Shuru
Apke Nagar Ki App…
All About,Anchor requesting the common people to question the Responsible person for their Responsibilities *ಭಾರತ ನಲ್ಲಿ ವೈರಲ್*
Md Aleemulla Shariff
All About,Anchor requesting the common people to question the Responsible person for their Responsibilities *ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- ಯೂಜಿಸಿ ಕ್ವಾಲಿಫಿಕೇಷನ್ ಇಲ್ಲ ಅಂತ ಅತಿಥಿ ಉಪನ್ಯಾಸಕರ ಸೇವೆ ರದ್ದು ಸರಯಲ್ಲ - ರಾಜೇಂದ್ರಸಿಂಗ್ ಬಾಬು ಮಂಡ್ಯ: ಮಾಡಿಕೊಳ್ಳುವಂತೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎನ್.ರಾಜೇಂದ್ರಸಿAಗ್ ಬಾಬು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸುಮಾರು 3,500ಕ್ಕೂ ಹೆಚ್ಚು ಮಾಜಿ ಯುಜಿಸಿ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಪ್ರಸ್ತುತ ಸಾಲಿನಲ್ಲಿಯೂ ನಿರಂತರವಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ನಿರುದ್ಯೋಗ ಸಮಸ್ಯೆಯಿಂದ ಬಳಲುವಂತಾಗಿದೆ ಎಂದು ಅಳಲು ತೋಡಿಕೊಂಡರು. ಹಿAದಿನ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಆರ್.ಸೀತಾರಾA ನೇತೃತ್ವದ ಸರ್ಕಾರದಲ್ಲಿ ಶೈಕ್ಷಣಿಕ ಸಂಯೋಜಕರ ಹುದ್ದೆಗಳಿಗೆ ಸೇರ್ಪಡೆಗೊಳಿಸಲು ಆದೇಶ ನೀಡಿದ್ದರು. ಆದರೆ, ಈಗ ಉನ್ನತ ಶಿಕ್ಷಣ ಇಲಾಖೆಯು ಮರು ಆಯ್ಕೆ ಪ್ರಕ್ರಿಯೆ ಮುಂದುವರಿಸುತ್ತಿರುವುದರಿAದ ಉಪನ್ಯಾಸಕರಲ್ಲಿ ಆತಂಕ ಮೂಡಿದೆ ಎಂದು ಹೇಳಿದರು. ಕೂಡಲೇ ಕಾಲೇಜು ಶಿಕ್ಷಣ ಇಲಾಖೆಯ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಂಯೋಜಕರನ್ನು ಆಯ್ಕೆ ಮಾಡಿಕೊಳ್ಳಬೇಕು. 2025-26ರ ಸೇವೆಯಲ್ಲಿದವರನ್ನು ಕೈಬಿಡದೇ ಎಲ್ಲರನ್ನೂ ಆಯ್ಕೆ ಮಾಡಿಕೊಳ್ಳಬೇಕು. 10 ದಿನದೊಳಗೆ ಕ್ರಮ ವಹಿಸದಿದ್ದರೆ, ರಾಜ್ಯದ ಎಲ್ಲ ಅತಿಥಿ ಉಪನ್ಯಾಸರನ್ನು ಒಗ್ಗೂಡಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂಎದು ಎಚ್ಚರಿಸಿದರು. ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎಂ.ಎಸ್‌ಕೃಷ್ಣ, ಬಿ.ಎಸ್.ಕುಮಾರ್, ಶಿವಕುಮಾರ್ ಇದ್ದರು.1
