ಶಿವಮೊಗ್ಗ-ಲಂಚ ಪಡೆದು ಜೈಲು ಸೇರಿದ ಅಧಿಕಾರಿಗೆ ರೈತ ನೀಡಿದ ಗಿಫ್ಟ್ ಏನು..! ಶಿವಮೊಗ್ಗ : ಲಂಚ ಪಡೆದು ಶಿವಮೊಗ್ಗದ ಜೈಲ್ ಸೇರಿದ ಭೂಸ್ವಾಧಿನ ಅಧಿಕಾರಿ ಸಿದ್ದಲಿಂಗರೆಡ್ಡಿ ಅವರನ್ನು ನೋಡಲು ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ ವಿಶುಕುಮಾರ್ ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾ ಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಇತ್ತೀಚೆಗೆ ಲಂಚ ಪಡೆಯುತ್ತಿ ದ್ದಾಗ ಲೋಕಾ ದಾಳಿಗೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾರೆ. ಈ ಅಧಿಕಾರಿಯ ಕಾರ್ಯ ವೈಖರಿಯಿಂದ ನೊಂದಿದ್ದ ವಿಶುಕುಮಾರ್ ನಿನ್ನೆ ಸಿದ್ದಲಿಂಗರೆಡ್ಡಿ ಯನ್ನು ಭೇಟಿಯಾಗಿ ತಂದ ವಸ್ತುವನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ವಿಶುಕುಮಾರ್, ಸಿದ್ದಲಿಂಗರೆಡ್ಡಿ ಅವರ ಭ್ರಷ್ಟಾಚಾರ ಮತ್ತು ರೈತ ವಿರೋಧಿ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದರು. ಸರ್ಕಾರಕ್ಕೆ ಹಣ ಉಳಿಸುವ ನೆಪದಲ್ಲಿ ರೈತರಿಗೆ ಅನ್ಯಾಯ ಮಾಡಲಾಗಿದೆ. ತಮ್ಮ ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಕೇವಲ 420 ರೂಪಾಯಿ ಮಾತ್ರ ಬೆಲೆ ನಿಗದಿಪಡಿಸಲಾಗಿತ್ತು ಎಂದು ಹೇಳಿದರು. ರೈತರನ್ನು ಸಂಕಷ್ಟಕ್ಕೆ ತಳ್ಳಿ ಸರ್ಕಾರಕ್ಕೆ ಹಣ ಉಳಿಸಲು ಮುಂದಾದ ಈ ಅಧಿಕಾರಿ ಈಗ ಲಂಚ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸರ್ಕಾರದ ಆರನೇ ಗ್ಯಾರಂಟಿಗೆ ಬೇಕಾದ ಹಣವನ್ನು ಇವರು ಉಳಿಸಿರಬಹುದೆಂದು ವ್ಯಂಗ್ಯವಾಡಿದರು. ಜೈಲಿನಲ್ಲಿ ಅವರಿಗೆ ತೊಂದರೆ ಆಗಬಾರ ದೆಂದು ಸೊಳ್ಳೆಬತ್ತಿ ತಂದಿದ್ದೇನೆ. ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪ್, ತಿನ್ನಲು ಬ್ರೆಡ್ ಮತ್ತು ಬಾಳೆಹಣ್ಣು ತಂದಿದ್ದೇನೆ. ದೇವರು ಅವರಿಗೆ ಆರೋಗ್ಯ ನೀಡಲಿ ಮತ್ತು ಸರ್ಕಾರಕ್ಕೆ ಇನ್ನಷ್ಟು ಹಣ ಉಳಿಸಲು ಶಕ್ತಿ ಕೊಡಲಿ ಎಂದು ವಿಶುಕುಮಾರ್ ತಿಳಿಸಿದರು.

