logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಣನೂರು ದೊಡ್ಡಕೆರೆ ಏರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ, ಪರಿಶೀಲನೆ ಅರಕಲಗೂಡು : ತಾಲೂಕಿನ ಕೊಣನೂರು ದೊಡ್ಡಕೆರೆ ಕುಸಿದಿದ್ದ ಕೆರೆ ಏರಿ ಮೇಲಿನ ರಸ್ತೆಯ ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿನ ಡೊಡ್ಡಕೆರೆಯ ಏರಿ ಮೇಲಿನ ರಸ್ತೆಯು ಈ ಹಿಂದೆ ಭಾರೀ ಮಳೆಗೆ ಕುಸಿತ ಕಂಡು ವಾಹನ ಹಾಗೂ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಕಾರಣ 6 ಕೋಟಿ ರೂ ವೆಚ್ಚದಲ್ಲಿ ಭೂಮಿಪೂಜೆ ಸಲ್ಲಿಸಿ ಮಳೆಯು ಆರಂಭವಾಗುವ ಮೊದಲು ಗುಣಮಟ್ಟದಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಎಂದು ತಿಳಿಸಿದ್ದು ಅದರಂತೆ ಗುತ್ತಿಗೆದಾರರು ಭರದಿಂದ ಕಾಮಗಾರಿ ನಡೆಸುತ್ತಿದ್ದಾರಾದರೂ ಈ ಕಾಮಗಾರಿ ಶೀಘ್ರವಾಗಿ ಮುಗಿಯಲು ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಹಾಗೂ ಸಾರ್ವಜನಿಕರ ಸಹಕಾರ ಕಡಿಮೆ ಇರುವುದು ತಿಳಿದು ಬಂದಿದ್ದು ಸಾರ್ವಜನಿಕರು ಸ್ವಲ್ಪ ದಿನ ಕಷ್ಟವಾದರೂ ಈ ರಸ್ತೆಯಲ್ಲಿ ಓಡಾಡದೇ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಸುಗಮವಾಗಿ ಕಾಮಗಾರಿ ನಡೆಯುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಹಕರಿಸಬೇಕು ಎಂದರು. ಇನ್ನು ಮುಂದೆ ಈ ರಸ್ತೆಯಲ್ಲಿ ಯಾವುದೇ ನಾಲ್ಕು ಚಕ್ರದ ವಾಹನ ಹಾಗೂ ಭಾರೀ ವಾಹನಗಳು ಓಡಾಡದಂತೆ ಹಾಗೂ ದ್ವಿಚಕ್ರ ವಾಹನಗಳು ಮಾತ್ರ ಓಡಾಡುವಂತೆ ಮಾಡಿ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಮುಗಿಸಿ ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೇನೆ, ಹಾಗೂ ಈ ಭಾಗದಲ್ಲಿ ವಾಹನಗಳು ಓಡಾಡದಂತೆ ರಸ್ತೆಯ ಮೇಲೆ ಮಣ್ಣನ್ನು ಹಾಕಿ ಆ ಮಣ್ಣನ್ನು ಯಾರಾದರೂ ತೆರವುಗೊಳಿಸುತ್ತಾರಾ ಎಂದು ನೋಡಲು ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಸೂಚಿಸಿದ್ದು ಯಾರಾದರೂ ಮಣ್ಣನ್ನು ತೆರವುಗೊಳಿಸಿದರೆ ಅವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಬಿ.ಪಿ. ಕುಮಾರ್, ಎಸ್.ವಿ. ಲೋಕೇಶ್, ಮುಖಂಡರುಗಳಾದ ಶಿವಮೂರ್ತಿ, ಕುಮಾರ್, ದೇವು, ಸೇರಿದಂತೆ ಸ್ಥಳೀಯರು ಇದ್ದರು.

10 hrs ago
user_News5Kannada
News5Kannada
Local News Reporter Arkalgud, Hassan•
10 hrs ago
64e4471e-55c0-4cd5-93f9-8d12b93adde5

ಕೊಣನೂರು ದೊಡ್ಡಕೆರೆ ಏರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ, ಪರಿಶೀಲನೆ ಅರಕಲಗೂಡು : ತಾಲೂಕಿನ ಕೊಣನೂರು ದೊಡ್ಡಕೆರೆ ಕುಸಿದಿದ್ದ ಕೆರೆ ಏರಿ ಮೇಲಿನ ರಸ್ತೆಯ ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿನ ಡೊಡ್ಡಕೆರೆಯ ಏರಿ ಮೇಲಿನ ರಸ್ತೆಯು ಈ ಹಿಂದೆ ಭಾರೀ ಮಳೆಗೆ ಕುಸಿತ ಕಂಡು ವಾಹನ ಹಾಗೂ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಕಾರಣ 6 ಕೋಟಿ ರೂ ವೆಚ್ಚದಲ್ಲಿ ಭೂಮಿಪೂಜೆ ಸಲ್ಲಿಸಿ ಮಳೆಯು ಆರಂಭವಾಗುವ ಮೊದಲು ಗುಣಮಟ್ಟದಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಎಂದು ತಿಳಿಸಿದ್ದು ಅದರಂತೆ ಗುತ್ತಿಗೆದಾರರು ಭರದಿಂದ ಕಾಮಗಾರಿ ನಡೆಸುತ್ತಿದ್ದಾರಾದರೂ ಈ ಕಾಮಗಾರಿ ಶೀಘ್ರವಾಗಿ ಮುಗಿಯಲು ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಹಾಗೂ ಸಾರ್ವಜನಿಕರ ಸಹಕಾರ ಕಡಿಮೆ ಇರುವುದು ತಿಳಿದು ಬಂದಿದ್ದು ಸಾರ್ವಜನಿಕರು ಸ್ವಲ್ಪ ದಿನ ಕಷ್ಟವಾದರೂ ಈ ರಸ್ತೆಯಲ್ಲಿ ಓಡಾಡದೇ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಸುಗಮವಾಗಿ ಕಾಮಗಾರಿ ನಡೆಯುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಹಕರಿಸಬೇಕು ಎಂದರು. ಇನ್ನು ಮುಂದೆ ಈ ರಸ್ತೆಯಲ್ಲಿ ಯಾವುದೇ ನಾಲ್ಕು ಚಕ್ರದ ವಾಹನ ಹಾಗೂ ಭಾರೀ ವಾಹನಗಳು ಓಡಾಡದಂತೆ ಹಾಗೂ ದ್ವಿಚಕ್ರ ವಾಹನಗಳು ಮಾತ್ರ ಓಡಾಡುವಂತೆ ಮಾಡಿ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಮುಗಿಸಿ ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೇನೆ, ಹಾಗೂ ಈ ಭಾಗದಲ್ಲಿ ವಾಹನಗಳು ಓಡಾಡದಂತೆ ರಸ್ತೆಯ ಮೇಲೆ ಮಣ್ಣನ್ನು ಹಾಕಿ ಆ ಮಣ್ಣನ್ನು ಯಾರಾದರೂ ತೆರವುಗೊಳಿಸುತ್ತಾರಾ ಎಂದು ನೋಡಲು ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಸೂಚಿಸಿದ್ದು ಯಾರಾದರೂ ಮಣ್ಣನ್ನು ತೆರವುಗೊಳಿಸಿದರೆ ಅವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಬಿ.ಪಿ. ಕುಮಾರ್, ಎಸ್.ವಿ. ಲೋಕೇಶ್, ಮುಖಂಡರುಗಳಾದ ಶಿವಮೂರ್ತಿ, ಕುಮಾರ್, ದೇವು, ಸೇರಿದಂತೆ ಸ್ಥಳೀಯರು ಇದ್ದರು.

More news from ಕರ್ನಾಟಕ and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    41 min ago
  • ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಉದ್ಯಾನವನದಲ್ಲಿ ಆಯೋಜಿಸಲಾದ ಉಚಿತ ಬಾಡಿಫೈ ಥೆರಪಿ ಶಿಬಿರಕ್ಕೆ ನಾಗರೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶ್ರೀಮತಿ ಅಕ್ಕಮ್ಮಣ್ಣಿ ಉದ್ಯಾನವನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಬಾಡಿಫೈ ಥೆರಪಿ ಸಂಸ್ಥೆಯ ಸಹಯೋಗದಲ್ಲಿ 10 ದಿನಗಳ ಉಚಿತ ಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 27 ರಂದು ಆರಂಭವಾದ ಈ ಶಿಬಿರವು ಏಪ್ರಿಲ್ 5 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ. ಔಷಧಿ ರಹಿತ ವಿಧಾನದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಮಾಂಸಖಂಡಗಳ ಸೆಳೆತ ನಿವಾರಣೆ, ರಕ್ತ ಪರಿಚಲನೆಯನ್ನು ಸುಧಾರಿಸುವುದು ಹಾಗೂ ನರಗಳಿಗೆ ಸಂಬಂಧಿಸಿದ ಸರಳ ಮತ್ತು ದೀರ್ಘಕಾಲಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆ, ಪಾದ ಉರಿ, ಅಧಿಕ ರಕ್ತದೊತ್ತಡ, ಸಂಧಿವಾತ, ಕುತ್ತಿಗೆ ನೋವು, ಮಂಡಿನೋವು, ಸೊಂಟನೋವು, ಭುಜದ ನೋವು, ಸ್ನಾಯು ಸೆಳೆತ, ಸ್ಪಾಂಡಿಲೈಟಿಸ್, ಸಯಾಟಿಕ್, ಪಾರ್ಶ್ವವಾಯು, ಪಾರ್ಕಿನ್ಸನ್, ನಿದ್ರಾಹೀನತೆ, ನರಗಳ ಸಮಸ್ಯೆ ಹಾಗೂ ಥೈರಾಯ್ಡ್ ಸಂಬಂಧಿತ ತೊಂದರೆಗಳಿಗೆ ಈ ಥೆರಪಿ ಪರಿಣಾಮಕಾರಿ ಎಂದು ಆಯೋಜಕರು ತಿಳಿಸಿದ್ದಾರೆ. ಕೆವಲ 25 ನಿಮಿಷಗಳ ಥೆರಪಿಯಿಂದ ಸುಮಾರು 5 ಕಿಲೋಮೀಟರ್ ನಡೆದುಕೊಂಡಷ್ಟು ರಕ್ತಸಂಚಾರ ಹೆಚ್ಚಾಗುತ್ತದೆ ಎಂಬುದು ವಿಶೇಷವಾಗಿದೆ. ಶಿಬಿರ ಆರಂಭವಾದ ಕೆಲವೇ ದಿನಗಳಲ್ಲಿ ನೂರಾರು ನಾಗರಿಕರು ಭಾಗವಹಿಸಿ ಆರೋಗ್ಯ ಪ್ರಯೋಜನ ಪಡೆದುಕೊಂಡಿದ್ದಾರೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರುವ ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಶಿಬಿರದಲ್ಲಿ ಭಾಗವಹಿಸದವರು ಏಪ್ರಿಲ್ 5 ರೊಳಗೆ ಅಕ್ಕಮ್ಮಣ್ಣಿ ಉದ್ಯಾನವನಕ್ಕೆ ಭೇಟಿ ನೀಡಿ ಉಚಿತ ಥೆರಪಿ ಸೇವೆಯನ್ನು ಪಡೆಯಬಹುದು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
    1
    ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಉದ್ಯಾನವನದಲ್ಲಿ ಆಯೋಜಿಸಲಾದ ಉಚಿತ ಬಾಡಿಫೈ ಥೆರಪಿ ಶಿಬಿರಕ್ಕೆ ನಾಗರೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶ್ರೀಮತಿ ಅಕ್ಕಮ್ಮಣ್ಣಿ ಉದ್ಯಾನವನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಬಾಡಿಫೈ ಥೆರಪಿ ಸಂಸ್ಥೆಯ ಸಹಯೋಗದಲ್ಲಿ 10 ದಿನಗಳ ಉಚಿತ ಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 27 ರಂದು ಆರಂಭವಾದ ಈ ಶಿಬಿರವು ಏಪ್ರಿಲ್ 5 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ. ಔಷಧಿ ರಹಿತ ವಿಧಾನದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ.
ಮಾಂಸಖಂಡಗಳ ಸೆಳೆತ ನಿವಾರಣೆ, ರಕ್ತ ಪರಿಚಲನೆಯನ್ನು ಸುಧಾರಿಸುವುದು ಹಾಗೂ ನರಗಳಿಗೆ ಸಂಬಂಧಿಸಿದ ಸರಳ ಮತ್ತು ದೀರ್ಘಕಾಲಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆ, ಪಾದ ಉರಿ, ಅಧಿಕ ರಕ್ತದೊತ್ತಡ, ಸಂಧಿವಾತ, ಕುತ್ತಿಗೆ ನೋವು, ಮಂಡಿನೋವು, ಸೊಂಟನೋವು, ಭುಜದ ನೋವು, ಸ್ನಾಯು ಸೆಳೆತ, ಸ್ಪಾಂಡಿಲೈಟಿಸ್, ಸಯಾಟಿಕ್, ಪಾರ್ಶ್ವವಾಯು, ಪಾರ್ಕಿನ್ಸನ್, ನಿದ್ರಾಹೀನತೆ, ನರಗಳ ಸಮಸ್ಯೆ ಹಾಗೂ ಥೈರಾಯ್ಡ್ ಸಂಬಂಧಿತ ತೊಂದರೆಗಳಿಗೆ ಈ ಥೆರಪಿ ಪರಿಣಾಮಕಾರಿ ಎಂದು ಆಯೋಜಕರು ತಿಳಿಸಿದ್ದಾರೆ.
ಕೆವಲ 25 ನಿಮಿಷಗಳ ಥೆರಪಿಯಿಂದ ಸುಮಾರು 5 ಕಿಲೋಮೀಟರ್ ನಡೆದುಕೊಂಡಷ್ಟು ರಕ್ತಸಂಚಾರ ಹೆಚ್ಚಾಗುತ್ತದೆ ಎಂಬುದು ವಿಶೇಷವಾಗಿದೆ. ಶಿಬಿರ ಆರಂಭವಾದ ಕೆಲವೇ ದಿನಗಳಲ್ಲಿ ನೂರಾರು ನಾಗರಿಕರು ಭಾಗವಹಿಸಿ ಆರೋಗ್ಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರುವ ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಶಿಬಿರದಲ್ಲಿ ಭಾಗವಹಿಸದವರು ಏಪ್ರಿಲ್ 5 ರೊಳಗೆ ಅಕ್ಕಮ್ಮಣ್ಣಿ ಉದ್ಯಾನವನಕ್ಕೆ ಭೇಟಿ ನೀಡಿ ಉಚಿತ ಥೆರಪಿ ಸೇವೆಯನ್ನು ಪಡೆಯಬಹುದು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    17 hrs ago
  • ರಮಳವಳ್ಳಿ:ಪಟ್ಟಣದಲ್ಲಿ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ-ಬಸವ ತತ್ವ ಕುರಿತು ಉಪನ್ಯಾಸ • ಜೀವನದಲ್ಲಿ ಇಷ್ಟಲಿಂಗಪೂಜೆ- ಬಸವತತ್ವ ಸಂದೇಶಗಳಪಾಲನೆಯಿAದಜೀವನಸಾರ್ಥಕತೆ- ಡಾ.ಸಿ.ಎಂ.ಚೇತನ್‌ಕುಮಾರ್ ಹೇಳಿಕೆ ಮಳವಳ್ಳಿ: ಪಟ್ಟಣದಲ್ಲಿ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಸಮಿತಿವತಿಯಿಂದ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ಜರಗಿತು. ಪಟ್ಟಣದ ಪುಟ್ಟಸುಬ್ಬಪ್ಪನವರ ನಿವಾಸದ ಅವರಣದಲ್ಲಿ ಆಯೋಜಿಸಿದ ೧೩೮ನೇ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಡ್ಯ ಕಾವೇರಿ ಪದವಿ ಕಾಲೇಜಿನ ಹಾಗೂ ಬಸವ ತತ್ವ ಪ್ರವಚನಕಾರರಾದ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಬಸವ ತತ್ವ ಕುರಿತು ಮಾತನಾಡಿದರು. ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ವಚನಗಳುಸಾಹಿತ್ಯ, ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಸಮಾಜದ ಪ್ರತಿಯೊಬ್ಬರು ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು. ಪ್ರಸ್ತುತ ದಿನನಿತ್ಯದ ಒತ್ತಡದ ಜೀವನ ಒತ್ತಡದಲ್ಲಿ ಮುಳುಗಿದ್ದು,ಸಾರ್ಥಕತೆಯ,ಅರ್ಥಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು,ಇದರಿಂದ ಒತ್ತಡ ರಹಿತ ಸುಗಮ ಕೆಲಸ ನಡೆಯಲಿವೆ,ಯಾವುದೆ ಅತಂಕವಿರುವುದಿಲ್ಲ,ಕಾಯಕವನ್ನು ಭಯವಿಲ್ಲದೆ ಮಾಡಬಹುದು ಎಂದ ಅವರು ಮೂಡ ನಂಬಿಕೆಗಳಿAದ ಹೊರ ಬರಲು ಬಸವ ತತ್ವಗಳು ಮನುಷ್ಯನಿಗೆ ಜ್ಞಾನದ ಬೆಳಕಾಗಿವೆ,ಬಸವಣ್ಣನವರ ತತ್ವ ಸಂದೇಶಗಳ ಪಾಲನೆ ಮಾಡಿದವರು ಯಾರು ಕೆಟ್ಟಿಲ್ಲ,ಸಮಾಜದಲ್ಲಿ ಉನ್ನತ ವ್ಯಕ್ತಗಳಾಗಿದ್ದಾರೆ,ಕೆಟ್ಟಿರುವ ವ್ಯಕ್ತಿಗಳು ಬಸವಣ್ಣನವರನ್ನು ನಂಬುವುದಿಲ್ಲ ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ಅನುಭಮಳವಳ್ಳಿ:ಪಟ್ಟಣದಲ್ಲಿ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ-ಬಸವ ತತ್ವ ಕುರಿತು ಉಪನ್ಯಾಸ • ಜೀವನದಲ್ಲಿ ಇಷ್ಟಲಿಂಗಪೂಜೆ- ಬಸವತತ್ವ ಸಂದೇಶಗಳಪಾಲನೆಯಿAದಜೀವನಸಾರ್ಥಕತೆ- ಡಾ.ಸಿ.ಎಂ.