- ತಾಲ್ಲೂಕಿನ ಕಿರುಗಾವಲು ಠಾಣೆ ಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡಿರುವ ಪಿ ಎಸ್ ಐ ರವಿಕುಮಾರ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಮಳವಳ್ಳಿ ; ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಳೆದ ಎರಡು ವರೆ ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಿಸಿ ಅರಕೆರೆ ಠಾಣೆಗೆ ವರ್ಗಾವಣೆಗೊಂಡಿರುವ ಡಿ ರವಿಕುಮಾರ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊ ಡುಗೆ ನೀಡುವ ಸಮಾರಂಭ ವೊಂದು ಮಳವಳ್ಳಿ ತಾಲ್ಲೂಕಿನ ಎಂ ಕಾಗೇಪುರ ಗ್ರಾಮದ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಾಡಿತ್ತು. ಮಂಗಳವಾರ ಸಂಜೆ 7 ಗಂಟೆ ಸಮಯದಲ್ಲಿ ಕಿರುಗಾವಲು ಠಾಣೆ ಪೊಲೀಸ್ ಸಿಬ್ಬಂದಿ ಆಯೋಜಿಸಿದ್ದ ಸಮಾರಂಭ ದಲ್ಲಿ ಪಾಲ್ಗೊಂಡಿದ್ದ ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಮತ್ತಿತರ ಅಧಿಕಾರಿಗಳು ಸಿಬ್ಬಂದಿ ಪಾಲ್ಗೊಂಡು ವರ್ಗಾ ವಣೆ ಗೊಂಡಿರುವ ಪಿ ಎಸ್ ಐ ರವಿಕುಮಾರ್ ಅವರಿಗೆ ಅದ್ದೂರಿ ಬೀಳ್ಕೊಡುಗೆ ನೀಡಿದರು. ಸಿಬ್ಬಂದಿ ಪರವಾಗಿ ಭಾರಿ ಹಾರ ತುರಾಯಿ ಜೊತೆಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ನೆನೆಪಿನ ಕಾಣಿಕೆ ನೀಡುವುದರೊಂದಿಗೆ ಅದ್ದೂರಿ ಬೀಳ್ಕೊಡುಗೆ ನೀಡಿದರು. ಈ ವೇಳೆ ಮಾತನಾಡಿದ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ಶ್ರೀಧರ್ ಅವರು ರವಿಕುಮಾರ್ ಅವರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದರು. ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಡಿ ರವಿಕುಮಾರ್ ಅವರು ತಮ್ಮ ಸೇವಾ ಅವಧಿಯಲ್ಲಿ ಸಹಕರಿ ಸಿದ ಎಲ್ಲಾ ಹಿರಿಯ ಅಧಿಕಾರಿ ಗಳು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಹಲಗೂರು ಪಿಎಸ್ ಐ ಲೋಕೇಶ್, ಬೆಳಕವಾಡಿ ಪಿ ಎಸ್ ಐ ಪ್ರಕಾಶ್ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿ ವರ್ಗ ಈ ವೇಳೆ ಹಾಜರಿದ್ದರು.1
- ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಮಲ್ಲೇಶ್ ಆಗ್ರಹ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಗೆ ಮಲ್ಲೇಶ್ ಆಗ್ರಹ ಚಾಮರಾಜನಗರ: ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡಬೇಕು ಎಂದು ಚಿಲಕವಾಡಿ ಮಲ್ಲೇಶ್ ಆಗ್ರಹಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಪೋಲಿಸ್ ದೂರು ಪ್ರಾಧಿಕಾರ ಇರುತ್ತದೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡುವಂತೆ ಇಲಾಖೆಯಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರ ರಚನೆ ಮಾಡಿ ಸಾರ್ವಜನಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪೊಲೀಸ್ ದೂರು ಪ್ರಾಧಿಕಾರವು ಪೊಲೀಸರ ಗಂಭೀರ ದುರ್ನಡತೆ, ದೌರ್ಜನ್ಯ ವಿರುದ್ಧ . ಸಾರ್ವಜನಿಕರಿಂದ ದೂರು ಸ್ವೀಕರಿಸಿ ತನಿಖೆ ನಡೆಸುವ ಸ್ವಾಯತ, ಉನ್ನತಮಟ್ಟದ ಪಾಧಿಕಾರವಾಗಿದೆ. ಇದನ್ನು . ಜಿಲ್ಲೆಯಲ್ಲಿ ರಚನೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನ್ಯಾಯ ಸಿಗುತ್ತದೆ. ತಪ್ಪಿಸ್ಥ ಪೊಲೀಸ ಅಧಿಕಾರಿಗಳಿಗೆ ಸಿಬ್ಬಂದಿ. ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಅಮಾಯಕರಿಗೆ ನ್ಯಾಯ ದೊರೆಯುತ್ತದೆ ಎಂದರು. 2021 ಸಾಲಿನ ಗ್ರಾ.ಪಂ.ಚುನಾವಣೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾನು ಒಂದು ಅಟ್ರಾಸಿಟಿ ದೂರು ನೀಡಿದ ಉದ್ದೇಶದಿಂದ ನನ್ನ ವಿರುದ್ಧ ಒಂದು ಸುಳ್ಳು ಪ್ರತಿದೂರು ದಾಖಲಿಸಿ, ಪೋಲಿಸರು ಅಧಿಕಾರ ದುರುಪಯೋಗ ಮಾಡಿರುತ್ತಾರೆ. ಅಲ್ಲಿಂದ ಇಲ್ಲಿಯತನಕ ಮಾನವಹಕ್ಕು ಆಯೋಗ, ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಇತರ ಮೇಲಾಧಿಕಾರಿಗಳಿಗೆ ನಾನು ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಭ್ರಷ್ಟ ಪೋಲಿಸ್ ಒಂದೇ ಠಾಣೆಯಲ್ಲಿ ಎರಡು, ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಕಾರ್ಯಾಂಗ, ಶಾಸಕಾಂಗದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲು... ಮಾಡಿದರು. ಅವೆಲ್ಲವನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಂಡಿದ್ದೇನೆ. ಆಗಾಗಿ ತಪ್ಪಿಸ್ಥ ಪೋಲಿಸ್. ಅಧಿಕಾರಿಗಳಿಗೆ ವಿರುದ್ಧ ಕ್ರಮ ಆಗಬೇಕು. ಜಿಲ್ಲೆಯಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚನೆ ಆಗಿಲ್ಲ. ಮೇಲಾಧಿಕಾರಿಗಳಾದ ಎಸ್‌ಪಿ, ಡಿಸಿ ಅವರು ಸಮಿತಿ ರಚನೆ ಮಾಡದೆ ಹ ಪೊಲೀಸ್ ಇಲಾಖೆಯಲ್ಲಿ ನಡೆಯುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಮುಚ್ಚಿ ಹಾಕಿ, ಸಾರ್ವಜನಿಕರ ಮೇಲೆ ಸುಳ್ಳುಪ್ರಕರಣ ದಾಖಲು ಮಾಡುವುದು, ತಮ್ಮ ಅಧಿಕಾರಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಪ್ರಾಧಿಕಾರಿ ರಚನೆ ಮಾಡಿಲ್ಲ. ಗೃಹ ಸಚಿವರು ಇಲಾಖೆಯನ್ನು ಶುದ್ಧಗೊಳಿಸಿ ಸಾರ್ವಜನಿಕರ ಮೇಲೆ ಆಗುವ ಸುಳ್ಳು ಎಫ್‌ಐಆರ್‌ಗಳನ್ನು ಮರುಪರಿಶೀಲನೆಗೆ ಅವಕಾಶ ಕೊಡಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸ್ ದೂರು ಪಾಧಿಕಾರಿ ರಚನೆ ಮಾಡಬೇಕು ಮಲ್ಲೇಶ್ ಒತ್ತಾಯಿಸಿದರು.3