- ಶಿವಮೊಗ್ಗ: ನಗರದಲ್ಲಿ ಜೀವ ತೆಗೆಯುತ್ತಿರುವ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ. ಒಂದು ಕಡೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡುಕಿ ಪರಿಶೀಲಿಸುತ್ತಿ ದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿ ಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ.1
- ಭದ್ರಾವತಿ ತಾಲ್ಲೂಕು ಬಂಜಾರ ಸಂಘ ಹಾಗೂ ಸಮಾಜದ ವತಿಯಿಂದ ಅದ್ದೂರಿಯಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ1
- ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ನಿನ್ನೆಯಿಂದ ನಡೆಯುತ್ತಿದ್ದು ಎರಡನೇ ದಿನವಾದ ಇಂದು ಬುಧವಾರದ ಶ್ರೀ ದೇವಿಯ ಅಲಂಕಾರ ಮತ್ತು ಪೂಜೆ2
- ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆ ಭಾವನೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ದಾವಣಗೆರೆ ನಗರದಲ್ಲಿ ಎಸ್ಪಿ ಶೇಖರ್ ಹೆಚ್ ಟಿ ಐಪಿಎಸ್ ರವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಫಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತಕ್ಕೆ ಮುಕ್ತಾಯವಾಗಿತು. ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತದಲ್ಲಿ ಸಮಾಪ್ತಿಯಾಯಿತು. ಪೊಲೀಸ್ ಪಥ ಸಂಚಲನದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ವಸಂತ್, ಶ್ರೀ ಸುನೀಲ್ ಕುಮಾರ್, ಶ್ರೀಮತಿ ಶಿಲ್ಪಾ, ಶ್ರೀ ನಂಜುಂಡಸ್ವಾಮಿ, ಶ್ರೀ ಮಂಜುನಾಥ ಕುಪ್ಪೇಲೂರು, ಪಿ ಎಸ್ ಐ ರವರಾದ ಶ್ರೀ ರವಿನಾಯ್ಕ, ಶ್ರೀ ಸಚಿನ್, ಶ್ರೀ ಮತಿ ಶಕುಂತಲಾ ಇತರರು, ಆರ್ ಎ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು ಹಾಗೂ ಸಿಬ್ಬಂದಿಗಳು, ನಗರ ಪೊಲೀಸ್ ಹಾಗೂ ಡಿ ಎ ಆರ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ರಾಜು4
- ಕಡೂರು : ಬಹುತೇಕ ಮಾರ್ಚ್ ತಿಂಗಳಲ್ಲಿ ಕಡೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ಸಮ್ಮೇಳನದ ಪೂರ್ವಭಾವಿ ಸಿದ್ದತೆಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಒತ್ತುಕೊಡಲಾಗಿದೆ. ಈಗಾಗಲೇ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ನಿರ್ಣಯದೊಂದಿಗೆ ಆಯ್ಕೆಗೊಳಿಸಲಾಗುತ್ತದೆ. ಸಮ್ಮೇಳನದ ಮಹಾಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು, ಹಾಸನ ಕ್ಷೇತ್ರದ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮತ್ತು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರನ್ನು ಸಮಿತಿಯ ಪೋಷಕರನ್ನಾಗಿ ಆಯ್ಕೆಗೊಳಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಒಳಗೊಂಡAತೆ ವಿವಿಧ ಉಪಸಮಿತಿಗಳಲ್ಲಿ ಪದಾಧಿಕಾರಿಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ನೇತೃತ್ವ ಹಾಗೂ ಸ್ವಾಗತಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದತೆ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದರು. ಈ ಬಾರಿಯ ಸಮ್ಮೇಳನದಲ್ಲಿ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಲಾಗುತ್ತದೆ. ಶೋಷಿತ ಸಮುದಾಯದ ಜಿಲ್ಲೆಯ ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಪೂರ್ವಭಾವಿ ಸಭೆಯಲ್ಲಿ ಆಶಯವ್ಯಕ್ತಗೊಂಡಿದ್ದು, ಫೆ.22ರಂದು ಎನ್.