logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿಕ್ಕನಾಯಕನಹಳ್ಳಿ ಕೆಡಿಪಿ ಸಭೆ: ಅಧಿಕಾರಿಗಳ ಕಾರ್ಯವೈಖರಿಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ತೀವ್ರ ತರಾಟೆ ಚಿಕ್ಕನಾಯಕನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಹಾಗೂ ಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರು ಭಾಗವಹಿಸಿ, ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಆರೋಗ್ಯ, ಕುಡಿಯುವ ನೀರು, ಶಿಕ್ಷಣ, ಅರಣ್ಯ, ಕೃಷಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ಮುಖ್ಯಾಂಶಗಳು: ಶಿಕ್ಷಣ ಇಲಾಖೆಯ ಧೋರಣೆಗೆ ಆಕ್ರೋಶ: ಶಾಲಾ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ ಎಂದು ಸಿ.ಡಿ. ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ಕೊಡಿಸುವಲ್ಲಿ ಬಿಇಒ ವಿಫಲರಾಗಿದ್ದು, ಕೇವಲ ಫಲಿತಾಂಶದ ಫೋಟೋ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಬಸ್ ಸಂಚಾರಕ್ಕೆ ಕಟ್ಟುನಿಟ್ಟಿನ ಸೂಚನೆ: ಸಾರ್ವಜನಿಕರ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಪುರಸಭಾ ಬಸ್ ನಿಲ್ದಾಣದ ಒಳಗಡೆಯೇ ಪ್ರವೇಶಿಸಿ ಸಂಚರಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು. ಮಾಹಿತಿ ಕೇಳಿದ ಸದಸ್ಯರಿಗೆ ನೋಟಿಸ್‌ಗೆ ಆಕ್ಷೇಪ: ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮಾಹಿತಿ ಕೋರಿದ್ದಕ್ಕೆ ಅಧಿಕಾರಿಗಳು 50,000 ರೂಪಾಯಿ ಹಣ ಕಟ್ಟುವಂತೆ ನೋಟಿಸ್ ನೀಡಿರುವುದು ಕಾನೂನು ಬಾಹಿರವಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟುಹಿಡಿದರು. ಕುಡಿಯುವ ನೀರು ಮತ್ತು ಮೇವಿನ ಮುನ್ನೆಚ್ಚರಿಕೆ: ತಾಲ್ಲೂಕಿನಲ್ಲಿ ಮಳೆ ಕೊರತೆಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಭೆಯಲ್ಲಿ ಶಾಸಕರಾದ ಸಿ ಬಿ ಸುರೇಶ್ ಬಾಬು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ತಹಶೀಲ್ದಾರ್ ಮಮತ ಸೇರಿದಂತೆ ನಾಮನಿರ್ದೇಶನ ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

2 hrs ago
user_Huliyarkiran
Huliyarkiran
ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
2 hrs ago

ಚಿಕ್ಕನಾಯಕನಹಳ್ಳಿ ಕೆಡಿಪಿ ಸಭೆ: ಅಧಿಕಾರಿಗಳ ಕಾರ್ಯವೈಖರಿಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ತೀವ್ರ ತರಾಟೆ ಚಿಕ್ಕನಾಯಕನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಹಾಗೂ ಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರು ಭಾಗವಹಿಸಿ, ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಆರೋಗ್ಯ, ಕುಡಿಯುವ ನೀರು, ಶಿಕ್ಷಣ, ಅರಣ್ಯ, ಕೃಷಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ಮುಖ್ಯಾಂಶಗಳು: ಶಿಕ್ಷಣ ಇಲಾಖೆಯ ಧೋರಣೆಗೆ ಆಕ್ರೋಶ: ಶಾಲಾ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ ಎಂದು ಸಿ.ಡಿ. ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ಕೊಡಿಸುವಲ್ಲಿ ಬಿಇಒ ವಿಫಲರಾಗಿದ್ದು, ಕೇವಲ ಫಲಿತಾಂಶದ ಫೋಟೋ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಬಸ್ ಸಂಚಾರಕ್ಕೆ ಕಟ್ಟುನಿಟ್ಟಿನ ಸೂಚನೆ: ಸಾರ್ವಜನಿಕರ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಪುರಸಭಾ ಬಸ್ ನಿಲ್ದಾಣದ ಒಳಗಡೆಯೇ ಪ್ರವೇಶಿಸಿ ಸಂಚರಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು. ಮಾಹಿತಿ ಕೇಳಿದ ಸದಸ್ಯರಿಗೆ ನೋಟಿಸ್‌ಗೆ ಆಕ್ಷೇಪ: ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮಾಹಿತಿ ಕೋರಿದ್ದಕ್ಕೆ ಅಧಿಕಾರಿಗಳು 50,000 ರೂಪಾಯಿ ಹಣ ಕಟ್ಟುವಂತೆ ನೋಟಿಸ್ ನೀಡಿರುವುದು ಕಾನೂನು ಬಾಹಿರವಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟುಹಿಡಿದರು. ಕುಡಿಯುವ ನೀರು ಮತ್ತು ಮೇವಿನ ಮುನ್ನೆಚ್ಚರಿಕೆ: ತಾಲ್ಲೂಕಿನಲ್ಲಿ ಮಳೆ ಕೊರತೆಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಭೆಯಲ್ಲಿ ಶಾಸಕರಾದ ಸಿ ಬಿ ಸುರೇಶ್ ಬಾಬು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ತಹಶೀಲ್ದಾರ್ ಮಮತ ಸೇರಿದಂತೆ ನಾಮನಿರ್ದೇಶನ ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
    1
    ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    32 min ago
  • ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ. ​ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ. ​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು. ​ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ: ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು. ​ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ​ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು. ​ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ: ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು. ​ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.
