ಧಾರವಾಡದಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣ ಧಾರವಾಡದಲ್ಲಿ ಆಟೊ ಗ್ಯಾಸ್ ಬಂಕ್ ನಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು... ಧಾರವಾಡ ನಗರದಲ್ಲಿ ಇರುವ ಎಲ್ಲ ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಇದರ ಮಧ್ಯೆ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಆಟೊ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದಕ್ಕಾಗಿ ಆಟೋ ಚಾಲಕರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ. ಧಾರವಾಡ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಆಟೋ ಎಲ್.ಪಿ.ಜಿ ಸಿಗುತ್ತಿದ್ದು, ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಆಟೊಗಳು ಕ್ಯೂ ನಿಂತಿವೆ. ಇಲ್ಲಿ 94 ರೂಪಾಯಿಗೆ ಒಂದು ಕೆಜಿ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದು ಆಟೊ ಚಾಲಕರಿಗೆ ಹೊರೆಯಾಗಿದೆ. ಈ ಬಂಕ್‌ನಲ್ಲೂ ಗ್ಯಾಸ್ ಖಾಲಿಯಾಗುತ್ತ ಬಂದಿದ್ದು, ಕೇವಲ 40 ಆಟೊಗಳಿಗೆ ಆಗುವಷ್ಟೇ ಗ್ಯಾಸ್ ಇದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಟೊ ಚಾಲಕರು ಆಗ್ರಹಿಸುತ್ತಿದ್ದಾರೆ.
ಧಾರವಾಡದಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣ ಧಾರವಾಡದಲ್ಲಿ ಆಟೊ ಗ್ಯಾಸ್ ಬಂಕ್ ನಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು... ಧಾರವಾಡ ನಗರದಲ್ಲಿ ಇರುವ ಎಲ್ಲ ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಇದರ ಮಧ್ಯೆ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಆಟೊ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದಕ್ಕಾಗಿ ಆಟೋ ಚಾಲಕರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ. ಧಾರವಾಡ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಆಟೋ ಎಲ್.ಪಿ.ಜಿ ಸಿಗುತ್ತಿದ್ದು, ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಆಟೊಗಳು ಕ್ಯೂ ನಿಂತಿವೆ. ಇಲ್ಲಿ 94 ರೂಪಾಯಿಗೆ ಒಂದು ಕೆಜಿ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದು ಆಟೊ ಚಾಲಕರಿಗೆ ಹೊರೆಯಾಗಿದೆ. ಈ ಬಂಕ್‌ನಲ್ಲೂ ಗ್ಯಾಸ್ ಖಾಲಿಯಾಗುತ್ತ ಬಂದಿದ್ದು, ಕೇವಲ 40 ಆಟೊಗಳಿಗೆ ಆಗುವಷ್ಟೇ ಗ್ಯಾಸ್ ಇದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಟೊ ಚಾಲಕರು ಆಗ್ರಹಿಸುತ್ತಿದ್ದಾರೆ.
- ಲೋನ್ ಕಟ್ಟಿಲ್ಲ ಎಂಬ ಕಾರಣಕ್ಕೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಲು ಬಂದಿದ್ದರಿಂದ ಭಯಗೊಂಡ ಮನೆ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದ ಸೈದಾಪುರದಲ್ಲಿ ನಡೆದಿದೆ. ಸೈದಾಪುರದ ವಾಸೀಂ ಸೈಯದ್ (39) ಎಂಬ ವ್ಯಕ್ತಿ ಮನೆ ಕಟ್ಟಲೆಂದು ಖಾಸಗಿ ಬ್ಯಾಂಕ್‌ನಿಂದ 71 ಲಕ್ಷ ಸಾಲ ಪಡೆದಿದ್ದ. ಈ ಸಾಲಕ್ಕೆ ಬಡ್ಡಿ ಬೆಳೆದು ಕೇವಲ 14 ತಿಂಗಳಲ್ಲೇ ಅದು 86 ಲಕ್ಷಕ್ಕೆ ಬಂದು ನಿಂತಿದೆ. ಈ ಸಾಲವನ್ನು ಕಟ್ಟುವಂತೆ ಆ ಖಾಸಗಿ ಬ್ಯಾಂಕ್‌ನವರು ಕೋರ್ಟ್ ಆದೇಶ ತಂದು ಮನೆ ಸೀಜ್ ಮಾಡಲು ಬಂದಿದ್ದರು. ಇದರಿಂದ ಭಯಗೊಂಡ ವಾಸೀಂ ಎಂಬಾತ ಅದೇ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ವಾಸೀಂ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.1
- ಶಿಗ್ಗಾವಿ ಸವಣೂರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ, ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ದಾವಣಗೆರೆ ಉಪ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಗೆಲುವು ನಿಶ್ಚಿತ ಎಂದು ಹೇಳಿದರು,1
- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್. ಗದಗ ಸಮಾಜ ಕಲ್ಯಾಣ ಇಲಾಖೆ, ಮುಂಡರಗಿ ಮುಂಡರಗಿ ತಾಲೂಕ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ. ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ 119ನೇ ಜನ್ಮ ದಿನಾಚರಣೆ ನಿಮಿತ್ಯ ಚಿಂತನ ಮಂಥನ ಕಾರ್ಯಕ್ರಮ1
- Post by Mayur TV Hangal YouTube c1
- ಗುಳೇದಗುಡ್ಡ : ಏ.7 ರಂದು ನಡೆಯಲಿರುವ ಕೂಡಲಸಂಗಮದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ನಡೆಯಲಿರುವ ಹುಚ್ಚಯ್ಯ ರಥದ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ಭಜನೆಯೊಂದಿಗೆ ನಗರದ ರೇವಣಸಿದ್ದಪ್ಪ ದೇವರಮನಿ ಅವರ ಮನೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೂಡಲಸಂಗಮಕ್ಕೆ ಶನಿವಾರ ಪಾದಯಾತ್ರೆಯ ಮೂಲಕ ತೆರಳಿತು. ಇದಕ್ಕೂ ಮೊದಲು ಕಳಸಕ್ಕೆ ಅಭಿಷೇಕ, ಪೂಜೆ ನಡೆಯಿತು. ಮೆರವಣಿಗೆಯಲ್ಲಿ ರೇವಣಸಿದ್ದಪ್ಪ ದೇವರಮನಿ, ಮುತ್ತಣ್ಣ ದೇವರಮನಿ, ವೀರುಪಾಕ್ಷ ದೇವರಮನಿ, ಈರಪ್ಪ ಗಡ್ಡಿ, ಶಿವಪ್ಪ ಶ್ಯಾವಿ, ಶೇಖರಪ್ಪ ರಂಜನಗಿ, ಬಿ.ಎನ್.