Shuru
Apke Nagar Ki App…
ಈದ್ ಮಿಲಾದ ಹಬ್ಬ ; ನಾವೆಲ್ಲರೂ ಒಂದೇ ಎಂದು ಹೇಳಿದ ಸವಿತಾ ಅಶೋಕ ಚಲವಾದಿ ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ಯವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು. ದಾರಿಯಲ್ಲಿ ತಂಪು ಪಾನೀಯವನ್ನು ವಿತರಿಸಿ ಮಾತನಾಡಿದ ಸಮಾಜ ಸೇವಕಿ ಸವಿತಾ ಅಶೋಕ್ ಚಲವಾದಿ ಮಾತನಾಡಿ ಹಿಂದೂ ಮುಸ್ಲಿಂ ಎಂಬ ಬೇಧ ಮಾಡದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇದ್ದೇವೆ. ಮುಂದು ಇರುತ್ತೇವೆ ಎಂಬ ಸಂದೇಶವನ್ನು ನೀಡಿದರು.
ಶರಣಗೌಡ ಕಂದಕೂರ
ಈದ್ ಮಿಲಾದ ಹಬ್ಬ ; ನಾವೆಲ್ಲರೂ ಒಂದೇ ಎಂದು ಹೇಳಿದ ಸವಿತಾ ಅಶೋಕ ಚಲವಾದಿ ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ಯವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು. ದಾರಿಯಲ್ಲಿ ತಂಪು ಪಾನೀಯವನ್ನು ವಿತರಿಸಿ ಮಾತನಾಡಿದ ಸಮಾಜ ಸೇವಕಿ ಸವಿತಾ ಅಶೋಕ್ ಚಲವಾದಿ ಮಾತನಾಡಿ ಹಿಂದೂ ಮುಸ್ಲಿಂ ಎಂಬ ಬೇಧ ಮಾಡದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇದ್ದೇವೆ. ಮುಂದು ಇರುತ್ತೇವೆ ಎಂಬ ಸಂದೇಶವನ್ನು ನೀಡಿದರು.
More news from ಕರ್ನಾಟಕ and nearby areas
- ಇಳಕಲ್ ನಗರದಲ್ಲಿ ಟಾಕ್ಸಿಕ್ ಸಿನಿಮಾ ಭರ್ಜರಿ ಓಪನಿಂಗ್ ; ಅಭಿಮಾನಿಗಳಿಂದ ಉತ್ತಮ ಪ್ರಶಂಸೆ. ಇಳಕಲ್ ನಗರದಲ್ಲಿ ಟಾಕ್ಸಿಕ್ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ನಗರದ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮೊದಲನೇ ಶೋ ದಿಂದ ಸಂಜೆಯ ಶೋ ವರೆಗೂ ಹೌಸ್ ಫುಲ್ ಪ್ರದರ್ಶನ ಕಂಡಿತು. ಟಿಕೆಟ್ ಸಿಗದೇ ಕೆಲವು ಅಭಿಮಾನಿಗಳು, ಮಂತರದ ನೋಡಿದರಾಯ್ತು ಎಂದು ವಾಪಸಾದ ಘಟನೆಗಳು ನಡೆದವು.1
- ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ಗುಳೇದಗುಡ್ಡ: ಪಟ್ಟಣದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ನಿಮಿತ್ತವಾಗಿ ಬುಧವಾರ ಪವಿತ್ರ ಈದ್ ಮಿಲಾದ್ ಹಬ್ಬದ ಅದ್ದೂರಿ ಮೆರವಣಿಗೆ ನಡೆಯಿತು. ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆ ಪಟ್ಟಣದ ಭಾಗವಾನ್ ಪೇಟೆಯಿಂದ ಆರಂಭವಾಗಿ ಪವಾರ್ ಕ್ರಾಸ್, ಪುರಸಭೆ, ಸರಾಫಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಭಾಗವಾನ್ ಪೇಟೆಗೆ ತಲುಪಿತು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಹಾಗೂ ಸಮಾಜದ ಮುಖಂಡರಾದ ಮುಬಾರಕ್ ಮಂಗಳೂರು, ಅಂಜುಮನ್ ಕಮೀಟಿ ಅಧ್ಯಕ್ಷ ರಜಾಕ್ ಕುದರಿ, ಸಾಧನಿ ಭಾಷಾ, ಮಶಾಕ್ ನಲವತ್ತವಾಡ, ಜಾವಿದ್ ಮೊಮಿನ್, ಜಿಲಾನಿ ಮುಜಾಹಿದ್, ರಫಿಕ್ ಕಲ್ಬುರ್ಗಿ, ದೇವರಾಜ ಕಟ್ಟಿಮನಿ, ಗೋವಿಂದ ರಾಠೋಡ, ರಫಿಕ್ ಮಕನದಾರ, ಮೋದಿನಸಾಬ್ ಸದರಿ, ರೀಯಾಜ್ ಚೊಳಚಗುಡ್ಡ, ಗುಲಾಮ್ ಹುಸೇನ್ ಇಲ್ಲಕಲ್, ಅಲ್ಲಾಸಾಬ ದೋಟೆಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಮುಖ್ಯಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಬಾರಕ್ ಮಂಗಳೂರ ಅವರು ಸನ್ಮಾನಿಸಿದರು.2