    4
    ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ.
​ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ.
​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.
​ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ:
ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು.
​ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
​ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು:
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು.
​ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ:
ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು.
​ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    5 hrs ago
  • ತಮಾಷೆ ಹಾಗೂ ಆರೋಗ್ಯಕರವಾದಂತ ವಿಡಿಯೋ ಇದು ನೋಡಿ #onlinetv24x7
    1
    ತಮಾಷೆ ಹಾಗೂ ಆರೋಗ್ಯಕರವಾದಂತ ವಿಡಿಯೋ ಇದು ನೋಡಿ  #onlinetv24x7
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    23 hrs ago
  • ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ!!! *ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ* *ಕೊರಟಗೆರೆ, ಸೆ.16:* ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ (BLO) ಅವರು ಕರ್ತವ್ಯದ ವೇಳೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ. ಹೊಳವನಹಳ್ಳಿ 1ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬಿ.ಎಲ್.ಓ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕ್ಕ ಅವರು ನಿನ್ನೆ ದಿನಾಂಕ 15-09-2026 ರಂದು ಕೈಬಿಟ್ಟ ಮತದಾರರಿಗೆ ನೋಟಿಸ್ ನೀಡುವ ಕಾರ್ಯದಲ್ಲಿದ್ದರು. ಈ ವೇಳೆ ತಾಲ್ಲೂಕು ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಅವರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಮಕ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹೊಳವನಹಳ್ಳಿಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇ.ಸಿ.ಜಿ ಪರೀಕ್ಷೆಯಲ್ಲಿ ಹೃದಯದ ತೊಂದರೆ ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರು ಇನ್ನೂ ಕೊರಟಗೆರೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ತಾಲ್ಲೂಕು ಅಧಿಕಾರಿಗಳೇ ನೇರ ಹೊಣೆ ಎಂದು ಅಂಗನವಾಡಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಕ್ಕ ಅವರಿಗೆ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದೆ. ಹಾಗೂ ಇನ್ನು ಮುಂದೆ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿ ಮಾನಸಿಕ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
    4
    ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ!!! 
*ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ*
*ಕೊರಟಗೆರೆ, ಸೆ.16:* ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ (BLO) ಅವರು ಕರ್ತವ್ಯದ ವೇಳೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ.
