logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ಮಂಗಳೂರು ತಹಶೀಲ್ದಾರ್ ಕರೆ ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿರುತ್ತದೆ. ಅದರಂತೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ. ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ಸದರಿ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ.ಇದು ಸುರಕ್ಷಿತವಾಗಿ ಇರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಏಪ್ರಿಲ್ 1 ರಿಂದ 15 ರವರಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಅನ್ ಲೈನ್ ನಲ್ಲಿ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು (SELF ENUMERATION ID) ಪಡೆಯಬಹುದಾಗಿರುತ್ತದೆ. ಹಾಗೂ ಪರಿಶೀಲನೆಗೆ ಬರುವ ಗಣತಿದಾರರಿಗೆ ಸದರಿ ಐಡಿಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿರುತ್ತದೆ. ತಮ್ಮ ಸ್ವಯಂ ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ. ಈ ಮೇರೆಗೆ ವಿಕಸಿತ ಭಾರತ @ 2047 ಅಡಿಪಾಯಕ್ಕೆ ಸಹಕರಿಸಲು ಮಂಗಳೂರು ತಾಲೂಕಿನ ಎಲ್ಲಾ ಸಾರ್ವಜನಿಕರು ತಾವೇ ಆನ್ ಲೈನ್ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಲು ಮಂಗಳೂರು ತಹಸೀಲ್ದಾರ್ ಪ್ರಕಟಣೆ ತಿಳಿಸಿದೆ.

16 hrs ago
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
16 hrs ago

ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ಮಂಗಳೂರು ತಹಶೀಲ್ದಾರ್ ಕರೆ ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿರುತ್ತದೆ. ಅದರಂತೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ. ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ಸದರಿ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ.ಇದು ಸುರಕ್ಷಿತವಾಗಿ ಇರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಏಪ್ರಿಲ್ 1 ರಿಂದ 15 ರವರಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಅನ್ ಲೈನ್ ನಲ್ಲಿ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು (SELF ENUMERATION ID) ಪಡೆಯಬಹುದಾಗಿರುತ್ತದೆ. ಹಾಗೂ ಪರಿಶೀಲನೆಗೆ ಬರುವ ಗಣತಿದಾರರಿಗೆ ಸದರಿ ಐಡಿಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿರುತ್ತದೆ. ತಮ್ಮ ಸ್ವಯಂ ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ. ಈ ಮೇರೆಗೆ ವಿಕಸಿತ ಭಾರತ @ 2047 ಅಡಿಪಾಯಕ್ಕೆ ಸಹಕರಿಸಲು ಮಂಗಳೂರು ತಾಲೂಕಿನ ಎಲ್ಲಾ ಸಾರ್ವಜನಿಕರು ತಾವೇ ಆನ್ ಲೈನ್ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಲು ಮಂಗಳೂರು ತಹಸೀಲ್ದಾರ್ ಪ್ರಕಟಣೆ ತಿಳಿಸಿದೆ.

More news from ಕರ್ನಾಟಕ and nearby areas
  • ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ರವಿವಾರ ಆರಂಭಗೊಂಡ ವಿಮಾನ ಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಂತೆ ಮುಂಬೈ ಪ್ರದೇಶಕ್ಕೆ ಆರು ವಿಮಾನಗಳು ಸಂಚರಿಸಲಿವೆ. ಸೋಮವಾರ ಮತ್ತು ಗುರುವಾರದಂದು ಮುಂಬೈ ಪ್ರದೇಶಕ್ಕೆ ಒಟ್ಟು 5 ವಿಮಾನಗಳು ಪ್ರಯಾಣಕ್ಕೆ ಲಭ್ಯವಾಗಲಿವೆ. ಈ ಪೈಕಿ ಇಂಡಿಗೋ ಸಂಸ್ಥೆಯಿಂದ ನವಿ ಮುಂಬೈ ಮತ್ತು ಮುಂಬೈಗೆ ತಲಾ ಎರಡು , ಏರ್ ಇಂಡಿಯಾ ಎಕ್ಸ್‌ನಿಂದ ಮುಂಬೈಗೆ 1 ವಿಮಾನ ಹಾರಾಟ ನಡೆಸಲಿದೆ.
    1
    ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ರವಿವಾರ ಆರಂಭಗೊಂಡ ವಿಮಾನ ಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಂತೆ ಮುಂಬೈ ಪ್ರದೇಶಕ್ಕೆ ಆರು ವಿಮಾನಗಳು ಸಂಚರಿಸಲಿವೆ.
