ಸುಣ್ಣದ ಗುಮ್ಮಿಗಳ ಹೊಗೆಯಿಂದ ಮುಕ್ತಿ ಕೊಡಿ . ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ. ಚಿತ್ರದುರ್ಗ: ನಗರದ ಜೋಗಿ ಮಟ್ಟಿ ರಸ್ತೆಯ ಕೋಟೆ ಅಗಳ ಪ್ರದೇಶದಲ್ಲಿರುವ ಸುಣ್ಣದ ಗುಮ್ಮಿಗಳ ವಿಷಕಾರಿ ಹೋಗೆ ಹಾಗೂ ಧೂಳಿನಿಂದ ಸ್ಥಳೀಯ ನಿವಾಸಿಗಳು ಅನಾರೋಗ್ಯಕ್ಕಿಡಾಗುತ್ತಿದ್ದು. ಜನವಸತಿ ಪ್ರದೇಶದಲ್ಲಿರುವ ಗುಮ್ಮಿಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ, ಸುತ್ತಮುತ್ತಲಿನ ಪ್ರದೇಶದ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ..ಸುಣ್ಣದ ಗುಮ್ಮಿಗಳಿಗೆ ಬೆಂಕಿ ಹಚ್ಚುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ಹಾಗೂ ಹೊಗೆ. ಆವರಿಸಿಕೊಂಡಿತ್ತು .ಒಬ್ಬರಿಗೊಬ್ಬರು ಕಾಣದ ರೀತಿಯಲ್ಲಿ ಮಂಜಿನಂತೆ ಧೂಳು ಬೆರೆತುಕೊಂಡಿತ್ತು .ಇದರಿಂದ ವಿವಿಧ ಸಂಘಟನೆಗಳು ಮುಖಂಡರು ಅಗಳ ಪ್ರದೇಶದಲ್ಲಿ ಗುಮ್ಮಿಗಳ ಬಳಿ ತೆರಳಿ ಪ್ರತಿಭಟನೆ ನಡೆಸಿದರು. ಜನರ ಆರೋಗ್ಯ ಹಾಳು ಮಾಡುತ್ತಿರುವ ಗುಮ್ಮಿಗಳನ್ನು ತರುವು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.. ಸ್ಥಳಕ್ಕೆ ಆಗಮಿಸಿದ ಶಾಸಕ ಕೆ ಸಿ. ವೀರೇಂದ್ರ ಪಪ್ಪಿ ಸುಣ್ಣದ ಗುಮ್ಮಿಗಳಿರುವ ಸ್ಥಳವನ್ನು ಪರಿಶೀಲನೆ ನಡೆಸಿ ಸ್ಥಳೀಯರ ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ನಂತರ ಮಾತನಾಡಿ. ಇನ್ನು ಮೂರು ದಿನದ ಒಳಗಾಗಿ ಸುಣ್ಣದ ಗುಮ್ಮಿಗಳನ್ನ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಕೂಡಲೇ ಪರ್ಯಾಯ ಜಾಗ ಗುರಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ . ಹೊಗೆ ಹಾಗೂ ಧೂಳಿನಿಂದ ಜನರಿಗೆ ತೀವ್ರ ತೊಂದರೆಯಾಗುವುದು ನನ್ನ ಗಮನಕ್ಕೆ ಬಂದಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ನಾವು ಕೂಡ ಸ್ಥಳಾಂತರಕ್ಕೆ ಸಿದ್ಧರಾಗಿದ್ದೇವೆ ಎಂದು ಸುಣ್ಣ ತಯಾರಕರು ಸಹ ತಿಳಿಸಿದ್ದಾರೆ ಎಂದರು.

- ಪಾವಗಡ ತಾಲೂಕಿನ ಪತ್ರಕರ್ತನ ಮೇಲೆ ಮಹಿಳೆಯರ ಹಲ್ಲೆ ಖಂಡಿಸಿ ತಹಶೀಲ್ದಾರ್ ಗೆ ಮನವಿ ಚಳ್ಳಕೆರೆ:ಪಾವಗಡ ತಾಲೂಕಿನ ಸ್ಥಳೀಯ ಪತ್ರಕರ್ತ ರಾಮಾಂಜನೇಯರವರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ತಾಲೂಕು ಪತ್ರಕರ್ತರ ಗೆಳೆಯರ ಬಳಗ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಪತ್ರಕರ್ತ ಕೊರಲಕುಂಟೆ ತಿಪ್ಪೇಸ್ವಾಮಿ ಇತ್ತೀಚಿನ ದಿನಗಳಲ್ಲಿ ವರದಿಗಾರರ ಮೇಲೆ ಹಾಡು ಹಗಲೇ ಹಲ್ಲೇ ಮಾಡುವುದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸುವುದು ಸರ್ವೇಸಾಮಾನ್ಯವಾಗಿದ್ದು ರಾಜಕಾರಣಿಗಳ ಅಧಿಕಾರಿಗಳ ಭ್ರಷ್ಟಾಚಾರವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಕ್ರಿಯಾಶೀಲವಾಗಿರುವ ಸರ್ಕಾರದ ರಕ್ಷಣೆ ಇಲ್ಲದಿದ್ದರೂ ತಮ್ಮ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಘಟನೆಗಳು ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿವೆ ಇದಕ್ಕೆ ಪೂರಕವಾಗಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಮಾಂಜನೇಯ ಎಂಬ ಪತ್ರಿಕಾ ಸಂಪಾದಕರ ಮೇಲೆ ಮಹಿಳೆಯರು ಚಪ್ಪಲಿಯಿಂದ ಹೊಡೆದಿರುವುದು ಮಹಿಳಾ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಯಾವುದೇ ವ್ಯಕ್ತಿ ತಪ್ಪು ಮಾಡಿದ್ದರೆ ಅಂತಹವರನ್ನು ಶಿಕ್ಷಿಸಲು ಕಾನೂನು ಇದೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಅಕ್ರಮ ಅಪರಾಧವಾಗಿದೆ ಮಹಿಳೆಯರಿಗೆ ಮೀಸಲಾತಿ ದೊರಕಿಸಿಕೊಡುವಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದ್ದು ಇಂತಹವರ ಮೇಲೆ ಹಲ್ಲೆ ಮಾಡಿರುವುದು ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಕೂಡಲೇ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಕರ್ತ ಸುರೇಶ ಬೆಳಗೆರೆ ಮಾತನಾಡಿ. ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಸಮಾಜ ತಲೆತಗ್ಗಿಸುವಂತಹ ಕೆಲಸವಾಗಿದೆ . ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಪತ್ರಕರ್ತರಿಗೆ ಹೆಚ್ಚಿನ ಭದ್ರತೆ ಬೇಕಿದೆ. ಸಮಾಜದಲ್ಲಿ ನಡೆಯುವಂತಹ ಅನ್ಯಾಯಗಳನ್ನ ಎತ್ತಿ ಹಿಡಿಯುವ ಪತ್ರಕರ್ತರಿಗೆ ಭದ್ರತೆ ಇಲ್ಲದಂತಾಗಿದೆ ಕೊಡಲೇ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.. ಸಾಮಾಜಿಕ ಹೋರಾಟಗಾರ ಮೈತ್ರಿ ದ್ಯಾಮಣ್ಣ ಮಾತನಾಡಿ ಪತ್ರಕರ್ತವನ್ನು ಸಂವಿಧಾನದ ನಾಲ್ಕನೇ ಅಂಗಕ್ಕೆ ಹೋಲಿಸುತ್ತಾರೆ ಅಂತಹವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ಖಂಡಿಸುವಂಥದ್ದು ಅನಂತ್ ಕುಮಾರ್ ಹೆಗಡೆ ಅಂತಹ ರಾಜಕಾರಣಿಗಳು ಪತ್ರಕರ್ತರನ್ನು ತೀರ ಕೆಳಮಟ್ಟದಲ್ಲಿ ನಿಂದಿಸಿರುವುದನ್ನು ನೋಡಿದ್ದೇವೆ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕ ಜೀವನದ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುತ್ತಾರೆ ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪತ್ರಕರ್ತರನ್ನು ತಮ್ಮ ಕುಟುಂಬದ ಬಂಧುವಿನಂತೆ ಗೌರವಿಸುವುದು ಮಹಿಳೆಯರ ಧರ್ಮ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅತ್ಯಾಚಾರ ಇತರೆ ಸಂಬಂಧಿಸಿದ ಎಷ್ಟೋ ಆಪಾದನೆಗಳನ್ನು ಕಾನೂನು ವ್ಯಾಪ್ತಿಗೆ ತಂದು ಶಿಕ್ಷಿಸುವಲ್ಲಿ ಪತ್ರಕರ್ತರ ಗಣನೀಯ ಪಾತ್ರ ವಹಿಸುತ್ತಾರೆ ವೇಶ್ಯಾವಾಟಿಕೆ ಬಾಲ್ಯ ವಿವಾಹದಂತ ಸಾಮಾಜಿಕ ಪಿಡುಗುಗಳ ವಿರುದ್ಧ ಪತ್ರಕರ್ತರು ವರದಿ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ ಇಂತಹ ಅಮಾನವೀಯ ಘಟನೆ ಸಹಿಸಲು ಸಾಧ್ಯವಿಲ್ಲ ಸಂತ್ರಸ್ತ ಸಂಪಾದಕರಿಗೆ ಮತ್ತು ಅವರ ಕುಟುಂಬದವರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಿ ಹಾಗೂ ಪರಿಹಾರ ಒದಗಿಸಬೇಕು ಇಂತಹ ಪ್ರಕರಣಗಳು ಮುಂದೆ ಮರುಕಳಿಸಿದಂತೆ ಪತ್ರಕರ್ತರಿಗೆ ರಕ್ಷಣೆ ನೀಡಿ ಕಟ್ಟನಟ್ಟಿನ ಕ್ರಮ ಜರುಗಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಬೆಳಗೆರೆ ಸುರೇಶ್ ಕೆ ರಾಮಾಂಜನೇಯ ರಘುನಾಗ್, ಟಿ ವಸಂತಪ್ಪ ದೊಡ್ಡ ಉಳ್ಳಾರ್ತಿ ಕರಿಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.2
- *ಬೆಂಗಳೂರು, ಜನವರಿ 8:-* ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ನೂತನವಾಗಿ ನಿರ್ಮಾಣವಾಗಿರುವ ಚಾಮರಾಜಪೇಟೆ ಪೊಲೀಸ್ ಠಾಣೆಯ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದ ರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜೊತೆಗೂಡಿ ಉದ್ಘಾಟನೆಯನ್ನು ನೆರವೇರಿಸಿದರು.1
- ಬೆಂಕಿ ಗುರು 💥 ♥️ Follow:- mysore__adda.ka091
- ಚಿತ್ರದುರ್ಗ:ಮದುವೆಗೆಮುನ್ನ ದುಡುಕಿ ನಿರ್ಧಾರತೆಗೆದುಕೊಂಡರೆ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಿಲ್ಲ ಡಾ. ರೂಪಶ್ರೀ ಬಿ.ವೈ1
- ಅಪರಾಧ ತಡೆ ಜಾಗೃತಿಗಾಗಿ ಜಿಲ್ಲಾ ಪೊಲೀಸ್ ಇಲಾಖೆಯ ಮಾಡಿದ್ದೇನು ಗೊತ್ತೇ???? ನೋಡಿದ್ರೆ ಅಚ್ಚರ್ಯ1
- ದುರ್ಗದ ಹುಲಿ ಪೈಲ್ವಾನ್ ನಂಜಪ್ಪ: ನಿಜಾಮನ ಮುಂದೆ ಮೆರೆದ ಕುಸ್ತಿ ಕೌಶಲ್ಯ!1
- ಬಡ್ಡಿ ಜಾಸ್ತಿ ಧರ್ಮಸ್ಥಳ ಸಂಘದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮಹಿಳೆಯರು ಆಕ್ರೋಶ1