ಚಿಕ್ಕೋಡಿ ಅಭಿವೃದ್ಧಿಗಾಗಿ 20 ಕೋಟಿ ಅನುದಾನ; ಶಾಸಕ ಗಣೇಶ ಹುಕ್ಕೇರಿ. ಅಲೆಮಾರಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರೇ ಹೆಚ್ಚಾಗಿ ವಾಸಿಸುವ ಪಟ್ಟಣದ ರಾಮನಗರ ಹಾಗೂ ಸಂಜಯಗಾಂಧಿ ನಗರ ಬಡಾವಣೆಗಳನ್ನು 'ಅತ್ಯುತ್ತಮ ಬಡಾವಣೆ' ಗಳನ್ನಾಗಿ ಮಾರ್ಪಡಿಸಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಪಟ್ಟಣದ ರಾಮನಗರ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಮುಂದಿನ 6 ತಿಂಗಳಲ್ಲಿ 20 ಕೋಟಿ ರೂ.ಗೂ ಹೆಚ್ಚು ಅನುದಾನ తేందు ಪಟ್ಟಣಅಭಿವೃದ್ಧಿಪಡಿಸಲಾಗುವುದು. ರಾಮನಗರ ಬಡಾವಣೆಯಲ್ಲಿ ವಾಸವಿರುವ ಜನರಿಗೆ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ಹಕ್ಕುಪತ್ರ ವಿತರಣೆ ಮಾಡಲಾಗುವುದು" ಎಂದರು ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ ಮಾತನಾಡಿ, ರಾಮನಗರ ಬಡಾವಣೆಯನ್ನು ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿನ ಜನರಿಗೆ ಅವಶ್ಯಕವಾಗಿರುವ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು. ಮನೆಯ ಮೇಲೆ ಹಾದು ಹೋಗಿರುವ ಹೈ ಟಿನ್ನನ್ ವಿದ್ಯುತ್ ತಂತಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚರಂಡಿ, ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧಸೌಲಭ್ಯಒದಗಿಸಿಕೊಡಲಾಗುವುದು ಎಂದು ಹೇಳಿದರು. ಮುಸ್ಲಿಂ ಸಮುದಾಯದ ಖಬರಸ್ತಾನ ನಿರ್ಮಾಣಕ್ಕಾಗಿ 10 ಲಕ್ಷ ರೂ. ಹನುಮಾನ ಮಂದಿರದ ಬಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಶಾಸಕ ಗಣೇಶ ಹುಕ್ಕೇರಿ ಆದೇಶ ಪ್ರತಿಗಳನ್ನು ಸಂಬಂಧಿಸಿದವರಿಗೆ ವಿತರಿಸಿದರು. ಕೊಳವೆಬಾವಿ ಕೊರೆಯಿಸುವುದಕ್ಕೂ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ ಕುಲಕರ್ಣಿ, ಪುರಸಭೆ ಮಾಜಿ ಸದಸ್ಯ ಅನಿಲ ಮಾನೆ, ರಾಜಶೇಖರ ಮಿರ್ಜಿ, ಇರ್ಫಾನ್ ಬೇಪಾರಿ, ರಮೇಶ ಹಿತ್ತಲಮನಿ, ಸಂದೀಪ ಶೇರಖಾನೆ,ಗುಲಾಬಹುಸೇನಬಾಗವಾನ್, ಸಾಬೀರ ಜಮಾದಾರ, ಮಹಾವೀರ ದಾಂಡಗೆ, ಹೆಸ್ಕಾಂ ಅಧಿಕಾರಿ ಸುಖಸಾರೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಇತರರು ಇದ್ದರು.