ಸೋಮವಾರ ಮತ್ತು ಗುರುವಾರದಂದು ಮುಂಬೈ ಪ್ರದೇಶಕ್ಕೆ ಒಟ್ಟು 5 ವಿಮಾನಗಳು ಪ್ರಯಾಣಕ್ಕೆ ಲಭ್ಯವಾಗಲಿವೆ. ಈ ಪೈಕಿ ಇಂಡಿಗೋ ಸಂಸ್ಥೆಯಿಂದ ನವಿ ಮುಂಬೈ ಮತ್ತು ಮುಂಬೈಗೆ ತಲಾ ಎರಡು , ಏರ್ ಇಂಡಿಯಾ ಎಕ್ಸ್‌ನಿಂದ ಮುಂಬೈಗೆ 1 ವಿಮಾನ ಹಾರಾಟ ನಡೆಸಲಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    16 hrs ago
  • ಕಡೂರು : ಏ.2ರಂದು ಕಡೂರಿನಲ್ಲಿ  ಜಿಲ್ಲಾ ಮಟ್ಟದ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಸಮಾರಂಭವನ್ನು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ದೇವರ ದಾಸಿಮಯ್ಯ ಆಚರಣೆ ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ ಯೋಗೀಶ್ವರ ತಿಳಿಸಿದರು. ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸಭಾ ಕಾರ್ಯಕ್ರಮವು ಮಧ್ಯಾಹ್ನ 12ಗಂಟೆಗೆ ಪ್ರಾರಂಭವಾಗಲಿದೆ. ಸಮಾರಂಭಕ್ಕೂ ಮುನ್ನಾ  ಬೆಳಿಗ್ಗೆ 10ಗಂಟೆಗೆ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ಪೆಂಡಾಲ್ ವರೆಗೂ ದೇವರದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ. ಮೆರವಣಿಗೆ ನಡೆಸಲಾಗುತ್ತದೆ. ಹಂಪೆ ಹೇಮಕೂಟದ  ಶ್ರೀ ದಯಾನಂದ ಪುರಿ ಸ್ವಾಮೀಜಿ, ಹಾಗೂ  ಮಹಾರಾಷ್ಟ್ರ ಸೊಲ್ಲಾಪುರದ ಶ್ರೀ ಡಾ. ಅಭಿನವ ರಾಮಲಿಂಗ ಪಟ್ಟದೇವರು ಹಾಗೂ ಜಿಲ್ಲೆಯ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ದೇವಾಂಗ ಸಂಘದ  ತಾಲೂಕು ಅಧ್ಯಕ್ಷ ಎಚ್.ಎಲ್. ರಂಗನಾಥ್ ಮಾತನಾಡಿ, ಜಿಲ್ಲೆಯಾದ್ಯಂತ  ಸಮಾಜದ ಬಂಧುಗಳು ಇರುವ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.  ಜಿಲ್ಲಾದ್ಯಂತ 5,000ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಸಮಾವೇಶದಲ್ಲಿ ಪಟ್ಟಣದ ಪ್ರಖ್ಯಾತಿ ವೈದ್ಯರಾದ ಡಾ. ಛಾಯಾಪತಿ ಅವರಿಗೆ ದೇವಲ ಮಹರ್ಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು. ದೇವಾಂಗ ಸಮಾಜದ ಕಡೂರು ನಗರ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದಂತಹ ವಿಶಿಷ್ಟ ಕೊಡುಗೆ ನೀಡಿರುವ ದೇವರ ದಾಸಿಮಯ್ಯ ಅವರ 1046ನೇ ಜಯಂತಿಯನ್ನು  ಕಡೂರಿನಲ್ಲಿ ಶೈಕ್ಷಣಿಕ,‌ರಾಜಕೀಯ, ಸಾಮಾಜಿಕವಾಗಿ ಸಂಘಟನೆ ಮೂಲಕ ಜಿಲ್ಲಾ ಮಟ್ಟದಲ್ಲಿ ದೇವಾಂಗ ಜನ ಜಾಗೃತಿ ಮತ್ತು ಸಂಘಟನಾ ಸಮಾವೇಶವನ್ನು ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.‌ ಸಮಾವೇಶವನ್ನು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಲಿದ್ದಾರೆ.ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಮಾಜಿ ಸಚಿವರಾದ ಉಮಾಶ್ರೀ, ಎಂ ಡಿ ಲಕ್ಷ್ಮಿ ನಾರಾಯಣ್. ಶಾಸಕರುಗಳಾದ ಎಚ್ ಡಿ ತಮ್ಮಯ್ಯ. ಸಿ.ಟಿ ರವಿ, ಜಿ ಎಚ್ ಶ್ರೀನಿವಾಸ್, ಎಸ್. ಎಲ್ ಭೋಜೇಗೌಡ, ಮಾಜಿ ಶಾಸಕರಾದ ವೈಎಸ್‌ವಿ ದತ್ತ, ಬೆಳ್ಳಿಪ್ರಕಾಶ್ ಮುಂತಾದವರು ಭಾಗವಹಿಸಲಿದ್ದು,‌  ಸಾಹಿತಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್, ರಾಜ್ಯ ಸಹ ಕಾರ್ಯದರ್ಶಿ ಸಿ.ಎಸ್‌.‌ರವಿಕುಮಾರ್, ಕಾರ್ಯದರ್ಶಿ ಧನಪಾಲ್. ಎಚ್ ಎಲ್. ಶೇಖರಪ್ಪ. ಸಿಂಗಟಗೆರೆ ಸಿದ್ದಪ್ಪ. ಅರೆಕಲ್ ಪ್ರಕಾಶ್. ಎಚ್. ವೆಂಕಟೇಶ್ ಮೂರ್ತಿ. ಚಿಕ್ಕಪಟ್ಟಣಗೆರೆ ನಾಗರಾಜು, ಕುಮಾರಸ್ವಾಮಿ ಮತ್ತಿತರಿದ್ದರು.