- ಈದ್ ಮಿಲಾದ್: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮುದಗಲ್: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ ಪೈಗಂಬರರ ಜನ್ಮದಿನದ ಸ್ಮರಣಾರ್ಥ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಮುದಗಲ್ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಬುಧವಾರ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಜುನೈದಿ ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ರೋಗಿಗಳ ಆರೋಗ್ಯ ವಿಚಾರಿಸಿದ ಮುಖಂಡರು, ಹಬ್ಬದ ಸಂದರ್ಭದಲ್ಲಿ ಮಾನವೀಯ ಸೇವೆಯ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ, ಮುದಗಲ್ ಪಟ್ಟಣ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು. ಹಿಂದೂ-ಮುಸ್ಲಿಂ ಸಮುದಾಯದವರು ಮೊಹರಂ ಸೇರಿದಂತೆ ವಿವಿಧ ಹಬ್ಬಗಳನ್ನು ಪರಸ್ಪರ ಸಹಕಾರ ಹಾಗೂ ಸೌಹಾರ್ದತೆಯಿಂದ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಪ್ರವಾದಿಯವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಮುಸ್ಲಿಂ ಸಮುದಾಯದವರು ಸಹೋದರತ್ವ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು. ಮುಖಂಡ ಗುರುಬಸಪ್ಪ ಸಜ್ಜನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯಿಂ ಮಾತನಾಡಿ, ಧರ್ಮ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಮಾನವೀಯತೆಯಿಂದ ಬದುಕಬೇಕು. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ಹಾಗೂ ಪರಸ್ಪರ ಸಹಕಾರ ನೀಡುವುದು ಅಗತ್ಯ. ಪ್ರವಾದಿಯವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ನಡೆದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಸಬೇಕು ಎಂದರು. ಮುದಗಲ್‌ನಲ್ಲಿ ಹಬ್ಬ-ಹರಿದಿನಗಳನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದೇವಿಂದ್ರ ವಕೀಲ್, ಎಸ್ವೆನ್ ಖಾದ್ರಿ, ಮೈಬೂಬು ಕಡ್ಡಿಪುಡಿ, ಹುಸೇನ್ ಪಾಶಾ, ಮಂಜುನಾಥ ಬನ್ನಿಗೋಹುಸೇನ್,ಅಹ್ಮಿದ್ ಜಮಿನ್ದಾರ್,ಬಸವರಾಜ ಹಿರೆಮನಿ, ಮಾಬು ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ.. ಎಚ್ಚರಿಕೆ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ..1
- ಬಾಗಲಕೋಟೆ ನಗರದಲ್ಲಿ ಸಡಗರ ಸಂಭ್ರಮದಿಂದ ಈದ್ ಮಿಲಾದ್ ಆಚರಿಸಲಾಯಿತು.1
- ನೋಡಿ ಕಾರೊಂದು ಕೆರೆಯೊಳಗೆ ಉರುಳಿಬಿದ್ದಿದೆ. ನೀರಿನೊಳಗೆ ಮುಳುಗುತ್ತಿದ್ದ ಕಾರಿನಲ್ಲಿದ್ದವರನ್ನು ಸ್ಥಳೀಯರು ತಕ್ಷಣ ಕಾರಿನೊಳಗಿದ್ದವರನ್ನು ರಕ್ಷಿಸಿದ್ದಾರೆ..1
- ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ;ನಾಳೆ ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಸ್ಥಾನದ ವರೆಗೆ ಅಭಿಮಾನಿಗಳಿಂದ ಪಾದಯಾತ್ರೆ.. ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ;ನಾಳೆ ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಸ್ಥಾನದ ವರೆಗೆ ಅಭಿಮಾನಿಗಳಿಂದ ಪಾದಯಾತ್ರೆ.. ವಿಜಯಾನಂದ ಎಸ್ ಕಾಶಪ್ಪನವರ ಅಭಿಮಾನಿ ಬಳಗವು ವಿಜಯಾನಂದ ಕಾಶಪ್ಪನವರು ಸಚಿವ ಸ್ಥಾನ ಸಿಗಲೆಂದು ಬಾದಾಮಿಯ ಬನಶಂಕರಿ ದೇವಿಯಲ್ಲಿ ಪಾದಯಾತ್ರೆ ಬರುತ್ತೇವೆ ಎಂದು ಅಭಿಮಾನಿಗಳು ಹಾಗೂ ಯುನಿಯನ್ ಸಾಂಸ್ಕೃತಿಕ & ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ಹರಕೆ ಹೊತ್ತಿದ್ದರು ಅದರಂತೆ ಸಚಿವ ಸ್ಥಾನ ದೊರೆತ ಹಿನ್ನೆಲೆ ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಿಯ ದೇವಸ್ಥಾನದವರೆಗೂ ಅಭಿಮಾನಿಗಳು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಸಚಿವರ ಅಭಿಮಾನಿಗಳು ತಿಳಿಸಿದರು.4
- ಭೂತ ನಾಳ ಕೆರೆಯಲ್ಲಿ (6) ಶವಗಳು ಪತ್ತೆಯಾಗಿವೆ ವಿಜಾಪುರ್ ನಗರದ ಹೊರ ಭಾಗದಲ್ಲಿರುವ ಭೂತ್ನಾಳ ಕೆರೆ ಕೌಟಂಬಿಕಾ ಕಲಹ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಆಗಸ್ಟ್ 24 ಮಿಸ್ಸಿಂಗ್ ಆದವರು ಶವವಾಗಿ ಪತ್ತೆಯಾಗಿದೆ1