು’ ಎಂದೂ ಆಗ್ರಹಿಸಿದ್ದಾರೆ. ಬಾಗೇಪಲ್ಲಿ ತಾಲ್ಲೂಕು ಭೋ‌ವಿ ಸಂಘದ ಅದ್ಯಕ್ಷ ವಿನಯ್ ಕುಮಾರ್ ಮಾತನಾಡಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಿದ್ದರಾಮಯ್ಯ ಸರಕಾರ ಅನ್ಯಾಯ ಮಾಡಿದೆ. ಸಮೀಕ್ಷೆ ಸಮರ್ಕಪವಾಗಿ ಮಾಡಿಲ್ಲ. ನಾಗಮೋಹನ ದಾಸ್ ವರದಿ ಸರಿಯಾಗಿ ಆಗಿಲ್ಲ. ಮತ್ತೊಮ್ಮೆ ಸೂಕ್ತ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರವು ನ್ಯಾ. ನಾಗಮೋಹನದಾಸ್ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಅಶ್ವತ್ಥಪ್ಪ ಶ್ರೀರಾಮ ನಾಯಕ್, ಶ್ರೀನಿವಾಸ್, ರಮೇಶ್, ನರೇಂದ್ರ, ಚಲಪತಿ, ತಿಪ್ಪಣ್ಣ, ಚನ್ನರಾಯಣಪಲ್ಲಿ ಅಚ್ಚಪ್ಪ, ವೇಣು, ಈರಪ್ಪ ಸೇರಿದಂತೆ ಹಲವಾರು ಭೋವಿ ಸಂಘದ ಮುಖಂಡರು ಹಾಜರಿದ್ದರು.
    1
    ಒಳಮೀಸಲಾತಿಯಿಂದ ಭೋವಿ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ:ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಎಂ.ವಿ.ಕೃಷ್ಣಪ್ಪ
ಬಾಗೇಪಲ್ಲಿ:-
ನ್ಯಾ.ನಾಗಮೋಹನದಾಸ್ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ ವಿಭಾಗಿಸಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಅಸಮರ್ಪಕವಾಗಿದೆ 
. ಸಿ ವರ್ಗಕ್ಕೆ ಸೇರಿದ ಭೋವಿ, ಬಂಜಾರ, ಕೊರಮ, ಕೋರಚ ಸೇರಿ 59 ಅಲೆಮಾರಿ ಸಮುದಾಯಗಳಿಗೆ ಕೇವಲ 5% ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು
ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಎಂ.ವಿ.ಕೃಷ್ಣಪ್ಪ
ಆಕ್ರೋಶ ವ್ಯಕ್ತಪಡಿಸಿದರು
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ  ಸೋಮವಾರ ಅವರು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರಕಾರ ಬಂಜಾರ, ಭೋವಿ, ಕೊರಮ, ಕೊರಚ ಸೇರಿ 63 ಜಾತಿಗಳಿಗೆ ಅನ್ಯಾಯ ಮಾಡಿದೆ. ಈ ಹಿಂದೆ ಕೇವಲ ನಾಲ್ಕು ಜಾತಿಗಳಿಗೆ ಬೊಮ್ಮಾಯಿ ಸರಕಾರ 4.5% ಮೀಸಲಾತಿ ನೀಡಿತ್ತು. 
ಈಗ ಕಾಂಗ್ರೆಸ್ ಸರಕಾರ ರದ್ದು ಪಡಿಸಿ, 63 ಜಾತಿಗಳಿಗೆ ಕೇವಲ 5% ಮೀಸಲಾತಿ ನೀಡಿದೆ. ಇದರ ವಿರುದ್ಧ ಪಕ್ಷಪಾತವಾಗಿ ಒಟ್ಟಾಗಿ ಹೋರಾಟ ಮಾಡಬೇಕು ಎಂದರು.
ಒಳಮೀಸಲಾತಿಯಿಂದ ಭೋವಿ, ಬಂಜಾರ (ಲಂಬಾಣಿ), ಕೊರಮ, ಕೊರಚ, ಸಮಗಾರ, ಚರ್ಮಕಾರ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗವುದು ಎಂದು ಅವರು ಎಚ್ಚರಿಕೆ ನೀಡಿದರು.
