ಸ್ನೇಹ ಎಂದರೆ ಇದೇ...! ನಾಲ್ಕು ದಶಕಗಳ ಅಚಲ ಸ್ನೇಹಕ್ಕೆ ಫ್ರೆಂಡ್‌ಶಿಪ್ ಡೇ ವಿಶೇಷ JUDI NEWS | ವಿಶೇಷ ಲೇಖನ ಹಂಪಾಪಟ್ಟಣ | ಆಗಸ್ಟ್ 2 ಇಂದಿನ ವೇಗದ ಬದುಕಿನಲ್ಲಿ ಅನೇಕ ಸಂಬಂಧಗಳು ಕಾಲಕ್ರಮೇಣ ಮಸುಕಾಗುತ್ತವೆ. ಆದರೆ ಬಾಲ್ಯದಲ್ಲಿ ಬೆಳೆದ ನಿಜವಾದ ಸ್ನೇಹ ಜೀವನಪೂರ್ತಿ ಉಳಿದರೆ ಅದು ಅಪರೂಪದ ಬಾಂಧವ್ಯ. ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಆರಂಭವಾದ ಗೆಳೆತನ, ನಂತರ ಶ್ರೀ ಚಂದ್ರಮೌಳೇಶ್ವರ ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣದವರೆಗೂ ಜೊತೆಯಾಗಿ ಬೆಳೆದು, ಇಂದು ನಾಲ್ಕು ದಶಕಗಳಾದರೂ ಅದೇ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯೊಂದಿಗೆ ಮುಂದುವರಿದಿದೆ. ಫ್ರೆಂಡ್‌ಶಿಪ್ ಡೇ ಅಂಗವಾಗಿ ಈ ಗೆಳೆಯರ ಬಳಗ ಯುವಜನತೆಗೆ ನಿಜವಾದ ಸ್ನೇಹದ ಮೌಲ್ಯವನ್ನು ಸಾರುತ್ತಿದೆ. ಈ ಸ್ನೇಹದ ಪಯಣ ಹಂಪಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಯಿತು. ಅಕ್ಷರಾಭ್ಯಾಸದೊಂದಿಗೆ ಆರಂಭವಾದ ಪರಿಚಯ ಕ್ರಮೇಣ ಆತ್ಮೀಯ ಸ್ನೇಹವಾಗಿ ರೂಪುಗೊಂಡಿತು. ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕೇಳುವುದು, ಆಟವಾಡುವುದು, ಮಧ್ಯಾಹ್ನದ ಊಟವನ್ನು ಹಂಚಿಕೊಳ್ಳುವುದು, ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಯುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲಿ ಎಲ್ಲರೂ ಒಟ್ಟಾಗಿ ಪಾಲ್ಗೊಳ್ಳುತ್ತಿದ್ದರು. ಹಂಪಾಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳೂ ಈ ಬಳಗದಲ್ಲಿದ್ದರು. ಕೆಲವರು ಪ್ರತಿದಿನ ದೂರದ ಊರುಗಳಿಂದ ಶಾಲೆಗೆ ಬರುತ್ತಿದ್ದರೆ, ಇನ್ನೂ ಕೆಲವರು ತಗ್ಗಿನಮಠದ ಹಾಸ್ಟೆಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದರು. ಊರುಗಳು ಬೇರೆಬೇರೆಯಾದರೂ ಸ್ನೇಹದ ಬಾಂಧವ್ಯ ಮಾತ್ರ ಒಂದೇ ಆಗಿತ್ತು. ಓದಿನಲ್ಲಿ ಪರಸ್ಪರ ಸಹಾಯ, ಕಷ್ಟದಲ್ಲಿ ಧೈರ್ಯ ತುಂಬುವುದು ಹಾಗೂ ಸಂತೋಷವನ್ನು ಹಂಚಿಕೊಳ್ಳುವುದು ಇವರ ಬದುಕಿನ ಭಾಗವಾಗಿತ್ತು. ಪ್ರಾಥಮಿಕ ಶಿಕ್ಷಣದ ಬಳಿಕ ಎಲ್ಲರೂ ಶ್ರೀ ಚಂದ್ರಮೌಳೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ರೈಲು ನಿಲ್ದಾಣದ ಸಮೀಪ ಕೊಠಡಿ ಮಾಡಿಕೊಂಡು ಒಟ್ಟಾಗಿ ಓದಿದ ದಿನಗಳು ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿದವು. ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳು, ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಿಹಿ ನೆನಪುಗಳನ್ನು ಕಟ್ಟಿಕೊಂಡರು. ಈ ಸ್ನೇಹಿತರ ಶಿಕ್ಷಣದ ಪಯಣದಲ್ಲಿ ಎಂ. ಪಾಪಜ ಅಣ್ಣ ಅವರ ಪಾತ್ರ ವಿಶೇಷವಾಗಿದೆ. ಉನ್ನತ ಶಿಕ್ಷಣ ಪಡೆದಿರದಿದ್ದರೂ ಶಿಕ್ಷಣದ ಮಹತ್ವವನ್ನು ಅರಿತಿದ್ದ ಅವರು ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ವಿದ್ಯಾರ್ಥಿಗಳನ್ನು ಎಬ್ಬಿಸಿ ಓದಲು ಪ್ರೇರೇಪಿಸುತ್ತಿದ್ದರು. ವಿದ್ಯುತ್ ಕೊರತೆಯಿದ್ದ ಕಾಲದಲ್ಲಿ ಬೆಳಕಿನ ವ್ಯವಸ್ಥೆ ಮಾಡಿ ಓದಲು ಅನುಕೂಲ ಕಲ್ಪಿಸುವುದು, ಪರೀಕ್ಷಾ ದಿನಗಳಲ್ಲಿ ಎಲ್ಲರನ್ನು ಸೈಕಲ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವುದು, ಧೈರ್ಯ ತುಂಬುವುದು ಸೇರಿದಂತೆ ಅವರ ಸೇವಾಭಾವ ಇಂದಿಗೂ ಸ್ನೇಹಿತರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ವಿದ್ಯಾರ್ಥಿಗಳ ಯಶಸ್ಸನ್ನೇ ತಮ್ಮ ಯಶಸ್ಸೆಂದು ಭಾವಿಸಿದ್ದ ಪಾಪಜ ಅಣ್ಣ ಅವರನ್ನು ಈ ಬಳಗ ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತದೆ. ಕಾಲಕ್ರಮೇಣ ಕಾಲೇಜು ಶಿಕ್ಷಣ ಪೂರ್ಣಗೊಂಡ ನಂತರ ಪ್ರತಿಯೊಬ್ಬರೂ ಕೃಷಿ, ಉದ್ಯೋಗ, ವ್ಯಾಪಾರ ಹಾಗೂ ವಿವಿಧ ವೃತ್ತಿಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಮದುವೆ, ಕುಟುಂಬ ಮತ್ತು ಕೆಲಸದ ಜವಾಬ್ದಾರಿಗಳು ಹೆಚ್ಚಾದರೂ ಬಾಲ್ಯದ ಸ್ನೇಹವನ್ನು ಮರೆಯಲಿಲ್ಲ. ಪ್ರತಿವರ್ಷ ಕನಿಷ್ಠ ಒಂದು ಬಾರಿ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಈ ಬಳಗದ ವಿಶೇಷವಾಗಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್, ವಿಡಿಯೊ ಕರೆ ಹಾಗೂ ಮೊಬೈಲ್ ಸಂಪರ್ಕದ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಜಾತ್ರೆ, ಹಬ್ಬ-ಹರಿದಿನಗಳು, ಮದುವೆಗಳು ಹಾಗೂ ಕುಟುಂಬದ ಶುಭ ಸಮಾರಂಭಗಳಲ್ಲಿ ಒಂದಾಗಿ ಸೇರಿ ಸ್ನೇಹದ ಬಾಂಧವ್ಯವನ್ನು ಜೀವಂತವಾಗಿರಿಸಿದ್ದಾರೆ. ಈ ಅಪೂರ್ವ ಸ್ನೇಹಿತರ ಬಳಗದಲ್ಲಿ ಕನಕಪ್ಪ, ಎಚ್.ಡಿ. ಪರಶುರಾಮ, ಉಮಾಪತಿ ನಾಯಕ್, ಚಂದ್ರ ನಾಯಕ್, ಎ. ಮಂಜು, ಮಂಜುನಾಥ್ (ಚಳ್ಳಿಕೆರೆ), ಪ್ರಶಾಂತ್, ಎ. ಕೇಶವಮೂರ್ತಿ, ಗುಳೇದಾಳ್ ಕೃಷ್ಣ, ಮರಿಯಪ್ಪ, ಕೇಶರಾಯನ ಬಂಡಿ ಸೋಮ, ಮಲ್ಲಿಕಾರ್ಜುನ, ನಾಗರಾಜ್, ರುದ್ರೇಶ್, ಲೋಕೇಶ್ ನಾಯಕ, ಮಹಮ್ಮದ್ ರಫೀಕ್ ಸೇರಿದಂತೆ ಹಲವರು ಇಂದಿಗೂ ಒಂದೇ ಕುಟುಂಬದ ಸದಸ್ಯರಂತೆ ಆತ್ಮೀಯತೆಯಿಂದ ಸಾಗುತ್ತಿದ್ದಾರೆ. ಈ ಸ್ನೇಹಿತರಲ್ಲಿ ಕೆ.