ಪಾಗಿ, ಶರಣಪ್ಪ ಖಂಡಿ, ಈರಪ್ಪ ಬೆಟಗೇರಿ, ಮಹಾಗುಂಡಪ್ಪ ದೇವರಮನಿ, ಶ್ರೀನಿವಾಸ ರಂಜನಗಿ, ಸಂಗಮೇಶ ರಂಜನಗಿ, ಮಹೇಶ ಶ್ಯಾವಿ, ಈರಪ್ಪ ಗಂಜಾಳ, ಈರಣ್ಣ ಸುರಪುರ, ವಿಜಯ ಕಣವಿ, ಮೇಘರಾಜ ಸುರಪುರ, ಬಸವರಾಜ ಬುದರಿ, ಪ್ರಭುಕುಮಾರ ಬುದರಿ, ಬಸಪ್ಪ ಕೊಪ್ಪದ, ಅಮರೇಶ ಗೊಡನ್ನವರ, ಅಶ್ವೀನಿ ದೇವರಮನಿ, ಕೂಡ್ಲೆವ್ವ ರಂಜನಗಿ, ಗಿರಿಜಾ ರಂಜನಗಿ, ಅನ್ನವ್ವ ರಂಜನಗಿ, ಸಂಗಮ್ಮ ಕುಂಟೋಜಿ, ನೀಲಮ್ಮ ಕಲಕೇರಿ, ಶೋಭಾ ಹದ್ಲಿ ಮತ್ತಿತರರು ಇದ್ದರು.3
- ರಾಜ್ಯದಲ್ಲಿ ಭಾರೀ ಬಿಸಿಗಾಳಿ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ 29 ರಿಂದ ಮೇ 12 ರವರೆಗೆ ತಾಪಮಾನವು 45°C ರಿಂದ 55°C ವರೆಗೆ ಏರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅತ್ಯಾವಶ್ಯಕವಲ್ಲದ ಹೊರಗಿನ ಚಟುವಟಿಕೆಗಳನ್ನು ತಪ್ಪಿಸಿ. ಮುಖ್ಯ ಎಚ್ಚರಿಕೆಗಳು: ಉಸಿರಾಟ ತೊಂದರೆ / ತಲೆ ಸುತ್ತು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕಾರಿನಲ್ಲಿ ಲೈಟರ್, ಬ್ಯಾಟರಿ, ಪಾನೀಯಗಳು ಇಡಬೇಡಿ ಗ್ಯಾಸ್ ಸಿಲಿಂಡರ್ ಬಿಸಿಲಿನಲ್ಲಿ ಇರಿಸಬೇಡಿ ಸಾಕಷ್ಟು ನೀರು, ಮಜ್ಜಿಗೆ, ತಂಪು ಪಾನೀಯಗಳನ್ನು ಸೇವಿಸಿ ಹೆಚ್ಚುವರಿ ಎಚ್ಚರಿಕೆ: ಬಿಸಿಯಿಂದ ಹಾವು-ಚೇಳುಗಳು ಮನೆಗೆ ಬರಬಹುದಾದ ಸಾಧ್ಯತೆ ಇದೆ — ಜಾಗರೂಕರಾಗಿರಿ AC ಅನ್ನು 24–25°C ನಲ್ಲಿ ಇರಿಸಿ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ ಈ ಮಾಹಿತಿ ಬಹಳ ಮುಖ್ಯ! ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಕ್ಷಣ ಹಂಚಿಕೊಳ್ಳಿ1
- ll ಸಾರ್ವಜನಿಕ ಹನುಮಾನ ಮಂದಿರ ಹಾಗೂ ಜಮಖಂಡಿ ರಸ್ತೆ, ಅಂಬೇಡ್ಕರ್ ನಗರ ಹಾಗೂ ವಿವಿಧ 9 ಹನುಮಾನ್ ಮಂದಿರಗಳಲ್ಲಿ ಹೂವು ತರಿಳು ತೋರಣಗಳಿಂದ ಅಲಂಕರಿಸಿ ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಆಚರಣೆ ಮಾಡಿದರು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರು ದಿನಪೂರ್ತಿ ಹನುಮಂತನ ದರ್ಶನ ಪಡೆದು, ಸಕಲ ಜೀವಿಗಳ ಕಲ್ಯಾಣಕ್ಕಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಿ, ವಿವಿಧ ಅರ್ಪಣೆಗಳನ್ನು ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರು. ಹೋಮ-ಹವನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಲ್ಲಿ ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6ಗಂಟೆಗೆ ಎಲ್ಲ ಹನುಮಾನ್ ಮಂದಿರಗಳು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಸಮಸ್ತ ಹನುಮ ಭಕ್ತರಿಂದ ಹನುಮಾನ್ ಮೂರ್ತಿ ಪಲ್ಲಕ್ಕಿ, ಹನುಮಾನ್ ಹಾಗೂ ಶ್ರೀರಾಮನ ಭವ್ಯ ಭೃಹತ್ ಪ್ರತಿಮೆಗಳನ್ನು ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಿಂದ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಸಂಭಳ ವಾದ್ಯ ಹಾಗೂ ಹಲಗೆ ಲೇಜೀಮ ವಾದ್ಯಗಳೊಂದಿಗೆ ಪವನಪುತ್ರ ಹನುಮಾನಕಿ, ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕೇಸರಿ ಧ್ವಜಗಳನ್ನು ರಾರಾಜಿಸುತ್ತ, ಪಟಾಕಿಗಳನ್ನು ಸಿಡಿಸುತ್ತ ಮೆರವಣಿಗೆಯು ರೇಲ್ವೆ ಮೇಲ್ಸೆತುವೆ, ಕರ್ನಾಟಕ ವೃತ್ತ ಮಾಸಾಬಿ ವೃತ್ತ, ಡಿಸಿಸಿ ಬ್ಯಾಂಕ್ ರೈಲು ನಿಲ್ದಾಣ ಬೆಲ್ಲದ ಕಾರ್ನರ್ ಮೂಲಕ ಸಾರ್ವಜನಿಕ ಹನುಮಾನ ಮಂದಿರಕ್ಕೆ ತಲುಪಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಲಕ್ಷಟ್ಟಿ ತೇಲಿ, ಸಿದ್ಧಾನಿ ಸಣ್ಣಕ್ಕಿ,ಜಯಕುಮಾರ ಸನದಿ, ಶ್ರೀಮಾನ್ ನಾಯಿಕ, ಸದಾಶಿವ ಗಿಣಿಮೂಗೆ, ಪ್ರದೀಪ್ ಭಾವಿ, ಶೇಖರ್ ದಳವಾಯಿ, ಶಿವಾನಂದ ಲಖ್ಖನಗಾವ, ಯಲ್ಲಪ್ಪ ವಡ್ಡರ, ಡಾ.ಸಚಿನ ಮನಗುತ್ತಿ, ಅಮೀತ ನಾಯಿಕ, ಪ್ರೇಮ ಗುಪ್ತೆ, ಜಗ್ಗು ಮಂಗಸೂಳಿ, ಶೀತಲ ಲೋಹಾರ,ಕಾರ್ತಿಕ ರಾಜಮಾನೆ, ಚೇತನ್ ಸುತಾರ, ವರ್ಧಮಾನ ಶೆಟ್ಟಿ, ಸಚೀನ ತೇಲಿ, ಆನಂದ ಸಣ್ಣಕ್ಕಿ, ಪ್ರಕಾಶ್ ದಾವಣೆ, ನಾಗೇಶ ಕೌಲಗುಡ್ಡ, ಕೃಷ್ಣಾ ರೆಡ್ಡಿ ಸರ್ವ ಹನುಮಾನ್ ಭಕ್ತರು ಭಾಗಿಯಾಗಿದ್ದರು. ಮೆರಣಿಗೆಗೆ ಪಿಎಸಐ ಪ್ರೀತಮ್ ನಾಯಿಕ ನೇತೃತ್ವದಲ್ಲಿ ಎಎಸಐ ಇಂಚಲ, ಬಾನಪ್ಪಾ ಖೋತ, ಪೈಗಂಬರ್ ಗಡ್ಡೇಕರ,ಎಂ.ಬಿ.ಪಾಟೀಲ ಸೂಕ್ತ ಬಂದುಬಸ್ತಿ ಒದಗಿಸಿದ್ದರು.2
- ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾಮಸ್ಥರು ಮತ್ತಿಗಟ್ಟಿ ಗ್ರಾಮ ಪಂಚಾಯಿತಿ ಕೀಲಿ ಮುರಿದು ಗುರುವಾರ ಆಕ್ರೋಶ ಹೊರಹಾಕಿದ್ದಾರೆ. ಮತ್ತಿಗಟ್ಟಿ ಗ್ರಾಮ ಪಂಚಾಯತಿಯಿಂದ ಯಾವುದೇ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ, ಪಂಚಾಯತ ವತಿಯಿಂದ ಅನುದಾನ ಇಲ್ಲ, ಇದಕ್ಕೆ ಗ್ರಾಮ ಪಂಚಾಯತಿ ಪಿಡಿಓ ನಿರ್ಲಕ್ಷ್ಯ ಸಹ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ . ಮೂಲ ಭೂತ ಸೌಕರ್ಯಗಳನ್ನ ನೀಡದ ಪಂಚಾಯತ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ತಕ್ಷಣವೇ ಎಲ್ಲಾ ಸೌಕರ್ಯ ನೀಡಬೇಕು ಎಂದು ಒತ್ತಾಯಿಸಿದರು.1