ಆರ್.ಪುರದಲ್ಲಿ ನಡೆಯುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮವಾಗಿ ಆಯ್ಕೆಗೊಳಿಸಲಾಗುತ್ತದೆ ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಚಟ್ನಳ್ಳಿ ಹಾಗೂ ಬೀರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನವು ಈ ಬಾರಿ ವಿಶೇಷವಾಗಿ ಕಡೂರಿಗೆ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೆಲಸಕ್ಕೆ ಎಲ್ಲರ ವಿಶ್ವಾಸವನ್ನು ಪಡೆದು ಸಮ್ಮೇಳನದ ಯಶಸ್ವಿಗೆ ಒತ್ತುಕೊಡಲಾಗುತ್ತದೆ. ಮುಖ್ಯವಾಗಿ ಸಮ್ಮೇಳನಾಧ್ಯಕ್ಷರನ್ನಾಗಿ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕೆಂಬುದು ಸಮಿತಿಯ ಒಕ್ಕೂರಲ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಪರಮೇಶ್, ರವಿದಳವಾಯಿ, ಯರದಕೆರೆ ರಾಜಪ್ಪ, ಸಿಂಗಟಗೆರೆ ಸಿದ್ದಪ್ಪ, ಸೀತಾಲಕ್ಷಿö್ಮÃ, ಟಿ.ಆರ್. ರೇಣುಕಯ್ಯ, ಗೋವಿಂದಸ್ವಾಮಿ, ಕೆ.ಜಿ. ವಸಂತಕುಮಾರ್, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಗೆದ್ಲೇಹಳ್ಳಿ ಜಗದೀಶ್, ಎನ್.ಎಚ್. ನಂಜುAಡಸ್ವಾಮಿ, ಷಣ್ಮುಖಪ್ಪ, ನಾಗರಾಜ್, ಆರ್.ಜಿ. ಕೃಷ್ಣಸ್ವಾಮಿ, ಹಿರೇನಲ್ಲೂರು ಶ್ರೀನಿವಾಸ್, ಶಿವಲಿಂಗಸ್ವಾಮಿ ಮತ್ತಿತರಿದ್ದರು.4
- ಚಳ್ಳಕೆರೆ ನಗರದ ಸೂಪರ್ ಮಾರ್ಟ್ ನಲ್ಲಿ ಅವದಿ ಮುಗಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಮೇಲ್ಭಾಗದ ಮೆಟ್ರೋ ಪ್ರೋರ್ಟ್ ಸೂಪರ್ ಮಾರ್ಕೇಟ್ ನಲ್ಲಿ ಅವಧಿ ಮುಗಿದ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ1
- ಚಿತ್ರದುರ್ಗ ರಸ್ತೆ ದಾಟುವ ವಿಚಾರಕ್ಕೆ ಬೈಕ್ ಸವಾರ ಹಾಗೂ KSRTC ಬಸ್ ಡ್ರೈವರ್ ಕಿರಿಕ್ ಮಾಡ್ಕೊಂಡು, ಇತರರಿಗೆ ತೊಂದರೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈಘಟನೆ ನಡೆದಿದೆ. ಚಿತ್ರದುರ್ಗ ಡಿಪೋದ Ksrtc ಬಸ್ ಚಿತ್ರದುರ್ಗದಿಂದ-ಪಾವಗಡಕ್ಕೆ ಹೊರಟಿತ್ತು. ಈ ವೇಳೆ ಬಿಗ್ ಬಾಸ್ ಹೋಟಲ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶವಾಗುವ ವೇಳೆ ಹೆದ್ದಾರಿಯಲ್ಲಿ ಬಂದ ಬೈಕ್ ಸವಾರನಿಗೆ ಬಸ್ ಎದುರಾಗಿದ್ದು, ಮೈಮೇಲೆ ಬರ್ತೀಯಾ ಅಂತಾ ಪರಸ್ಪರ ಬಸ್ ಕಂಡಕ್ಟರ್ ಹಾಗೂ ಬೈಕ್ ಸವಾರರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಹೆದ್ದಾರಿಯಲ್ಲಿ ವಾಹನಗಳು ಕ್ಯೂ ನಿಂತು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟಾಯ್ತು. ಈ ವೇಳೆ ಇತರ ಸವಾರರು ಕಂಡಕ್ಟರ್ ಹಾಗೂ ಬೈಕ್ ಸವಾರನಿಗೆ ತರಾಟೆಗೆ ತೆಗೆದುಕೊಂಡಿದ್ದು, ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.1
- ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.1