ಔರಾದ-ಕಮಲನಗರ ತಾಲೂಕಿನ ಮೂರು ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ : ಮಲ್ಲಪ್ಪ ಗೌಡ ಔರಾದ್ : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದಾಗ ಯಶಸ್ಸು ಕಾಣಲು ಸಾಧ್ಯ ಎಂದು ಪತ್ರಕರ್ತ ಮಲ್ಲಪ್ಪಗೌಡ ಅಭಿಪ್ರಾಯಪಟ್ಟರು. ತಾಲೂಕಿನ ಸಂತಪುರ ಸರ್ಕಾರಿ ಪ್ರೌಢಶಾಲೆ ಯಲ್ಲಿ ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಅವರ ಜನ್ಮದಿನದ ಪ್ರಯುಕ್ತ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಯ ಮಕ್ಕಳು ಅತಿ ಹೆಚ್ಚು ಚಾಣಕ್ಯರಾಗಿರುತ್ತಾರೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಅರ್ಹತಾ ಪರೀಕ್ಷೆಗಳನ್ನು ಬರೆದು ನೇಮಕಾತಿ ಪಡೆದಿರುತ್ತಾರೆ, ಇವತ್ತು ಅನೇಕ ಸಾಧಕರು ಸಹ ಸರ್ಕಾರಿ ಶಾಲೆಯಲ್ಲಿ ಓದಿದವರು ಅದಕ್ಕಾಗಿ ವಿದ್ಯಾರ್ಥಿಗಳು ಇಷ್ಟ ಪಟ್ಟು ಓದುವ ಮೂಲಕ ಉತ್ತಮ ಫಲಿತಾಂಶ ನೀಡಬೇಕು. ಮತ್ತು ಸಮಾಜಕ್ಕೆ ಪ್ರೇರಣೆಯಾಗುವ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಕ ಶಿವಲಿಂಗ ಹೆಡೆ ಅವರು ಮಾತನಾಡಿ ಆಧುನಿಕ ಯುಗದಲ್ಲಿ ಬದುಕುತ್ತಿರುವ ನಾವು ಸಾಮಾಜಿಕ ಕಳಕಳಿ ಉಳ್ಳವರಾಗಿ ಬದುಕಬೇಕಿದೆ, ಅನೇಕರು ತಮ್ಮ ಹುಟ್ಟು ಹಬ್ಬವನ್ನು ಅನೇಕ ರೀತಿಯಲ್ಲಿ ದುಂದುವೆಚ್ಚ ಮಾಡುತ್ತಾರೆ, ಆದರೆ ವಿದ್ಯಾರ್ಥಿ ಮುಖಂಡರಾದ ಅಶೋಕ ಶೆಂಬೆಳ್ಳಿ ಅವರ ಜನ್ಮದಿನ ಪ್ರಯುಕ್ತ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅವರ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಪ್ಯಾಡ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಈ ಸಂಧರ್ಭದಲ್ಲಿ ಶಿಕ್ಷಕರಾದ ಕಲ್ಪನಾ ಉದಗಿರೆ, ಅಶೋಕ ಶೆಂಬೆಳ್ಳಿ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಸುಕ್ಷಾಂತ ಮರತುಳೆ, ಮಲ್ಲಿಕಾರ್ಜುನ ಟೆಕರಾಜ, ಮಹಾದೇವ ಶಿಂಧೆ, ಪ್ರಾಶಾಂತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. _________________________________________ ನಮ್ಮ ಗೆಳೆಯರ ಬಳಗ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಮಾಡುತ್ತಾ ಬರುತ್ತಿದ್ದಾರೆ. ಸಾಮಾಜಿಕ ಸಂದೇಶ ಸಾರುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ, ಆ ಪ್ರಯುಕ್ತ ಎಲ್ಲ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ನೀಡಿ ಶಾಲೆಯ ಹಾಗೂ ಹೆತ್ತ ತಂದೆ ತಾಯಿಯ ಕೀರ್ತಿ ಹೆಚ್ಚಿಸಬೇಕು. ಅಶೋಕ ಶೆಂಬೆಳ್ಳಿ ವಿದ್ಯಾರ್ಥಿ ಮುಖಂಡ.