- ಮಸಣಾಪುರದಲ್ಲಿ ವಿಜೃಂಭಣೆಯಿಂದ ನಡೆದ ಕಳ್ಳಿಪುರಮಾರಮ್ಮನ ರಥೋತ್ಸವ ಚಾಮರಾಜನಗರ: ಮಸಣಾಪುರ-ಚಾಟೀಪುರ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಗ್ರಾಮದೇವತೆ ಶ್ರೀ ಕಳ್ಳಿಪುರಮಾರಮ್ಮನ ಹಬ್ಬವು ತುಂಬಾ ಶಾಂತಿಯುತವಾಗಿ ನಡೆಯಿತು. ಕಳೆದ 3 ತಿಂಗಳಿನಿಂದ ಆತಂಕದಲ್ಲಿ ಇದ್ದ ಗ್ರಾಮಸ್ಥರ ಆತಂಕವನ್ನು ದೂರಮಾಡಿ ಗ್ರಾಮದೇವತೆ ಹಬ್ಬವು ವಿಜೃಂಭಣೆಯಿಂದ ನಡೆಯಲು ಆರಕ್ಷಕರು ತೋರಿದ ಪ್ರೀತಿ ಸಹನೆಗೆ ಕೈಮುಗಿದು ನಮಸ್ಕರಿಸಬೇಕು ಅಂತೆಯೇ ಇಂದು ಹಬ್ಬದ ಕೊನೆಯ ದಿನವೂ ಕೂಡ ದೇವತೆಯ ಮೆರವಣಿಗೆಯ ಮುಖಾಂತರ ಶಾಂತಿಯುತವಾಗಿ ಅಂತ್ಯವಾಯಿತು.2
- ಗುಂಡ್ಲುಪೇಟೆ: ತುಂಡಾದ ಸಂಚಾರ ನಾಮಫಲಕಗಳು; ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಆಗ್ರಹ. ಗುಂಡ್ಲುಪೇಟೆ: ಪಟ್ಟಣದ ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿಯ ಬಿಇಒ ಕಚೇರಿ ಮುಂಭಾಗ, ಫುಟ್‌ಪಾತ್‌ಗೆ ಹೊಂದಿಕೊಂಡಿರುವ ‘ನೋ ಪಾರ್ಕಿಂಗ್’ ನಾಮಫಲಕ ತುಂಡಾಗಿ ಕೆಳಗೆ ಬಿದ್ದಿದ್ದು, ಕೂಡಲೇ ದುರಸ್ತಿಪಡಿಸಿ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಕರ್ನಾಟಕ ಕಾವಲು ಪಡೆ ಮನವಿ ಮಾಡಿದೆ. ಈ ಕುರಿತು ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಮಾತನಾಡಿ, ಪಟ್ಟಣದ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ನಾಮಫಲಕಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ದಿನಗಳ ಹಿಂದೆ ಅಂಚೆ ಕಚೇರಿ, ಕ್ಯಾಸಿನೋ ಬೇಕರಿ ಹಾಗೂ ನೂರ್ ಸ್ಟೋರ್ ಮುಂಭಾಗದಲ್ಲಿದ್ದ ಸಂಚಾರ ನಿಯಮಗಳ ಜಾಗೃತಿ ಫಲಕಗಳು ಕೂಡ ತುಂಡಾಗಿ ಬಿದ್ದಿದ್ದು, ಸಂಬಂಧಪಟ್ಟ ಪೊಲೀಸ್ ಇಲಾಖೆ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಫಲಕಗಳನ್ನು ಸಮರ್ಪಕವಾಗಿ ದುರಸ್ತಿಪಡಿಸಿ ಅಥವಾ ಗುಣಮಟ್ಟದ ಹೊಸ ಫಲಕಗಳನ್ನು ಅಳವಡಿಸುವ ಮೂಲಕ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕನ್ನಡಪರ ಹೋರಾಟಗಾರ ರಂಗಪ್ಪ ಮಾತನಾಡಿ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಉತ್ತಮ ಗುಣಮಟ್ಟದ ಸಂಚಾರ ನಿಯಮಗಳ ನಾಮಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಷೀದ್, ಸಂಚಾಲಕ ಮಿಮಿಕ್ರಿ ರಾಜು, ರಹಮತ್ತುಲ್ಲಾ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.3
