logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

​ಕುಂದಗೋಳ: ಬಾಣಂತಿಯರ ಉಚಿತ ಸಂಚಾರಕ್ಕೆ ಸತೀಶ ಕೊಬ್ಬಯ್ಯನವರಿಂದ ವಾಹನ ಸಮರ್ಪಣೆ ಕುಂದಗೋಳ: ತಾಲ್ಲೂಕಿನ ಗ್ರಾಮೀಣ ಹಾಗೂ ಬಡ ಬಾಣಂತಿಯರಿಗೆ ಹೆರಿಗೆಯ ನಂತರ ಸುಲಭವಾಗಿ ಮನೆಗೆ ತಲುಪಲು ಅನುಕೂಲವಾಗುವಂತೆ ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಉಚಿತ ವಾಹನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸತೀಶ ಕೊಬ್ಬಯ್ಯನವರ ತಾಯಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು ರಿಬ್ಬನ್ ಕತ್ತರಿಸುವ ಮೂಲಕ ಈ ನೂತನ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿ ಪಂ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು, ತಮ್ಮ ಮಗನ ಹುಟ್ಟುಹಬ್ಬದ ಸವಿನೆನಪಿಗಾಗಿ ಆಡಂಬರದ ಆಚರಣೆಗಳಿಗೆ ಮೊರೆ ಹೋಗದೆ, ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ವಾಹನವನ್ನು ಉಡುಗೊರೆಯಾಗಿ ನೀಡಲಾಗಿದೆ. ಹೆರಿಗೆಯ ನಂತರ ತಾಯಿ ಮತ್ತು ಮಗು ಸುರಕ್ಷಿತವಾಗಿ ಮನೆ ಸೇರಲು ಈ ಸೌಲಭ್ಯ ಆಸರೆಯಾಗಲಿದ್ದು, ತಾಲ್ಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ನಂತರ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಮಾತನಾಡಿ, ತಾಲ್ಲೂಕಿನಲ್ಲಿ ಸಾರಿಗೆ ಬಸ್ಸುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಹೆರಿಗೆಯಾದ ಮಹಿಳೆಯರಿಗೆ ಪ್ರಯಾಣಿಸಲು ತೀವ್ರ ತೊಂದರೆಯಾಗುತ್ತಿತ್ತು. ಬಾಣಂತಿಯರ ಈ ಕಷ್ಟವನ್ನು ಅರಿತು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು. ಈ ವಾಹನವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ಲಭ್ಯವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹಾಗೂ ವಾಹನ ಬುಕ್ಕಿಂಗ್‌ಗಾಗಿ 7022430691 ಸಂಖ್ಯೆಗೆ ಕರೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು. ನಂತರ ಆಸ್ಪತ್ರೆಯ ವೈದ್ಯರಾದ ವಿಜಯ ಮಾತನಾಡಿ. ತಾಲ್ಲೂಕು ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಮಹಿಳೆಯರು ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದು ಇಂತಹ ಸೇವೆ ನೀಡಿದ ಮಾತೃಶ್ರೀ ಪೌಂಡೇಶನ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕಾರ್ಯಕ್ರಮದಲ್ಲಿ ಪೌಂಡೇಶನ ಅಧ್ಯಕ್ಷರಾದ ರಾಘವೇಂದ್ರ ಕಡೆಮನಿ, ಗಾಂಧಿ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಸ್ವಾಮಿ ಬಾಳಿಹಳ್ಳಿಮಠ, ವೀರುಪಾಕ್ಷೀ ಹಂಚನಾಳ, ವೀರಯ್ಯ ಶಿರೂರ, ಚನ್ನಬಸಪ್ಪ ಕಾಳೆ, ಮಂಜುನಾಥ ಕಟಗಿ, ಗುರು ಚಲವಾದಿ, ಮುತ್ತಪ್ಪ ಕಟಗಿ, ದೇವಪ್ಪ ಕಾಳಿ, ಮಂಜು ಪೂಜಾರ, ನಾಗರಾಜ ತಾಬ್ರಗುಂಡಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

4 hrs ago
user_Girish Ghatage
Girish Ghatage
Local News Reporter ಧಾರವಾಡ, ಧಾರವಾಡ, ಕರ್ನಾಟಕ•
4 hrs ago