ಎಸ್. ಹುಲುಗಪ್ಪ ಸಹಕಾರ ಸಂಸ್ಥೆಯಲ್ಲಿ, ನಿಂಗರಾಜ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ, ರಮೇಶ್ ಹಾಗೂ ಸಂತೋಷ್ ನಾಯಕ ಬ್ಯಾಂಕ್ ವ್ಯವಸ್ಥಾಪಕರಾಗಿ, ಹುಲಿಗೇಶ್ ಶಿಕ್ಷಕರಾಗಿ, ವಿ. ಹನುಮಂತ ಖಾಸಗಿ ಕಾರ್ಖಾನೆಯಲ್ಲಿ, ಹೊಸಳ್ಳಿ ಹೇಮಂತ್ ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿ ಹಾಗೂ ಅರುಣ್ ಕುಮಾರ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದವರು ಕೃಷಿ, ಉದ್ಯೋಗ ಹಾಗೂ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ಬದುಕು ಕಟ್ಟಿಕೊಂಡಿದ್ದಾರೆ. ಈ ಸ್ನೇಹದ ಪಯಣದಲ್ಲಿ ಜಗದೀಶ್, ಗುಳೆದಾಳ್ ತೋಟಪ್ಪ, ಕಟ್ಟೆವಲ್ಲ ತಾಂಡದ ಕೃಷ್ಣ ನಾಯಕ್ ಹಾಗೂ ಎಚ್.ಕೆ. ಸೋಮು ಅವರು ಇಂದು ನಮ್ಮೊಂದಿಗಿಲ್ಲ. ಅವರ ಅಗಲಿಕೆ ಈ ಸ್ನೇಹಿತರ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರತಿಯೊಂದು ಸ್ನೇಹಿತರ ಸಂಗಮದಲ್ಲೂ ಅವರನ್ನು ಆತ್ಮೀಯವಾಗಿ ಸ್ಮರಿಸಿ ಗೌರವ ನಮನ ಸಲ್ಲಿಸುವ ಮೂಲಕ ಅವರ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲಾಗುತ್ತಿದೆ. ಫ್ರೆಂಡ್‌ಶಿಪ್ ಡೇ ಕೇವಲ ಶುಭಾಶಯ ವಿನಿಮಯದ ದಿನವಲ್ಲ; ಸ್ನೇಹದ ಮೌಲ್ಯವನ್ನು ನೆನಪಿಸಿಕೊಳ್ಳುವ ದಿನ. ಕಳೆದ ನಾಲ್ಕು ದಶಕಗಳಿಂದ ಪ್ರೀತಿ, ವಿಶ್ವಾಸ, ತ್ಯಾಗ ಹಾಗೂ ಪರಸ್ಪರ ಗೌರವದೊಂದಿಗೆ ತಮ್ಮ ಸ್ನೇಹವನ್ನು ಉಳಿಸಿಕೊಂಡಿರುವ ಹಂಪಾಪಟ್ಟಣದ ಈ ಗೆಳೆಯರ ಬಳಗ, "ನಿಜವಾದ ಸ್ನೇಹವು ಸಮಯ, ದೂರ ಮತ್ತು ಪರಿಸ್ಥಿತಿಗಳಿಂದ ಎಂದಿಗೂ ಬದಲಾಗುವುದಿಲ್ಲ" ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರುತ್ತಿದೆ. ನಾಲ್ಕು ದಶಕಗಳ ಕಾಲ ಅಚಲವಾಗಿ ಉಳಿದಿರುವ ಈ ಸ್ನೇಹದ ಪಯಣ ಹಂಪಾಪಟ್ಟಣದ ಹೆಮ್ಮೆಯಾಗಿದ್ದು, ಇಂದಿನ ಯುವಜನತೆಗೆ ಪ್ರೇರಣೆಯಾಗಿದೆ. – ಎ. ಕೇಶವಮೂರ್ತಿ, ಹಂಪಾಪಟ್ಟಣ

- ಕೂಡ್ಲಿಗಿ : ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು ಸಂಘಟನಾಚತುರರು , ಹಾಗೂ ಬಹು ಜನಪ್ರೀಯ ಮಾದರಿ ಶಾಸಕರಾಗಿದ್ದಾರೆ - ಹರ್ಕರ್ ವೇಣುಗೋಪಾಲ್ ರಾವ್ -ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು ಸಂಘಟನಾಚತುರರು , ಹಾಗೂ ಬಹು ಜನಪ್ರೀಯ ಮಾದರಿ ಶಾಸಕರಾಗಿದ್ದಾರೆ - ಹರ್ಕರ್ ವೇಣುಗೋಪಾಲ್ ರಾವ್* -ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣಕ್ಕೆ , ಜು 30 ರಂದು. ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ವೀಕ್ಷಕರಾದ , ಹರ್ಕರ್ ವೇಣುಗೋಪಾಲ್ ರವರು ಭೇಟಿ ನೀಡಿದರು. ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಪಕ್ಷದ ವಿವಿದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಸರ್ಕಾರ ನೀಟ್ ಪ್ರೆಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮೂಲಕ , ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದೆ. ಸಂಬಂಧಿಸಿದಂತೆ ರಾಹುಲ್ ಗಾಂದಿಯವರ ನೇತೃತ್ವದಲ್ಲಿ , ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಜನ ಪ್ರಜ್ಞಾವಂತರಿದ್ದು , ಮುಂದಿನ ದಿನಗಳಲ್ಲಿ ಮೋದಿ ಅಮಿತ್ ಷ್ ನೇತೃತ್ವದ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. *ಪಕ್ಷದ ಗಣ್ಯಾತಿ ಗಣ್ಯರು ಭಾಗಿ*- ಸಭೆಯಲ್ಲಿ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರು ಹಾಗು ಮಾಜಿ ಶಾಸಕರಾದ ಶಿರಾಜ್ ಶೇಖ್ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ರೈತ ಆತ್ಮಹತ್ಯೆ, ಉಪತಹಶೀಲ್ದಾರ ಕಛೇರಿ ಎದುರು ಪರಿಹಾರಕ್ಕಾಗಿ ರೈತರ ಪ್ರತಿಭಟನೆ. ರೈತನ ಕುಟುಂಬಕ್ಕೆ ಪರಿಹಾರಕ್ಕಾಗಿ ರೈತರ ಪ್ರತಿಭಟನೆ ಶಿಗ್ಗಾವಿ : ತಾಲೂಕಿನ ಹೋತನಹಳ್ಳಿ ಗ್ರಾಮದ ರೈತ ಮಲ್ಲೇಶಪ್ಪ ತಳವಾರ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿ 10 ತಿಂಗಳು ಕಳೆದರು ಸರ್ಕಾರದಿಂದ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ. ತಕ್ಷಣ ಮೇಲಾಧಿಕಾರಿಗಳು ಪರಿಶೀಲಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಂಕಾಪುರ ಉಪತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕುಟುಂಬಕ್ಕೆ ಆಸರೆಯಾದ ರೈತ ಸಾಲಕ್ಕೆ ಸಿಲುಕಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ, ಮಕ್ಕಳು ಬದುಕು ಸಾಗಿಸುವುದು ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಈ ವರೆಗೆ ಯಾವುದೇ ವರದಿ ಕಳುಹಿಸಿಲ್ಲ. ಅಧಿಕಾರಿಗಳ ನಿರ್ಲಕ್ಷತೆಯಿಂದ ಬಡ ಕುಟುಂಬಕ್ಕೆ ಪರಿಹಾರ ಮಂಜುರಾತಿ ವಿಳಂಬವಾಗಿದೆ. ಹೀಗಾಗಿ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಉಪತಹಶೀಲ್ದಾರ್ ಕಚೇರಿ ಬೀಗ ಹಾಕಿದ ಹಿನ್ನೆಲೆಯಲ್ಲಿ ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ ಹಾಗೂ ಸಿಬ್ಬಂದಿ ಹೂರಗೆ ಉಳಿಯಬೇಕಾಯಿತು. ಸುತ್ತಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ದಾಖಲಾತಿ ಪಡೆಯಲು ಬಂದು ಮರಳಿ ಹೋಗಬೇಕಾಯಿತು. ಕೆಲವರು ಕಾದು ಬೇಸರಗೊಂಡರು. ಎಸ್.ಐ.