ಹೊಳವನಹಳ್ಳಿ 1ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬಿ.ಎಲ್.ಓ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕ್ಕ ಅವರು ನಿನ್ನೆ ದಿನಾಂಕ 15-09-2026 ರಂದು ಕೈಬಿಟ್ಟ ಮತದಾರರಿಗೆ ನೋಟಿಸ್ ನೀಡುವ ಕಾರ್ಯದಲ್ಲಿದ್ದರು. ಈ ವೇಳೆ ತಾಲ್ಲೂಕು ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಅವರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಮಕ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಹೊಳವನಹಳ್ಳಿಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇ.ಸಿ.ಜಿ ಪರೀಕ್ಷೆಯಲ್ಲಿ ಹೃದಯದ ತೊಂದರೆ ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರು ಇನ್ನೂ ಕೊರಟಗೆರೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ತಾಲ್ಲೂಕು ಅಧಿಕಾರಿಗಳೇ ನೇರ ಹೊಣೆ ಎಂದು ಅಂಗನವಾಡಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಕ್ಕ ಅವರಿಗೆ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದೆ. ಹಾಗೂ ಇನ್ನು ಮುಂದೆ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿ ಮಾನಸಿಕ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
    user_ವಿಜಯ್ ಶಂಕರ್
    ವಿಜಯ್ ಶಂಕರ್
    Local News Reporter ಕೊರಟಗೆರೆ, ತುಮಕೂರು, ಕರ್ನಾಟಕ•
    7 hrs ago
  • ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
    1
    ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI 
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
    user_Madhugiri news
    Madhugiri news
    Local News Reporter ಮಧುಗಿರಿ, ತುಮಕೂರು, ಕರ್ನಾಟಕ•
    12 hrs ago
  • ಇ ಗೌರಸಮುದ್ರ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವಕ್ಕೆ ವಿಘ್ನ! ಗೌರಸಮುದ್ರ ಮಾರಮ್ಮ ದೊಡ್ಡ ಜಾತ್ರೆಯ ನಂತರ ಎರಡನೇ ದಿನ ಸಿಡಿ ಉತ್ಸವ ನಡೆಸುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತದೆ ಇಂದು ಗೌರಸಮುದ್ರ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವಕ್ಕೆ ವಿಘ್ನ! ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಶ್ರೀ ಮಾರಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಾಲ್ಕು ಗಂಟೆಗೆ ಸಿಡಿ ಉತ್ಸವ ನಡೆಯಬೇಕಿತ್ತು. ಸಿಡಿ ಉತ್ಸವದಲ್ಲಿ ಭಾಗವಹಿಸಲು ಕೋನಸಾಗರ ಗ್ರಾಮದ ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ಗೌರಸಮುದ್ರಕ್ಕೆ ಆಗಮಿಸಿದ್ದರು. ಇನ್ನೇನು ಸಿಡಿ ಉತ್ಸವ ಆರಂಭವಾಗಬೇಕು ಎನ್ನುವಷ್ಟರಲ್ಲೇ… ಸಿಡಿ ಮರದ ತುಂಡೊಂದು ಮುರಿದು ಬಿದ್ದಿದೆ! ಬಹುಶಹ ಸಿಡಿ ಮರ ಹಳೆಯದಾಗಿದ್ದು ಇದರಿಂದ ಮುರಿದು ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಇದರಿಂದ ಸಿಡಿ ಉತ್ಸವಕ್ಕೆ ವಿಘ್ನ ಎದುರಾಗಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಮತ್ತೊಮ್ಮೆ ಸಿಡಿ ಮರವನ್ನು ಸರಿಪಡಿಸಿ ಕಟ್ಟುವ ಪ್ರಯತ್ನ ನಡೆಸಲಾಗಿದ್ದು, ಮತ್ತೆ ಸಮಸ್ಯೆ ಉಂಟಾಗಿದ್ದು ಹಿನ್ನೆಲೆಯಲ್ಲಿ ಭಕ್ತರು ಆತಂಕಗೊಂಡಿದ್ದಾರೆ. ಗೌರಸಮುದ್ರ ಮಾರಮ್ಮದೇವಿಯ ಜಾತ್ರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಿಡಿ ಮರ ತುಂಡಾಗಿ ಉತ್ಸವಕ್ಕೆ ವಿಘ್ನ ಉಂಟಾಗಿದೆ ಎಂದು ಗ್ರಾಮದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂದರ್ಭದಲ್ಲಿ ಯಾವುದೇ ಅಪಾಯವಾಗಿಲ್ಲ. ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
    1
    ಇ ಗೌರಸಮುದ್ರ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವಕ್ಕೆ ವಿಘ್ನ!
ಗೌರಸಮುದ್ರ ಮಾರಮ್ಮ ದೊಡ್ಡ ಜಾತ್ರೆಯ ನಂತರ ಎರಡನೇ ದಿನ ಸಿಡಿ ಉತ್ಸವ ನಡೆಸುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತದೆ
ಇಂದು ಗೌರಸಮುದ್ರ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವಕ್ಕೆ ವಿಘ್ನ!
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಶ್ರೀ ಮಾರಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಾಲ್ಕು ಗಂಟೆಗೆ ಸಿಡಿ ಉತ್ಸವ ನಡೆಯಬೇಕಿತ್ತು.
ಸಿಡಿ ಉತ್ಸವದಲ್ಲಿ ಭಾಗವಹಿಸಲು ಕೋನಸಾಗರ ಗ್ರಾಮದ ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ಗೌರಸಮುದ್ರಕ್ಕೆ ಆಗಮಿಸಿದ್ದರು.
