logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ ಮೂವರ ದುರ್ಮರಣ.......... ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಬಳಿ ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮಹಿಳೆಯರಿಬ್ಬರು ಸಾವನ್ನಪ್ಪಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಕ್ರಷರ್ ನಿಂದ ಹೊರಟ ಟಿಪ್ಪರ್ವೊಂದು ಕೇರಳ ಕಡೆಗೆ ತೆರಳುವಾಗ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರದ ಬಳಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರುವ ಸ್ಥಳದಲ್ಲೇ ಸಾವನ್ನಪ್ಪಿದರು. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮತ್ತು ಮಗುವೊಂದು ತೀವ್ರತರವಾಗಿ ಗಾಯಗೊಂಡಿದ್ದರು, ಇವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಕೇರಳ ಮೂಲದ ಆಯೇಷಾ ನೂರಿ (41) ಮತ್ತು ನುಹಾ (18) ಸ್ಥಳದಲ್ಲೇ ಮತಪಟ್ಟರು. ನಹಿಯಾನ್ ಎಂಬ 9 ವರ್ಷದ ಬಾಲಕ ಮತ್ತು ಚಾಲಕ ಮಹಮ್ಮದ್ ಅಜೀರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ಮಹಮ್ಮದ್ ಅಜೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ನಹಿಯಾನ್ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ರಸ್ತೆ ಅಪಘಾತ ನಡೆಸಿದ ಟಿಪ್ಪರ್ ಚಾಲಕರ ತಲೆ ಮರೆಸಿಕೊಂಡಿದ್ದು, ಟಿಪ್ಪರ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರೆಲ್ಲರೂ ಮೂಲತಃ ಕೇರಳದವರಾಗಿದ್ದು, ಇವರೆಲ್ಲರೂ ವ್ಯವಹಾರಿಕವಾಗಿ ಬೆಂಗಳೂರಿನಲ್ಲಿ ವಾಸ್ಯವ್ಯ ಹೂಡಿದ್ದರು ಎಂದು ತಿಳಿದಿ ಬಂದಿದೆ. ರಸ್ತೆ ಅಪಘಾತ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಟಿಪ್ಪರ್ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

2 hrs ago
user_ಇಲ್ಯಾಸ್ ಪಟೇಲ್ ಬಳಗಾನೂರ
ಇಲ್ಯಾಸ್ ಪಟೇಲ್ ಬಳಗಾನೂರ
Farmer ಯಾದಗಿರಿ, ಯಾದಗಿರಿ, ಕರ್ನಾಟಕ•
2 hrs ago

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ ಮೂವರ ದುರ್ಮರಣ.......... ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಬಳಿ ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮಹಿಳೆಯರಿಬ್ಬರು ಸಾವನ್ನಪ್ಪಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಕ್ರಷರ್ ನಿಂದ ಹೊರಟ ಟಿಪ್ಪರ್ವೊಂದು ಕೇರಳ ಕಡೆಗೆ ತೆರಳುವಾಗ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರದ ಬಳಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮುಖಾಮುಖಿ ಡಿಕ್ಕಿಯಾದ

ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರುವ ಸ್ಥಳದಲ್ಲೇ ಸಾವನ್ನಪ್ಪಿದರು. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮತ್ತು ಮಗುವೊಂದು ತೀವ್ರತರವಾಗಿ ಗಾಯಗೊಂಡಿದ್ದರು, ಇವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಕೇರಳ ಮೂಲದ ಆಯೇಷಾ ನೂರಿ (41) ಮತ್ತು ನುಹಾ (18) ಸ್ಥಳದಲ್ಲೇ ಮತಪಟ್ಟರು. ನಹಿಯಾನ್ ಎಂಬ 9 ವರ್ಷದ ಬಾಲಕ ಮತ್ತು ಚಾಲಕ ಮಹಮ್ಮದ್ ಅಜೀರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ಮಹಮ್ಮದ್ ಅಜೀರ್

ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ನಹಿಯಾನ್ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ರಸ್ತೆ ಅಪಘಾತ ನಡೆಸಿದ ಟಿಪ್ಪರ್ ಚಾಲಕರ ತಲೆ ಮರೆಸಿಕೊಂಡಿದ್ದು, ಟಿಪ್ಪರ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರೆಲ್ಲರೂ ಮೂಲತಃ ಕೇರಳದವರಾಗಿದ್ದು, ಇವರೆಲ್ಲರೂ ವ್ಯವಹಾರಿಕವಾಗಿ ಬೆಂಗಳೂರಿನಲ್ಲಿ ವಾಸ್ಯವ್ಯ ಹೂಡಿದ್ದರು ಎಂದು ತಿಳಿದಿ ಬಂದಿದೆ. ರಸ್ತೆ ಅಪಘಾತ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಟಿಪ್ಪರ್ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