- User9569ಔರಾದ್, ಬೀದರ್, ಕರ್ನಾಟಕ👏on 31 March
- ಅಧಿಕಾರಿಗಳಿಗೆ ಖಡಕ್ ಸಂದೇಶ:ಅಧಿಕಾರಿಗಳು ಸಬೂಬು ನೀಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು. ಮಾಜಿ ಶಾಸಕ1
- Post by Nava karnataka News channel1
- ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದ ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಇಂದು ವಿಜಯಪುರ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಡಾ.ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲಾ ಪ್ರೇರಣೆ. ಅವರ ತತ್ವಾದರ್ಶಗಳ ಬೆಳಕಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸೋಣ. ಇದೇ ವೇಳೆ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿಯಿಂದ ಮಾಡಲಾಗಿದ್ದ ಉಪಹಾರವನ್ನು ಅಭಿಮಾನಿಗಳೊಂದಿಗೆ ಸೇವಿಸಲಾಯಿತು. ಮಹಾನಗರ ಪಾಲಿಕೆ ಮಹಾಪೌರರು, ಸದಸ್ಯರು, ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.1
- ಮುದ್ದೇಬಿಹಾಳ.. 135 ನೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ವಿಜ್ಜರಣೆಮೆಯಿಂದ ಆಚರಿಸಲಾಯಿತ್ತು. ಮುದ್ದೇಬಿಹಾಳದ ಗಣ್ಯ ವ್ಯಕ್ತಿಗಳು ಅಂಬೇಡ್ಕರವರ ಜಯಂತೋತ್ಸವಕ್ಕೆ ಮುಖ್ಯ ಅತಿಥಿ ಸಿ ಎಸ್ ನಾಡಗೌಡ ಮತ್ತು ಎಲ್ಲಾ D S S ಸಂಗದವರು ಹಾಜರ ಇದ್ದರು. ಇಂದಿರಾ ನಗರದ ಮಾಜಿ ಮೆಂಬರ್ ಆದ ಶಿವು ಶಿವಪುರ ಮತ್ತು ಸಿದ್ದು ತಳಹಳ್ಳಿ ಹಾಗೂ ಪೀಲಕಮ್ಮ ನಗರದ ಅಶೋಕ್ ಪಾದಗಟ್ಟಿ ನಾಗೇಶ್ ಭಜಂತ್ರಿ ಈರಣ್ಣ ತಾರನಾಳ ಹನುಮಂತ ಹೊಸಮನಿ ಹರಳಯ್ಯ ಸಮಾಜದ ಅಧ್ಯಕ್ಷರಾದ ಭಗವಂತ ಕಬಾಡೆ ಎಲ್ಲಾ ವ್ಯಕ್ತಿಗಳು ಹಾಜರಿದ್ದರು1
- Post by Iranna Tarnal1
- Post by @april14news1
- ಅಫಜಲಪುರ ತಾಲೂಕಿಗೆ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿದ ಹಿರಿಯ ವಕೀಲರಾದ ಕೆ.ಜಿ.ಪೂಜಾರಿ.1
- Post by YADGIR NEWS1
- ಮುದ್ದೇಬಿಹಾಳ: ವಚನಾನಂದ ಸ್ವಾಮೀಜಿ ಉಚ್ಚಾಟನೆ ಶಾಸಕ ಯತ್ನಾಳ್ ಹೇಳಿಕೆ ವಿಜಯಪುರದಲ್ಲಿ ಮಂಗಳವಾರ ಮಾತನಾಡಿದ ಶಾಸಕ ಯತ್ನಾಳ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಜಿ ಉಚ್ಚಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಎರಡು ಪೀಠದ ಟ್ರಸ್ಟ್ ಗಳು ನಂಬಿಕೆ ಕಳೆದುಕೊಂಡಿವೆ. ಹಣ ತಿಂದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇವುಗಳನ್ನು ಖಾಸಗಿ ಆಸ್ತಿ ಮಾಡಿಕೊಂಡಿದ್ದು, ಇದರಿಂದ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ. ಪ್ರಾಮಾಣಿಕರು ಹಾಗೂ ಸಮಾಜಕ್ಕೆ ಕೆಲಸ ಮಾಡುವವರು ಯಾರೂ ಇಲ್ಲ. ಎಲ್ಲರೂ ಸ್ವಾರ್ಥಕ್ಕಾಗಿ ಟ್ರಸ್ಟ್ ಗಳನ್ನು ಬಳಸಿಕೊಂಡು, ತಮ್ಮ ಅಸ್ತಿ ಮಾಡಿಕೊಂಡಿದ್ದಾರೆ. ಉಚ್ಚಾಟನೆ ಮಾಡಿದವರು ಮತ್ತು ಮಾಡಿಸಿಕೊಂಡವರು ಇಬ್ಬರೂ ಅವರೇ ಎಂದು ಆರೋಪಿಸಿದರು.1