Shuru
Apke Nagar Ki App…
ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದ ಡಿಸಿ ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬುಧವಾರ ಶಹಾಬಾದ ರಸ್ತೆಯ ನಂದೂರು-ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತದಲ್ಲಿ ಸುಮಾರು 290 ಕೋಟಿ ರೂ. ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಮೆ. ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.ಸುಮಾರು 60 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಉದ್ದೇಶಿತ ಘಟಕವು ಐಸ್ ಕ್ರೀಮ್, ಫ್ರೋಜನ್ ಡೆಸರ್ಟ್, ಕುಲ್ಫಿ ಸೇರಿದಂತೆ ಡೇರಿ ಪದಾರ್ಥಗಳ ಉತ್ಪನ್ನ ಜೊತೆಗೆ ಕೋಲ್ಡ್ ಸ್ಟೋರೇಜ್ ಘಟಕ ಹೊಂದಿದ್ದು, ಇದರ ಸ್ಥಾಪನೆಯಿಂದ ಸ್ಥಳೀಯವಾಗಿ 900 ಜನರಿಗೆ ಉದ್ಯೋಗ ಸಿಗುವ ಅಂದಾಜು ಹೊಂದಲಾಗಿದೆ. ಇದಲ್ಲದೆ ಡೇರಿ ಘಟಕಕ್ಕೆ ಪೂರಕವಾಗಿ ಕೈಗಾರಿಕೆಗಳು ಸಹ ಇಲ್ಲಿಗೆ ಬರಲಿರುವುದರಿಂದ ಸ್ಥಳೀಯ ಆರ್ಥಿಕ ವೇಗವಾಗಿ ಬೆಳೆಯಲು ಸಹಕಾರಿಯಾಗಲಿದೆ
MAHESH
ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದ ಡಿಸಿ ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬುಧವಾರ ಶಹಾಬಾದ ರಸ್ತೆಯ ನಂದೂರು-ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತದಲ್ಲಿ ಸುಮಾರು 290 ಕೋಟಿ ರೂ. ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಮೆ. ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.ಸುಮಾರು 60 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಉದ್ದೇಶಿತ ಘಟಕವು ಐಸ್ ಕ್ರೀಮ್, ಫ್ರೋಜನ್ ಡೆಸರ್ಟ್, ಕುಲ್ಫಿ ಸೇರಿದಂತೆ ಡೇರಿ ಪದಾರ್ಥಗಳ ಉತ್ಪನ್ನ ಜೊತೆಗೆ ಕೋಲ್ಡ್ ಸ್ಟೋರೇಜ್ ಘಟಕ ಹೊಂದಿದ್ದು, ಇದರ ಸ್ಥಾಪನೆಯಿಂದ ಸ್ಥಳೀಯವಾಗಿ 900 ಜನರಿಗೆ ಉದ್ಯೋಗ ಸಿಗುವ ಅಂದಾಜು ಹೊಂದಲಾಗಿದೆ. ಇದಲ್ಲದೆ ಡೇರಿ ಘಟಕಕ್ಕೆ ಪೂರಕವಾಗಿ ಕೈಗಾರಿಕೆಗಳು ಸಹ ಇಲ್ಲಿಗೆ ಬರಲಿರುವುದರಿಂದ ಸ್ಥಳೀಯ ಆರ್ಥಿಕ ವೇಗವಾಗಿ ಬೆಳೆಯಲು ಸಹಕಾರಿಯಾಗಲಿದೆ
More news from ಕರ್ನಾಟಕ and nearby areas
- ಕಾಳಗಿಯಲ್ಲಿ ಕ್ರಾಪ್ ಕಟಿಂಗ್‌ನಲ್ಲಿ ಲೋಪ ದೋಷ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಹುಲಸಗುಡ್ ಗ್ರಾಮದಲ್ಲಿ ರೈತರ ಹಾಗೂ ರೈತನ ಮುಖಂಡರು ಗೆರಾವ್–ಪ್ರತಿಭಟನೆ. ಕ್ರಾಪ್ ಕಟಿಂಗ್‌ನಲ್ಲಿ ಲೋಪ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಾರ್ಟಿಕಲ್ಚರ್ ಅಧಿಕಾರಿಗಳು, ಬೆಳೆ ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ವಿರುದ್ಧ ಹುಲಸಗುಡ್ ಗ್ರಾಮದ ರೈತರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಗೆರಾವ್ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಸರಿಯಾದ ಕ್ರಾಪ್ ಕಟಿಂಗ್ ಮಾಡದೆ ಇರುವುದರಿಂದ ಬೆಳೆ ವಿಮೆ ಹಾಗೂ ಪರಿಹಾರ ಪಡೆಯುವಲ್ಲಿ ರೈತರಿಗೆ ಅನ್ಯಾಯವಾಗುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಹೋದ ವರ್ಷ ಅತಿವೃಷ್ಟಿಯಾಗಿ ಹಾಳಾಗಿರ್ತಕ್ಕಂತ ಬೆಳೆ ಇನ್ಸೂರೆನ್ಸ್ ಸರಿಯಾಗಿ ಬರದೇ ರೈತ ಸಂಕಷ್ಟದಲ್ಲಿದ್ದಾನೆ. ಈ ವರ್ಷ ಮಳೆ ಇಲ್ಲದೆ ಬೆಳೆದೆ ಬೆಳೆ ಇಲ್ಲದೆ ರೈತ ಕಷ್ಟದಲ್ಲಿದ್ದಾನೆ ಬರದ ಛಾಯ ಮೂಡಿದೆ. ಹೀಗಿರುವಾಗ ಮತ್ತೆ ಇನ್ಸೂರೆನ್ಸ್ ಕಂಪನಿ ದವರು ಅದೇ ರಾಗ ಅದೇ ಹಾಡು ಹಾಡುತ್ತಿದ್ದಾರೆ. ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಆಗಮಿಸಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿದರು. ಸರಿಯಾದ ರೀತಿಯಲ್ಲಿ ಕ್ರಾಪ್ ಕಟಿಂಗ್ ಮಾಡದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಹಸೀಲ್ದಾರ್ ಅವರ ಭರವಸೆ ಹಾಗೂ ಅಧಿಕಾರಿಗಳಿಂದ ಸಮಸ್ಯೆ ಪರಿಶೀಲಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದರು. ರೈತರ ಬೆಳೆ ವಿಮೆ ಮತ್ತು ಬೆಳೆ ಪರಿಹಾರದಲ್ಲಿ ಯಾವುದೇ ರೀತಿಯ ತಾರತಮ್ಯವಾಗಬಾರದು. ಸರಿಯಾದ ಕ್ರಾಪ್ ಕಟಿಂಗ್ ನಡೆಸಿ ಅರ್ಹ ಪ್ರತಿಯೊಬ್ಬ ರೈತನಿಗೂ ನ್ಯಾಯ ಒದಗಿಸಬೇಕು ಎಂದು ಹುಲಸಗುಡ್ ಗ್ರಾಮದ ರೈತರು ಹಾಗೂ ಸುಂಟಾಣ್ಣ ಗ್ರಾಮದ ರೈತರು, ರೈತ ಸೇನೆ ಮುಖಂಡರು ಆಗ್ರಹಿಸಿದ್ದಾರೆ. “ರೈತರ ಬೆವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ರೈತ ನಾಯಕ ವೀರಣ್ಣ ಗಂಗಾಣಿ ಎಚ್ಚರಿಕೆ ನೀಡಿದ್ದಾರೆ. ತಾಲೂಕ ದಂಡಾಧಿಕಾರಿಗಳಾದ ಪೃಥ್ವಿರಾಜ್ ಪಾಟೀಲ್ ರವರು ಎರಡು ಮೂರು ದಿವಸಗಳಲ್ಲಿ ಮುಖಂಡರನ್ನು ಕರೆದು ಸಭೆ ಮಾಡಿ ನಂತರ ಖುದ್ದಾಗಿ ನಾವೇ ಬಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಇಒ ಬಸಲಿಂಗಪ್ಪ ಡಿಗ್ಗಿ, ಆರ್ಟಿಕಲ್ಚರ್ ಅಧಿಕಾರಿ ನಸ್ಸೀರ್ ಹೊಸಳ್ಳಿ, ಇನ್ಸೂರೆನ್ಸ್ ಕಂಪನಿ ಅಧಿಕಾರಿ ಯುವರಾಜ್, ರೈತರದ ಸಂತೋಷ್ ನಾಯ್ಕೋಡಿ,ಶಿವಶರಣಪ್ಪ ನಿಗದಳಿ, ವಿಠಲ ಸನದಿ, ಪಾಂಡುರಂಗ ರುಮ್ಮನಗೂಡ. ಸೈದಪ್ಪ ಕೊಡಡೂರ, ಸಜೀದಾಪಟೇಲ್ ಬಿರಾದಾರ್, ಸಿದಪ್ಪ ಕಂದಗುಳ, ಶಿವಪ್ಪ ಸನದಿ, ನಾಮದೇವ ರಾಠೋಡ್, ಉದಯ ಸನದಿ, ನಾಗೇಶ್ ಸನದಿ, ವಿಠ್ಠಲ್ ರೂಮನಗುಡ, ಸಂತೋಷ ಮಠಪತಿ, ಪೀರಪ್ಪ ಯಾದವ, ನಾಗಪ್ಪ ಜಡಗಿ, ಅನೇಕ ರೈತರು ಉಪಸ್ಥಿತರಿದ್ದರು1
- ಭಾರತ ಜೋಡೊ ಯುವ ಮಿಷನ್ ಕುರಿತು ಡಿಸಿಎಂ ಜಿ ಪರಮೇಶ್ವರ್ ನಿರೋದ್ಯೋಗಿ ಯುವಕರಿಗೆ ಇದೊಂದು ಉತ್ತಮ ವೇದಿಕೆ ಆಗುತ್ತಾ?1
- #ಅಫಜಲಪುರ: ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಆಕಾಶ್ ಆಸ್ಪತ್ರೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಇಂದೇ ಭೇಟಿ ನೀಡಿ. Star Kannada News 24×7 Ravi Badiger #afzalpur #kalaburaginews #ಅಫಜಲಪುರ: ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಆಕಾಶ್ ಆಸ್ಪತ್ರೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಇಂದೇ ಭೇಟಿ ನೀಡಿ. Star Kannada News 24×7 Ravi Badiger #afzalpur #kalaburaginews1
- ಅಫಜಲಪುರದಲ್ಲಿ : ನೂತನವಾಗಿ ಆಕಾಶ ಆಸ್ಪತ್ರೆಯನ್ನು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು.! ಅಫಜಲಪುರದಲ್ಲಿ : ನೂತನವಾಗಿ ಆಕಾಶ ಆಸ್ಪತ್ರೆಯನ್ನು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು.!1
- ತಳಬೋಗ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಭಾವು ಸಾಠೆ ಜಯಂತಿ ಆಚರಣೆ: ಮಾಜಿ ಎಂಎಲ್ಸಿ ವಿಜಯಸಿಂಗ್ ಚಾಲನೆ ಬಸವಕಲ್ಯಾಣ: ತಾಲೂಕಿನ ತಳಬೋಗ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಭಾವು ಸಾಠೆ ಜಯಂತಿ ಆಚರಣೆ ಮಾಡಲಾಯಿತು. ಮಾಜಿ ಎಂಎಲ್ಸಿ ವಿಜಯಸಿಂಗ್ ಚಾಲನೆ ನೀಡಿದರು1
- ಚಿಂಚೋಳಿ ತಾಲೂಕಿನ ಕೆಲವೆಡೆ ಉತ್ತಮ ಮಳೆ : ಮಿರಿಯಾಣದಲ್ಲಿ ಧಾರಾಕಾರ ಮಳೆ – ಜನರಲ್ಲಿ ಸಂತಸ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಉತ್ತಮ ಮಳೆಯಾಗಿದೆ. ಮಳೆಯ ಪರಿಣಾಮ ರೈತರಲ್ಲಿ ಸಂತಸ ಮೂಡಿದ್ದು, ಬಿತ್ತನೆ ಹಾಗೂ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ಹರಿದಿದ್ದು, ವಾತಾವರಣ ತಂಪಾಗಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯ ನಿರೀಕ್ಷೆ ಇದೆ.2
- ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಹಳೆ ಬಜಾರ್‌ನಲ್ಲಿ ಕಿಯಾ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ನಡೆದಿದೆ.1
- ಹುಮ್ನಾಬಾದನ ಥೇರ ಮೈದಾನದಲ್ಲಿ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನಾಚರಣೆ ಅಂಗವಾಗಿ ಅನ್ನದಾಸೋಹ1