ಫ್ಯಾಕ್ಟರಿ ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್; ಭೂಲೋಕದಿಂದಲೇ_ಹೊರಗೆ_ಕಳಿಸಿದ_ಕಾರ್ಮಿಕ! ಬೆಂಗಳೂರು,ಏ.01: ಕೆಲಸದಿಂದ ತೆಗೆದು ಹಾಕಿದ್ದಾನೆ ಎಂದು ಸಿಟ್ಟಿಗೆದ್ದ ಕಾರ್ಮಿಕನೊಬ್ಬ ಕಾರ್ಖಾನೆಯ ಮ್ಯಾನೇಜರ್ ಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ನಡರದಿದೆ. ರಾಜಗೋಪಾಲ ನಗರದ ತಿಗಳರಪಾಳ್ಯದಲ್ಲಿರುವ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ರಾಹುಲ್ ಎಂಬುವವರು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಫ್ಯಾಕ್ಟರಿಯಲ್ಲಿ ಆರೋಪಿ ಹನುಮಂತಪ್ಪ ಎಂಬಾತ ಈ ಹಿಂದೆ ಉದ್ಯೋಗಿಯಾಗಿದ್ದ. ಆದರೆ, ಕೆಲಸದ ವಿಚಾರವಾಗಿ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಮ್ಯಾನೇಜರ್ ರಾಹುಲ್ ಮತ್ತು ಹನುಮಂತಪ್ಪ ನಡುವೆ ಪದೇ ಪದೇ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದವು ಎನ್ನಲಾಗಿದೆ. ಇದೇ ಕಾರಣಕ್ಕೆ ಹನುಮಂತಪ್ಪ ಇತ್ತೀಚೆಗಷ್ಟೇ ತನ್ನ ಕೆಲಸವನ್ನು ತೊರೆದಿದ್ದನು. ಹಳೆಯ ವೈಷಮ್ಯವೇ ಮುಳುವಾಯ್ತು: ಕೆಲಸ ಬಿಟ್ಟಿದ್ದರೂ ಹನುಮಂತಪ್ಪನ ಮನಸ್ಸಿನಲ್ಲಿ ಮ್ಯಾನೇಜರ್ ರಾಹುಲ್ ವಿರುದ್ಧ ತೀವ್ರ ದ್ವೇಷವಿತ್ತು. ನಿನ್ನೆ ರಾತ್ರಿ ಈ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಪುನಃ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆಕ್ರೋಶಗೊಂಡ ಹನುಮಂತಪ್ಪ, ತನ್ನ ಬಳಿ ಇದ್ದ ಚಾಕುವಿನಿಂದ ರಾಹುಲ್ ಅವರಿಗೆ ಮನಬಂದಂತೆ ಇರಿದಿದ್ದಾನೆ. ಚಾಕು ಇರಿತದ ಭೀಕರತೆಗೆ ರಾಹುಲ್ ದೇಹದ ಮೇಲೆ ಗಂಭೀರ ಗಾಯಗಳಾಗಿ, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ಕೂಡಲೇ ಅಲ್ಲಿದ್ದವರು ಮತ್ತು ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ರಾಹುಲ್ ಅವರನ್ನ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಚಾಕು ಇರಿತದಿಂದಾಗಿ ಅತಿಯಾದ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

- Post by Ramesh Belur1
- ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ #JB_News_Kannada #ಬೆಳ್ತಂಗಡಿ1
- ಇಳಕಲ್ : ಇಲ್ಲಿನ ಎಸ್.ಆರ್.ಕೆ. ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರದAದು ಆಚರಿಸಲಾಯಿತು. ಈ ಸಮಯದಲ್ಲಿ ಜೈನ ಸಮಾಜದ ಅಧ್ಯಕ್ಷ ಸಜ್ಜನರಾಜ್ ಮೆಹತಾ, ಹಿರಿಯರಾದ ಗೌತಮ ಬೋರಾ, ರತ್ನಲಾಲಭಂಡಾರಿ, ಸಜ್ಜನರಾಜ ಸೋರಾನಾ, ಪವನ್ ಸೋರಾನಾ, ಸಂದೀಪ ಮೆಹತಾ, ಸ್ವಪ್ನಿಲ್ ಬೋರಾ, ಮನಿಶ್ ಕಠಾರಿಯಾ, ವಿಶಾಲ ಜೈನ್, ಅಂಕಿತ ಬೋರಾ, ಸುದೀಕ್ ಕಠಾರಿಯಾ , ಜಿತೇಂದ್ರ ಭಂಡಾರಿ, ಅನೂಜ್ ಬೋರಾ, ಕೆಪಿಸಿಸಿ ಆಚರಣೆ ಸಮಿತಿಯ ಮಂಜುನಾಥ ಸಪ್ಪರದ, ಖಾಜಾಬಿ ಸೋಲಾಪೂರ ಮತ್ತಿತರರು ಇದ್ದರು.1
- ಹುನಗುಂದ್ ಮತಕ್ಷೇತ್ರದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರು ಗೃಹ ಕಚೇರಿಯಲ್ಲಿ ಶ್ರೀ ಮಹಾವೀರ ಅವರ ಜಯಂತೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಮಾಜ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು.1
- ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ (18) ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ ಹಾಗೂ ಮೃತನ ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- ಗುಳೇದಗುಡ್ಡ: ಶ್ರೀರಾಮನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮದಿನವೆಂದು ಭಕ್ತರು ಪರಿಗಣಿಸುತ್ತಾರೆ. ರಾಮನು ಸತ್ಯ, ಧರ್ಮ, ಕರ್ತವ್ಯನಿಷ್ಠೆ ಮತ್ತು ಆದರ್ಶ ಜೀವನದ ಪ್ರತೀಕವಾಗಿದ್ದು, ರಾಮಾಯಣದಲ್ಲಿ ಶ್ರೀರಾಮನ ಜೀವನ ಮೌಲ್ಯಗಳ ಬಗ್ಗೆ ತಿಳಿಸಲಾಗಿದೆ. ರಾಮರಾಜ್ಯವು ನ್ಯಾಯ, ಸಮಾನತೆ ಮತ್ತು ಸುಖಶಾಂತಿಯ ಸಂಕೇತವಾಗಿದ್ದು, ಇಂತಹ ಆದರ್ಶ ಸಮಾಜ ನಿರ್ಮಾಣವಾಗಲು ಶ್ರೀ ರಾಮ ರಾಜ್ಯದಂತಹ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸುಜಾತಾ ಹುಳಿಪಲ್ಲೇದ ಹೇಳಿದರು. ಅವರು ಶ್ರೀರಾಮನವಮಿ ನಿಮಿತ್ತ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಗುಳೇದಗುಡ್ಡದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ಶ್ರೀರಾಮ ಜಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ರೀತಿ ರಾಘವೇಂದ್ರ ಮಠ, ಪಾಂಡುರಂಗ ದೇವಸ್ಥಾನ, ವಿಠ್ಠಲರುಕ್ಷ್ಮಿಣಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ ಸೇರಿದಂತೆ ಪಟ್ಟಣದ ಹಲವು ದೇವಸ್ಥಾನಗಳಲ್ಲಿ ಶ್ರೀರಾಮ ನಾಮಜಪ, ಪ್ರಾರ್ಥನೆ ಹಾಗೂ ರಾಮರಾಜ್ಯ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಿ ಮಾಡಲಾಯಿತು. ಪಟ್ಟಣದ ವಾಸವಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ ಪರ್ವತಿಕರ್, ಅಂಜನಾ ಪರ್ವತಿಕರ್, ರಮೇಶ್ ಚಿಲ್ಲಾಪುರ, ರಜನಿ ಚಿಲ್ಲಾಪುರ, ದಾಮೋದರ ಆಚಾರ್ಯ, ಶ್ರೀಧರ ನರೇಗಲ್, ಅನುಪಮಾ ಧಾರವಾಡ, ಸುರೇಖಾ ಧಾರವಾಡ, ಅನಿತಾ ಬಿಜಾಪುರ, ಸುಜಾತಾ ಬೋನಗಿರಿ, ಸ್ನೇಹಾ ನರೆಗಲ್, ಸನಾತನ ಸಂಸ್ಥೆಯ ಲತಾ ಬನ್ನಿ, ರುದ್ರಮ್ಮ ಬಳಿಗೇರ್, ಸ್ಮಿತಾ ಬನ್ನಿ, ಸುವರ್ಣಾ ಬಳಿಗೇರ, ತ್ರಿವೇಣಿ ಬಳಿಗೇರ, ರಾಜೇಶ್ವರಿ ಬಳಿಗೇರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಸೇರಿದಂತೆ 150 ಕ್ಕೂ ಅಧಿಕ ಜನರು ಉಪಸ್ಥಿತರಿದ್ದು, ಶ್ರೀರಾಮನ ನಾಮಜಪ ಮಾಡಿದರು. ಇದೇ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಗೆ ಸತ್ಸಂಕಲ್ಪಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು.3
- ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ ಸ್ವಯಂ ಜನಗಣತೆ..1
- ದೇವಸ್ಥಾನದಲ್ಲಿ ನೂಕುನುಗ್ಗಲು: ಎಂಟು ಮಂದಿ ಸಾವು, ಹಲವರಿಗೆ ಗಾಯ. #JB_News_Kannada1