Shuru
Apke Nagar Ki App…
ಪಿ.ಜಿ.ಪಾಳ್ಯಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2026–27ನೇ ಸಾಲಿನ ಕೆ.ಸಿ.ಸಿ. ಬೆಳೆ ಸಾಲ ವಿತರಣೆ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವತಿಯಿಂದ 2026–27ನೇ ಸಾಲಿನ ಕೆ.ಸಿ.ಸಿ. ಬೆಳೆ ಸಾಲ ವಿತರಣೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಒಟ್ಟು 36 ಫಲಾನುಭವಿಗಳಿಗೆ ₹30 ಲಕ್ಷ ರೂ.ಗಳ ಕೆ.ಸಿ.ಸಿ. ಬೆಳೆ ಸಾಲವನ್ನು ವಿತರಿಸಲಾಯಿತು. ಕಾರ್ಯಕ್ರಮವು ಹನೂರು ಜನಪ್ರಿಯ ಮಾಜಿ ಶಾಸಕರು ಹಾಗೂ ಎಂ.ಸಿ.ಡಿ.ಸಿ.ಸಿ. ನಿರ್ದೇಶಕರು ಮತ್ತು ಕೆ.ಸಿ.ಸಿ. ಸದಸ್ಯರಾದ ಆರ್. ನರೇಂದ್ರ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
S.Puttaswamyhonnur
ಪಿ.ಜಿ.ಪಾಳ್ಯಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2026–27ನೇ ಸಾಲಿನ ಕೆ.ಸಿ.ಸಿ. ಬೆಳೆ ಸಾಲ ವಿತರಣೆ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವತಿಯಿಂದ 2026–27ನೇ ಸಾಲಿನ ಕೆ.ಸಿ.ಸಿ. ಬೆಳೆ ಸಾಲ ವಿತರಣೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಒಟ್ಟು 36 ಫಲಾನುಭವಿಗಳಿಗೆ ₹30 ಲಕ್ಷ ರೂ.ಗಳ ಕೆ.ಸಿ.ಸಿ. ಬೆಳೆ ಸಾಲವನ್ನು ವಿತರಿಸಲಾಯಿತು. ಕಾರ್ಯಕ್ರಮವು ಹನೂರು ಜನಪ್ರಿಯ ಮಾಜಿ ಶಾಸಕರು ಹಾಗೂ ಎಂ.ಸಿ.ಡಿ.ಸಿ.ಸಿ. ನಿರ್ದೇಶಕರು ಮತ್ತು ಕೆ.ಸಿ.ಸಿ. ಸದಸ್ಯರಾದ ಆರ್. ನರೇಂದ್ರ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
More news from ಕರ್ನಾಟಕ and nearby areas
- ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ತಾಲೂಕಿನ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಅಬ್ಕಾರಿ ಇಲಾಖೆಯ ಉಪ ಆಯುಕ್ತ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಬೇಡ ಬೇಡ ಅನಧಿಕೃತ ಬಾರ್ ಅಂಗಡಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ ಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಮದ್ಯಂಗಡಿವಿದ್ದು, ಅಬ್ಕಾರಿ ಇಲಾಖೆ ಮತ್ತೊಂದು ಮದ್ಯಂಗಡಿ ತೆರೆಯಲು ಹೊರಟಿದ್ದಾರೆ. ಈಗಾಗಲೇ ಸುತ್ತ ಮುತ್ತಲಿನ ಗ್ರಾಮಸ್ಥರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಬಾರ್ ಅಂಗಡಿ ಸಾಕಾಗಿದೆ. ಮತ್ತೊಂದು ಮದ್ಯಂಗಡಿ ಏಕೆ ಬೇಕಿದೆ ? ಇದು ಒಂದು ದುರಂತವೇ ಸರಿ. ಅಧಿಕಾರಿಗಳು ಶಕ್ತಿ ಇದ್ದರೆ ಇನ್ನೊಂದು ಮದ್ಯಂಗಡಿ ತೆರೆಯಲಿ. ಜನರಿಗೆ ಆಸ್ಪತ್ರೆ, ಶಿಕ್ಷಣ ವ್ಯವಸ್ಥೆ, ಮೆಡಿಕಲ್ ವ್ಯವಸ್ಥೆ ಮಾಡಲಿ ಅದನ್ನು ಬಿಟ್ಟು ಒಂದೇ ಗ್ರಾಮದಲ್ಲಿ ಎರಡು ಬಾರ್‌ಗಳನ್ನು ತೆರೆಯಲು ಮುಂದಾಗಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದು ಮತ್ತೊಂದು ಬಾರ್ ಅಂಗಡಿ ತೆರೆದರೆ ಜನರ ಗತಿಯೇನು ಆಗಬೇಕು. ನೂತನವಾಗಿ ಆರಂಭಿಸಲು ಹೊರಟಿರುವ ಬಾರ್ ಅಂಗಡಿ ದಾಖಲೆಗಳು ವ್ಯಾತ್ಯಾಸವಾಗಿರುತ್ತವೆ. ಅದನ್ನು ಪರಿಶೀಲಿಸಿ ನೂತನ ಬಾರ್ ಅಂಗಡಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಮಸಮುದ್ರ ಬಾಬು, ಉಮೇಶ, ಪ್ರಧಾನ ಕಾರ್ಯದರ್ಶಿ ಅರ್ಜುನ, ಕಾರ್ಮಿಕ ಅಧ್ಯಕ್ಷ ಹರೀಶ್ ನಾಯಕ, ಟೌನ್ ಅಧ್ಯಕ್ಷ ಅಫ್ನನ್, ಮಹೇಂದ್ರ, ರಿಜ್ವಾನ್, ಚಾಂದು, ಸಿದ್ದರಾಜು, ಅಬ್ದುಲ್‌ಮನಸಿಫ್, ಮೋಸಿನ್, ಸುಹೇಲ್ ಪಾಷ, ಕೇಶವಮೂರ್ತಿ, ಮೂಡಹೊಸಳ್ಳಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.4
- ಕೌದಳ್ಳಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಭಾವೈಕ್ಯತೆ ಮೆರೆದ ಸೌಹಾರ್ದ ಮೆರವಣಿಗೆ ಹನೂರು:ತಾಲೂಕಿನ ಕೌದಳ್ಳಿ ಗ್ರಾಮದ ಮುಸ್ಲಿಂ ಬಾಂಧವರ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ 'ಈದ್ ಮಿಲಾದ್' ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಗ್ರಾಮದ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಕುರಾನ್ ಪಠಣ ಮತ್ತು ಪ್ರವಾದಿಯವರ ಜೀವನ ಸಂದೇಶಗಳ ಕುರಿತು ಧರ್ಮೋಪದೇಶ ಕಾರ್ಯಕ್ರಮಗಳು ಜರುಗಿದವು. ಸೌಹಾರ್ದ ಮೆರವಣಿಗೆ ಬಳಿಕ ಬಣ್ಣ ಬಣ್ಣದ ದೀಪಗಳು, ತೋರಣಗಳು ಮತ್ತು ಧ್ವಜಗಳಿಂದ ಅಲಂಕೃತಗೊಂಡಿದ್ದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕರು ಮತ್ತು ಮಕ್ಕಳು ಪ್ರವಾದಿಯವರ ಶಾಂತಿ, ಪ್ರೀತಿ, ಸಹೋದರತೆಯ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಭಾವೈಕ್ಯತೆಯ ಸಂಕೇತ ಗ್ರಾಮದ ವಿವಿಧ ಧರ್ಮಗಳ ಮುಖಂಡರು, ಹಿಂದೂ-ಕ್ರೈಸ್ತ ಬಾಂಧವರು ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆದರು. ಈದ್ ಮಿಲಾದ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ, ಎಲ್ಲಾ ಧರ್ಮಗಳ ಸೌಹಾರ್ದತೆಯ ಪ್ರತೀಕವಾಗಿದೆ ಎಂಬುದನ್ನು ಈ ಆಚರಣೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರು, ಮಸೀದಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.2
- ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಎಸ್ ದೊಡ್ಡಿ ಬಳಿ ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.2
- ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು. ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು. ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ. ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.1
- ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ ಅಲಗಾಡುತ್ತಿದೆ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ. ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ1
