ಕುಷ್ಟಗಿ ಬರಪೀಡಿತ ತಾಲೂಕು ಎಂದು ಸರಕಾರ ಘೋಷಿಸದಿರುವುದು ಏಕೆ: ರ. ರೈತರ ಪ್ರಶ್ನೆ ಉತ್ತರ ಕರ್ನಾಟಕದ ಹಲವು ತಾಲೂಕುಗಳಲ್ಲಿ ಬರದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ, ನಮ್ಮ ಕುಷ್ಟಗಿ ತಾಲೂಕಿನ ರೈತರು ಕೂಡ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಮಳೆ ಕೈಕೊಟ್ಟು ಹೊಲಗಳಲ್ಲಿ ಬೆಳೆಗಳು ಒಣಗಿ ನಾಶವಾಗಿವೆ. ಬಿತ್ತನೆ ಮಾಡಿದ ಬೆಳೆ ಕೈಗೆ ಬಾರದಂತಾಗಿದೆ. ನೀರಿನ ಕೊರತೆಯಿಂದ ಹಸು, ಎತ್ತು, ಕುರಿ ಸೇರಿದಂತೆ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಸಿಗದೆ ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.ಕುಷ್ಟಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ,ಹೊಲಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಕುಟುಂಬಗಳಿಗೆ ಕೃಷಿಯಿಂದ ಆದಾಯವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಸಾಕಾಣಿಕೆಯ ಹೊರೆ, ಬೆಳೆ ನಷ್ಟ ಹಾಗೂ ಸಾಲದ ಒತ್ತಡದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದರ ಪರಿಣಾಮವಾಗಿ ಬದುಕಿಗಾಗಿ ಕೆಲಸ ಅರಸಿ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಕುಟುಂಬಗಳು ಬೇರೆ ಊರುಗಳು ಮತ್ತು ದೊಡ್ಡ ಪಟ್ಟಣಗಳತ್ತ ವಲಸೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಸಂಕಷ್ಟಗಳು ಕಣ್ಣಮುಂದೆ ಇದ್ದರೂ ಕುಷ್ಟಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿರುವುದಕ್ಕೆ ಕಾರಣವೇನು? ಸರ್ಕಾರವು ಕುಷ್ಟಗಿ ತಾಲೂಕಿನ ವಾಸ್ತವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಸಮಗ್ರ ಸಮೀಕ್ಷೆ ನಡೆಸಬೇಕು. ರೈತರ ಬೆಳೆ ನಷ್ಟ, ಜಾನುವಾರುಗಳ ಪರಿಸ್ಥಿತಿ, ಕುಡಿಯುವ ನೀರಿನ ಕೊರತೆ ಹಾಗೂ ಗ್ರಾಮೀಣ ಜನರ ಸಂಕಷ್ಟವನ್ನು ಪರಿಶೀಲಿಸಿ ಕುಷ್ಟಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಅರ್ಹ ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು.ಇದು ಕೇವಲ ಒಬ್ಬ ರೈತನ ಪ್ರಶ್ನೆಯಲ್ಲ ಕುಷ್ಟಗಿ ತಾಲೂಕಿನ ಸಾವಿರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆ.ಸರ್ಕಾರ ಉತ್ತರಿಸಬೇಕು. ಕುಷ್ಟಗಿಗೆ ನ್ಯಾಯ ಯಾವಾಗ?