ಇನ್ನೇನು ಸಿಡಿ ಉತ್ಸವ ಆರಂಭವಾಗಬೇಕು ಎನ್ನುವಷ್ಟರಲ್ಲೇ… ಸಿಡಿ ಮರದ ತುಂಡೊಂದು ಮುರಿದು ಬಿದ್ದಿದೆ!
ಬಹುಶಹ ಸಿಡಿ ಮರ ಹಳೆಯದಾಗಿದ್ದು ಇದರಿಂದ ಮುರಿದು ಬಿದ್ದಿರುವ ಶಂಕೆ ವ್ಯಕ್ತವಾಗಿದೆ
ಇದರಿಂದ ಸಿಡಿ ಉತ್ಸವಕ್ಕೆ ವಿಘ್ನ ಎದುರಾಗಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಮತ್ತೊಮ್ಮೆ ಸಿಡಿ ಮರವನ್ನು ಸರಿಪಡಿಸಿ ಕಟ್ಟುವ ಪ್ರಯತ್ನ ನಡೆಸಲಾಗಿದ್ದು,   ಮತ್ತೆ ಸಮಸ್ಯೆ ಉಂಟಾಗಿದ್ದು ಹಿನ್ನೆಲೆಯಲ್ಲಿ ಭಕ್ತರು ಆತಂಕಗೊಂಡಿದ್ದಾರೆ.
ಗೌರಸಮುದ್ರ ಮಾರಮ್ಮದೇವಿಯ ಜಾತ್ರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಿಡಿ ಮರ ತುಂಡಾಗಿ ಉತ್ಸವಕ್ಕೆ ವಿಘ್ನ ಉಂಟಾಗಿದೆ ಎಂದು ಗ್ರಾಮದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂದರ್ಭದಲ್ಲಿ ಯಾವುದೇ ಅಪಾಯವಾಗಿಲ್ಲ. ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಧಾರ್ಮಿಕ ಜಾತ್ರೆ ಮತ್ತು ಆಚರಣೆಗಳು ಭಾವೈಕ್ಯತೆಗೆ ಪೂರಕ ಎಂದು ಮೊಣಕಾಲ್ಮೂರು ಬಿಜೆಪಿ ಮುಖಂಡ ಏನ್ ರಘು ಮೂರ್ತಿ ಹೇಳಿದರು ಧಾರ್ಮಿಕ ಜಾತ್ರೆ ಮತ್ತು ಆಚರಣೆಗಳು ಭಾವೈಕ್ಯತೆಗೆ ಪೂರಕ ಎಂದು ಮೊಣಕಾಲ್ಮೂರು ಬಿಜೆಪಿ ಮುಖಂಡ ಏನ್ ರಘು ಮೂರ್ತಿ ಹೇಳಿದರು ಅವರು ಇಂದು ಗೌರಸಮದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ಇಡೀ ದಕ್ಷಿಣ ಭಾರತದಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು ಈ ದೇವಿಯ ಜಾತ್ರೆ ಮುಖಾಂತರ ಭಕ್ತಾದಿಗಳಿಂದ ಸಲ್ಲುವಂತಹ ಪ್ರತಿಯೊಂದು ಸಂಕಲ್ಪಗಳು ಈ ನಾಡಿನ ಜನತೆಗೆ ಸುಖ ಶಾಂತಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಜಗನ್ಮಾತೆಯಾದ ಮಾರಮ್ಮ ದೇವಿ ಕರುಣಿಸಲಿ ಇದರ ಮುಖಾಂತರ ಈ ಭಾಗದ ಜನ ಜೀವನದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಬದಲಾವಣೆ ತರಲಿ ಎಂದು ಆಶಿಸಿದರು ಸಂದರ್ಭದಲ್ಲಿ ಜಿಲ್ಲಾ ದಿಶಾ ಕಮಿ ಟಿಯ ಸದಸ್ಯ ಹೊನ್ನೂರ್ ಗೋವಿಂದಪ್ಪ ಬಿಜೆಪಿ ಮುಖಂಡರಾದ ಶ್ರೀನಿವಾಸ್ ಪ್ರದೀಪ್ ಕುಮಾರ್ ವಕೀಲರದ ಶಶಿ ಕುಮಾರ್ ಮಾಜಿ ಪ್ರದಾನ ಜಿ ಟಿ ಮಾರಣ್ಣ ಮುಂತಾದವರು ಹಾಜರಿದ್ದರು
    1
    ಧಾರ್ಮಿಕ ಜಾತ್ರೆ ಮತ್ತು ಆಚರಣೆಗಳು ಭಾವೈಕ್ಯತೆಗೆ ಪೂರಕ ಎಂದು ಮೊಣಕಾಲ್ಮೂರು ಬಿಜೆಪಿ ಮುಖಂಡ ಏನ್ ರಘು ಮೂರ್ತಿ ಹೇಳಿದರು 