- ಮೈಕ್ರೋ ಗ್ರೀನ್ ಬೆಳೆದು ತಿಂಗಳಿಗೆ ₹50 ಸಾವಿರ ಸಂಪಾದನೆ; ವಿನಯ್‌ರ ವಿನೂತನ ಕೃಷಿ ಮಾದರಿ ಮೈಸೂರು: ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯುವಕರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಾಲಿನಲ್ಲಿ ನಂಜನಗೂಡು ನಗರದ ಎಂಬಿಎ ಪದವೀಧರ ವಿನಯ್ ಅವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೈಕ್ರೋ ಗ್ರೀನ್ ಕೃಷಿಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಭರಿತ ಬೆಳೆಗಳನ್ನು ಉತ್ಪಾದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ. ವಿನಯ್ ಅವರು ಸುಮಾರು ₹8 ಲಕ್ಷ ವೆಚ್ಚದಲ್ಲಿ ಮೈಕ್ರೋ ಗ್ರೀನ್ ಬೆಳೆಯಲು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಎಂಟು ಬಗೆಯ ಧಾನ್ಯಗಳಾದ , ಜೋಳ, ರಾಗಿ, ಸಜ್ಜೆ, ಮೆಂತ್ಯೆ, ಸಾಸಿವೆ, ಮೂಲಂಗಿ ಹಾಗೂ ಬಿಟ್ರೋಟ್ ಮುಂತಾದ ಬೀಜಗಳಿಂದ ಮೈಕ್ರೋ ಗ್ರೀನ್‌ಗಳನ್ನು ಬೆಳೆಸುತ್ತಿದ್ದಾರೆ. ಬೀಜ ಬಿತ್ತಿದ ನಂತರ ಕೇವಲ 10ರಿಂದ 15 ದಿನಗಳಲ್ಲಿ ಪೈರು ಸಿದ್ಧವಾಗುವುದು ಈ ಕೃಷಿಯ ವಿಶೇಷತೆ. ಸಾಮಾನ್ಯ ಕೃಷಿಗೆ ಹೋಲಿಸಿದರೆ ಕಡಿಮೆ ಜಾಗ, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾಗಿರುವುದರಿಂದ ಮೈಕ್ರೋ ಗ್ರೀನ್ ಕೃಷಿ ಯುವಕರನ್ನು ಆಕರ್ಷಿಸುತ್ತಿದೆ. ವಿನಯ್ ಅವರು ಬೆಳೆದ ಮೈಕ್ರೋ ಗ್ರೀನ್‌ಗಳನ್ನು ಮೈಸೂರು ಹಾಗೂ ನಂಜನಗೂಡು ಭಾಗದ ಜಿಮ್‌ಗಳು, ಮನೆಗಳು ಹಾಗೂ ಆರೋಗ್ಯ ಕಾಳಜಿ ಹೊಂದಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮೈಕ್ರೋ ಗ್ರೀನ್‌ಗಳಲ್ಲಿ ಎಲೆಗಳು ಸಂಪೂರ್ಣವಾಗಿ ಬೆಳೆಯುವ ಮುನ್ನವೇ ಕೊಯ್ಲು ಮಾಡುವುದರಿಂದ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆಹಾರದ ನಾರಿನಾಂಶ ದೊರೆಯುತ್ತವೆ. ನಿಯಮಿತ ಆಹಾರದ ಭಾಗವಾಗಿ ಬಳಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ಸಲಾಡ್, ಸ್ಯಾಂಡ್‌ವಿಚ್, ಸೂಪ್ ಹಾಗೂ ವಿವಿಧ ಆಹಾರ ಪದಾರ್ಥಗಳೊಂದಿಗೆ ಇವುಗಳನ್ನು ಸೇವಿಸಬಹುದು. ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಲ್ಲ ಎಂಬುದನ್ನು ವಿನಯ್ ಅವರ ಪ್ರಯತ್ನ ತೋರಿಸಿಕೊಟ್ಟಿದೆ. ಎಂಬಿಎ ಪದವಿ ಪಡೆದ ಬಳಿಕ ಉದ್ಯೋಗದ ಬದಲು ಕೃಷಿಯಲ್ಲೇ ಹೊಸ ಅವಕಾಶ ಕಂಡುಕೊಂಡಿರುವ ಅವರು, ಕಡಿಮೆ ಅವಧಿಯ ಬೆಳೆಗಳ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಮೈಕ್ರೋ ಗ್ರೀನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. +91 96111 89599 ಖರೀದಿ ಮಾಡಲು ಬಯಸುವವರು ಸಂಪರ್ಕ ಮಾಡಬಹುದು1