ಒಳಮೀಸಲಾತಿಯಿಂದ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಿ, ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದಲ್ಲಿ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಈ ಕ್ರಿಯೆಯಲ್ಲಿ ಎಲ್ಲ ಸಮುದಾಯಗಳೂ ಒಟ್ಟಾಗಬೇಕು’ ಎಂದು ಕರೆ ನೀಡಿದರು.
ಪರಿಶಿಷ್ಟ ಜಾತಿಗಳಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 7 ರಷ್ಟು ಮೀಸಲಾತಿ ಘೋಷಣೆಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಮನವಿ ಮಾಡಬೇಕು ಎಂದು ಒತ್ತಾಯಿಸಬೇಕು ಎಂದು ಹೇಳಿದರು.
ಬಾಗೇಪಲ್ಲಿ ತಾಲ್ಲೂಕು ಭೋವಿ ಸಂಘದ ಜಿಲ್ಲಾದ್ಯಕ್ಷ ಪಿ.ಡಿ.ವೆಂಕಟರವಣ ಮಾತನಾಡಿ
ಒಳಮೀಸಲಾತಿ ರಹಿತ ಹಳೆ ಮೀಸಲಾತಿಗೆ ‘ಬಲಗೈ’ ಆಗ್ರಹ
‘ಒಳಮೀಸಲಾತಿ ಹಂಚಿಕೆ ಸಂಬಂಧಿಸಿದಂತೆ ಗೊಂದಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆ ಆಗುವವರೆಗೆ ಒಳ ಮೀಸಲಾತಿರಹಿತವಾಗಿ ಹಳೆ ಮೀಸಲಾತಿಯನ್ನು (ಶೇ 15) ಜಾರಿಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರ ಮನವಿ ಮಾಡಿದರು
‘ಒಟ್ಟು ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸಿರುವುದಕ್ಕೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್‌ ಶೇ 50ರ ಮೀಸಲಾತಿಯಲ್ಲಿ ನೇಮಕಾತಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಒಳ ಮೀಸಲಾತಿ ಹಂಚಿಕೆ ವಿಷಯವೂ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಒಳ ಮಿಸಲಾತಿರಹಿತವಾಗಿ ಹಳೆ ಮೀಸಲಾತಿಯಡಿ ನೇಮಕಾತಿ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಹೊಸ ಜಾತಿ ಪ್ರಮಾಣಪತ್ರದ ಜೊತೆ ಹಳೆಯ ಜಾತಿ ಪ್ರಮಾಣಪತ್ರವನ್ನು ಪರಿಗಣಿಸುವಂತೆ ಆದೇಶ ಹೊರಡಿಸಬೇಕು ವಿವಿಧ ಇಲಾಖೆಗಳು ನೇಮಕಾತಿಗೆ ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪ‍ಡಿಸಿ ಮರು ಅಧಿಸೂಚನೆ ಹೊರಡಿಸಲು ಸೂಕ್ತ ಆದೇಶ ಹೊರಡಿಸಬೇಕು ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳು ಬಲಗೈ ಗುಂಪಿನಲ್ಲಿ ಉದ್ಯೋಗ ಶಿಕ್ಷಣ ಮತ್ತು ಇತರ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಆಯೋಗ ಸಲ್ಲಿಸಿರುವ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುವುದರಿಂದ ಅದನ್ನು ತಿರಸ್ಕರಿಸಬೇಕು’ ಎಂದೂ ಆಗ್ರಹಿಸಿದ್ದಾರೆ.
ಬಾಗೇಪಲ್ಲಿ ತಾಲ್ಲೂಕು ಭೋ‌ವಿ ಸಂಘದ ಅದ್ಯಕ್ಷ ವಿನಯ್ ಕುಮಾರ್ ಮಾತನಾಡಿ
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಿದ್ದರಾಮಯ್ಯ ಸರಕಾರ ಅನ್ಯಾಯ ಮಾಡಿದೆ. ಸಮೀಕ್ಷೆ ಸಮರ್ಕಪವಾಗಿ ಮಾಡಿಲ್ಲ. 