ಚೇತನ್‌ಕುಮಾರ್ ಹೇಳಿಕೆ ಮಳವಳ್ಳಿ: ಪಟ್ಟಣದಲ್ಲಿ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಸಮಿತಿವತಿಯಿಂದ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ಜರಗಿತು. ಪಟ್ಟಣದ ಪುಟ್ಟಸುಬ್ಬಪ್ಪನವರ ನಿವಾಸದ ಅವರಣದಲ್ಲಿ ಆಯೋಜಿಸಿದ ೧೩೮ನೇ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಡ್ಯ ಕಾವೇರಿ ಪದವಿ ಕಾಲೇಜಿನ ಹಾಗೂ ಬಸವ ತತ್ವ ಪ್ರವಚನಕಾರರಾದ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಬಸವ ತತ್ವ ಕುರಿತು ಮಾತನಾಡಿದರು. ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ವಚನಗಳುಸಾಹಿತ್ಯ, ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಸಮಾಜದ ಪ್ರತಿಯೊಬ್ಬರು ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು. ಪ್ರಸ್ತುತ ದಿನನಿತ್ಯದ ಒತ್ತಡದ ಜೀವನ ಒತ್ತಡದಲ್ಲಿ ಮುಳುಗಿದ್ದು,ಸಾರ್ಥಕತೆಯ,ಅರ್ಥಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು,ಇದರಿಂದ ಒತ್ತಡ ರಹಿತ ಸುಗಮ ಕೆಲಸ ನಡೆಯಲಿವೆ,ಯಾವುದೆ ಅತಂಕವಿರುವುದಿಲ್ಲ,ಕಾಯಕವನ್ನು ಭಯವಿಲ್ಲದೆ ಮಾಡಬಹುದು ಎಂದ ಅವರು ಮೂಡ ನಂಬಿಕೆಗಳಿAದ ಹೊರ ಬರಲು ಬಸವ ತತ್ವಗಳು ಮನುಷ್ಯನಿಗೆ ಜ್ಞಾನದ ಬೆಳಕಾಗಿವೆ,ಬಸವಣ್ಣನವರ ತತ್ವ ಸಂದೇಶಗಳ ಪಾಲನೆ ಮಾಡಿದವರು ಯಾರು ಕೆಟ್ಟಿಲ್ಲ,ಸಮಾಜದಲ್ಲಿ ಉನ್ನತ ವ್ಯಕ್ತಗಳಾಗಿದ್ದಾರೆ,ಕೆಟ್ಟಿರುವ ವ್ಯಕ್ತಿಗಳು ಬಸವಣ್ಣನವರನ್ನು ನಂಬುವುದಿಲ್ಲ ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ಅನುಭವದ ಮಂಟಪದ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನೀಡಿದ್ದಾರೆ. ಮಹನೀಯ ಪೂರ್ವಜರು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.ನಮ್ಮ ದೇಶದ ಭಾಷೆ, ಕಲೆ ,ಸಂಸ್ಕೃತಿ ಬಹಳ ವಿಶೇಷವಾಗಿವೆ.ನಾವೆಲ್ಲರೂ ನಮ್ಮ ಮಹನಿಯ ಪೂರ್ವಜರು ನೀಡಿದ ಕೊಡುಗೆ ಬಸವ ತತ್ವ ಸಂದೇಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣವೆಂದರು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚೇತನ್‌ಕುಮಾರ್ ರವರನ್ನು ಶರಣರ ಚಿಂತನ ಮಂಥನ ಸಮಿತಿವತಿಯಿಂದ ಅಭಿನಂಧಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣರ ಚಿಂತನ ಮಂಥನ ಸಮಿತಿಯ ಎಲ್ಲ ಪದಾಧಿಕಾರಿಗಳು ನೂರಾರು ಶರಣರು,ಶರಣೆಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ವದ ಮಂಟಪದ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನೀಡಿದ್ದಾರೆ. ಮಹನೀಯ ಪೂರ್ವಜರು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.ನಮ್ಮ ದೇಶದ ಭಾಷೆ, ಕಲೆ ,ಸಂಸ್ಕೃತಿ ಬಹಳ ವಿಶೇಷವಾಗಿವೆ.