​ಕುಂದಗೋಳ: ಬಾಣಂತಿಯರ ಉಚಿತ ಸಂಚಾರಕ್ಕೆ ಸತೀಶ ಕೊಬ್ಬಯ್ಯನವರಿಂದ ವಾಹನ ಸಮರ್ಪಣೆ ಕುಂದಗೋಳ: ತಾಲ್ಲೂಕಿನ ಗ್ರಾಮೀಣ ಹಾಗೂ ಬಡ ಬಾಣಂತಿಯರಿಗೆ ಹೆರಿಗೆಯ ನಂತರ ಸುಲಭವಾಗಿ ಮನೆಗೆ ತಲುಪಲು ಅನುಕೂಲವಾಗುವಂತೆ ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಉಚಿತ ವಾಹನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸತೀಶ ಕೊಬ್ಬಯ್ಯನವರ ತಾಯಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು ರಿಬ್ಬನ್ ಕತ್ತರಿಸುವ ಮೂಲಕ ಈ ನೂತನ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿ ಪಂ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು, ತಮ್ಮ ಮಗನ ಹುಟ್ಟುಹಬ್ಬದ ಸವಿನೆನಪಿಗಾಗಿ ಆಡಂಬರದ ಆಚರಣೆಗಳಿಗೆ ಮೊರೆ ಹೋಗದೆ, ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ವಾಹನವನ್ನು ಉಡುಗೊರೆಯಾಗಿ ನೀಡಲಾಗಿದೆ. ಹೆರಿಗೆಯ ನಂತರ ತಾಯಿ ಮತ್ತು ಮಗು ಸುರಕ್ಷಿತವಾಗಿ ಮನೆ ಸೇರಲು ಈ ಸೌಲಭ್ಯ ಆಸರೆಯಾಗಲಿದ್ದು, ತಾಲ್ಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ನಂತರ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಮಾತನಾಡಿ, ತಾಲ್ಲೂಕಿನಲ್ಲಿ ಸಾರಿಗೆ ಬಸ್ಸುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಹೆರಿಗೆಯಾದ ಮಹಿಳೆಯರಿಗೆ ಪ್ರಯಾಣಿಸಲು ತೀವ್ರ ತೊಂದರೆಯಾಗುತ್ತಿತ್ತು. ಬಾಣಂತಿಯರ ಈ ಕಷ್ಟವನ್ನು ಅರಿತು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು. ಈ ವಾಹನವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ಲಭ್ಯವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹಾಗೂ ವಾಹನ ಬುಕ್ಕಿಂಗ್‌ಗಾಗಿ 7022430691 ಸಂಖ್ಯೆಗೆ ಕರೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು. ನಂತರ ಆಸ್ಪತ್ರೆಯ ವೈದ್ಯರಾದ ವಿಜಯ ಮಾತನಾಡಿ. ತಾಲ್ಲೂಕು ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಮಹಿಳೆಯರು ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದು ಇಂತಹ ಸೇವೆ ನೀಡಿದ ಮಾತೃಶ್ರೀ ಪೌಂಡೇಶನ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕಾರ್ಯಕ್ರಮದಲ್ಲಿ ಪೌಂಡೇಶನ ಅಧ್ಯಕ್ಷರಾದ ರಾಘವೇಂದ್ರ ಕಡೆಮನಿ, ಗಾಂಧಿ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಸ್ವಾಮಿ ಬಾಳಿಹಳ್ಳಿಮಠ, ವೀರುಪಾಕ್ಷೀ ಹಂಚನಾಳ, ವೀರಯ್ಯ ಶಿರೂರ, ಚನ್ನಬಸಪ್ಪ ಕಾಳೆ, ಮಂಜುನಾಥ ಕಟಗಿ, ಗುರು ಚಲವಾದಿ, ಮುತ್ತಪ್ಪ ಕಟಗಿ, ದೇವಪ್ಪ ಕಾಳಿ, ಮಂಜು ಪೂಜಾರ, ನಾಗರಾಜ ತಾಬ್ರಗುಂಡಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • Post by Uday Chougale
    1
    Post by Uday Chougale
    user_Uday Chougale
    Uday Chougale
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    6 hrs ago
  • ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ! ​ ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ! ​ ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ. ​೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'! 2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ. ​೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ? ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ​ ​"ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು ​ ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ. ​ ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ​ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್
    1
    ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ!
​
ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ!
​
ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ.
​೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'!
2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ.
​೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ?
ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು?
​
​"ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು
​
ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ.
​
ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ.
​ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    18 hrs ago
  • ಮುಧೋಳ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಧೋಳ ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠಾತ್ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆ ಜನತೆಗೆ ತಂಪೆರೆಯುವ ಜೊತೆಗೆ ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಿಂದ ಕೂಡಿದ್ದ ವಾತಾವರಣವು ಸಂಜೆ ಹೊತ್ತಿಗೆ ಏಕಾಏಕಿ ಬದಲಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು. ಮಳೆಯ ಜೊತೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿಳಿಯ ಹಾಸಿನಂತೆ ರಸ್ತೆ ಹಾಗೂ ತೋಟಗಳಲ್ಲಿ ಬಿದ್ದಿರುವುದು ಕಂಡುಬಂತು. ​ಆಲಿಕಲ್ಲು ಮಳೆಯ ಹೊಡೆತಕ್ಕೆ ಈ ಭಾಗದ ಪ್ರಮುಖ ಬೆಳೆಗಳಾದ ಕಬ್ಬು, ದ್ರಾಕ್ಷಿ ಮತ್ತು ಬಾಳೆ ತೋಟಗಳಿಗೆ ಹಾನಿಯಾದ ವರದಿಯಾಗಿದೆ. ವಿಶೇಷವಾಗಿ ಕಟಾವಿಗೆ ಬಂದಿರುವ ಬೆಳೆಗಳು ನೆಲಕಚ್ಚುವ ಭೀತಿ ಎದುರಾಗಿದ್ದು, ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನುಗ್ಗಿ
    1
    ಮುಧೋಳ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಧೋಳ ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠಾತ್ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆ ಜನತೆಗೆ ತಂಪೆರೆಯುವ ಜೊತೆಗೆ ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಿಂದ ಕೂಡಿದ್ದ ವಾತಾವರಣವು ಸಂಜೆ ಹೊತ್ತಿಗೆ ಏಕಾಏಕಿ ಬದಲಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು. ಮಳೆಯ ಜೊತೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿಳಿಯ ಹಾಸಿನಂತೆ ರಸ್ತೆ ಹಾಗೂ ತೋಟಗಳಲ್ಲಿ ಬಿದ್ದಿರುವುದು ಕಂಡುಬಂತು.
​ಆಲಿಕಲ್ಲು ಮಳೆಯ ಹೊಡೆತಕ್ಕೆ ಈ ಭಾಗದ ಪ್ರಮುಖ ಬೆಳೆಗಳಾದ ಕಬ್ಬು, ದ್ರಾಕ್ಷಿ ಮತ್ತು ಬಾಳೆ ತೋಟಗಳಿಗೆ ಹಾನಿಯಾದ ವರದಿಯಾಗಿದೆ. ವಿಶೇಷವಾಗಿ ಕಟಾವಿಗೆ ಬಂದಿರುವ ಬೆಳೆಗಳು ನೆಲಕಚ್ಚುವ ಭೀತಿ ಎದುರಾಗಿದ್ದು, ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನುಗ್ಗಿ