ಧಾರ್ಮಿಕ ಜಾತ್ರೆ ಮತ್ತು ಆಚರಣೆಗಳು ಭಾವೈಕ್ಯತೆಗೆ ಪೂರಕ ಎಂದು ಮೊಣಕಾಲ್ಮೂರು ಬಿಜೆಪಿ ಮುಖಂಡ ಏನ್ ರಘು ಮೂರ್ತಿ ಹೇಳಿದರು 
ಅವರು ಇಂದು ಗೌರಸಮದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ಇಡೀ ದಕ್ಷಿಣ ಭಾರತದಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಈ ದೇವಸ್ಥಾನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ ಭಕ್ತರ ಕಠಿಣ ವ್ರತ ಮತ್ತು ಭಕ್ತಿಯ ನಂಬಿಕೆ ಮುಗಿಲು ಮುಟ್ಟಿದೆ ಇಂತಹ ಪವಿತ್ರ ದೇವಸ್ಥಾನಕ್ಕೆ ಇಲ್ಲಿ ಬರುವಂತ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂಬುದು ಭಕ್ತಾದಿಗಳ ಒತ್ತಾಸೆಯಾಗಿದೆ 
ಸರಿ ಸುಮಾರು ನಾಲ್ಕರಿಂದ ಐದು ಲಕ್ಷ ಬಕ್ತಾದಿಗಳು ಬರುವಂತಹ ಈ ಶ್ರದ್ದಾ ಕೇಂದ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದರು
ಈ ದೇವಿಯ ಜಾತ್ರೆ ಮುಖಾಂತರ ಭಕ್ತಾದಿಗಳಿಂದ ಸಲ್ಲುವಂತಹ ಪ್ರತಿಯೊಂದು ಸಂಕಲ್ಪಗಳು ಈ ನಾಡಿನ ಜನತೆಗೆ ಸುಖ ಶಾಂತಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಜಗನ್ಮಾತೆಯಾದ ಮಾರಮ್ಮ ದೇವಿ ಕರುಣಿಸಲಿ ಇದರ ಮುಖಾಂತರ ಈ ಭಾಗದ ಜನ ಜೀವನದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಬದಲಾವಣೆ ತರಲಿ ಎಂದು ಆಶಿಸಿದರು 
ಸಂದರ್ಭದಲ್ಲಿ ಜಿಲ್ಲಾ ದಿಶಾ ಕಮಿ ಟಿಯ ಸದಸ್ಯ ಹೊನ್ನೂರ್ ಗೋವಿಂದಪ್ಪ ಬಿಜೆಪಿ ಮುಖಂಡರಾದ ಶ್ರೀನಿವಾಸ್ ಪ್ರದೀಪ್ ಕುಮಾರ್ ವಕೀಲರದ ಶಶಿ ಕುಮಾರ್ ಮಾಜಿ ಪ್ರದಾನ ಜಿ ಟಿ ಮಾರಣ್ಣ ಮುಂತಾದವರು ಹಾಜರಿದ್ದರು
    user_Nagesh BR Durgavara
    Nagesh BR Durgavara
    Photographer Chitradurga, Karnataka•
    3 hrs ago
  • ಇಂದು ತಿಪಟೂರಿನಲ್ಲಿ ನಡೆದ ರೈತರ ಪ್ರತಿಭಟನೆ ಸಭೆಗೆ ಜೆಡಿಎಸ್ ಮುಖಂಡ ಶಾಂತಕುಮಾರ್ ಬಂದಿದ್ದಕ್ಕೆ ರೈತ ಮುಖಂಡರ ಆಕ್ಷೇಪ: ಜಿಲ್ಲಾಧ್ಯಕ್ಷ ಪದ್ದಣ್ಣ ಪರೋಕ್ಷ ಎಚ್ಚರಿಕೆ.
    1
    ಇಂದು ತಿಪಟೂರಿನಲ್ಲಿ ನಡೆದ ರೈತರ ಪ್ರತಿಭಟನೆ ಸಭೆಗೆ ಜೆಡಿಎಸ್ ಮುಖಂಡ ಶಾಂತಕುಮಾರ್ ಬಂದಿದ್ದಕ್ಕೆ ರೈತ ಮುಖಂಡರ ಆಕ್ಷೇಪ: ಜಿಲ್ಲಾಧ್ಯಕ್ಷ ಪದ್ದಣ್ಣ ಪರೋಕ್ಷ ಎಚ್ಚರಿಕೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    36 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.