ನಾವೆಲ್ಲರೂ ನಮ್ಮ ಮಹನಿಯ ಪೂರ್ವಜರು ನೀಡಿದ ಕೊಡುಗೆ ಬಸವ ತತ್ವ ಸಂದೇಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣವೆಂದರು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚೇತನ್‌ಕುಮಾರ್ ರವರನ್ನು ಶರಣರ ಚಿಂತನ ಮಂಥನ ಸಮಿತಿವತಿಯಿಂದ ಅಭಿನಂಧಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶರಣರ ಚಿಂತನ ಮಂಥನ ಸಮಿತಿಯ ಎಲ್ಲ ಪದಾಧಿಕಾರಿಗಳು ನೂರಾರು ಶರಣರು,ಶರಣೆಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ರಾದ
    1
    ರಮಳವಳ್ಳಿ:ಪಟ್ಟಣದಲ್ಲಿ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ-ಬಸವ ತತ್ವ ಕುರಿತು ಉಪನ್ಯಾಸ
•	ಜೀವನದಲ್ಲಿ ಇಷ್ಟಲಿಂಗಪೂಜೆ- ಬಸವತತ್ವ ಸಂದೇಶಗಳಪಾಲನೆಯಿAದಜೀವನಸಾರ್ಥಕತೆ- ಡಾ.ಸಿ.ಎಂ.ಚೇತನ್‌ಕುಮಾರ್ ಹೇಳಿಕೆ 
ಮಳವಳ್ಳಿ: ಪಟ್ಟಣದಲ್ಲಿ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಸಮಿತಿವತಿಯಿಂದ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ಜರಗಿತು.
ಪಟ್ಟಣದ ಪುಟ್ಟಸುಬ್ಬಪ್ಪನವರ ನಿವಾಸದ ಅವರಣದಲ್ಲಿ ಆಯೋಜಿಸಿದ ೧೩೮ನೇ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಡ್ಯ ಕಾವೇರಿ ಪದವಿ ಕಾಲೇಜಿನ ಹಾಗೂ ಬಸವ ತತ್ವ ಪ್ರವಚನಕಾರರಾದ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಬಸವ ತತ್ವ ಕುರಿತು ಮಾತನಾಡಿದರು.
ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ವಚನಗಳುಸಾಹಿತ್ಯ, ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಸಮಾಜದ ಪ್ರತಿಯೊಬ್ಬರು ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು.
ಪ್ರಸ್ತುತ ದಿನನಿತ್ಯದ ಒತ್ತಡದ ಜೀವನ ಒತ್ತಡದಲ್ಲಿ ಮುಳುಗಿದ್ದು,ಸಾರ್ಥಕತೆಯ,ಅರ್ಥಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು,ಇದರಿಂದ ಒತ್ತಡ ರಹಿತ ಸುಗಮ ಕೆಲಸ ನಡೆಯಲಿವೆ,ಯಾವುದೆ ಅತಂಕವಿರುವುದಿಲ್ಲ,ಕಾಯಕವನ್ನು ಭಯವಿಲ್ಲದೆ ಮಾಡಬಹುದು ಎಂದ ಅವರು ಮೂಡ ನಂಬಿಕೆಗಳಿAದ ಹೊರ ಬರಲು ಬಸವ ತತ್ವಗಳು ಮನುಷ್ಯನಿಗೆ ಜ್ಞಾನದ ಬೆಳಕಾಗಿವೆ,ಬಸವಣ್ಣನವರ ತತ್ವ ಸಂದೇಶಗಳ ಪಾಲನೆ ಮಾಡಿದವರು ಯಾರು ಕೆಟ್ಟಿಲ್ಲ,ಸಮಾಜದಲ್ಲಿ ಉನ್ನತ ವ್ಯಕ್ತಗಳಾಗಿದ್ದಾರೆ,ಕೆಟ್ಟಿರುವ ವ್ಯಕ್ತಿಗಳು ಬಸವಣ್ಣನವರನ್ನು ನಂಬುವುದಿಲ್ಲ ಎಂದರು.
ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ಅನುಭಮಳವಳ್ಳಿ:ಪಟ್ಟಣದಲ್ಲಿ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ-ಬಸವ ತತ್ವ ಕುರಿತು ಉಪನ್ಯಾಸ
•	ಜೀವನದಲ್ಲಿ ಇಷ್ಟಲಿಂಗಪೂಜೆ- ಬಸವತತ್ವ ಸಂದೇಶಗಳಪಾಲನೆಯಿAದಜೀವನಸಾರ್ಥಕತೆ- ಡಾ.ಸಿ.ಎಂ.ಚೇತನ್‌ಕುಮಾರ್ ಹೇಳಿಕೆ 
ಮಳವಳ್ಳಿ: ಪಟ್ಟಣದಲ್ಲಿ ಬೆಳದಿಂಗಳಲ್ಲಿ ಶರಣರ ಚಿಂತನ ಮಂಥನ ಸಮಿತಿವತಿಯಿಂದ ೧೩೮ನೇ ಶರಣರ ಚಿಂತನ ಮಂಥನ ಕಾರ್ಯಕ್ರಮ ಜರಗಿತು.