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    5 hrs ago
  • "ಬಿಳಗಿ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರ ಇದೀಗ ಅನುಮಾನಗಳಿಗೆ ಕಾರಣವಾಗಿದೆ. ಇಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭರತೇಶ್ ಪಾಟೀಲ್ ಅವರ ನೇಮಕಾತಿ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ." "ಸುಮಾರು ಆರು ತಿಂಗಳ ಹಿಂದೆ ಮುಂಡರಗಿ ಎಂಬ ಅಧಿಕಾರಿ ಬಿಳಗಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರ ವರ್ಗಾವಣೆ ನಡೆದಿದ್ದು, ಅವರ ಜಾಗಕ್ಕೆ ಭರತೇಶ್ ಪಾಟೀಲ್ ಅವರು ಬಂದಿದ್ದಾರೆ ಎನ್ನಲಾಗಿದೆ." "ಆದರೆ, ಈ ವರ್ಗಾವಣೆ ಅಧಿಕೃತವಾಗಿದೆಯೇ ಅಥವಾ ಕೇವಲ ಮೇಲ್ನೋಟಕ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಕಾರಣ ಏನೆಂದರೆ, ಕಚೇರಿಯಲ್ಲಿರುವ ಅಧಿಕಾರಿಗಳ ವಿವರವನ್ನು ಸೂಚಿಸುವ ಫಲಕದಲ್ಲಿ ಇಂದಿಗೂ ಭರತೇಶ್ ಪಾಟೀಲ್ ಅವರ ಹೆಸರು ಕಾಣಿಸುತ್ತಿಲ್ಲ." "ಒಬ್ಬ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವ ದಿನಾಂಕದಿಂದ ಹಿಡಿದು ವರ್ಗಾವಣೆಗೊಂಡ ದಿನಾಂಕದವರೆಗೆ ಎಲ್ಲಾ ವಿವರಗಳನ್ನು ದಾಖಲಿಸುವ ಈ ಫಲಕದಲ್ಲಿ ಅವರ ಹೆಸರು ಇಲ್ಲದಿರುವುದು ಅನುಮಾನಾಸ್ಪದವಾಗಿದೆ." "ಆರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರೆ, ಹೆಸರು ಫಲಕದಲ್ಲಿ ಇರಬೇಕು. ಇದು ಯಾಕೆ ಇಲ್ಲ ಅನ್ನೋದು ಪ್ರಶ್ನೆ." "ಭರತೇಶ್ ಪಾಟೀಲ್ ಅವರ ನೇಮಕಾತಿ ಮತ್ತು ವರ್ಗಾವಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ." "ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    1
    "ಬಿಳಗಿ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರ ಇದೀಗ ಅನುಮಾನಗಳಿಗೆ ಕಾರಣವಾಗಿದೆ. ಇಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭರತೇಶ್ ಪಾಟೀಲ್ ಅವರ ನೇಮಕಾತಿ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ."
"ಸುಮಾರು ಆರು ತಿಂಗಳ ಹಿಂದೆ ಮುಂಡರಗಿ ಎಂಬ ಅಧಿಕಾರಿ ಬಿಳಗಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರ ವರ್ಗಾವಣೆ ನಡೆದಿದ್ದು, ಅವರ ಜಾಗಕ್ಕೆ ಭರತೇಶ್ ಪಾಟೀಲ್ ಅವರು ಬಂದಿದ್ದಾರೆ ಎನ್ನಲಾಗಿದೆ."
"ಆದರೆ, ಈ ವರ್ಗಾವಣೆ ಅಧಿಕೃತವಾಗಿದೆಯೇ ಅಥವಾ ಕೇವಲ ಮೇಲ್ನೋಟಕ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಕಾರಣ ಏನೆಂದರೆ, ಕಚೇರಿಯಲ್ಲಿರುವ ಅಧಿಕಾರಿಗಳ ವಿವರವನ್ನು ಸೂಚಿಸುವ ಫಲಕದಲ್ಲಿ ಇಂದಿಗೂ ಭರತೇಶ್ ಪಾಟೀಲ್ ಅವರ ಹೆಸರು ಕಾಣಿಸುತ್ತಿಲ್ಲ."
"ಒಬ್ಬ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವ ದಿನಾಂಕದಿಂದ ಹಿಡಿದು ವರ್ಗಾವಣೆಗೊಂಡ ದಿನಾಂಕದವರೆಗೆ ಎಲ್ಲಾ ವಿವರಗಳನ್ನು ದಾಖಲಿಸುವ ಈ ಫಲಕದಲ್ಲಿ ಅವರ ಹೆಸರು ಇಲ್ಲದಿರುವುದು ಅನುಮಾನಾಸ್ಪದವಾಗಿದೆ."
"ಆರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರೆ, ಹೆಸರು ಫಲಕದಲ್ಲಿ ಇರಬೇಕು. ಇದು ಯಾಕೆ ಇಲ್ಲ ಅನ್ನೋದು ಪ್ರಶ್ನೆ."
"ಭರತೇಶ್ ಪಾಟೀಲ್ ಅವರ ನೇಮಕಾತಿ ಮತ್ತು ವರ್ಗಾವಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ."
"ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    17 hrs ago
  • Post by ನಾಗರಾಜ್ ಕುರಿ
    1
    Post by ನಾಗರಾಜ್ ಕುರಿ
    user_ನಾಗರಾಜ್ ಕುರಿ
    ನಾಗರಾಜ್ ಕುರಿ
    ಗಜೇಂದ್ರಗಡ, ಗದಗ, ಕರ್ನಾಟಕ•
    19 hrs ago
  • ಚಿಕ್ಕೋಡಿ : ಬಿರುಗಾಳಿಯಿಂದ ರಸ್ತೆ ಮೇಲೆ ಬಿದ್ದ ಮರ ಮತ್ತು ಲೈಟ್ ಕಂಬ ಕುಸಿತ,ಚಿಕ್ಕೋಡಿ ಟು ಜೋಡಕುರಳಿ ರಸ್ತೆ ಬಂದ, ಸ್ಥಳಕೆ ಭೇಟೆ ನೀಡಿದ ಹೆಸ್ಕಾಂ ಸಿಬ್ಬಂದಿ
    2
    ಚಿಕ್ಕೋಡಿ : ಬಿರುಗಾಳಿಯಿಂದ  ರಸ್ತೆ ಮೇಲೆ ಬಿದ್ದ ಮರ ಮತ್ತು ಲೈಟ್ ಕಂಬ ಕುಸಿತ,ಚಿಕ್ಕೋಡಿ ಟು ಜೋಡಕುರಳಿ ರಸ್ತೆ ಬಂದ, ಸ್ಥಳಕೆ ಭೇಟೆ ನೀಡಿದ ಹೆಸ್ಕಾಂ ಸಿಬ್ಬಂದಿ
    user_ನದೀಮ ಎನ್. ನಾಯಕವಾಡಿ
    ನದೀಮ ಎನ್. ನಾಯಕವಾಡಿ
    Local News Reporter ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    6 hrs ago
  • ಬಾಗಲಕೋಟೆ: ದೇಶದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಜಯಂತಿಯನ್ನು ಅತ್ಯಂತ ಗೌರವಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗರಡದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯಂತಿಯನ್ನು ನಿರ್ಲಕ್ಷ್ಯದಿಂದ ಆಚರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದ ಸಾರ್ವಜನಿಕರು ಹಾಗೂ ಅಂಬೇಡ್ಕರ್ ಸಂಘದ ಸದಸ್ಯರು ನೀಡಿದ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಯಾವುದೇ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳದೇ, ಕೇವಲ ರೂಢಿಪರವಾಗಿ ಕಾರ್ಯಕ್ರಮ ನಡೆಸಲಾಗಿದೆ. ಮಹಾನ್ ನಾಯಕನ ಭಾವಚಿತ್ರಕ್ಕೆ ಒಂದು ಹೂವಿನ ಹಾರವನ್ನೂ ತರದೇ, ಪೂಜೆ ಮಾಡಿದಂತೆ ತೋರಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಏಪ್ರಿಲ್ ತಿಂಗಳು ದಲಿತ ಸಮುದಾಯದವರಿಗೆ ವಿಶೇಷ ಮಹತ್ವ ಹೊಂದಿದ್ದು, ಈ ಅವಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಾಗಿ ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆಚರಣೆ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಈ ಶಾಲೆಯಲ್ಲಿ ನಡೆದಿರುವ ಆಚರಣೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಹಾಗೂ ಶಿಕ್ಷಕಿ ಎ.