ನಾಗಮೋಹನ ದಾಸ್ ವರದಿ ಸರಿಯಾಗಿ ಆಗಿಲ್ಲ. ಮತ್ತೊಮ್ಮೆ ಸೂಕ್ತ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ನ್ಯಾ. ನಾಗಮೋಹನದಾಸ್ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ  ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಅಶ್ವತ್ಥಪ್ಪ ಶ್ರೀರಾಮ ನಾಯಕ್,  ಶ್ರೀನಿವಾಸ್, ರಮೇಶ್, ನರೇಂದ್ರ, ಚಲಪತಿ, ತಿಪ್ಪಣ್ಣ, ಚನ್ನರಾಯಣಪಲ್ಲಿ ಅಚ್ಚಪ್ಪ, ವೇಣು, ಈರಪ್ಪ ಸೇರಿದಂತೆ ಹಲವಾರು ಭೋವಿ ಸಂಘದ ಮುಖಂಡರು ಹಾಜರಿದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    17 hrs ago
  • ಬೆಂಗಳೂರಿನ ಹೆಮ್ಮೆಯ ಸಂಕೇತ ವಿಧಾನಸೌಧದ ಮುಂಭಾಗದಲ್ಲೇ ಹೊರರಾಜ್ಯದ ಯುವತಿಯರ ಎರಡು ಗುಂಪುಗಳ ನಡುವೆ ಭೀಕರ ಜಗಳ ನಡೆದಿದೆ. ವೀಕೆಂಡ್ ಹಿನ್ನೆಲೆ ಪ್ರವಾಸಕ್ಕೆಂದು ಬಂದಿದ್ದ ಹಿಂದಿ ಭಾಷಿಕ ಯುವತಿಯರ ನಡುವೆ ಸಣ್ಣ ವಿಷಯಕ್ಕೆ ಶುರುವಾದ ಮಾತಿನ ಚಕಮಕಿ, ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಾಲ್ಕೈದು ಯುವತಿಯರು ಪರಸ್ಪರ ಜುಟ್ಟು ಹಿಡಿದು ಎಳೆದಾಡುತ್ತಾ ಹೊಡೆದಾಡಿಕೊಂಡ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯುವತಿಯರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
    1
    ಬೆಂಗಳೂರಿನ ಹೆಮ್ಮೆಯ ಸಂಕೇತ ವಿಧಾನಸೌಧದ ಮುಂಭಾಗದಲ್ಲೇ ಹೊರರಾಜ್ಯದ ಯುವತಿಯರ ಎರಡು ಗುಂಪುಗಳ ನಡುವೆ ಭೀಕರ ಜಗಳ ನಡೆದಿದೆ. ವೀಕೆಂಡ್ ಹಿನ್ನೆಲೆ ಪ್ರವಾಸಕ್ಕೆಂದು ಬಂದಿದ್ದ ಹಿಂದಿ ಭಾಷಿಕ ಯುವತಿಯರ ನಡುವೆ ಸಣ್ಣ ವಿಷಯಕ್ಕೆ ಶುರುವಾದ ಮಾತಿನ ಚಕಮಕಿ, ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಾಲ್ಕೈದು ಯುವತಿಯರು ಪರಸ್ಪರ ಜುಟ್ಟು ಹಿಡಿದು ಎಳೆದಾಡುತ್ತಾ ಹೊಡೆದಾಡಿಕೊಂಡ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯುವತಿಯರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಇಂಡಸ್ಟ್ರಿಯಲ್ ಏರಿಯದಲ್ಲಿರುವ ಕೇಬಲ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರವಾದ ನಷ್ಟ ಉಂಟಾಗಿದೆ, ದಟ್ಟವಾದ ಹೊಗೆ ಆವರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು, ನಾಗರಿಕರಿಗೂ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
    1
    ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಇಂಡಸ್ಟ್ರಿಯಲ್ ಏರಿಯದಲ್ಲಿರುವ ಕೇಬಲ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರವಾದ ನಷ್ಟ ಉಂಟಾಗಿದೆ, ದಟ್ಟವಾದ ಹೊಗೆ ಆವರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು, ನಾಗರಿಕರಿಗೂ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್‌ ನಿದ್ದೋಡಿ ಅವರನ್ನು ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು... ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್‌ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ✍️ವರದಿ: ಸುರೇಂದ್ರ ಶಿವಮೊಗ್ಗ.....
    2
    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ  ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್‌ ನಿದ್ದೋಡಿ ಅವರನ್ನು  ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು...
ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್‌ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.
✍️ವರದಿ: ಸುರೇಂದ್ರ ಶಿವಮೊಗ್ಗ.....
    user_Surendra Shimoga
    Surendra Shimoga
    Shuru News Publisher ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಸಮ್ಮೇಳನ ತಯಾರಿ ಕೆಲಸ ಮುಗಿಸಿ ವಾಪಸ್ಸಾಗುವಾಗ ಕೆರೆಗೆ ಬಿದ್ದ ಕಾರು.
    1
    ಸಮ್ಮೇಳನ ತಯಾರಿ ಕೆಲಸ ಮುಗಿಸಿ ವಾಪಸ್ಸಾಗುವಾಗ ಕೆರೆಗೆ ಬಿದ್ದ ಕಾರು.
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    23 hrs ago
  • ಹಲಗೂರು ಭಾಗದಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅಣ್ಣನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.*
    1
    ಹಲಗೂರು ಭಾಗದಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅಣ್ಣನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.*
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    13 hrs ago
  • ಚಿಂತಾಮಣಿ:-ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಚೌಡರೆಡ್ಡಿ (ಚೇತನ್ ರೆಡ್ಡಿ) ಆಯ್ಕೆ
    2
    ಚಿಂತಾಮಣಿ:-ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಚೌಡರೆಡ್ಡಿ (ಚೇತನ್ ರೆಡ್ಡಿ) ಆಯ್ಕೆ
    user_KRUTHI NEWS KANNADA
    KRUTHI NEWS KANNADA
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    14 hrs ago
  • ಚಲಿಸುತ್ತಿದ್ದ ಕಾರು ಹೊತ್ತಿ ಉರಿದು ಚಾಲಕ ಸಜೀವ ದಹನ ! ಬಾಗೇಪಲ್ಲಿ:- ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಚಾಲಕ ಕಾರಿನ ಒಳಗೇ ಸಜೀವ ದಹನವಾಗಿರುವ ಭೀಕರ ಘಟನೆ ಬಾಗೇಪಲ್ಲಿ ತಾಲೂಕಿನ ಅಚೆಪಲ್ಲಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ತಾಲೂಕಿನ ಅಚೆಪಲ್ಲಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಪೆನುಮಲೆ ಗ್ರಾಮದ ನಿವಾಸಿ ಉದಯ್ ಕುಮಾರ್ (70) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಉದಯ್ ಕುಮಾರ್ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಚೆಪಲ್ಲಿ ಗ್ರಾಮದ ಬಳಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದು, ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಕಾರಿನ ಒಳಗೇ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಬೆಂಕಿಗೆ ಕಾರಣವೇನು? ಕಾರಿನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಪ್ರಾಥಮಿಕ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಹ ಚಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
    2
    ಚಲಿಸುತ್ತಿದ್ದ ಕಾರು ಹೊತ್ತಿ ಉರಿದು ಚಾಲಕ ಸಜೀವ ದಹನ !
ಬಾಗೇಪಲ್ಲಿ:-
ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಚಾಲಕ ಕಾರಿನ ಒಳಗೇ ಸಜೀವ ದಹನವಾಗಿರುವ ಭೀಕರ ಘಟನೆ  ಬಾಗೇಪಲ್ಲಿ  ತಾಲೂಕಿನ ಅಚೆಪಲ್ಲಿ ಗ್ರಾಮದ ಬಳಿ ಈ ದುರ್ಘಟನೆ
ಸಂಭವಿಸಿದೆ.
