logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

8 hrs ago
user_Manjunath kavali
Manjunath kavali
Local News Reporter ಧಾರವಾಡ, ಧಾರವಾಡ, ಕರ್ನಾಟಕ•
8 hrs ago

ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

More news from ಕರ್ನಾಟಕ and nearby areas
  • ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ ರಸ್ತೆ ತಡೆ ಅಭಿಯಾನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊
    1
    ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ ರಸ್ತೆ ತಡೆ ಅಭಿಯಾನ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ  
ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊
    user_Mahanagar news
    Mahanagar news
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    10 hrs ago
  • ತಾಯ್ನಾಡು ನ್ಯೂಸ್ ಕನ್ನಡ ವರದಿಗೆ ಬಿಗ್ ಇಂಪ್ಯಾಕ್ಟ್- ಇದೀಗ ಅಧಿಕಾರಿಗಳ ಮುಂದಿನ ಕ್ರಮದತ್ತ
    1
    ತಾಯ್ನಾಡು ನ್ಯೂಸ್ ಕನ್ನಡ ವರದಿಗೆ ಬಿಗ್ ಇಂಪ್ಯಾಕ್ಟ್- ಇದೀಗ ಅಧಿಕಾರಿಗಳ ಮುಂದಿನ ಕ್ರಮದತ್ತ
    user_ತಾಯ್ನಾಡು ನ್ಯೂಸ್ ಕನ್ನಡ
    ತಾಯ್ನಾಡು ನ್ಯೂಸ್ ಕನ್ನಡ
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    11 hrs ago
  • ಹಾನಗಲ್...ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ ಆರೋಪ. ಚಿಕಿತ್ಸೆ ವಿಳಂಬದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರ ಆರೋಪ ಆಸ್ಪತ್ರೆ ಎದುರು ಪ್ರತಿಭಟನೆ ಮಂಗಳವಾರ ಪಟ್ಟಣದ ತಾಲೂಕು ಆಸ್ಪತ್ರೆಯ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು. ಸ್ಥಳಕ್ಕೆ ಮೆಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ
    1
    ಹಾನಗಲ್...ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ  ಆರೋಪ. ಚಿಕಿತ್ಸೆ ವಿಳಂಬದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರ ಆರೋಪ  ಆಸ್ಪತ್ರೆ ಎದುರು ಪ್ರತಿಭಟನೆ
ಮಂಗಳವಾರ ಪಟ್ಟಣದ ತಾಲೂಕು ಆಸ್ಪತ್ರೆಯ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು.
ಸ್ಥಳಕ್ಕೆ ಮೆಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ
    user_Mallikarjun sunagar
    Mallikarjun sunagar
    ಈಗಾಗಲೇ ಪತ್ರಿಕೆ ವರದಿಗಾರನಾಗಿ ಕೆಲಸ ನಿರ್ವಹಣೆ ಹಾನಗಲ್, ಹಾವೇರಿ, ಕರ್ನಾಟಕ•
    22 hrs ago
  • ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಶಿಗ್ಗಾವಿ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ, ಅಪವಿತ್ರಗೊಳಿಸಿದ ಘಟನೆಯನ್ನು ಖಂಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಬಂದ ಕರೆಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತಾದಿಗಳ ಮನಸ್ಸಿನಲ್ಲಿ ಆತಂಕ ಉಂಟಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ, ಆರೋಪಿಗೆ ಕಠಿಣಾತಿ ಕಠೀಣ ಶಿಕ್ಷೆ ಯಾಗಲೇಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಪರಾಧಿಗೆ ರಕ್ಷಣೆ ನೀಡುವ ಹುನ್ನಾರ ನಡೆದರೆ ಮತ್ತು ತಾಲೂಕಿನಲ್ಲಿ ಅವನಿಗೆ ನೀಡಿರುವ ಸೌಲತ್ತುಗಳನ್ನು ಹಿಂಪಡೆದು ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಮಾತನಾಡಿ, ಘಟನೆಗೆ ಸಂಬಂಧವಿಲ್ಲದ ಸಣ್ಣ ಹುಡುಗರು, ಬಿಜೆಪಿ ನಾಯಕರು ಸೇರಿದಂತೆ ಇತರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಮ್ಮ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಪೊಲೀಸರ ಮೂಲ ಪ್ರಯತ್ನಿಸಲಾಗಿದ್ದು ತೀವ್ರ ಖಂಡನೀಯ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರೇಣಕನಗೌಡ ಪಾಟೀಲ, ಅನೀಲ ಸಾತಣ್ಣನವರ ಸೇರಿದಂತೆ ಇತರರಿದ್ದರು.
    4
    ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ
ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ
ಶಿಗ್ಗಾವಿ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ, ಅಪವಿತ್ರಗೊಳಿಸಿದ ಘಟನೆಯನ್ನು ಖಂಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಬಂದ ಕರೆಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತಾದಿಗಳ ಮನಸ್ಸಿನಲ್ಲಿ ಆತಂಕ ಉಂಟಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ, ಆರೋಪಿಗೆ ಕಠಿಣಾತಿ ಕಠೀಣ ಶಿಕ್ಷೆ ಯಾಗಲೇಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಪರಾಧಿಗೆ ರಕ್ಷಣೆ ನೀಡುವ ಹುನ್ನಾರ ನಡೆದರೆ ಮತ್ತು ತಾಲೂಕಿನಲ್ಲಿ ಅವನಿಗೆ ನೀಡಿರುವ ಸೌಲತ್ತುಗಳನ್ನು ಹಿಂಪಡೆದು ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಮಾತನಾಡಿ, ಘಟನೆಗೆ ಸಂಬಂಧವಿಲ್ಲದ ಸಣ್ಣ ಹುಡುಗರು, ಬಿಜೆಪಿ ನಾಯಕರು ಸೇರಿದಂತೆ ಇತರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಮ್ಮ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಪೊಲೀಸರ ಮೂಲ ಪ್ರಯತ್ನಿಸಲಾಗಿದ್ದು ತೀವ್ರ ಖಂಡನೀಯ. 