ಎಸ್. ಜಹಾಂಗೀರದಾರ ಅವರು ಸುಮಾರು 30ರಿಂದ 35 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸಬೇಕಾದ ಶಿಕ್ಷಕರೇ ಈ ರೀತಿಯಾಗಿ ನಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪ್ರಶ್ನೆ ಮಾಡಿದ ಸ್ಥಳೀಯ ಅಂಬೇಡ್ಕರ್ ಸಂಘದ ಯುವಕರಿಗೆ ಶಿಕ್ಷಕಿ ಜಹಾಂಗೀರದಾರ ಅವರು, “ಶಾಲೆಗೆ ಅನುದಾನವೇ ಬರುವುದಿಲ್ಲ, ನಾವು ಕೈಯಿಂದ ಏನು ಮಾಡಬೇಕು? ನಾವು ಪೂಜೆ ಮಾಡುವುದೇ ಹೀಗೆ” ಎಂದು ಪ್ರತಿಕ್ರಿಯೆ ನೀಡಿದರೆಂದು ಆರೋಪಿಸಲಾಗಿದೆ. ಈ ಉತ್ತರ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಅವರನ್ನು ಸಂಪರ್ಕಿಸಿದಾಗ, “ನಾನು ಬೇರೆ ಮೀಟಿಂಗ್‌ಗೆ ಹೋಗಿದ್ದೆ. ಪೂಜೆ ಮಾಡಲು ಹೇಳಿದ್ದೆ” ಎಂಬ ಉತ್ತರ ನೀಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ. ಈ ಪ್ರತಿಕ್ರಿಯೆ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು, ಬೀಳಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವಿಷಯವನ್ನು ಸಮಜಾಯಿಷಿಯಿಂದ ಮುಕ್ತಾಯಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. “ಇಷ್ಟಕ್ಕೆ ಮುಗಿಸಿ ಬಿಡಿ, ಏನೋ ತಪ್ಪಾಗಿದೆ” ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯವೂ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂವಿಧಾನದ ಮೌಲ್ಯಗಳು, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಬೋಧಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲೇ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರಿಗೆ ಅಗತ್ಯ ಗೌರವ ನೀಡದಿರುವುದು ದುರಂತಕರ ಸಂಗತಿಯಾಗಿದೆ. ಈ ಘಟನೆ ಕೇವಲ ಒಂದು ಶಾಲೆಯ ನಿರ್ಲಕ್ಷ್ಯವಲ್ಲ, ಸಮಾಜದ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    1
    ಬಾಗಲಕೋಟೆ: ದೇಶದಾದ್ಯಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಜಯಂತಿಯನ್ನು ಅತ್ಯಂತ ಗೌರವಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗರಡದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯಂತಿಯನ್ನು ನಿರ್ಲಕ್ಷ್ಯದಿಂದ ಆಚರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಸಾರ್ವಜನಿಕರು ಹಾಗೂ ಅಂಬೇಡ್ಕರ್ ಸಂಘದ ಸದಸ್ಯರು ನೀಡಿದ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಯಾವುದೇ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳದೇ, ಕೇವಲ ರೂಢಿಪರವಾಗಿ ಕಾರ್ಯಕ್ರಮ ನಡೆಸಲಾಗಿದೆ. ಮಹಾನ್ ನಾಯಕನ ಭಾವಚಿತ್ರಕ್ಕೆ ಒಂದು ಹೂವಿನ ಹಾರವನ್ನೂ ತರದೇ, ಪೂಜೆ ಮಾಡಿದಂತೆ ತೋರಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಏಪ್ರಿಲ್ ತಿಂಗಳು ದಲಿತ ಸಮುದಾಯದವರಿಗೆ ವಿಶೇಷ ಮಹತ್ವ ಹೊಂದಿದ್ದು, ಈ ಅವಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಾಗಿ ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆಚರಣೆ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಈ ಶಾಲೆಯಲ್ಲಿ ನಡೆದಿರುವ ಆಚರಣೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಹಾಗೂ ಶಿಕ್ಷಕಿ ಎ.