- ನಿಗಾರ್ತಿಕರನ್ನು ಅಡ್ಡ ಮಾರ್ಗದಲ್ಲಿ ಕರೆದುಕೊಂಡು ಬಂದು ಜೀತ ಪದ್ಧತಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಆರೋಪ,,, ಹನೂರು ತಾಲ್ಲೂಕಿನ ಸೂಳೆರಿಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂಗನ ದೊಡ್ಡಿ ಗ್ರಾಮದಲ್ಲಿ ಅಕ್ರಮವಾಗಿ ಯಾವುದೇ ಸೌಲಭ್ಯ ನೀಡದೆ ಸತತವಾಗಿ ಒಂದು ವರ್ಷದಿಂದ ದುಡಿಸಿಕೊಳ್ಳುತ್ತಿದ್ದೂ ರೈತ ಸಂಘದ ಚಾಮರಾಜನಗರ ಕಾರ್ಯಧ್ಯಕ್ಷ ಅಮದಜ್ ಖಾನ್ ಮುಖಾಂತರ ಬೆಳಕಿಗೆ ಬಂದಿದೆ,,,4
- All About,Well & Good advice by a Social Activist to Hon'ble Minister for #Waqf for rooting out all Malpractices in #KSBA #Bengaluru *ಭಾರತ ನಲ್ಲಿ ವೈರಲ್*1
- ನಗರ ಸಭೆಯೊಳಗೆ ಅನಲೈರ್ಮಲ್ಯ ಸರಿ ಇಲ್ಲದ ವ್ಯವಸ್ಥೆ ಅಡ್ಡಾದಿಡ್ಡಿ ಕಾಮಗಾರಿ ಮಂಡ್ಯ- ನಗರಸಭೆ ನಗರದ ಸ್ವಚ್ಚತೆಗೆ ಮೀಸಲಾದ ಸಂಸ್ಥೆ ಆದರೆ ನಗರಸಭೆಯೊಳಗೆ ಕೊಳಕು ತಾಂಡವಾಡುತ್ತಿದೆ ನಗರಸಭೆ ಮಂದಿದ್ದ ಮರವನ್ನು ಕಡಿದ ಅಧಿಕಾರಿಗಳು ಅದರ ಬೇರನ್ನು ಹಾಗೆ ಉಳಿಸಿ ನಗರ ಸಭೆಗೆ ಬರುವ ಹಿರಿಯ ನಾಗರಿಕರು ಹೆಂಗಸರು ಮಕ್ಕಳು ವಾಹನ ಸವಾರರು ಎಡುವಿ ಬೀಳುವಂತೆ ರಸ್ತೆಗೆ ಬಿಟ್ಟಿದೆ ಅಲ್ಲೆಲ್ಲೋ ಪಾರ್ಕಿಂಗ್ ಜಾಗದಲ್ಲಿ ಗುಂಡಿ ತೆಗೆದು ಮಣ್ಣನ್ನು ವ್ಯವಸ್ಥಿತವಾಗಿ ಮುಚ್ಚದೆ ಹಾಗೆ ಬಿಟ್ಟಿದ್ದಾರೆ ಮತ್ತು ಮಳೆ ನೀರಿನ ಕೊಯ್ಲು ಕಾಮಗಾರಿಗೆ ಲಕ್ಷಾಂತರ ರೂಪಾಯಿ ವ್ಯವಸ್ಥೆ ಮಾಡಿದ್ದು ಮಾಡಿದ ಕೆಲವೇ ದಿನಗಳಲ್ಲಿ ಎಲ್ಲ ಮುರಿದು ಬಿದ್ದಿದೆ ಆದರೂ ನಗರ ಸಭೆ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದಾರೆ ಆದಾಯ ಬರುವ ಬೇರೆ ಕೆಲಸದಲ್ಲಿ ಬೂಸಿ1
- ಚಾಮರಾಜನಗರದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬ ಆಚರಣೆ ವರದಿ: ಹೊಮ್ಮನಂಜುಂಡನಾಯಕ. ಚಾಮರಾಜನಗರದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬ ಆಚರಣೆ ವರದಿ: ಹೊಮ್ಮನಂಜುಂಡನಾಯಕ. ಬೆಳಿಗ್ಗೆಯಿಂದ ಸಂಜೆತನಕ ನಿರಂತರ ಸೇವಾ ಕಾರ್ಯ ನಗರದ ಕೊಳದ ಗಣಪತಿ, ಚಾಮರಾಜೇಶ್ವರ, ಬಿಳಿಗಿರಿರಂಗಸ್ವಾಮಿಗೆ ವಿಶೇಷಪೂಜೆ, ಅನ್ನಸಂತರ್ಪಣೆ, 50 ಮಂದಿ ಬಡವರಿಗೆ ಪುಡ್ ಕಿಡ್ ವಿತರಣೆ ಚಾಮರಾಜನಗರ: ವಿವಿಧ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಕಿಚ್ಚಸುದೀಪ್ ಹುಟ್ಟುಹಬ್ಬವನ್ನು ನಗರದಲ್ಲಿ ಅಭಿಮಾನಿಗಳು ಅರ್ಥಪೂರ್ ವಾಗಿ ಆಚರಣೆ ಮಾಡಿದರು. ಕನ್ನಡ ಚಿತ್ರರಂಗದ ನಟ ಕಿಚ್ಚು ಸುದೀಪ್ ಅವರ ಹುಟ್ಟುಹಬ್ಬ ಅಂಗವಾಗಿ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮೊದಲಿಗೆ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸುದೀಪ್ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಸಲಾಯಿತು. ಸಂತೇಮರಳ್ಳಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.ಬಡ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಭೋಗಾಪುರ ಗ್ರಾಮದ ಅಂಧಮಕ್ಕಳ ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಕಿಚ್ಚುಸುದೀಪ್ ಹುಟ್ಟುಹಬ್ಬ ಆಚರಿಸಲಾಯಿತು. ಕಾರ್ಯಕ್ರಮ ನೇತ್ರತ್ವ ವಹಿಸಿದ್ದ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ, ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್. ನಾಗೇಂದ್ರ ಮಾತನಾಡಿ, ಕಿಚ್ಚು ಸುದೀಪ್ ಅಣ್ಣನವರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಅದಕ್ಕಾಗಿ ನಾವು ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದ್ದು, ಬೆಳಿಗ್ಗೆ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂತೇಮರಳ್ಳಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.ಬಡ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಭೋಗಾಪುರ ಗ್ರಾಮದ ಅಂಧಮಕ್ಕಳ ಆಶ್ರಮಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಕಿಚ್ಚುಸುದೀಪ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಭಗವಂತ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಿ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು. ನಗರಸಭಾ ಮಾಜಿ ಸದಸ್ಯ ಶಿವರಾಜ್ ಮಾತನಾಡಿ, ಕನ್ನಡ ಚಿತ್ರರಂಗದ ದೊಡ್ಡಮಟ್ಟದಲ್ಲಿ ಹೆಸರುಗಳಿಸಿರುವ ಕಿಚ್ಚಸುದೀಪ್ ಅವರು ಭಾರತೀಯ ಚಿತ್ರರಂಗದಲ್ಲೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಸುದೀಪ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ನ ಆನಂದ್, ಚಂದ್ರು, ಸತೀಶ್, ಉಲ್ಲಾಸ್, ರವಿ, ಸಂತೋಷ, ಸ್ವಾಮಿನಾಯಕ್, ಚೇತು, ಮೋಹನ್, ಚಂದ್ರು ಮಾದೇಶ್ ಇತರರು ಹಾಜರಿದ್ದರು.4