- ಸರಕಾರಿ ಶಾಲೆಯ ನೂತನ ಮೂರು ಕೊಠಡಿಗಳನ್ನು ಉದ್ಘಾಟಿಸಿದ ಸಚಿವ ಕಾಶಪ್ಪನವರ ಇಳಕಲ್ : ಇಲ್ಲಿನ ಆದಿ ಬಸವನಗರದ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿಗಳ ಐದು ಕೋಟಿ ವಿಶೇಷ ಅನುದಾನದ ಅಡಿ ನೂತನ ಮೂರು ಕೊಠಡಿಗಳ ನಿರ್ಮಾಣ ಹಾಗೂ ರಾಜ್ಯವಲಯ ಮುಂದುವರೆದ ಅನುದಾನ ಅಡಿ ನೂತನ ಒಂದು ಕೊಠಡಿ ಉದ್ಘಾಟನೆಯನ್ನು ಸಣ್ಣ ಕೈಗಾರಿಕಾ, ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶಪ್ಪನವರ ಗುರುವಾರ ನೆರವೇರಿಸಿದರು. ಈ ಸಮಯದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಎಸ್.ಡಿ.ಎಂ,ಸಿ. ಅಧ್ಯಕ್ಷ ಸಿದ್ದಪ್ಪ ನರಗುಂದ, ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಮತ್ತು ನಗರಸಭೆ ಸದಸ್ಯರು ಮತ್ತು ಪಕ್ಷದ ಮುಖಂಡರು ಇದ್ದರು.2
- ಬಸವನಗುಡಿ ಬಳಿ ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಗೂಂಡಾಗಳಿಂದ ಪುನೀತ್ ಕೆರೆಹಳ್ಳಿ ಕಾರ್ಯಾಲಯ ಬಳಿ ಗೂಂಡಾ ವರ್ತನೆ ಕಾರ್ಯಕರ್ತ ಮುರುಳಿಯ ಮೇಲೆ ಹಲ್ಲೆ…1
- ಕಾಂಗ್ರೆಸ್ ಸರ್ಕಾರ ಓಲೆಕ ಪರಿಣಾಮ ಭಾರತದ ಧ್ವಜ ಹಿಡಿಯದ ಮತಾಂಧರು ಈದ್ ಮಿಲಾದ್ ನಲ್ಲಿ ಪ್ರದೇಶಿಸಿದ್ದು ಪ್ಯಾಲೆಸ್ಟಿನ ಧ್ವಜ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಮತಾಂದರರು ಅಟ್ಟಹಾಸ ಮಿತಿ ಮೀರುತ್ತದೆ ಅಂಕೋಲಾದಲ್ಲಿ ಈದ್ ಮೆರವಣಿಗೆಯ ವೇಳೆ ಭಾರತ ಧ್ವಜವನ್ನು ಹಿಡಿಯಲು ಮನಸಿಲ್ಲದವರು ಪ್ಯಾಲೈ ಸ್ಪಿನ ದ್ವಜವನ್ನು ಪ್ರದರ್ಶಿಸಿರುವುದು ಇವರಲ್ಲಿರುವ ದೇಶ ಪ್ರೇಮದ ಕೊರತೆಯನ್ನು ಎದ್ದು ಕಾಣುವಂತೆ ಮಾಡಿದೆ1
- 187 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಹಿರಿಯ ವರದಿಗಾರರಾದ ಶ್ರೀಶೈಲ ಬಿರಾದಾರ ಉದ್ಘಾಟಿಸಿದರು1
- ವಿಶೇಷ ಮಕ್ಕಳೊಂದಿಗೆ ಸಂಭ್ರಮಿಸಿದ ‘ನಮ್ಮ ನಡೆ ಶಾಲೆ ಕಡೆ’ ತಂಡದಿಂದ ಮಕ್ಕಳನ್ನು ರಂಜಿಸಿದರು ಕೂಡ್ಲಿಗಿ: ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದ ಪ್ರತಿಷ್ಠಾ ಮಾನಸಿಕ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ‘ನಮ್ಮ ನಡೆ ಶಾಲೆ ಕಡೆ’ ತಂಡದ ವತಿಯಿಂದ ವಿಶೇಷ ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವುದರ ಜೊತೆಗೆ ಹಲವಾರು ಭಾವಗೀತೆಗಳು ಹಾಗೂ ಮಕ್ಕಳಿಗೆ ಪ್ರೇರಣೆ ನೀಡುವ ಗೀತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ತಂಡದ ಸದಸ್ಯರು ವಿಶೇಷ ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಸಂತಸ ಹಂಚಿಕೊಂಡರು. ಮಕ್ಕಳಲ್ಲಿ ಉತ್ಸಾಹ ಹಾಗೂ ಸಂತಸ ಮೂಡಿಸುವ ಉದ್ದೇಶದಿಂದ ಹಲವಾರು ಭಾವಗೀತೆಗಳು ಹಾಗೂ ಪ್ರೇರಣಾದಾಯಕ ಗೀತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ತಂಡದ ಸದಸ್ಯರೊಂದಿಗೆ ಮಕ್ಕಳು ಸಂತಸದಿಂದ ಕಾಲ ಕಳೆಯುವ ಮೂಲಕ ಕಾರ್ಯಕ್ರಮದಲ್ಲಿ ಉಲ್ಲಾಸದ ವಾತಾವರಣ ನಿರ್ಮಾಣವಾಯಿತು. ವಿಶೇಷ ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಮಾನವೀಯತೆ, ಪ್ರೀತಿ ಮತ್ತು ಸಾಮಾಜಿಕ ಕಾಳಜಿಯ ಸಂದೇಶವನ್ನು ಸಾರಿದ ‘ನಮ್ಮ ನಡೆ ಶಾಲೆ ಕಡೆ’ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಶಾಸಕರ ಜನ್ಮದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮವು ವಿಶೇಷ ಮಕ್ಕಳ ಮುಖದಲ್ಲಿ ನಗು ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಶಾಸಕರ ವಾಹನ ಚಾಲಕ ಖಾಜಾ ಹುಸೇನ್ ಅವರು ಶಾಸಕರ ಆಪ್ತ ಬಳಗದ ಪರವಾಗಿ ಶಾಲೆಯ ಮಕ್ಕಳು, ಸಿಬ್ಬಂದಿ ಹಾಗೂ ತಂಡದವರಿಗೆ ಸಿಹಿಯೊಂದಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಹಾಗೂ ಹೊಸ ಹೊಸಹಳ್ಳಿಯ ಯುವ ಮುಖಂಡ ಸೂರ್ಯ ಪ್ರಕಾಶ್ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳ ಪರವಾಗಿ, ಕೂಡ್ಲಿಗಿ ಶಾಸಕರಾದ ಎನ್.ಟಿ. ಶ್ರೀನಿವಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ್, ಕಾರ್ಯದರ್ಶಿ ಪುಷ್ಪಲತಾ ಹಾಗೂ ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ನುಂಕನಗೌಡ, ಹ್ಯಾಟಿ ರಾಘವೇಂದ್ರ, ಸಿಬ್ಬಂದಿಗಳಾದ ಒಬ್ಬಮ್ಮ, ಚಂದ್ರಿಕಾ ಮತ್ತು ಅಭಿಷೇಕ್ ಹಾಗೂ ರಂಗ ನಿರ್ದೇಶಕ ಹರೀಶ್ ಜಿಂಕೆ ನಿರ್ದೇಶನದಲ್ಲಿ ಕಲಾವಿದರಾದ ಶಂಕ್ರಪ್ಪ, ಧಾರವಾಡ ಮಲ್ಲಿಕಾ, ವೆಂಕಟಾಪುರ ಹನುಮಯ್ಯ, ಮಾರುತಿ, ನಾಗರಾಜ್, ಹೇಮಂತ್ ಸಂಡೂರು ಸೇರಿ ಇತರರು ಉಪಸ್ಥಿತರಿದ್ದರು.1
- *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ- *ಕೂಡ್ಲಿಗಿ : SFI ಸಮಾವೇಶ - ಸಮಘ್ರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಪ್ರಯತ್ನಿಸೋಣ - ಗುನ್ನಳ್ಳಿ ರಾಘವೇಂದ್ರ ಕರೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ಸಮಘ್ರ ಶೈಕ್ಷಣಿಕ ಅಭಿವೃದ್ಧಿಗಾಗಿ , ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಮುಖಂಡ ಗುನ್ನಳ್ಳಿ ರಾಘವೇಂದ್ರ ಕರೆನೀಡಿದರು. ಅವರು ಆ 27ರಂದು ಪಟ್ಟಣದ ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಭಾರತ ವಿದ್ಯಾರ್ಥಿ ಪೆಡರೇಷನ್ ವತಿಯಿಂದ ಜರುಗಿದ ತಾಲೂಕು ಸಮಾವೇಶದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಎಸ್ಎಫ್ಐ ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಮುಖಂಡರಾದ ಆನಂದರಾಜ್ , ಜಿಲ್ಲಾ ಮುಖಂಡರಾದ ಸುಷ್ಮಿತ ಪವನಕುಮಾರ್ , ಪತ್ರಕರ್ತರಾರ ಭೀಮಣ್ಣ ಗಜಾಪುರ , ರಾಜ್ಯ ಉಪದಾಧ್ಯಕ್ಷರಾದ ಬಸವರಾಜ ಗುಳೆದಾಳ್ ಆನಂದರಾಜ್ , ಸುಸ್ಮಿತ ಸಮಾಜ ಸೇವಕ ಅಬ್ದುಲ್ ರಹೆಮಾನ್ , ತಾಲೂಕಾಧ್ಯಕ್ಷರಾದ ಟಿ. ಭಾಗ್ಯಮ್ಮ , ಭೀಮಣ್ಣ ಗಜಾಪುರ , ಬಿಟಿಗುದ್ದಿ ಚಂದ್ರು ವೇದಿಕೆಯಲ್ಲಿದ್ದರು. ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಇಳಕಲ್: ವಿಜಯಾನಂದ ಕಾಶಪ್ಪನವರ ಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಈ ಹಿಂದೆ ಹೊತ್ತಿದ್ದ ಹರಕೆ ತೀರಿಸಲು ಅವರ ಅಭಿಮಾನಿಗಳು ಇಳಕಲ್ ದಿಂದ ಬನಶಂಕರಿ ದೇವಿಗೆ ಪಾದಯಾತ್ರೆ ಹೊರಟರು.4
- ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾಗಲಕೋಟೆ ನಗರದ ಉಪ್ಪರ ಮೊಹಲ್ಲಾದಲ್ಲಿ ಸ್ಥಬ್ದ ಚಿತ್ರ ಪ್ರದರ್ಶನ1
- ಈ ದೃಶ್ಯಗಳು ನೇಪಾಳದ ರಸುವಾ ಜಿಲ್ಲೆಯವು, ಆದರೆ ಈ ನೋವು ಇಡೀ ನೆರೆಹೊರೆಯವರದ್ದು. ಹೆಲಿಕಾಪ್ಟರ್‌ನಿಂದ ತೆಗೆದ ಈ ದೃಶ್ಯವನ್ನು ನೋಡಿ — ಎಲ್ಲಿ ಒಮ್ಮೆ ಮನೆಗಳು, ಹೊಲಗಳು, ರಸ್ತೆಗಳಿದ್ದವೋ, ಅಲ್ಲಿ ಇಂದು ಕೇವಲ ಕೆಸರು ಮತ್ತು ಸಾವು-ನೋವಿನ ಮೌನ ಮಾತ್ರವಿದೆ. ಭೋಟೇಕೋಶಿ ನದಿ ಕ್ಷಣಾರ್ಧದಲ್ಲಿ ಎಲ್ಲವನ್ನೂ ನುಂಗಿಹಾಕಿದೆ. ಈ ಅವಶೇಷಗಳ ನಡುವೆ ಒಂದು ಚಿತ್ರ ಹೃದಯವನ್ನು ತಟ್ಟುತ್ತ್ತದೆ — ಒಬ್ಬ ಅಜ್ಜಿ ಹೆಲಿಕಾಪ್ಟರ್‌ನಲ್ಲಿ ಕುಳಿತು, ಕೈ ಮುಗಿಯುತ್ತಿರುವ ದೃಶ್ಯ. ಆ ಕೈಗಳು ಕೇವಲ ಧನ್ಯವಾದಕ್ಕೆ ಮಾತ್ರವಲ್ಲ, ಅದು ಇಂದು ತಮ್ಮವರನ್ನು ಕಳೆದುಕೊಂಡ ಪ್ರತಿಯೊಬ್ಬ ತಾಯಿಯ ಪ್ರಾರ್ಥನೆಯಾಗಿದೆ. ನಾವು ಈ ಆಪತ್ತಿನಲ್ಲಿರುವ ತಮ್ಮವರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಂತಾಪ ಸೂಚಿಸುವ ಅಗತ್ಯವಿದೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ. ಗಾಯಗೊಂಡಿರುವ, ಮನೆ ಕಳೆದುಕೊಂಡಿರುವ ಮತ್ತು ನಾಪತ್ತೆ ಆಗಿರುವವರಿಗಾಗಿ ನಾವು ದೇವರಲ್ಲಿ ಧೈರ್ಯ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ಒಬ್ಬ ನಿಜವಾದ ಸ್ನೇಹಿತನ ಕರ್ತವ್ಯದಂತೆ — ಈ ಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಗಡಿಯಲ್ಲಿ ನಮ್ಮ NDRF ತಂಡಗಳು ಸಂಪೂರ್ಣ ಸಜ್ಜಾಗಿವೆ, ಇದರಿಂದ ನಮ್ಮ ನೆರೆಯವರಿಗೆ ಯಾವುದೇ ತೊಂದರೆ ಆಗದಿರಲಿ. ಏಕೆಂದರೆ ನೆರೆಹೊರೆಯವರು ಕೇವಲ ನಕ್ಷೆಯಲ್ಲಿ ಮಾತ್ರವಲ್ಲ, ಹೃದಯದಲ್ಲೂ ಇರುತ್ತಾರೆ.1