Shuru
Apke Nagar Ki App…
``ಹಿಂದೂ ಸಮಾಜೋತ್ಸವ``ಹಿರೇಗುತ್ತಿ ಮಂಡಲ.ಕುಮಟಾ. ಉತ್ತರ ಕನ್ನಡ. ಸ್ಥಳ:ಶ್ರೀ ಮಹಾಲಕ್ಷ್ಮೀ ರವಳನಾಥ ದೇವಸ್ಥಾನದ ಮುಂದುಗಡೆ. 15-03-2026 #ವಿರಾಟ್ ಹಿಂದೂ ಸಮಾಜೋತ್ಸವ.
Narayan P.
``ಹಿಂದೂ ಸಮಾಜೋತ್ಸವ``ಹಿರೇಗುತ್ತಿ ಮಂಡಲ.ಕುಮಟಾ. ಉತ್ತರ ಕನ್ನಡ. ಸ್ಥಳ:ಶ್ರೀ ಮಹಾಲಕ್ಷ್ಮೀ ರವಳನಾಥ ದೇವಸ್ಥಾನದ ಮುಂದುಗಡೆ. 15-03-2026 #ವಿರಾಟ್ ಹಿಂದೂ ಸಮಾಜೋತ್ಸವ.
More news from ಕರ್ನಾಟಕ and nearby areas
- ಮಕ್ಕಳ ವಿಚಾರವಾಗಿ ಎಚ್ಚರವಿರಲಿ1
- ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಜೀಪು ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಜೀಪು ಚಾಲಕ ದೇವಿಪ್ರಸಾದ್ ಗಾಯಗೊಂಡವರಾಗಿದ್ದಾರೆ. ಇವರು ಉಪ್ಪಿನಂಗಡಿಯಿಂದ ಕೊಯಿಲ ಕಡೆಗೆ ಬರುತ್ತಿದ್ದ ವೇಳೆ ಕೆಮ್ಮಾರದಲ್ಲಿ ನಿಯಂತ್ರಣ ತಪ್ಫಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಸ್ಥಳೀಯ ಯುವಕರಾದ ಹನೀಫ್ ಅಳಕೆ, ನವಾಝ್, ಝುಬೈರ್ ಹಾಗೂ ಹಬೀಬ್‌ರವರು ಗಾಯಾಳುವನ್ನು ಮೇಲೆತ್ತಿ, ಹನೀಫ್‌ರವರ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ದೇವಿಪ್ರಸಾದ್‌ರವರು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.1
- ನಾಲ್ಕು ಸೈಕಲ್ ಮತ್ತು ಮನೆಗಳನ್ನು ಕೊಡುವದಕ್ಕಿಂತ ಕೇವಲ ಭಾಷಣ ಮಾಡದೆ ನಿಜವಾಗಿ ರೈತರ ಪರ ಕೆಲಸ ಮಾಡಿದರೆ, ರೈತರು ಶಾಂತವಾಗುತ್ತಾರೆ ನಂತರ ಹಂತ ಹಂತವಾಗಿ ರಾಜ್ಯ ದೇಶ ಸಮೃದ್ದಿಯಾಗುತ್ತದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಇವರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು. ಗೋಕಾಕ ತಾಲೂಕಿನ ಕೊಣ್ಣೂರ ಪಟ್ಣದ ಹೊರವಲಯದ ಕೊಣ್ಣೂರ ಸಾವಳಗಿ ಮುಖ್ಯ ರಸ್ತೆಯಿಂದ ಶ್ರೀ ಕಂಠಿ ಲಕ್ಷ್ಮೀದೇವಿ ದೇವಸ್ಥಾನದ ವರೆಗೆ ರೈತರಿಗೆ ಅನೂಕೂಲ ಆಗಲೆಂದು ಅಂದಾಜು ಒಂದು ಕೋಟಿ ರೂ ವೆಚ್ಚದ ರಸ್ತೆ ಅಬಿವೃದ್ದಿ ಕಾಮಗಾರಿಗೆ ಶಾಸಕ ರಮೇಶ ಜಾರಕಿಹೋಳಿ ಇವರು ಭೂಮಿ ಪೂಜೆ ನೇರವೆರಿಸಿದರು. ಸ್ಥಳಿಯ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸರಕಾರವನ್ನು ಟೀಕೆ ಮಾಡುದಕ್ಕಿಂತ ಸಾದ್ಯವಾದಷ್ಟ ಅಬಿವೃದ್ದಿ ಕಾರ್ಯಗಳನ್ನು ಮಾಡಬೇಕು , ಟೀಕೆ ಮಾಡುತ್ತಾ ಕುತರೆ ಆಗೊದಿಲ್ಲ. ಸರಕಾರದ ಒಂದೊಂದು ಪದ್ದತಿ ಇರುತ್ತದೆ, ನಾನು ನೀರಾವರಿ ಮಂತ್ರಿ ಇದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಚಿಕ್ಕೋಡಿಯಲ್ಲಿ ಮತ್ತು ನಮ್ಮ ಬಾಗದಲ್ಲಿ ಸವಳು ಜವಳು ತೆಗೆದು ರೈತರಿಗೆ ಅನೂಕೂಲಕ್ಕಾಗಿ ರಸ್ತೆ ಅಬಿವೃದ್ದಿಗಾಗಿ 200 ಕೋಟಿ ರೂ ಇಟ್ಟು ಹೊಸ ಯೋಜನೆ ಮಾಡಲಾಗಿತ್ತು ,ನನ್ನ ರಾಜಿನಾಮೆಯಿಂದ ಅದು ಇವತ್ತು ಕುಂಟಿತವಾಗಿದೆ , ದೇವರ ಆಶಿರ್ವಾದ ಮತ್ತು ಜನತೆ ಆಶಿರ್ವಾದೊಂದಿಗೆ ಮತ್ತೆ ಅದೆ ಸ್ಥಾನಕ್ಕೆ ಬಂದರೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಬಿವೃದ್ದಿ ಕಾರ್ಯ ಮಾಡುತ್ತೇನೆ. ಮನುಷ್ಯ ತಪ್ಪು ಮಾಡುವುದು ಸಹಜ ತಿದ್ದಿಕೊಂಡು ಒಗ್ಗಟ್ಟಾಗಿ ಇದ್ದು ಮತ್ತೆ ನನಗೆ ಆಶಿರ್ವದಿಸಿದರೆ ಇನ್ನು ಹೆಚ್ಚಿನ ಅಬಿವೃದ್ದಿ ಕಾರ್ಯಮಾಡುತ್ತೇನೆಂದರು.. ಇದೆ ಸಂದರ್ಭದಲ್ಲಿ ನಾಳೆಯಿಂದ ರಾಜ್ಯಾದ್ಯಂತ ನಡೆಯುವ ಎಸ್,ಎಸ್,ಎಲ್,ಸಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ದೈರ್ಯದಿಂದ ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಬೇಕೆಂದು ತಿಳಿಸಿ ಎಲ್ಲ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು. ಇವತ್ತಿನ ಕಾರ್ಯಕ್ರಮದಲ್ಲಿ ಶಿವಾನಂದ ಗಣಾಚಾರಿ, ಸಚಿನ ಸಮಯ,ಜಿನ್ನಪ್ಪ ಚೌಗಲಾ, ಮಹಾವೀರ ಪಾಟೀಲ,ಈರಪ್ಪಾ ಪಟಗುಂದಿ ,ನಾಗಪ್ಪ ಮಾಳಗಿ, ಅಕ್ಷಯ ಬೆಡಕಿಹಾಳ, ಬಸವರಾಜ ಬೇಡರಟ್ಟಿ, ಶಂಕರ ಗಾಡಿವಡ್ಡರ. ಗುತ್ತಿಗೆದಾರ ದರ್ಶನ ಅಶೋಕ ಕೋಳಿ, ಸೇರಿದಂತೆ ಕೊಣ್ಣೂರ ರೈತ ಸಂಘದ ಸರ್ವ ಸದಸ್ಯರು, ಕೊಣ್ಣೂರ ,ಸಾವಳಗಿ ಗ್ರಾಮಸ್ಥರು ಉಪಸ್ಥಿತರಿದ್ದರು.3
- ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಮಂಗಳವಾರ 2026 ರ ಪ್ರಥಮ ಹಾಲಿ ಕಲ್ಲಿನ ಮಳೆ ಸುರಿಯಿತು, ಮಿಂಚು ಗುಡುಗು ಗಾಳಿ ಸಹಿತ ಆಗಮಿಸಿದ ಮಳೆ ಚಟಪಟ ಆಲಿಕಲ್ಲಿನೊಂದಿಗೆ ಸುರಿಯಿತು, ಆಲಿಕಲ್ಲನ್ನು ಕಂಡ ಚಿನ್ನರು ಆಲಿಕಲ್ಲನ್ನು ಆರಿಸಿಕೊಂಡು ತಿಂದಿದ್ದು ಕಂಡುಬಂದಿತು2
- Post by Suresh Belagere1
- ಗುಡೆಕೋಟೆ ಹಿಂದ ಹೋಗುವ ರಾಮಸಾಗರ ಹಟ್ಟಿ ದಿಬ್ಬದಲಿ ಗುಡೆಕೋಟೆಯಲ್ಲಿ ಚರಂಡಿ ವ್ಯವಸ್ಥೆ ಇದ್ದು ