ಕೆಜಿಎಫ್‌ನಗರಸಭೆ ಮುಂಭಾಗ ಆ. 5 ರಂದು ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣಕ್ಕೆ ನಿರ್ಧಾರ ಕೆಜಿಎಫ್: ಇಲ್ಲಿನ ನಗರಸಭೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಕಂಚಿನ ಪ್ರತಿಮೆಯನ್ನು ಆಗಸ್ಟ್ 5 ರಂದು ಅನಾವರಣಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ದಲಿತ ಸಂಘಟನೆಗಳಿಂದ ಪಕ್ಷಾತೀತವಾಗಿ ಒಮ್ಮತದ ಬೆಂಬಲ ವ್ಯಕ್ತವಾಗಿದೆ. ಇಂದು ನಗರಸಭೆಯ ಸಭಾಂಗಣದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತಾಲೂಕಿನ ದಲಿತ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ: ಶಾಸಕಿ ರೂಪಕಲಾ ಶಶಿಧರ್ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, "ಆಗಸ್ಟ್ 5 ರಂದು ಅತ್ಯಂತ ಶುಭ ದಿನವಾಗಿದ್ದು, ಎಲ್ಲರ ಸಮ್ಮುಖದಲ್ಲಿ ಹಬ್ಬದ ವಾತಾವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ಕೆಜಿಎಫ್ ತಾಲೂಕಿನ ಮುಖಂಡರು ಹಾಗೂ ನಾಗರಿಕರು ಅಂಬೇಡ್ಕರ್ ಅವರ ಮೇಲಿರುವ ಅಭಿಮಾನದೊಂದಿಗೆ ಪಕ್ಷಾತೀತವಾಗಿ ಭಾಗವಹಿಸಬೇಕು. ನನ್ನ ಕ್ಷೇತ್ರದಲ್ಲಿ ಇಂತಹ ಮಹನೀಯರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ," ಎಂದರು. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಆಹ್ವಾನಿಸಲು ಒತ್ತಾಯ: ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಹಾಗೂ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂದು ದಲಿತ ಮುಖಂಡ ರಂಗನಾಥ್ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಮುಖಂಡ ಸಂದ ಮುನಿಸ್ವಾಮಿ, ಕೋಲಾರ ಜಿಲ್ಲೆಯಲ್ಲೇ ಅತಿ ಹೆಚ್ಚು ದಲಿತ ಸಮುದಾಯವನ್ನು ಹೊಂದಿರುವ ಕೆಜಿಎಫ್ ಕ್ಷೇತ್ರದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸುತ್ತಿರುವುದು ಶ್ಲಾಘನೀಯ. ದಲಿತ ಪರ ಹೋರಾಟ ಮಾಡಿದವರು ಹಾಗೂ ಕ್ರಾಂತಿಕಾರಿ ಗೀತೆಗಳನ್ನು ಹಾಡಿದ ಗಣ್ಯರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಭಾಗದಲ್ಲೂ ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ: ಕಂಚಿನ ಪ್ರತಿಮೆ ಸ್ಥಾಪನೆ ಕೇವಲ ಕೆಜಿಎಫ್ ನಗರಕ್ಕೆ ಸೀಮಿತವಾಗಬಾರದು. ಕ್ಯಾಸಂಬಳ್ಳಿ ಹಾಗೂ ಗ್ರಾಮಾಂತರ ಭಾಗದ ಕೇಂದ್ರ ಸ್ಥಾನವಾದ ಬೇತಮಂಗಲದಲ್ಲಿರುವ ಹಳೇ ಪ್ರತಿಮೆಯನ್ನು ತೆರವುಗೊಳಿಸಿ, ಅಲ್ಲೂ ಸಹ ನೂತನ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಶ್ರೀನಾಥ್ ನಾಸ್ತಿಕ ಒತ್ತಾಯಿಸಿದರು. ಸಭೆಯಲ್ಲಿ ಕೆಲಕಾಲ ಗದ್ದಲ: ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣ ವಿಳಂಬವಾಗಲು ಕಾರಣಗಳನ್ನು ವಿವರಿಸಲು ಮುಂದಾದ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರ ವಿರುದ್ಧ 'ಸೇವ್ ಕೆಜಿಎಫ್ ಕಮಿಟಿ' ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿ, ಮುನಿಸ್ವಾಮಿ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ದಿಕ್ಕು ಬದಲಿಸಬೇಕಾಯಿತು. ಈ ಸಭೆಯಲ್ಲಿ ತಹಸೀಲ್ದಾರ್ ಗಾಯಿತ್ರಿ, ನಗರಸಭೆ ಪೌರಾಯುಕ್ತ ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ಧರ್ಮೇಂದ್ರ, ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮುಖಂಡರಾದ ದಯಾನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಎಇಇ ಕಿರಣ್, ಪಿಎಸ್ಐ ಮಹೇಶ್ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ನಾಯಕರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

- *ಗಣಕೀಕರಿಸುವಲ್ಲಿ ಶೇ 100% ಪ್ರಗತಿ ಸಾಧನೆ-ರಾಜ್ಯದಲ್ಲೇ ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ-ಮತದಾರರ ನೋಂದಣಾಧಿಕಾರಿ ಅತೀಕ್ ಭಾಷ* ಭಾಗ್ಯನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 204413 ಶೇ 100% ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಹಾಗೂ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165 ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದು ಮತದಾರರ ನೋಂದಣಾಧಿಕಾರಿ ಅತೀಕ್ ಭಾಷ ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 16 ರವರೆಗೆ 2,04,413 ಮತದಾರಿದ್ದು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಸಂಬಂಧ ಭಾರತ ಚುನಾವಣಾ ಆಯೋಗದ ದಿನಾಂಕ: 14/05/2026 ರ ವೇಳಾಪಟ್ಟಿಯಂತೆ ದಿನಾಂಕ: 30/06/2026 ರಿಂದ 29/07/2026ರವರೆಗೆ ಬಿ.ಎಲ್.ಓ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಸ್ವೀಕರಿಸುವ ಕಾರ್ಯ ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ದಿನಾಂಕ 16/06/2026 ರವರೆಗೆ ಒಟ್ಟು 204413 ಮತದಾರರಿದ್ದು, ಈ ಪೈಕಿ 198165 (ಶೇ.96.94%) ಮತದಾರರನ್ನು ಮ್ಯಾಪಿಂಗ್ ಮಾಡಲಾಗಿರುತ್ತದೆ.ತಾಲ್ಲೂಕಿನಲ್ಲಿ ದಿನಾಂಕ: 30/07/2026 ರ ಸಂಜೆ 6.00 ಗಂಟೆಗೆ ಎಲ್ಲಾ ಮತಗಟ್ಟೆಗಳಿಂದ ಒಟ್ಟು 204413 (ಶೇ.100%) ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಮುಗಿದಿದ್ದು,ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165 ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದರು. ಈ ಸಂಧರ್ಭದಲ್ಲಿ ತಹಶೀಲ್ದಾರ್ ಮನಿಷಾ ಎನ್ ಪತ್ರಿ, ಚೇಳೂರು ತಹಶೀಲ್ದಾರ್ ಬಿ.ಕೆ.ಶ್ವೇತಾ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ,ಚುನಾವಣಾ ಶಾಖೆಯ ಅಧಿಕಾರಿಗಳಾದ ಮೂರ್ತಿ,ರಾಘವೇಂದ್ರ,ಕಾಂಗ್ರೆಸ್ ಪಕ್ಷದ ಬಿ ಎಲ್ ಎ2 ಮದ್ದಿಲೇಟಿರೆಡ್ಡಿ,ಕ್ರಿಕೆಟ್ ಮೂರ್ತಿ,ಅಶೋಕ್,ಮಿಲ್ಕ್ ವೀರ,ಪಾತಪಾಳ್ಯ ಚಂದ್ರಣ್ಣ,ನಿಜಾಮ್ ಉದ್ದಿನ್ ಬಾಬು,ಮನ್ಸೂರ್,ದಿವಾಕರ್,ಸಿಪಿ.ಐ.ಎಂ ಪಕ್ಷದ ಬಿ ಎಲ್ ಎ2 ಎಂ. ಎನ್.ರಘುರಾಮರೆಡ್ಡಿ,ಅಶ್ವಥಪ್ಪ, ಜಿ ಕೃಷ್ಣಪ್ಪ, ಇಮ್ರಾನ್, ಬಿಜೆಪಿ ಪಕ್ಷದ ಬಿ ಎಲ್ ಎ2 ಬಿ. ಎಸ್.ಲೋಕೇಶ್,ರವಿಕುಮಾರ್,ಲೋಕೇಶ್,ವನಜಾ, ಗಂಗುಳಮ್ಮ, ಮಂಜುಳಾ,ರೂಪ,ಸೇರಿದಂತೆ ಮತ್ತಿತರರು ಇದ್ದರು.3
- ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಪ್ರತಿಭಟನೆ ಬೆಂಗಳೂರು:ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.ಶಾಸಕರನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ಮುಂದೆ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮತ್ತು ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಂದು ಒತ್ತಾಯಿಸಿದ್ದು,ಕಾನೂನು ಕ್ರಮ ತಗೆದುಕೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎನ್ನುವುದಕ್ಕೆ ಸಾಕ್ಷಿ ಕೊಡಲಿ.ಇಲ್ಲದೇ ಹೋದರಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.1
- 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ! | ರಾಜ್ಯದಲ್ಲಿ ಹೆಚ್ಚುತ್ತಿರುವ ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಮಹತ್ವದ ಅಭಿಯಾನ ಆರಂಭಿಸಿದೆ. 14 ವರ್ಷದೊಳಗಿನ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ HPV ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಅಭಿಯಾನದ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದು, ಪೋಷಕರು ಹಾಗೂ ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ. #Hashtags #HPVVaccine #CervicalCancer #HealthDepartment #UTKhader #KarnatakaNews #HealthNews #WomenHealth #FreeVaccine #KannadaNews #BreakingNews #ASNNews24Kannada #ViralNews #karnataka1
- burger king bangalore jayanagar must visit the store every time burger1
- ಹೈಕೋರ್ಟ್ ಜಾಮೀನು ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ - ವಿನಯ್ ಕುಲಕರ್ಣಿ ಹೈಕೋರ್ಟ್ ಜಾಮೀನು ಹಿನ್ನೆಲೆ ರಿಲೀಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ ವಿನಯ್ ಕುಲಕರ್ಣಿ.ಅಭಿಮಾನಿಗಳಿಂದ ವಿನಯ್ ಕುಲಕರ್ಣಿಗೆ ಹೂವಿನ ಹಾಕಿ ಸ್ವಾಗತ ಅಭಿಮಾನಿಗಳಿಗೆ ಶೇಕ್ ಹ್ಯಾಂಡ್ ನೀಡಿ ತೆರಳಿದ ವಿನಯ್ ಕುಲಕರ್ಣಿ1
- ಕೆಜಿಎಫ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿವೃತ್ತ ಹಾಗೂ ವರ್ಗಾವಣೆಗೊಂಡ ಪ್ರಾಧ್ಯಾಪಕರಿಗೆ ಸನ್ಮಾನ ಕೆಜಿಎಫ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಎಂ. ಕೃಷ್ಣಮೂರ್ತಿ ಅವರ ವಯೋಸಹಜ ನಿವೃತ್ತಿ ಹಾಗೂ ವರ್ಗಾವಣೆಗೊಂಡ ಇತರ ಪ್ರಾಧ್ಯಾಪಕರ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ಭಾವಪೂರ್ಣವಾಗಿ ನೆರವೇರಿತು. ಅನಾರೋಗ್ಯದ ಕಾರಣದಿಂದ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರೂ, ಛಲ ಬಿಡದೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಎಂ. ಕೃಷ್ಣಮೂರ್ತಿ ಅವರು ಈ ಹಿಂದೆ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಯಶಸ್ವಿಯಾಗಿ ಸೇವೆ ಸಲ್ಲಿಸಿ ಕಾಲೇಜು ಅಭಿವೃದ್ಧಿಗೆ ಶ್ರಮಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಕೃಷ್ಣಮೂರ್ತಿ, "ಅನಾರೋಗ್ಯದಿಂದಾಗಿ ಕಾಲುಗಳನ್ನು ಕಳೆದುಕೊಂಡಾಗ ಸೇವೆ ಮುಂದುವರಿಸುವುದು ಅಸಾಧ್ಯವೆನಿಸಿತ್ತು. ಆದರೆ, ಹಾಲಿ ಪ್ರಾಂಶುಪಾಲರಾದ ಡಾ. ನಾರಾಯಣ್ ಅವರ ಅಭಯ, ಪ್ರೋತ್ಸಾಹ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಸಹಕಾರದಿಂದಾಗಿ ನಾನು ನನ್ನ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ವಯೋಸಹಜ ನಿವೃತ್ತಿ ಹೊಂದುತ್ತಿದ್ದೇನೆ" ಎಂದು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ನಾರಾಯಣ್, "ಪ್ರೊ. ಕೃಷ್ಣಮೂರ್ತಿ ಅವರ ಕರ್ತವ್ಯನಿಷ್ಠೆ, ನೈತಿಕ ಶಕ್ತಿ ಮತ್ತು ಶೈಕ್ಷಣಿಕ ಕಾಳಜಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ದೈಹಿಕ ಸವಾಲುಗಳಿದ್ದರೂ ಅವರು ತೋರಿದ ಕ್ರಿಯಾಶೀಲತೆ ಹಾಗೂ ಕಾಯಾ-ವಾಚಾ-ಮನಸ್ಸಿನ ಕಟಿಬದ್ಧತೆ ಮೆಚ್ಚುವಂಥದ್ದು" ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಿಂದ ಬೇರೆಡೆಗೆ ವರ್ಗಾವಣೆಯಾದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿ. ವೆಂಕಟೇಶ್, ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ. ಕೆ.ಸಿ. ಬಾಬುಪ್ರಸಾದ್ ಹಾಗೂ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜಿ. ಏಳುಮಲೈ ಅವರನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಿವೃತ್ತ ಹಾಗೂ ವರ್ಗಾವಣೆಗೊಂಡ ಪ್ರಾಧ್ಯಾಪಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.1
- ನಾನೇನು ಲಾಭಿ ಮಾಡೋಕೆ ಹೋಗಿಲ್ಲ:ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಲಪಾಡ್ ಪ್ರತಿಕ್ರಿಯೆ ಬೆಂಗಳೂರು:ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋದಾಗಲೆಲ್ಲಾ ನಲಪಾಡ್ ಫಾಲೋ ಮಾಡ್ತಿದ್ದು,ಈ ಬಾರಿಯಾದ್ರೂ ಮಂತ್ರಿಗಿರಿ ಪಡೆಯುವಲ್ಲಿ ತಂದೆ ಮತ್ತು ಮಗ ಸಕ್ಸಸ್ ಆಗ್ತಾರಾ?ಫೈನಲ್ ಲೀಸ್ಟ್ ನಲ್ಲಿ ಹೆಸರು ಇರುವಂತೆ ತಂದೆ ಮತ್ತು ಮಗ ಎಫರ್ಟ್ ಆಗ್ತಿದ್ದಾರೆ.ದೆಹಲಿಯಲ್ಲಿ ಸಿಎಂ ಭೇಟಿಯಾಗಿ ತಂದೆಗೆ ಸಚಿವಸ್ಥಾನ ಕೊಡಿಸಲು ಹ್ಯಾರೀಸ್ ಪುತ್ರ ನಲಪಾಡ್ ಪ್ಲಾನ್ ನಡೆಸಿದ್ದಾರೆ.ಇನ್ನೂ ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ನಲಪಾಡ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿಗಳು ದೆಹಲಿಗೆ ಹೋದಾಗ ಫ್ರೀಯಾಗಿ ಸಿಗ್ತಾರೆ ಅಂತ ಮಾತಾಡೋಕೆ ಹೋಗಿದ್ದೆ,ನಾನೇನು ಲಾಭಿ ಮಾಡೋಕೆ ಹೋಗಿಲ್ಲ, ನಮ್ಮ ಅಪ್ಪ ನಾಲ್ಕು ಬಾರಿ ಗೆದ್ದಿದ್ದಾರೆ, ಅವರು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ,ಕಡಲಸಗಳನ್ನ ನಡೆಸಿಕೊಂಡು ಬಂದಿದ್ದಾರೆ, ಅವರನ್ನ ಮಂತ್ರಿ ಮಂಡಲದಲ್ಲಿ ಸೇರ್ಸ್ತಾರೆ ಅನ್ನೋ ನಂಬಿಕೆ ನಮ್ಮ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ಮೇಲೆ ಇದೆ,ನಾವು ಯಾವುದೇ ಪ್ರಸ್ತಾಪ ಮಾಡಿಲ್ಲ, ಡೈಲಿ ಮುಖ ತೋರಿಸಿರ್ದೆ ನೆನಪು ಬರುತ್ತೆ ಎಂದು ನಲಪಾಡ್ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.1
- ಆಟೋ ಸೈಡ್‌ಗೆ ಹೇಳಿದ್ದಕ್ಕೆ ಹಲ್ಲೆ! ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಗೂಂಡಾಗಿರಿ! ಆಟೋ ಸೈಡ್‌ಗೆ ಹೇಳಿದ್ದಕ್ಕೆ ಹಲ್ಲೆ! ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಗೂಂಡಾಗಿರಿ!1