ಗಂಗನದಡ್ಡಿ: ಎಲ್‌ಟಿಎಫ್ ತಂಡದಿಂದ ಚಿರತೆ ಸೆರೆ ಕಾರ್ಯಾಚರಣೆ ಆರಂಭ ಗುರುವಾರ ಮಲೆಮಹದೇಶ್ವರ ವನ್ಯಧಾಮದ ಡಿಎಫ್‌ಒ ಭಾಸ್ಕರ್ ಅವರು ಹನೂರು ತಾಲ್ಲೂಕಿನ ಗಂಗನದಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಚಿರತೆಯನ್ನು ಹಿಡಿಯಲು ಮೈಸೂರಿನಿಂದ ಎಲ್‌ಟಿಎಫ್ (ಲೆಪರ್ಡ್ ಟಾಸ್ಕ್ ಫೋರ್ಸ್) ತಂಡವನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಎಲ್‌ಟಿಎಫ್ ತಂಡ ಗಂಗನದಡ್ಡಿ ಗ್ರಾಮಕ್ಕೆ ಆಗಮಿಸಿದ್ದು, ಅರಣ್ಯ ಸಿಬ್ಬಂದಿಯ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದೆ. ಡ್ರೋನ್ ಬಳಸಿ ಪರಿಶೀಲನೆ ನಡೆಸಿದ ವೇಳೆ ಎರಡು ಚಿರತೆಗಳು ಇರುವುದನ್ನು ಪತ್ತೆಹಚ್ಚಲಾಗಿದ್ದು, ಅವುಗಳನ್ನು ಸೆರೆ ಹಿಡಿಯಲು ಮುಂದಿನ ಹಂತದ ಕಾರ್ಯಾಚರಣೆ ಮುಂದುವರಿದಿದೆ. ಈ ಕುರಿತು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, “ಚಿರತೆ ಹಾವಳಿಯಿಂದ ಗ್ರಾಮಸ್ಥರು ಹಾಗೂ ರೈತರು ಭಯದಲ್ಲಿದ್ದು, ಅರಣ್ಯ ಇಲಾಖೆ ತ್ವರಿತವಾಗಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿದು ಗ್ರಾಮಸ್ಥರಿಗೆ ರಕ್ಷಣೆಯ ಭರವಸೆ ನೀಡಬೇಕು” ಎಂದರು

- *ಭಾರತ ನಲ್ಲಿ ವೈರಲ್*1
- ಚಿಕ್ಕಬಳ್ಳಾಪುರ ನೂತನ ಜಿಲ್ಲಾಧಿಕಾರಿಯಾಗಿ ಜಿ.ಪ್ರಭು ಅಧಿಕಾರ ಸ್ವೀಕಾರ! ಪಿ.ಎನ್. ರವೀಂದ್ರ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ!1
- ಹೊಸ ವರ್ಷಾಚರಣೆ ಹಿನ್ನೆಲೆ ಐತಿಹಾಸಿಕ ಕೋಟೆಗೆ ದಾಂಗುಡಿ ಇಟ್ಟ ಪ್ರವಾಸಿಗರು1
- ಬ್ಯಾನರ್ ಪಾಲಿಟಿಕ್ಸ್ ಯುವಕ ಬಲಿ.ಪೋಲೀಸರಿಂದ ಲಾಠಿ ಚಾರ್ಜ್..1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ರಸ್ತೆ ನಿರ್ಮಾಣದಲ್ಲಿ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ #ಅಮಾಯಕರ_ಸಾವಿಗೆ_ಕಾರಣರಾದ ರಸ್ತೆ ಇಂಜಿನಿಯರ್.... ಪ್ರಶ್ನೆ ಮಾಡಿದ ಕೆ ಆರ್ ಎಸ್ ಪಕ್ಷ.... ಸದ್ಯದಲ್ಲೇ ರಸ್ತೆಗೆ ಸುರಕ್ಷಿತ ಕ್ರಮಗಳ ಅಳವಡಿಕೆಗೆ ಕ್ರಮ...1
- ಹನೂರು: ತಾಲೂಕಿನ ಮಹದೇಶ್ವರಬೆಟ್ಟವನ್ನು ಸಂಪೂರ್ಣ ಪ್ಲಾಸ್ಟಿಕ್‌ಮುಕ್ತ ಕ್ಷೇತ್ರವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಮೈಸೂರಿನಿಂದ ಪರಿಸರ ಹೋರಾಟಗಾರ ಮಂಜುನಾಥ್ ಅವರು ಮಹದೇಶ್ವರಬೆಟ್ಟದವರೆಗೆ ಸೈಕಲ್ ಜಾಥಾ ಹಮ್ಮಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಹನೂರಿನ ಕೆಂಪೇಗೌಡ ಸರ್ಕಲ್ ನಲ್ಲಿ ಮಾತನಾಡಿದ ಅವರು, ನಮ್ಮ ಪರಿಸರ ವಾರಿಯರ್ಸ್ ಗ್ರೂಪ್ ವತಿಯಿಂದ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಭಕ್ತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಗತ್ಯವಾಗಿದೆ. ಪರಿಸರ ಸ್ನೇಹಿ ಪಾದಯಾತ್ರೆಗೆ ಒತ್ತು ನೀಡಿದರೆ ಮಾದಪ್ಪನ ಕ್ಷೇತ್ರವನ್ನು ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿತ ವಲಯವಾಗಿಸಬಹುದು” ಎಂದು ಹೇಳಿದರು. .1
- *ಭಾರತ ನಲ್ಲಿ ವೈರಲ್*1
- ಹೊಸ ವರ್ಷದ ಮೊದಲ ದಿನ ರಾಯರ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡೇ ಆಗಮಿಸಿದೆ. ಗುರು ರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಹಿನ್ನೆಲೆ ಪ್ರತಿ ವರ್ಷಕ್ಕಿಂತಲೂ ಎರಡು ಪಟ್ಟು ಭಕ್ತರಿಂದ ರಾಯರ ಮಠ ತುಂಬಿ ತುಳುಕುತ್ತಿದೆ. ಹೌದು ಹೊಸ ವರ್ಷದಲ್ಲಿ ಶುಭವಾಗಲಿ ಅಂತ ಬೇಡಿದ ವರ ನೀಡುವ, ಕಲಿಯುಗ ಕಾಮಧೇನು ರಾಘವೇಂದ್ರ ಸ್ವಾಮಿಗಳ ಆಸ್ಥಾನದಲ್ಲಿ ಭಕ್ತ ಸಾಗರವೇ ಹರಿದು ಬಂದಿದೆ. ರಾಯರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಳಿಗ್ಗೆ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಮಠದ ಎಲ್ಲಾ ದ್ವಾರಗಳ ಮೂಲಕ ಭಕ್ತರಿಗೆ ಒಳಬರಲು ಅವಕಾಶ ನೀಡಲಾಗಿದೆ.1