- ಗುಂಡ್ಲುಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್: ಸೌಹಾರ್ದತೆಯ ಸಂದೇಶ. ಗುಂಡ್ಲುಪೇಟೆ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳು ನಡೆದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕಾರ ಮಾಡಲಾಗಿದ್ದು, ಮುಸ್ಲಿಂ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಅನ್ನದಾನ ಹಾಗೂ ಸಿಹಿ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.1
- ಹಲಗೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ. ಮಳವಳ್ಳಿ:- ತಮಿಳುನಾಡಿಗೆ ಮತ್ತೆ ಒಂಬತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದನ್ನು ವಿರೋಧಿಸಿ ತಮಿಳುನಾಡಿಗೆ ತಕ್ಷಣವೇ ನೀರುಬಿಡುತ್ತಿರುವುದನ್ನು ನಿಲ್ಲಿಸಿ, ರೈತರಿಗೆ ಬೆಳೆ ಬೆಳೆಯಲು ನೀರು ಬಿಡುವಂತೆ ಆಗ್ರಹಿಸಿ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಹಲಗೂರು ವೃತ್ತದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ಜುಲೈ 29ರಿಂದ ಆಗಸ್ಟ್ 24ರವರೆಗೆ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆಆದೇಶ ನೀಡಿದ ಹಿನ್ನೆಲೆ ನೀರು ಬಿಟ್ಟಿದ್ದರೂ ಸಹ, ನೆನ್ನೆಯಿಂದ ಮತ್ತೆ ಪ್ರತಿದಿನ9,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೊಸ ಆದೇಶ ನೀಡಿದೆ. ಇದು ನಮ್ಮ ರಾಜ್ಯದ ಜನರಿಗೆ, ಜಿಲ್ಲೆಯ ಜನತೆಗೆ, ನಮ್ಮ ನಾಡಿನ ರೈತರಿಗೆ, ಮರಣ ಶಾಸನ ವಿದ್ದಂತೆ. ಏಕೆಂದರೆ ಈಗಾಗಲೇ ಮುಂಗಾರು ಮಳೆ ಬಂದಿಲ್ಲ, ನಮ್ಮ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೂ ನಮ್ಮ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಈ ರಾಜ್ಯದ ರೈತರಿಗೆ ಬರ ಪರಿಹಾರ ನೀಡಿಲ್ಲ. ಆದುದರಿಂದ ನಾವು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿ, ಈ ರಾಜ್ಯದ ಜನರಿಗೆ ರೈತರ ವ್ಯವಸಾಯಕ್ಕಾಗಿ ನೀರು ಬಿಡಬೇಕಾಗಿದೆ. ತಪ್ಪಿದಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದ 30 ಸಂಸದರು ಕಾವೇರಿ ನೀರಿನ ವಿಚಾರದಲ್ಲಿ, ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗಿ ಎಂದರು. ಸ್ಥಳದಲ್ಲಿದ್ದ ನಾಡಕಚೇರಿ ಉಪ ತಹಸೀಲ್ದಾರ್ ಕೆ. ನಟರಾಜ್ ರವರಿಗೆ ಮನವಿಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅವರು ಮಾತನಾಡಿ, ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ,ಕೇಂದ್ರಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೇ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸಂತೋಷ್, ಚಂದ್ರು, ಬಸಂತ್ ಕುಮಾರ್, ಪೂರ್ಣಚಂದ್ರ ,ಮುನಿ ಮಹಾದೇವಸ್ವಾಮಿ, ವಾಸೀಮ್ಅಕ್ರಂ , ಅಬ್ದುಲ್ ರಹಮಾನ್, ರಿಯಾಜ್, ಸೇರಿದಂತೆ ಇತರರು ಇದ್ದರು1