ತಾಲೂಕಿನ ಅಚೆಪಲ್ಲಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಪೆನುಮಲೆ ಗ್ರಾಮದ ನಿವಾಸಿ ಉದಯ್ ಕುಮಾರ್ (70) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಉದಯ್ ಕುಮಾರ್ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಚೆಪಲ್ಲಿ ಗ್ರಾಮದ ಬಳಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದು, ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಕಾರಿನ ಒಳಗೇ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಬೆಂಕಿಗೆ ಕಾರಣವೇನು?
ಕಾರಿನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್  ಬೆಂಕಿ ಅವಘಡಕ್ಕೆ ಪ್ರಾಥಮಿಕ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಹ ಚಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    23 hrs ago
  • ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಶನ ದರ್ಶನಕ್ಕೆ ಭಕ್ತರ ಸಾಗರ ನಾಯಕನಹಟ್ಟಿಯಲ್ಲಿ ಸೋಮವಾರ ಶ್ರೀ ಗುರು ತಿಪ್ಪೇಶನ ಸ್ವಾಮಿ ದರ್ಶನ ಪಡೆಯಲು ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು. ಭಕ್ತರು ದೇವರ ಬಳಿ ಮನಸಿನ ಹರಕೆ ತೀರಿಸಲು ಗೊಬರಿ ಸುಡುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೇತೂರು ಗ್ರಾಮದ ಉದ್ಯಮಿಯೊಬ್ಬರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರೆ, ದಾವಣಗೆರೆ ಮೂಲದ ಉದ್ಯಮಿಯೊಬ್ಬರು ಭಕ್ತರಿಗೆ ಉಚಿತ ಲಾಡು ವಿತರಣೆ ಮಾಡಿದರು. ಕಾರ್ಯಕ್ರಮದ ವೇಳೆ ಆಡಳಿತಾಧಿಕಾರಿ ಗಂಗಾಧರಪ್ಪ, ಸಿಬ್ಬಂದಿ ಸತೀಶ್ ಸೇರಿದಂತೆ ಇತರರು ಭಕ್ತರಿಗೆ ಲಾಡು ವಿತರಣೆ ಮಾಡಿ ಸೇವೆಯಲ್ಲಿ ಭಾಗವಹಿಸಿದರು.
    1
    ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಶನ ದರ್ಶನಕ್ಕೆ ಭಕ್ತರ ಸಾಗರ ನಾಯಕನಹಟ್ಟಿಯಲ್ಲಿ ಸೋಮವಾರ ಶ್ರೀ ಗುರು ತಿಪ್ಪೇಶನ ಸ್ವಾಮಿ ದರ್ಶನ ಪಡೆಯಲು ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು.
ಭಕ್ತರು ದೇವರ ಬಳಿ ಮನಸಿನ ಹರಕೆ ತೀರಿಸಲು ಗೊಬರಿ ಸುಡುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೇತೂರು ಗ್ರಾಮದ ಉದ್ಯಮಿಯೊಬ್ಬರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರೆ, ದಾವಣಗೆರೆ ಮೂಲದ ಉದ್ಯಮಿಯೊಬ್ಬರು ಭಕ್ತರಿಗೆ ಉಚಿತ ಲಾಡು ವಿತರಣೆ ಮಾಡಿದರು.
ಕಾರ್ಯಕ್ರಮದ ವೇಳೆ ಆಡಳಿತಾಧಿಕಾರಿ ಗಂಗಾಧರಪ್ಪ, ಸಿಬ್ಬಂದಿ ಸತೀಶ್ ಸೇರಿದಂತೆ ಇತರರು ಭಕ್ತರಿಗೆ ಲಾಡು ವಿತರಣೆ ಮಾಡಿ ಸೇವೆಯಲ್ಲಿ ಭಾಗವಹಿಸಿದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.