More news from ಕರ್ನಾಟಕ and nearby areas
  • Supar luxury || Yadgir Gurmatkal kodangal parigi mannaguda chevella minabada mehendipatnam hyderabad Yadgir Departure time Timming 11:20Am Hyderabad Arrival time 4:೦೦pm Rs 390 Plotfrom Hyderabad 6:00 am Yadgir 10:40 am
    1
    Supar luxury || Yadgir Gurmatkal kodangal parigi mannaguda chevella minabada mehendipatnam hyderabad 
Yadgir Departure time 
Timming 11:20Am
Hyderabad 
Arrival time
4:೦೦pm
Rs 390
Plotfrom 
Hyderabad 6:00 am 
Yadgir 10:40 am
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    21 hrs ago
  • ಅಫಜಲಪೂರ : ತಾಲೂಕಿನಲ್ಲಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಹೊರಬಂದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ದಾಖಲಿಸಿದ್ದು, ಭಾಗಣ್ಣ ಎಂಬ ವಿದ್ಯಾರ್ಥಿ ಶೇ. 97.16 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಕೀರ್ತಿಯನ್ನು ತಂದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 85% ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಕುಮಾರಿ ಅಂಕಿತಾ ಅವರು ಶೇ. 82.33 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಯ್ಯ ಸಾಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    1
    ಅಫಜಲಪೂರ : ತಾಲೂಕಿನಲ್ಲಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಹೊರಬಂದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ದಾಖಲಿಸಿದ್ದು, ಭಾಗಣ್ಣ ಎಂಬ ವಿದ್ಯಾರ್ಥಿ ಶೇ. 97.16 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಕೀರ್ತಿಯನ್ನು ತಂದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 85% ಫಲಿತಾಂಶ ಹಾಗೂ
ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಕುಮಾರಿ ಅಂಕಿತಾ ಅವರು ಶೇ. 82.33 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಯ್ಯ ಸಾಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    20 hrs ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    ಸಿಂದಗಿ, ವಿಜಯಪುರ, ಕರ್ನಾಟಕ•
    20 hrs ago
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    8 hrs ago
  • Post by Mouli Varma
    1
    Post by Mouli Varma
    user_Mouli Varma
    Mouli Varma
    ಸಿಂಧನೂರು, ರಾಯಚೂರು, ಕರ್ನಾಟಕ•
    22 hrs ago
  • ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಜೀರಂಕಲಗಿ ಗ್ರಾಮದ ಶ್ರೀ ಕಲ್ಮೀಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಿವೃತ್ತ ಯೋಧ ಶ್ರೀ ಖಂಡೋಬಾ ಮುರಳೀಧರ ಬಿರಾದಾರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಯೋಧರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವ ವೀರರು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    1
    ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಜೀರಂಕಲಗಿ ಗ್ರಾಮದ ಶ್ರೀ ಕಲ್ಮೀಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಿವೃತ್ತ ಯೋಧ ಶ್ರೀ ಖಂಡೋಬಾ ಮುರಳೀಧರ ಬಿರಾದಾರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಯೋಧರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವ ವೀರರು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    7 hrs ago
  • ಕರ್ನಾಟಕದ ಸಾರ್ವನಿಕರಿಗೆ ಒಂದು ಪ್ರಕಟಣಿ ಯಾರೆ ಬಂದು ಕೇಳಿದರೆ ಏನೆ ಹೇಳಿದರು ದೂರ ನಿಂತ್ತು ಮಾತನಾಡಿಸಿ ಕರ್ನಾಟಕದಲ್ಲಿ ಹೊಸ ಅಡ್ವಡಿಜ್ ಮೆಂಟ ತರುತಾಇರತಾರೆ ಹುಶಾರ ಆಗಿ ಇರಿ.
    1
    ಕರ್ನಾಟಕದ ಸಾರ್ವನಿಕರಿಗೆ ಒಂದು ಪ್ರಕಟಣಿ ಯಾರೆ ಬಂದು ಕೇಳಿದರೆ ಏನೆ ಹೇಳಿದರು  ದೂರ ನಿಂತ್ತು ಮಾತನಾಡಿಸಿ ಕರ್ನಾಟಕದಲ್ಲಿ ಹೊಸ ಅಡ್ವಡಿಜ್ ಮೆಂಟ ತರುತಾಇರತಾರೆ ಹುಶಾರ ಆಗಿ ಇರಿ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    9 hrs ago
  • ವಿಜಯಪುರ: ನಾನು ಸಾಯುವ ಒಳಗೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಮೊಟ್ಟಮೊದಲು ಹೇಳಿದ್ದು ನಾನೇ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಈ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಲ್ಲಿದ್ದ ದಲಿತರು ಈಗ ಎಚ್ಚೆತ್ತುಕೊಂಡು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅಂದು ಕೇಳಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಪಕ್ಷ ಬೇರೆಯಾದರೂ ತಮ್ಮ ಸಮಾಜದವರು ಮುಖ್ಯಮಂತ್ರಿಯಾಗಿದ್ದಕ್ಕೆ ತಮಗೆಲ್ಲರಿಗೂ ಖುಷಿಯಾಗುತ್ತಿತ್ತು ಎಂದು ಅವರು ತಿಳಿಸಿದರು.
    1
    ವಿಜಯಪುರ: ನಾನು ಸಾಯುವ ಒಳಗೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು
ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಮೊಟ್ಟಮೊದಲು ಹೇಳಿದ್ದು ನಾನೇ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಈ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಲ್ಲಿದ್ದ ದಲಿತರು ಈಗ ಎಚ್ಚೆತ್ತುಕೊಂಡು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅಂದು ಕೇಳಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಪಕ್ಷ ಬೇರೆಯಾದರೂ ತಮ್ಮ ಸಮಾಜದವರು ಮುಖ್ಯಮಂತ್ರಿಯಾಗಿದ್ದಕ್ಕೆ ತಮಗೆಲ್ಲರಿಗೂ ಖುಷಿಯಾಗುತ್ತಿತ್ತು ಎಂದು ಅವರು ತಿಳಿಸಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    1 day ago
  • ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು. ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು, ಶಿವಾನಂದ ದೇವರು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್ ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.
    1
    ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ  ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ  ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು.
ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು,  ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು,  ಶಿವಾನಂದ  ದೇವರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್  ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.