Shuru
Apke Nagar Ki App…
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಉಪನಾಳ ಗ್ರಾಮದ ಶ್ರೀಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಡಗರ ಸಂಭ್ರಮದಿಂದ ಮಾರ್ಚ ೦೮ ರವಿವಾರ ಸಾಯಂಕಾಲ ಜರುಗಿತು. ಮುಂಜಾನೆ ಶರಣಬಸವೇಶ್ವರರಿಗೆ ರುದ್ರಾಭಿಷೇಕ,ವಿವಿಧ ಪೂಜಾಕೈಕರ್ಯಗಳು ಜರುಗಿದವು. ಇಳಕಲ್ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದರ್ಶನವನ್ನು ಪಡೆದುಕೊಂಡರು. ಸಾಯಂಕಾಲ ಅಪಾರ ಸಂಖ್ಯೆ ಭಕ್ತರ ಜಯಘೋಷಣೆಗಳ ಮಧ್ಯ ರಥೋತ್ಸವ ಸಡಗರ ಸಂಭ್ರಮದಿAದ ನಡೆಯಿತು. ರಥೋತ್ಸವ ಸಮಯದಲ್ಲಿ ಆಕಾಶದಲ್ಲಿ ಸಿಡಿಮದ್ದುಗಳ ಆರ್ಭಟ ಜೋರಾಗಿತ್ತು. ಜಾತ್ರಾ ಮಹೋತ್ಸವದ ನೇತೃತ್ವವನ್ನು ಗ್ರಾಮದ ಮುಖಂಡರಾದ ರಾಯನಗೌಡ ಪಾಟೀಲ್, ಗಿರಿಯಪ್ಪ ಜಾಲಿಹಾಳ,ಗುದ್ನೇಪ್ಪ ಪಲ್ಲೇದ,ಖಾಜೆಸಾಬ ನದಾಫ್ ಮಹಾಂತೇಶ ಅಗಸಿಮುಂದಿನ ಸೇರಿದಂತೆ ಗ್ರಾಮದ ಹಿರಿಯ, ಯುವಕರು ವಹಿಸಿದ್ದರು.
Aaryan Ganiger

More news from ಕರ್ನಾಟಕ and nearby areas
- ಹೌದು ಹೋಳಿ ಹಬ್ಬದ ವೇಳೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಕೋಟ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ. ರಾಹುಲ್ ಬಾಹುಬಲಿ ಕೊಲೆಯಾದ ದುರ್ದೈವಿ, ಹೋಳಿ ಹಬ್ಬದಂದು ರಾಹುಲ ಹಾಗೂ ಆತನ ಸ್ನೇಹಿತನ ಕ್ಷುಲ್ಲಕ ಕಾರಣಕ್ಕೆ ಜಗಳವುಂಟಾಗಿತ್ತು. ಇದೇ ವಿಷಯವಾಗಿ ಮಾತನಾಡಲು ಸ್ನೇಹಿತರೆಲ್ಲ ದೇವಸ್ಥಾನ ಒಂದರ ಬಳಿ ಸೇರಿದ್ದ ವೇಳೆಯಲ್ಲಿ ಮಾತಿಗೆ ಮಾತು ಬೆಳೆದು ರಾಹುಲ್ ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.1
- ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಗ್ರಾಮದಲ್ಲಿ ಹಲವಾರು ದಿನಗಳಿಂದ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು, ಇದರಿಂದ ಯುವಕರು ಮತ್ತು ಕುಟುಂಬಗಳು ಹಾನಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿನ ಇಬ್ಬರು ವ್ಯಕ್ತಿಗಳು ಮದ್ಯದ ನಿಷೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಬೇಸತ್ತ ಮಹಿಳೆಯರು ಸಂಗನಾಳ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೇರಿ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಮದ್ಯ ಮಾರಾಟದಿಂದ ಗ್ರಾಮದಲ್ಲಿ ಶಾಂತಿ ಭಂಗವಾಗುತ್ತಿದೆ ಮತ್ತು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಮಹಿಳೆಯರು ಆರೋಪಿಸಿದರು. ಪ್ರತಿಭಟನೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.1
- ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ತಲಾ ₹4 ಲಕ್ಷ ಅನುದಾನ ನೀಡಲಾಗಿದೆ ಎಂಬ ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಪ್ರತಿಷ್ಠಾಪನೆಗೆ ಇನ್ನೂ ಸರ್ಕಾರದಿಂದ ಅನುಮತಿ ಇಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಆರೋಪಿಸಿದ್ದಾರೆ. ಬೈಎಲೆಕ್ಷನ್ ಹಿನ್ನೆಲೆಯಲ್ಲಿ ರಾಜಕೀಯ ಡ್ರಾಮಾ ಮಾಡಬೇಡಿ, ಮೊದಲು ಅನುಮತಿ ನೀಡಿ ಎಂದು ಆಗ್ರಹಿಸಿದ್ದಾರೆ.1
- Post by ನಾಗರಾಜ3
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಡ್ಯಾಮ್ ಮೇಲೆ ಮೊಸಳೆ ವಾಕ್ ಮಾಡುತ್ತಿರುವುದು ಕಂಡು ಸಿಬ್ಬಂದಿಗಳು ಮೊಸಳೆಯ ವಿಡಿಯೋ ಮಾಡಿದ್ದಾರೆ1
- Post by ಸ್1
- ವಿಜಯಪುರ: ಮಾರ್ಚ್ 15 ರಂದು ನಗರದಲ್ಲಿ ಪ್ರತಿಭಟನೆ ವಿಜಯಪುರದಲ್ಲಿ ಮಂಗಳವಾರ ಎಐಟಿಯು ಸಂಘಟನೆಯ ರಾಜ್ಯ ಖಜಾಂಚಿ ವೀರೇಶ ಅವರು ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟರೆ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ತಂದು ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ಮಾರ್ಚ್ 15 ರಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.1
- ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.1