ಎಸ್. ಜಹಾಂಗೀರದಾರ ಅವರು ಸುಮಾರು 30ರಿಂದ 35 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿರುವುದಾಗಿ ತಿಳಿದುಬಂದಿದೆ. ಮಕ್ಕಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸಬೇಕಾದ ಶಿಕ್ಷಕರೇ ಈ ರೀತಿಯಾಗಿ ನಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರಶ್ನೆ ಮಾಡಿದ ಸ್ಥಳೀಯ ಅಂಬೇಡ್ಕರ್ ಸಂಘದ ಯುವಕರಿಗೆ ಶಿಕ್ಷಕಿ ಜಹಾಂಗೀರದಾರ ಅವರು, “ಶಾಲೆಗೆ ಅನುದಾನವೇ ಬರುವುದಿಲ್ಲ, ನಾವು ಕೈಯಿಂದ ಏನು ಮಾಡಬೇಕು? ನಾವು ಪೂಜೆ ಮಾಡುವುದೇ ಹೀಗೆ” ಎಂದು ಪ್ರತಿಕ್ರಿಯೆ ನೀಡಿದರೆಂದು ಆರೋಪಿಸಲಾಗಿದೆ. ಈ ಉತ್ತರ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನು ಮುಖ್ಯ ಶಿಕ್ಷಕ ಹೆಚ್.ಎಸ್. ಕಾಳಿ ಅವರನ್ನು ಸಂಪರ್ಕಿಸಿದಾಗ, “ನಾನು ಬೇರೆ ಮೀಟಿಂಗ್‌ಗೆ ಹೋಗಿದ್ದೆ. ಪೂಜೆ ಮಾಡಲು ಹೇಳಿದ್ದೆ” ಎಂಬ ಉತ್ತರ ನೀಡಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ. ಈ ಪ್ರತಿಕ್ರಿಯೆ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದು, ಬೀಳಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವಿಷಯವನ್ನು ಸಮಜಾಯಿಷಿಯಿಂದ ಮುಕ್ತಾಯಗೊಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. “ಇಷ್ಟಕ್ಕೆ ಮುಗಿಸಿ ಬಿಡಿ, ಏನೋ ತಪ್ಪಾಗಿದೆ” ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯವೂ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಅಭಿಪ್ರಾಯದಂತೆ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂವಿಧಾನದ ಮೌಲ್ಯಗಳು, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಬೋಧಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳಲ್ಲೇ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರಿಗೆ ಅಗತ್ಯ ಗೌರವ ನೀಡದಿರುವುದು ದುರಂತಕರ ಸಂಗತಿಯಾಗಿದೆ.
ಈ ಘಟನೆ ಕೇವಲ ಒಂದು ಶಾಲೆಯ ನಿರ್ಲಕ್ಷ್ಯವಲ್ಲ, ಸಮಾಜದ ಮೌಲ್ಯಗಳಿಗೆ ಸವಾಲು ಎಸೆದಂತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    18 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    8 hrs ago
  • ಕೋಟೆ ನಾಡಿನ ಇಳಕಲ್ ತಾಲೂಕಿನಲ್ಲಿ ರಣಬಿಸಿಲಿಗೆ ಜನರು ತತ್ತರಿಸಿದ್ದರು, ಬಿಸಿಲಿಗೆ ಬೆಂಡಾಗಿದ್ದ ಜನ ಮಳೆರಾಯನ ಕೃಪೆಯಿಂದ ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳ ರಾಗಿದ್ದಾರೆ.
    1
    ಕೋಟೆ ನಾಡಿನ ಇಳಕಲ್ ತಾಲೂಕಿನಲ್ಲಿ ರಣಬಿಸಿಲಿಗೆ ಜನರು ತತ್ತರಿಸಿದ್ದರು, ಬಿಸಿಲಿಗೆ ಬೆಂಡಾಗಿದ್ದ ಜನ ಮಳೆರಾಯನ ಕೃಪೆಯಿಂದ
ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳ ರಾಗಿದ್ದಾರೆ.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.