ಪಟ್ಟಣದ ಪುಟ್ಟಸುಬ್ಬಪ್ಪನವರ ನಿವಾಸದ ಅವರಣದಲ್ಲಿ ಆಯೋಜಿಸಿದ ೧೩೮ನೇ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಡ್ಯ ಕಾವೇರಿ ಪದವಿ ಕಾಲೇಜಿನ ಹಾಗೂ ಬಸವ ತತ್ವ ಪ್ರವಚನಕಾರರಾದ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ಸಿಎಂ ಜ್ಯೋತಿ ಬೆಳಗಿಸುವ ಮೂಲಕ ಬಸವ ತತ್ವ ಕುರಿತು ಮಾತನಾಡಿದರು.
ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ವಚನಗಳುಸಾಹಿತ್ಯ, ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.ಸಮಾಜದ ಪ್ರತಿಯೊಬ್ಬರು ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು.
ಪ್ರಸ್ತುತ ದಿನನಿತ್ಯದ ಒತ್ತಡದ ಜೀವನ ಒತ್ತಡದಲ್ಲಿ ಮುಳುಗಿದ್ದು,ಸಾರ್ಥಕತೆಯ,ಅರ್ಥಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು,ಇದರಿಂದ ಒತ್ತಡ ರಹಿತ ಸುಗಮ ಕೆಲಸ ನಡೆಯಲಿವೆ,ಯಾವುದೆ ಅತಂಕವಿರುವುದಿಲ್ಲ,ಕಾಯಕವನ್ನು ಭಯವಿಲ್ಲದೆ ಮಾಡಬಹುದು ಎಂದ ಅವರು ಮೂಡ ನಂಬಿಕೆಗಳಿAದ ಹೊರ ಬರಲು ಬಸವ ತತ್ವಗಳು ಮನುಷ್ಯನಿಗೆ ಜ್ಞಾನದ ಬೆಳಕಾಗಿವೆ,ಬಸವಣ್ಣನವರ ತತ್ವ ಸಂದೇಶಗಳ ಪಾಲನೆ ಮಾಡಿದವರು ಯಾರು ಕೆಟ್ಟಿಲ್ಲ,ಸಮಾಜದಲ್ಲಿ ಉನ್ನತ ವ್ಯಕ್ತಗಳಾಗಿದ್ದಾರೆ,ಕೆಟ್ಟಿರುವ ವ್ಯಕ್ತಿಗಳು ಬಸವಣ್ಣನವರನ್ನು ನಂಬುವುದಿಲ್ಲ ಎಂದರು.
ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ಅನುಭವದ ಮಂಟಪದ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನೀಡಿದ್ದಾರೆ. ಮಹನೀಯ ಪೂರ್ವಜರು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.ನಮ್ಮ ದೇಶದ ಭಾಷೆ, ಕಲೆ ,ಸಂಸ್ಕೃತಿ  ಬಹಳ ವಿಶೇಷವಾಗಿವೆ.ನಾವೆಲ್ಲರೂ ನಮ್ಮ ಮಹನಿಯ ಪೂರ್ವಜರು ನೀಡಿದ ಕೊಡುಗೆ ಬಸವ ತತ್ವ ಸಂದೇಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣವೆಂದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚೇತನ್‌ಕುಮಾರ್ ರವರನ್ನು ಶರಣರ ಚಿಂತನ ಮಂಥನ ಸಮಿತಿವತಿಯಿಂದ ಅಭಿನಂಧಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣರ ಚಿಂತನ ಮಂಥನ ಸಮಿತಿಯ ಎಲ್ಲ ಪದಾಧಿಕಾರಿಗಳು ನೂರಾರು ಶರಣರು,ಶರಣೆಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ವದ ಮಂಟಪದ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನೀಡಿದ್ದಾರೆ. ಮಹನೀಯ ಪೂರ್ವಜರು ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.ನಮ್ಮ ದೇಶದ ಭಾಷೆ, ಕಲೆ ,ಸಂಸ್ಕೃತಿ  ಬಹಳ ವಿಶೇಷವಾಗಿವೆ.ನಾವೆಲ್ಲರೂ ನಮ್ಮ ಮಹನಿಯ ಪೂರ್ವಜರು ನೀಡಿದ ಕೊಡುಗೆ ಬಸವ ತತ್ವ ಸಂದೇಶಗಳನ್ನು ಪಾಲಿಸಿಕೊಂಡು ಜೀವನ ಸಾಗಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣವೆಂದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಚೇತನ್‌ಕುಮಾರ್ ರವರನ್ನು ಶರಣರ ಚಿಂತನ ಮಂಥನ ಸಮಿತಿವತಿಯಿಂದ ಅಭಿನಂಧಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣರ ಚಿಂತನ ಮಂಥನ ಸಮಿತಿಯ ಎಲ್ಲ ಪದಾಧಿಕಾರಿಗಳು ನೂರಾರು ಶರಣರು,ಶರಣೆಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ರಾದ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    4 hrs ago
  • ಮಾಗಡಿ : ​ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು. ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ ಖಾತೆಗೆ 70 ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ. ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ ನಾವು ಸಿದ್ದರಿದ್ದೇವೆ ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು. ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.
    3
    ಮಾಗಡಿ : ​  ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ  ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ  ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. 
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ  ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು.
ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ  ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. 
ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು  ಬೇಡ ಎಂದು  ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ  ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ  ಖಾತೆಗೆ 70  ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ  ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು.
ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ.  ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ  ನಾವು ಸಿದ್ದರಿದ್ದೇವೆ  ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. 
ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು  ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ  ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ  ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.
ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ  ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    22 hrs ago
  • ದಿನಾಂಕ 04.04.2026 ರಂದು  ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಕುಡುಪು ಫೀಡರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕುಡುಪು, ರಥಬೀದಿ, ಮುಂಡ್ರೆಲ್ಲಾ, ಪಿಲಿಕುಮೇರು, ಕುಡುಪು ನಡುಮನೆ, ಕುಡುಪು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.
    1
    ದಿನಾಂಕ 04.04.2026 ರಂದು  ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಕುಡುಪು ಫೀಡರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕುಡುಪು, ರಥಬೀದಿ, ಮುಂಡ್ರೆಲ್ಲಾ, ಪಿಲಿಕುಮೇರು, ಕುಡುಪು ನಡುಮನೆ, ಕುಡುಪು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    21 hrs ago
  • ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಂಗನಾಥಸ್ವಾಮಿ ಒಡ್ಡು ಹಾಗೂ ಶನೇಶ್ವರ ದೇವಾಸ್ಥಾನ ಸುತ್ತಮುತ್ತ ಈ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಭಕ್ತರ ಮೊಬೈಲ್‌ಗಳಲ್ಲಿ ಅದರ ವಿಡಿಯೋಗಳು ಸೆರೆಗೊಂಡಿವೆ. ಆಗಾಗ್ಗೆ ಇದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಈ ಹಿಂದೆ ಪಾದಯಾತ್ರೆ ವೇಳೆ ಮಗುವಿಗೆ ಗಾಯ ಮಾಡಿದ್ದ ಇದೇ ಚಿರತೆ ಎಂದು ಶಂಕಿಸಲಾಗುತ್ತಿದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದ್ದರೂ, ಇದುವರೆಗೆ ಅದು ಬೋನಿಗೆ ಬೀಳದೇ ತಪ್ಪಿಸಿಕೊಳ್ಳುತ್ತಿದೆ. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಭಕ್ತರಲ್ಲಿ ಭೀತಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿ, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ
    1
    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಂಗನಾಥಸ್ವಾಮಿ ಒಡ್ಡು ಹಾಗೂ ಶನೇಶ್ವರ ದೇವಾಸ್ಥಾನ ಸುತ್ತಮುತ್ತ ಈ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಭಕ್ತರ ಮೊಬೈಲ್‌ಗಳಲ್ಲಿ ಅದರ ವಿಡಿಯೋಗಳು ಸೆರೆಗೊಂಡಿವೆ. ಆಗಾಗ್ಗೆ ಇದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಈ ಹಿಂದೆ ಪಾದಯಾತ್ರೆ ವೇಳೆ ಮಗುವಿಗೆ ಗಾಯ ಮಾಡಿದ್ದ ಇದೇ ಚಿರತೆ ಎಂದು ಶಂಕಿಸಲಾಗುತ್ತಿದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದ್ದರೂ, ಇದುವರೆಗೆ ಅದು ಬೋನಿಗೆ ಬೀಳದೇ ತಪ್ಪಿಸಿಕೊಳ್ಳುತ್ತಿದೆ.
ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಭಕ್ತರಲ್ಲಿ ಭೀತಿ ಹೆಚ್ಚಾಗಿದೆ.
ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿ, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    53 min ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 min ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.