    3
    ಕಡೂರು : ಏ.2ರಂದು ಕಡೂರಿನಲ್ಲಿ  ಜಿಲ್ಲಾ ಮಟ್ಟದ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಸಮಾರಂಭವನ್ನು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ದೇವರ ದಾಸಿಮಯ್ಯ ಆಚರಣೆ ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ ಯೋಗೀಶ್ವರ ತಿಳಿಸಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸಭಾ ಕಾರ್ಯಕ್ರಮವು ಮಧ್ಯಾಹ್ನ 12ಗಂಟೆಗೆ ಪ್ರಾರಂಭವಾಗಲಿದೆ. ಸಮಾರಂಭಕ್ಕೂ ಮುನ್ನಾ 
ಬೆಳಿಗ್ಗೆ 10ಗಂಟೆಗೆ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ಪೆಂಡಾಲ್ ವರೆಗೂ ದೇವರದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ. ಮೆರವಣಿಗೆ ನಡೆಸಲಾಗುತ್ತದೆ. ಹಂಪೆ ಹೇಮಕೂಟದ  ಶ್ರೀ ದಯಾನಂದ ಪುರಿ ಸ್ವಾಮೀಜಿ, ಹಾಗೂ  ಮಹಾರಾಷ್ಟ್ರ ಸೊಲ್ಲಾಪುರದ ಶ್ರೀ ಡಾ. ಅಭಿನವ ರಾಮಲಿಂಗ ಪಟ್ಟದೇವರು ಹಾಗೂ ಜಿಲ್ಲೆಯ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ದೇವಾಂಗ ಸಂಘದ  ತಾಲೂಕು ಅಧ್ಯಕ್ಷ ಎಚ್.ಎಲ್. ರಂಗನಾಥ್ ಮಾತನಾಡಿ, ಜಿಲ್ಲೆಯಾದ್ಯಂತ 
ಸಮಾಜದ ಬಂಧುಗಳು ಇರುವ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.  ಜಿಲ್ಲಾದ್ಯಂತ 5,000ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಸಮಾವೇಶದಲ್ಲಿ ಪಟ್ಟಣದ ಪ್ರಖ್ಯಾತಿ ವೈದ್ಯರಾದ ಡಾ. ಛಾಯಾಪತಿ ಅವರಿಗೆ ದೇವಲ ಮಹರ್ಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ದೇವಾಂಗ ಸಮಾಜದ ಕಡೂರು ನಗರ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದಂತಹ ವಿಶಿಷ್ಟ ಕೊಡುಗೆ ನೀಡಿರುವ ದೇವರ ದಾಸಿಮಯ್ಯ ಅವರ 1046ನೇ ಜಯಂತಿಯನ್ನು  ಕಡೂರಿನಲ್ಲಿ ಶೈಕ್ಷಣಿಕ,‌ರಾಜಕೀಯ, ಸಾಮಾಜಿಕವಾಗಿ ಸಂಘಟನೆ ಮೂಲಕ ಜಿಲ್ಲಾ ಮಟ್ಟದಲ್ಲಿ ದೇವಾಂಗ ಜನ ಜಾಗೃತಿ ಮತ್ತು ಸಂಘಟನಾ ಸಮಾವೇಶವನ್ನು
ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.‌ ಸಮಾವೇಶವನ್ನು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಲಿದ್ದಾರೆ.ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಮಾಜಿ ಸಚಿವರಾದ ಉಮಾಶ್ರೀ, ಎಂ ಡಿ ಲಕ್ಷ್ಮಿ ನಾರಾಯಣ್. ಶಾಸಕರುಗಳಾದ ಎಚ್ ಡಿ ತಮ್ಮಯ್ಯ. ಸಿ.ಟಿ ರವಿ,
ಜಿ ಎಚ್ ಶ್ರೀನಿವಾಸ್, ಎಸ್. ಎಲ್ ಭೋಜೇಗೌಡ, ಮಾಜಿ ಶಾಸಕರಾದ ವೈಎಸ್‌ವಿ ದತ್ತ, ಬೆಳ್ಳಿಪ್ರಕಾಶ್ ಮುಂತಾದವರು ಭಾಗವಹಿಸಲಿದ್ದು,‌  ಸಾಹಿತಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್, ರಾಜ್ಯ ಸಹ ಕಾರ್ಯದರ್ಶಿ ಸಿ.ಎಸ್‌.‌ರವಿಕುಮಾರ್, ಕಾರ್ಯದರ್ಶಿ ಧನಪಾಲ್. ಎಚ್ ಎಲ್. ಶೇಖರಪ್ಪ. ಸಿಂಗಟಗೆರೆ ಸಿದ್ದಪ್ಪ. ಅರೆಕಲ್ ಪ್ರಕಾಶ್. ಎಚ್. ವೆಂಕಟೇಶ್ ಮೂರ್ತಿ. ಚಿಕ್ಕಪಟ್ಟಣಗೆರೆ ನಾಗರಾಜು, ಕುಮಾರಸ್ವಾಮಿ ಮತ್ತಿತರಿದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    2 hrs ago
  • ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.
    1
    ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ.
ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. 
ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    16 hrs ago
  • ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    3
    ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ.
ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    20 hrs ago
  • Post by Md Aleemulla Shariff
    1
    Post by Md Aleemulla Shariff
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    10 hrs ago
  • EID HARMONY GATHERING HELD @ MILAN FUNCTION HALL IN MYSURU Organised by jamat e Islami HIND #kvnews
    1
    EID HARMONY GATHERING HELD @ MILAN FUNCTION HALL IN MYSURU Organised by jamat e Islami HIND #kvnews
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    11 hrs ago
  • ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಾನೆಗಳು ದಾಂಧಲೆ ನಡೆಸಿವೆ. ಮುಖ್ಯ ರಸ್ತೆಗೆ ಬಂದು ಅಡ್ಡಾಡಿಡ್ಡಿ ಓಡಿದ ಕಾಡಾನೆಗಳು ಕೆಲಕಾಲ ಆತಂಕ ಸೃಷ್ಟಿಸಿವೆ. ಕಾಡಾನೆ ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂಧಿಗಳು ಇದ್ದ ಜೀಪ್ ಜಖಂಗೊಳಿಸಿದೆ. ಅದೃಷ್ಟವಶಾತ್ ಜೀಪ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊನೆಗೂ ಕಾಡಿಗೆ ಆನೆಗಳನ್ನು ಓಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿದ್ದಾರೆ.
    1
    ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಾನೆಗಳು ದಾಂಧಲೆ ನಡೆಸಿವೆ.
ಮುಖ್ಯ ರಸ್ತೆಗೆ ಬಂದು ಅಡ್ಡಾಡಿಡ್ಡಿ ಓಡಿದ ಕಾಡಾನೆಗಳು ಕೆಲಕಾಲ ಆತಂಕ ಸೃಷ್ಟಿಸಿವೆ.
ಕಾಡಾನೆ ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂಧಿಗಳು ಇದ್ದ ಜೀಪ್ ಜಖಂಗೊಳಿಸಿದೆ. 
ಅದೃಷ್ಟವಶಾತ್ ಜೀಪ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊನೆಗೂ ಕಾಡಿಗೆ ಆನೆಗಳನ್ನು ಓಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿದ್ದಾರೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • ನೀರಿನ ತೋಡನ್ನು ಮುಚ್ಚಿದ ವಿಷಯಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊರ್ವ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ರವಿವಾರ ಘಟನೆ ನಡೆದಿದೆ. ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ (56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
    1
    ನೀರಿನ ತೋಡನ್ನು ಮುಚ್ಚಿದ ವಿಷಯಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊರ್ವ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ರವಿವಾರ ಘಟನೆ ನಡೆದಿದೆ.
ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ (56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.