ಆರ್ ಮಾಡುವ ನೌಕರರು ಸಹ ಕಾಯ್ದು ಕುಳಿತು ಮರಳಿ ಹೋದರು. ಹೀಗಾಗಿ ಕೆಲಸ ಕಾರ್ಯಗಳಿಗೆ ಅಡೆತಡೆಯಾಯಿತು. ಆದರೂ ರೈತರು ಮೇಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಕೃಷಿ ಅಧಿಕಾರಿ ಶಿವಕುಮಾರ ಶಿಡೇನೂರ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸ್ಪಂದಿಸಿ ತಕ್ಷಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇನೆ. ರೈತನ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತದೆ ಎಂದಾಗಿ ಪ್ರತಿಭಟನೆ ಹಿಂದರು. ರೈತ ಮುಖಂಡರಾದ ಶಶಿಧರ ಹೊಣ್ಣನ್ನವರ , ಶಿವಾನಂದ ತೊಂಡೂರ, ಉಮೇಶ ಗುಳೇದ, ಚಂದ್ರಣ್ಣ ಬೆಳವತ್ತಿ, ಶಂಕ್ರಣ್ಣ ಗಂಗಣ್ಣವರ, ಬಾಪುಗೌಡ ಪಾಟೀಲ, ದೇವಣ್ಣ ಹಳವಳ್ಳಿ, ಶಂಭಣ್ಣ ಕುರಗೋಡಿ, ಬಸವರಾಜ ನಾರಾಯಣಪುರ, ಚಂದ್ರಣ್ಣ ತಳವಾರ, ಮೃತ ರೈತನ ಪತ್ನಿ ಕವಿತಾ ಅವರ ಕುಟುಂಬದ ಸದಸ್ಯರು, ವಿವಿಧ ಗ್ರಾಮಗಳ ರೈತರು ಇದ್ದರು.1
- ಈಗಾಗಲೇ ನೀರಿಗೆ ಹಾಹಾಕಾರ ಶುರುವಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಾವೇರಿ ವಿವಾದದಲ್ಲಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ನಾಡಿನ ಹಿತ ಕಾಯುವುದು ಸಿಎಂ ಡಿ. ಕೆ. ಶಿವಕುಮಾರ್ ಅವರ ಆದ್ಯ ಕರ್ತವ್ಯವಾಗಬೇಕು. ಶ್ರೀ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು #CongressFailsKarnataka #ರೈತವಿರೋಧಿಕಾಂಗ್ರೆಸ್1
- . ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. #SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ #naturephotography #naturelovers #earthfocus #mothernature Lush greenery," "indoor plant care," "botanical garden near me," "low-light indoor plants" ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. #GoogleMaps #Riya #ಚೇತನಾ #mcom #chetan #cmkarnataka #chethana_muniswamygowda #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. #ಪಕ್ಷಿಗಳು #ಹಣ್ಣುಗಳು #ಕೀಟಗಳು #ಪರಿಸರಸಮತೋಲನ #ಜೀವವೈವಿಧ್ಯ ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. ಚಿತ್ರ : ಕರಿಬೇವಿನ ಹಣ್ಣನ್ನು ತಿನ್ನುತ್ತಿರುವ ಕೆಮ್ಮೀಸೆ ಪೀಕರಾಳ (Red whiskered bulbul) ಎರಡು ಚಿರತೆ ಮರಿಗಳ ಅಸ್ವಾಭಾವಿಕ ಸಾವು: ಕೀಟನಾಶಕ ಮಿಶ್ರಿತ ನೀರಿನ ಶಂಕೆ ಚಿತ್ರದುರ್ಗ ತಾಲೂಕಿನ ದೊಡ್ಡಿಗಾನಾಳ್ ಗ್ರಾಮದಲ್ಲಿ ಎರಡು ಚಿರತೆ ಮರಿಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಒಂದು ಮರಿ ಕೃಷಿ ಹೊಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೊಂದು ಮರದ ಕವಲುಗಳ ನಡುವೆ ಸಿಲುಕಿಕೊಂಡಿರುವುದು ಕಂಡುಬಂದಿದೆ. ಸಮೀಪದ ಜೋಳದ ಹೊಲಗಳಿಗೆ ಸಿಂಪಡಿಸಲಾದ ಕೀಟನಾಶಕ ಮಿಶ್ರಿತ ನೀರು ಈ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿನ ನಿಖರ ಕಾರಣವು ಅರಣ್ಯ ಇಲಾಖೆಯ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ದೃಢಪಡಬೇಕಾಗಿದೆ. ವನ್ಯಜೀವಿಗಳ ಅಸ್ವಾಭಾವಿಕ ಸಾವು ಅತ್ಯಂತ ಗಂಭೀರ ವಿಷಯ. ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕೃಷಿಯಲ್ಲಿ ಕೀಟನಾಶಕಗಳ ಬಳಕೆಯಿಂದ ವನ್ಯಜೀವಿಗಳಿಗೆ ಆಗುವ ಅಪಾಯವನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕು. ವನ್ಯಜೀವಿಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಬೇರು ಭೂಮಿ . ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. #SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ #naturephotography #naturelovers #earthfocus #mothernature Lush greenery," "indoor plant care," "botanical garden near me," "low-light indoor plants" ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. #GoogleMaps #Riya #ಚೇತನಾ #mcom #chetan #cmkarnataka #chethana_muniswamygowda #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. #ಪಕ್ಷಿಗಳು #ಹಣ್ಣುಗಳು #ಕೀಟಗಳು #ಪರಿಸರಸಮತೋಲನ #ಜೀವವೈವಿಧ್ಯ ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ ಹದ್ದುಗಳು, ಗೂಬೆಗಳಂತ ಕೆಲವು ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು ಹಾಗೂ ಕೀಟಗಳು. ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. ಚಿತ್ರ : ಕರಿಬೇವಿನ ಹಣ್ಣನ್ನು ತಿನ್ನುತ್ತಿರುವ ಕೆಮ್ಮೀಸೆ ಪೀಕರಾಳ (Red whiskered bulbul) ಎರಡು ಚಿರತೆ ಮರಿಗಳ ಅಸ್ವಾಭಾವಿಕ ಸಾವು: ಕೀಟನಾಶಕ ಮಿಶ್ರಿತ ನೀರಿನ ಶಂಕೆ ಚಿತ್ರದುರ್ಗ ತಾಲೂಕಿನ ದೊಡ್ಡಿಗಾನಾಳ್ ಗ್ರಾಮದಲ್ಲಿ ಎರಡು ಚಿರತೆ ಮರಿಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಒಂದು ಮರಿ ಕೃಷಿ ಹೊಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೊಂದು ಮರದ ಕವಲುಗಳ ನಡುವೆ ಸಿಲುಕಿಕೊಂಡಿರುವುದು ಕಂಡುಬಂದಿದೆ. ಸಮೀಪದ ಜೋಳದ ಹೊಲಗಳಿಗೆ ಸಿಂಪಡಿಸಲಾದ ಕೀಟನಾಶಕ ಮಿಶ್ರಿತ ನೀರು ಈ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿನ ನಿಖರ ಕಾರಣವು ಅರಣ್ಯ ಇಲಾಖೆಯ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ದೃಢಪಡಬೇಕಾಗಿದೆ. ವನ್ಯಜೀವಿಗಳ ಅಸ್ವಾಭಾವಿಕ ಸಾವು ಅತ್ಯಂತ ಗಂಭೀರ ವಿಷಯ. ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕೃಷಿಯಲ್ಲಿ ಕೀಟನಾಶಕಗಳ ಬಳಕೆಯಿಂದ ವನ್ಯಜೀವಿಗಳಿಗೆ ಆಗುವ ಅಪಾಯವನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕು. ವನ್ಯಜೀವಿಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಬೇರು ಭೂಮಿ4
- ಸೂಮವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಶಿವಲಿಂಗೇಗೌಡ ಹೇಳಿಕೆ1
- ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. ಬೈಟ್: ರಾಜಣ್ಣ2
- ಕೂಡ್ಲಿಗಿ : " ಸಂಘಟನಾ ಸೃಜನ ಅಭಿಯಾನ " ಪಕ್ಷದ ಗಣ್ಯಾತಿ ಗಣ್ಯರು ಭಾಗಿ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : " ಸಂಘಟನಾ ಸೃಜನ ಅಭಿಯಾನ " ಪಕ್ಷದ ಗಣ್ಯಾತಿ ಗಣ್ಯರು ಭಾಗಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ ಸಂಘಟನೆಗಾಗಿ ಆಯೋಜಿಸಲಾಗಿದ್ದ. ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಜರುಗಿದ , ಸಂಘಟನೆ ಸೃಜನ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಟಿಟಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಯಾ ಸಮಿತಿಯ ಹಿರಿಯರು. ವೀಕ್ಷಕರಾದ ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ರವರು , ಪಟ್ಟಣಕ್ಕೆ ಆಗಮಿಸಿ ಸಭೆಯಲ್ಲಿ ಭಾಗವಹಿಸಿದ್ದರು. ವೇಣುಗೋಪಾಲರವರನ್ನು , ಹಾಗೂ ಅವರೊಟ್ಟಿಗೆ ಆಗಮಿಸಿದ್ದ ಪಕ್ಷದ ಹಿರಿಯರನ್ನು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹೂ ಗುಚ್ಚ ನೀಡಿ ಆತ್ಮೀಯತೆಯಿಂದ ಬರಮಾಡಿಕೊಂಡರು. ಸಭೆಯಲ್ಲಿ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರು ಹಾಗು ಮಾಜಿ ಶಾಸಕರಾದ ಶಿರಾಜ್ ಶೇಖ್ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಮಾದ್ಯಮದವರಿಗೆ ಕೊಲೆ ಬೆದರಿಕೆ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ. ಮಾದ್ಯಮದವರಿಗೆ ಕೊಲೆ ಬೆದರಿಕೆ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ..1
- "ನಾನು ವಿರೋಧ ಪಕ್ಷದಲ್ಲಿದ್ದಾಗ, ಪ್ರಶ್ನೆಗಳನ್ನು ಎತ್ತುವುದು ನನ್ನ ಕೆಲಸವಾಗಿತ್ತು. ಈಗ, ನಾನು ಆಡಳಿತ ಪಕ್ಷದಲ್ಲಿದ್ದೇನೆ. ಈಗ ನನ್ನ ಜವಾಬ್ದಾರಿ ಪ್ರಶ್ನೆಗಳನ್ನು ಕೇಳುವುದಲ್ಲ, ಪರಿಹಾರಗಳನ್ನು ಒದಗಿಸುವುದು." -ರಾಘವ್ ಚಡ್ಡಾ1