ಚಿಕ್ಕೋಡಿ ಅಭಿವೃದ್ಧಿಗಾಗಿ 20 ಕೋಟಿ ಅನುದಾನ; ಶಾಸಕ ಗಣೇಶ ಹುಕ್ಕೇರಿ. ಅಲೆಮಾರಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರೇ ಹೆಚ್ಚಾಗಿ ವಾಸಿಸುವ ಪಟ್ಟಣದ ರಾಮನಗರ ಹಾಗೂ ಸಂಜಯಗಾಂಧಿ ನಗರ ಬಡಾವಣೆಗಳನ್ನು 'ಅತ್ಯುತ್ತಮ ಬಡಾವಣೆ' ಗಳನ್ನಾಗಿ ಮಾರ್ಪಡಿಸಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಪಟ್ಟಣದ ರಾಮನಗರ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಮುಂದಿನ 6 ತಿಂಗಳಲ್ಲಿ 20 ಕೋಟಿ ರೂ.ಗೂ ಹೆಚ್ಚು ಅನುದಾನ తేందు ಪಟ್ಟಣಅಭಿವೃದ್ಧಿಪಡಿಸಲಾಗುವುದು. ರಾಮನಗರ ಬಡಾವಣೆಯಲ್ಲಿ ವಾಸವಿರುವ ಜನರಿಗೆ ಶೀಘ್ರದಲ್ಲಿಯೇ
ಅಧಿಕಾರಿಗಳ ಸಭೆ ಕರೆದು ಹಕ್ಕುಪತ್ರ ವಿತರಣೆ ಮಾಡಲಾಗುವುದು" ಎಂದರು ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ ಮಾತನಾಡಿ, ರಾಮನಗರ ಬಡಾವಣೆಯನ್ನು ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿನ ಜನರಿಗೆ ಅವಶ್ಯಕವಾಗಿರುವ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು. ಮನೆಯ ಮೇಲೆ ಹಾದು ಹೋಗಿರುವ ಹೈ ಟಿನ್ನನ್ ವಿದ್ಯುತ್ ತಂತಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚರಂಡಿ, ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧಸೌಲಭ್ಯಒದಗಿಸಿಕೊಡಲಾಗುವುದು ಎಂದು ಹೇಳಿದರು. ಮುಸ್ಲಿಂ ಸಮುದಾಯದ ಖಬರಸ್ತಾನ ನಿರ್ಮಾಣಕ್ಕಾಗಿ 10 ಲಕ್ಷ
ರೂ. ಹನುಮಾನ ಮಂದಿರದ ಬಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಶಾಸಕ ಗಣೇಶ ಹುಕ್ಕೇರಿ ಆದೇಶ ಪ್ರತಿಗಳನ್ನು ಸಂಬಂಧಿಸಿದವರಿಗೆ ವಿತರಿಸಿದರು. ಕೊಳವೆಬಾವಿ ಕೊರೆಯಿಸುವುದಕ್ಕೂ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ ಕುಲಕರ್ಣಿ, ಪುರಸಭೆ ಮಾಜಿ ಸದಸ್ಯ ಅನಿಲ ಮಾನೆ, ರಾಜಶೇಖರ ಮಿರ್ಜಿ, ಇರ್ಫಾನ್ ಬೇಪಾರಿ, ರಮೇಶ ಹಿತ್ತಲಮನಿ, ಸಂದೀಪ ಶೇರಖಾನೆ,ಗುಲಾಬಹುಸೇನಬಾಗವಾನ್, ಸಾಬೀರ ಜಮಾದಾರ, ಮಹಾವೀರ ದಾಂಡಗೆ, ಹೆಸ್ಕಾಂ ಅಧಿಕಾರಿ ಸುಖಸಾರೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಇತರರು ಇದ್ದರು.
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- ದುರಂತ: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ಜಲಸಮಾಧಿ ಮೈಸೂರು: ಜಿಲ್ಲೆಯ ಕೆ.ಆರ್. ನಗರದ ಪ್ರಸಿದ್ಧ ಅರ್ಕೇಶ್ವರ ದೇಗುಲದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅತ್ಯಂತ ಘೋರ ಘಟನೆ ನಡೆದಿದೆ. 1
- *ರಾಯಬಾಗದಲ್ಲಿ ಬಸವ ಜಯಂತಿಯ ಹಳ್ಳಿ ಸೊಬಗು: ಶಿಕ್ಷಣ ಪ್ರೇಮಿ ಪಾಟೀಲ ಪರಿವಾರದ ಜನಸೇವೆಗೆ ಸಾಕ್ಷಿಯಾದ ಶೋಭಾಯಾತ್ರೆ* ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿಯ ನಿಮಿತ್ತ ಇಂದು ರಾಯಬಾಗ ಪಟ್ಟಣ ಭಕ್ತಿ ಮತ್ತು ಸಂಭ್ರಮದ ಕಡಲಲ್ಲಿ ತೇಲಿತು. ಪಟ್ಟಣದಾದ್ಯಂತ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಹಳ್ಳಿಯ ಸೊಬಗನ್ನು ಮರುಸೃಷ್ಟಿಸಿ ನೋಡುಗರ ಕಣ್ಮನ ಸೆಳೆಯಿತು. ಹಿಂದೂ ಧರ್ಮದಲ್ಲಿ ಬಸವಣ್ಣ ಅಥವಾ ನಂದಿ ಎಂದು ಪೂಜಿಸಲ್ಪಡುವ ಸುಮಾರು 170ಕ್ಕೂ ಹೆಚ್ಚು ಎತ್ತುಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಸಾಲು ಸಾಲಾಗಿ ಸಾಗುತ್ತಿದ್ದ ಈ ಎತ್ತುಗಳ ಗಾಂಭೀರ್ಯವು ಗ್ರಾಮೀಣ ಸೊಬಗನ್ನು ಎತ್ತಿ ತೋರಿಸುವಂತಿತ್ತು. ಮೆರವಣಿಗೆಯ ಮುಂಚೂಣಿಯಲ್ಲಿ ಕಂಗೊಳಿಸುತ್ತಿದ್ದ ಬಸವಣ್ಣನವರ ಬೃಹತ್ ಪುತ್ಥಳಿಯು ಭಕ್ತರ ಪಾಲಿಗೆ ದರ್ಶನ ಭಾಗ್ಯವನ್ನೇ ನೀಡಿತು. ರಾಯಬಾಗದ ಇತಿಹಾಸದಲ್ಲಿ ವಸಂತರಾವ್ ಪಾಟೀಲ್ ಅವರ ಕುಟುಂಬದ ಹೆಸರು ಅಚ್ಚಳಿಯದಂತದ್ದು. ಅಜ್ಜನ ಕಾಲದಿಂದಲೂ ಬಡವರಿಗೆ ಅಕ್ಷರ ದಾಸೋಹ ಮಾಡುತ್ತಾ ಬಂದಿರುವ ಈ ಕುಟುಂಬ, ಸಾವಿರಾರು ಜನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ. ಇಂದಿಗೂ ಶಿಕ್ಷಣ ಪ್ರೇಮಿಯಾಗಿ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿರುವ ವಸಂತರಾವ್ ಪಾಟೀಲ್ ಅವರ ಸರಳತೆ ಎಲ್ಲರಿಗೂ ಮಾದರಿ. ಈ ಮೆರವಣಿಗೆಯ ವಿಶೇಷ ಆಕರ್ಷಣೆಯೆಂದರೆ, ಹಿರಿಯರು ಮತ್ತು ಯುವಕರ ಹೃದಯದಲ್ಲಿ ಸ್ಥಾನ ಪಡೆದಿರುವ ಯುವ ನಾಯಕ ಪ್ರಣಯ್ ಅಣ್ಣ ಪಾಟೀಲ್ ಅವರ ಮೇಲಿನ ಅಭಿಮಾನ. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅವರ ಭಾವಚಿತ್ರವನ್ನು ಎತ್ತುಗಳ ಮೇಲೆ ಕಲಾತ್ಮಕವಾಗಿ ಬಿಡಿಸಿದ್ದು, ಜನರ ವಿಶೇಷ ಗಮನ ಸೆಳೆಯಿತು. "ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ಹಿರಿಯರು ಒಂದೆಡೆಯಾದರೆ, ಸಮಾಜ ಸೇವೆಯ ಮೂಲಕ ಯುವ ಶಕ್ತಿಯನ್ನು ಸಂಘಟಿಸುತ್ತಿರುವ ಪ್ರಣಯ್ ಅಣ್ಣ ಪಾಟೀಲ್ ಅವರ ನಾಯಕತ್ವ ರಾಯಬಾಗಕ್ಕೆ ಹೆಮ್ಮೆ."1
- ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ ನೆಲಕ್ಕುರುಳಿದ 50 ಕ್ಕೂ ಅಧಿಕ ಲೈಟ್ ಕಂಬಗಳು . ಅಥಣಿ :ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ 50 ಕ್ಕೂ ಅಧಿಕ ಲೈಟ್ ಕಂಬಗಳು ನೆಲಕ್ಕುರುಳಿವೆ. ಅಕಸ್ಮಾತ್ ಅಷ್ಟೇ ಅಲ್ಲ ಸುದೈವ ವಶಾತ ಜೀವಹಾನಿ ಸಂಭವಿಸಿಲ್ಲ.1
- ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ ಹಾಗೂ ಶಿವನಗೌಡ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು. ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.1
- ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.1
- ಭಾಲ್ಕಿಯಲ್ಲಿ ಬೃಹತ್ ಆರೋಗ್ಯ ಶಿಬಿರ: 180 ಜನರಿಗೆ ತಪಾಸಣೆ, 101 ಯುವಕರಿಂದ ರಕ್ತದಾನ ಆರೋಗ್ಯವೇ ಭಾಗ್ಯ: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಮಾನವೀಯತೆಯ ಮೆರಗು; 101 ಯುನಿಟ್ ರಕ್ತ ಸಂಗ್ರಹ #JB_News_Kannada1