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರೇಣಕನಗೌಡ ಪಾಟೀಲ, ಅನೀಲ ಸಾತಣ್ಣನವರ ಸೇರಿದಂತೆ ಇತರರಿದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಹಾವೇರಿ, ಹಾವೇರಿ, ಕರ್ನಾಟಕ•
    11 hrs ago
  • ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಗೋಕಾಕ ನಗರದಲ್ಲಿ ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ
    4
    ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ.
ಗೋಕಾಕ ನಗರದಲ್ಲಿ  ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ.
ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು.
ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ.
ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.
ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    14 hrs ago
  • ಕನ್ನಡ ಸಾಹಿತ್ಯ ಸಮ್ಮೇಳನ ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ನಡೆದ ವಿಶೇಷ ಆಕರ್ಷಣೆ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮಾತನಾಡಿದ ಮಂಜುನಾಥ್ ಮುಧೋಳ
    1
    ಕನ್ನಡ ಸಾಹಿತ್ಯ ಸಮ್ಮೇಳನ ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ನಡೆದ ವಿಶೇಷ ಆಕರ್ಷಣೆ 
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮಾತನಾಡಿದ ಮಂಜುನಾಥ್ ಮುಧೋಳ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    17 hrs ago
  • ಧಾರವಾಡದಲ್ಲಿ ರಕ್ಷಾ ಬಂಧನ ಸಂಭ್ರಮ; ಮಾರುಕಟ್ಟೆಗೆ ಬಣ್ಣಬಣ್ಣದ ರಾಖಿಗಳ ಲಗ್ಗೆ ಧಾರವಾಡ: ನೂಲ ಹುಣ್ಣಿಮೆ ಅಂಗವಾಗಿ ನಡೆಯಲಿರುವ ರಕ್ಷಾ ಬಂಧನ ಹಬ್ಬಕ್ಕೆ ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿದ್ಧತೆ ಜೋರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಆಕರ್ಷಕ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸದ ರಾಖಿಗಳ ಮಾರಾಟ ಭರಾಟೆ ಜೋರಾಗಿದೆ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಸಹೋದರರಿಗೆ ಕಟ್ಟಲು ಇಷ್ಟದ ರಾಖಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಖರೀದಿ ಚುರುಕುಗೊಂಡಿದೆ.
    1
    ಧಾರವಾಡದಲ್ಲಿ ರಕ್ಷಾ ಬಂಧನ ಸಂಭ್ರಮ; ಮಾರುಕಟ್ಟೆಗೆ ಬಣ್ಣಬಣ್ಣದ ರಾಖಿಗಳ ಲಗ್ಗೆ
ಧಾರವಾಡ: ನೂಲ ಹುಣ್ಣಿಮೆ ಅಂಗವಾಗಿ ನಡೆಯಲಿರುವ ರಕ್ಷಾ ಬಂಧನ ಹಬ್ಬಕ್ಕೆ ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿದ್ಧತೆ ಜೋರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಆಕರ್ಷಕ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸದ ರಾಖಿಗಳ ಮಾರಾಟ ಭರಾಟೆ ಜೋರಾಗಿದೆ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಸಹೋದರರಿಗೆ ಕಟ್ಟಲು ಇಷ್ಟದ ರಾಖಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಖರೀದಿ ಚುರುಕುಗೊಂಡಿದೆ.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    8 hrs ago
  • ಕೊಣ್ಣೂರಲ್ಲಿ ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ. ಶಾಂತಿ ಸಂದೇಶ ಸಾರಿದ ಮಕ್ಕಳು ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ ಗೋಕಾಕ : ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಸಮೀಪದ ಕೊಣ್ಣೂರಲ್ಲಿ ಸಡಗರದಿಂದ ಆಚರಿಸಲಾಯಿತು.ಕೊಣ್ಣೂರ ಮುಖ್ಯ ಬಜಾರದ ಮಸೀದಿಯಿಂದ ಮಕ್ಕಳು ಕೈಯಲ್ಲಿ ದ್ವಜ ಹಿಡಿದು ಮಕ್ಕಳು ಪೈಗಂಬರ್‌ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಸಾರಿದರು.
    1
    ಕೊಣ್ಣೂರಲ್ಲಿ ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ. ಶಾಂತಿ ಸಂದೇಶ ಸಾರಿದ ಮಕ್ಕಳು 

ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ
ಗೋಕಾಕ  : ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಸಮೀಪದ ಕೊಣ್ಣೂರಲ್ಲಿ  ಸಡಗರದಿಂದ ಆಚರಿಸಲಾಯಿತು.ಕೊಣ್ಣೂರ ಮುಖ್ಯ ಬಜಾರದ ಮಸೀದಿಯಿಂದ ಮಕ್ಕಳು ಕೈಯಲ್ಲಿ ದ್ವಜ ಹಿಡಿದು ಮಕ್ಕಳು ಪೈಗಂಬರ್‌ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಸಾರಿದರು.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    14 hrs ago
  • ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ.. ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..
    1
    ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..
ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.