logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿದ್ಯಾರ್ಥಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ ಡಾ ಶಾಂತಿನಾಥ  ಬಳೋಜ ಅಥಣಿ: ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಅಥಣಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ ಶಾಂತಿನಾಥ  ಬಳೋಜ ಅವರು ಹೇಳಿದರು. ತಾಲೂಕಿನ  ದತ್ತುಗ್ರಾಮ ಖಿಳೆಗಾವದಲ್ಲಿ ಅಥಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (NSS) 2026ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು.​"ಸಮೃದ್ಧ ಭಾರತಕ್ಕಾಗಿ ಸಮರ್ಥ ಯುವಕರು" ಎಂಬ ಧೇಯವಾಕ್ಯ ದೊಂದಿಗೆಹಮ್ಮಿಕೊಳ್ಳಲಾಗಿದೆ. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಅವರು ಮುಂದುವರಿದು ಮಾತನಾಡುತ್ತಾ  ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹಳ್ಳಿಯ ಬದುಕು ಮತ್ತು ಅಲ್ಲಿನ ಸವಾಲುಗಳ ನೇರ ಅರಿವು ಉಂಟಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸೇವಾ ಮನೋಭಾವ ರೂಡಿಸಿಕೊಂಡು ಗ್ರಾಮದಲ್ಲಿ ಉತ್ತಮ ಸೇವೆ ಮಾಡಿ ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ನಮ್ಮ ಮಹಾವಿದ್ಯಾಲಯಕ್ಕೆ ನಮಗೆ ಉತ್ತಮ ಹೆಸರು ತನ್ನಿ ಎಂದು ಡಾ ಶಾಂತಿನಾಥ ಬಳೋಜ  ಅವರು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಹಾವಿದ್ಯಾಲಯದ  ಐಕ್ಯುಎಸಿ ಕೋ ಆರ್ಡಿನೇಟರ್ ಜಿನೇಂದ್ರ ಬಣಜವಾಡ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಸವಾಲುಗಳನ್ನು ಅರಿಯಬೇಕು. ಶ್ರಮದಾನದ ಮೂಲಕ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಈ ವೇಳೆ ಎನ್‌ಎಸ್‌ಎಸ್ ಕಾರ್ಯಕ್ರಮಾ ಧಿಕಾರಿ ಡಾ. ಹರೀಶ ಬಿ.ಪ್ರಾಸ್ತಾವಿಕ ನುಡಿಗಳನ್ನು ಆಡುತ್ತ ಸಮೃದ್ಧ ಭಾರತಕ್ಕಾಗಿ ಸಮರ್ಥ ಯುವಕರು" ಎಂಬ ಧೇಯವಾಕ್ಯದೊಂದಿಗೆ ದಿನಾಂಕ 27-3-2026 ರಿಂದ 2-4-26 ರ ವರೆಗೆ ಹಮ್ಮಿಕೊಳ್ಳ ಲಾಗಿರುವ ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಮತ್ತು ಶ್ರಮದಾನದಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಬಸವೇಶ್ವರ ದೇವಸ್ಥಾನ ಕಾರ್ಯದರ್ಶಿ ಕಿರಣ ತಗಲಿ, ವಿಜಯಕುಮಾರ ನೇಮಗೌಡ, ಸಹಾಯಕ ಪ್ರಾಧ್ಯಾಪಕರಾದ  ಸಂತೋಷ ಉಂಡಾಡಿ, ಶ್ರೀಮತಿ ಮಂಗಳಾ ಕೆ. ಎಸ್.ಶ್ರೀಮತಿ ಪದ್ಮಾವತಿ ಎ ಸೇರಿದಂತೆ ಎನ್.ಎಸ್.ಎಸ್ ಘಟಕದ ನೂರಾರು ಸ್ವಯಂಸೇವಕರು ವೇದಿಕೆಯ ಮೇಲೆ ಸ್ಥಳೀಯ ಗಣ್ಯರು ನಾಗರೀಕರು  ಉಪಸ್ಥಿತರಿದ್ದರು.

16 hrs ago
user_Dr RAMANNA.S.D
Dr RAMANNA.S.D
Journalist ಅಥಣಿ, ಬೆಳಗಾವಿ, ಕರ್ನಾಟಕ•
16 hrs ago
344e491a-de0a-4845-98ad-b8f3261778be

More news from ಕರ್ನಾಟಕ and nearby areas
  • Post by ಫಾರೂಕ್ ಕುತುಬೂದಿನ್ ನದಾಫ
    1
    Post by ಫಾರೂಕ್ ಕುತುಬೂದಿನ್ ನದಾಫ
    user_ಫಾರೂಕ್ ಕುತುಬೂದಿನ್ ನದಾಫ
    ಫಾರೂಕ್ ಕುತುಬೂದಿನ್ ನದಾಫ
    ರಬಕವಿ ಬನಹಟ್ಟಿ, ಬಾಗಲಕೋಟೆ, ಕರ್ನಾಟಕ•
    3 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    21 hrs ago
  • ಯಾದಗಿರಿಯಲ್ಲಿ ಕೆಂಭಾವಿ ತಾಲೂಕ ಕಾಲುವೆಗೆ ಬಿದ್ದ ಮಹಿಳೆಯ ರಕ್ಷಣೆ
    1
    ಯಾದಗಿರಿಯಲ್ಲಿ ಕೆಂಭಾವಿ ತಾಲೂಕ ಕಾಲುವೆಗೆ ಬಿದ್ದ ಮಹಿಳೆಯ ರಕ್ಷಣೆ
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    1 hr ago
  • ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಉಪಚುನಾವಣೆ ಇದೀಗ ತೀವ್ರ ಹಂತ ತಲುಪಿದೆ. ಶಾಸಕ ಎಚ್. ವೈ. ಮೇಟಿ ಅವರ ಅಕಾಲಿಕ ನಿಧನದ ನಂತರ ನಡೆಯುತ್ತಿರುವ ಈ ಬೈಎಲೆಕ್ಷನ್‌ನಲ್ಲಿ ರಾಜಕೀಯ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮೇಟಿ ಅವರ ಪುತ್ರ ಉಮೇಶ್ ಮೇಟಿ ಅಖಾಡಕ್ಕಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ. ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅಭ್ಯರ್ಥಿಯಾಗಿ ಬಲಿಷ್ಠ ಸವಾಲು ಒಡ್ಡಿದ್ದಾರೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಪ್ರಶ್ನೆ: ಅನುಕಂಪ ಗೆಲ್ಲುತ್ತಾ ಅಥವಾ ಅಭಿವೃದ್ಧಿ ಗೆಲ್ಲುತ್ತಾ. ಕೆಲವರು ಅಭಿವೃದ್ಧಿ ವಿಚಾರದಲ್ಲಿ ಚರಂತಿಮಠ ಪರ ಮಾತು ಮತ್ತೊಂದೆಡೆ ಮಹಿಳೆಯರು ‘ಗೃಹ ಲಕ್ಷ್ಮಿ’ ಯೋಜನೆಯ ಆಧಾರದ ಮೇಲೆ ಕಾಂಗ್ರೆಸ್ ಪರ ಒಲವು ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕೂಡ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಒಟ್ಟಿನಲ್ಲಿ, ಬಾಗಲಕೋಟೆ ಉಪಚುನಾವಣೆ ರಾಜ್ಯ ರಾಜಕೀಯದ ಗಮನ ಸೆಳೆದಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ. ವಿಡಿಯೋ ಇಷ್ಟವಾದರೆ Like ಮಾಡಿ ಇನ್ನಷ್ಟು ನಿಖರ ಸುದ್ದಿಗಳಿಗೆ Subscribe ಮಾಡಿ – ಭೀಮ ಹೆಜ್ಜೆ ನ್ಯೂಸ್, ಬಾಗಲಕೋಟೆ..
    1
    ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಉಪಚುನಾವಣೆ ಇದೀಗ ತೀವ್ರ ಹಂತ ತಲುಪಿದೆ. ಶಾಸಕ ಎಚ್. ವೈ. ಮೇಟಿ ಅವರ ಅಕಾಲಿಕ ನಿಧನದ ನಂತರ ನಡೆಯುತ್ತಿರುವ ಈ ಬೈಎಲೆಕ್ಷನ್‌ನಲ್ಲಿ ರಾಜಕೀಯ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಮೇಟಿ ಅವರ ಪುತ್ರ ಉಮೇಶ್ ಮೇಟಿ ಅಖಾಡಕ್ಕಿಳಿದಿದ್ದು, ಮುಖ್ಯಮಂತ್ರಿ  ಸಿದ್ದರಾಮಯ್ಯ. ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ  ಅಭ್ಯರ್ಥಿಯಾಗಿ ಬಲಿಷ್ಠ ಸವಾಲು ಒಡ್ಡಿದ್ದಾರೆ.
ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಪ್ರಶ್ನೆ:
ಅನುಕಂಪ ಗೆಲ್ಲುತ್ತಾ  ಅಥವಾ ಅಭಿವೃದ್ಧಿ ಗೆಲ್ಲುತ್ತಾ.
ಕೆಲವರು ಅಭಿವೃದ್ಧಿ ವಿಚಾರದಲ್ಲಿ ಚರಂತಿಮಠ ಪರ ಮಾತು
ಮತ್ತೊಂದೆಡೆ ಮಹಿಳೆಯರು ‘ಗೃಹ ಲಕ್ಷ್ಮಿ’ ಯೋಜನೆಯ ಆಧಾರದ ಮೇಲೆ ಕಾಂಗ್ರೆಸ್ ಪರ ಒಲವು
ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ
ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕೂಡ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ.
ಒಟ್ಟಿನಲ್ಲಿ, ಬಾಗಲಕೋಟೆ ಉಪಚುನಾವಣೆ ರಾಜ್ಯ ರಾಜಕೀಯದ ಗಮನ ಸೆಳೆದಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ.
ವಿಡಿಯೋ ಇಷ್ಟವಾದರೆ Like ಮಾಡಿ ಇನ್ನಷ್ಟು ನಿಖರ ಸುದ್ದಿಗಳಿಗೆ Subscribe ಮಾಡಿ – ಭೀಮ ಹೆಜ್ಜೆ ನ್ಯೂಸ್, ಬಾಗಲಕೋಟೆ..
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    6 hrs ago
  • ಅಥಣಿಯಲ್ಲಿ ನರಕಸದೃಶ ಸ್ಥಿತಿ: ಶೌಚಾಲಯ ಅರ್ಧಕ್ಕೆ ಸ್ಥಗಿತ, ಸಾರ್ವಜನಿಕರ ಆಕ್ರೋಶ! #85newsboxkannada #kannadanewslive
    1
    ಅಥಣಿಯಲ್ಲಿ ನರಕಸದೃಶ ಸ್ಥಿತಿ: ಶೌಚಾಲಯ ಅರ್ಧಕ್ಕೆ ಸ್ಥಗಿತ, ಸಾರ್ವಜನಿಕರ ಆಕ್ರೋಶ!
#85newsboxkannada #kannadanewslive
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    1 hr ago
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    6 hrs ago
  • ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ ಎಂದು ವಿರಣ್ಣ ಶೆಟ್ಟರ ಹೇಳಿದರು ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಕನ್ನಡದ ಶ್ರೇಷ್ಠ ವಚನಕಾರ್ತಿ ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು
    1
    ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ  ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ  ಎಂದು ವಿರಣ್ಣ ಶೆಟ್ಟರ ಹೇಳಿದರು 
ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು,
ಕನ್ನಡದ ಶ್ರೇಷ್ಠ ವಚನಕಾರ್ತಿ  ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ  ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು
    user_ಚಂದ್ರು ನೆಲ್ಲೂರ
    ಚಂದ್ರು ನೆಲ್ಲೂರ
    Local News Reporter ರೋಣ, ಗದಗ, ಕರ್ನಾಟಕ•
    36 min ago
  • ನಾಗಠಾಣಾ: ಯುವಕನ ಸಾವಿನಲ್ಲಿದೆ ಪ್ರೇಮಕಹಾನಿ ಇನ್ಸಾ ಗ್ರಾಮ ಪೋಸ್ಟ್ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಟೋಲ್ ನಾಕಾ ಬಳಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬಸ್‌-ಬೈಕ್‌ ಮುಖಾಮುಖಿ ದುರಂತವು ಆತ್ಮಹತ್ಯೆ ಪ್ರಕರಣ ಎಂದು ತಿಳಿದುಬಂದಿದೆ. ಪ್ರೇಮ ವೈಫಲ್ಯದಿಂದಾಗಿ ಯುವಕನೊಬ್ಬ ಚಲಿಸುತ್ತಿದ್ದ ಸರ್ಕಾರಿ ಬಸ್‌ಗೆ ತನ್ನ ಬೈಕ್‌ನಿಂದ ಡಿಕ್ಕಿ ಹೊಡೆದು ಸಜೀವ ದಹನಗೊಂಡು ಸಾವನ್ನಪ್ಪಿದ್ದಾನೆ. ಈ ಘಟನೆಯು ಅಪಘಾತವಲ್ಲ, ಬದಲಾಗಿ ಆತ್ಮಹತ್ಯೆ ಎಂದು ಪೊಲೀಸರು ತನಿಖೆಯಲ್ಲಿ ಬಯಲು ಮಾಡಿದ್ದಾರೆ. ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಎದುರಾಗಿದೆ.
    1
    ನಾಗಠಾಣಾ: ಯುವಕನ ಸಾವಿನಲ್ಲಿದೆ ಪ್ರೇಮಕಹಾನಿ ಇನ್ಸಾ ಗ್ರಾಮ ಪೋಸ್ಟ್
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಟೋಲ್ ನಾಕಾ ಬಳಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬಸ್‌-ಬೈಕ್‌ ಮುಖಾಮುಖಿ ದುರಂತವು ಆತ್ಮಹತ್ಯೆ ಪ್ರಕರಣ ಎಂದು ತಿಳಿದುಬಂದಿದೆ. ಪ್ರೇಮ ವೈಫಲ್ಯದಿಂದಾಗಿ ಯುವಕನೊಬ್ಬ ಚಲಿಸುತ್ತಿದ್ದ ಸರ್ಕಾರಿ ಬಸ್‌ಗೆ ತನ್ನ ಬೈಕ್‌ನಿಂದ ಡಿಕ್ಕಿ ಹೊಡೆದು ಸಜೀವ ದಹನಗೊಂಡು ಸಾವನ್ನಪ್ಪಿದ್ದಾನೆ. ಈ ಘಟನೆಯು ಅಪಘಾತವಲ್ಲ, ಬದಲಾಗಿ ಆತ್ಮಹತ್ಯೆ ಎಂದು ಪೊಲೀಸರು ತನಿಖೆಯಲ್ಲಿ ಬಯಲು ಮಾಡಿದ್ದಾರೆ. ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಎದುರಾಗಿದೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.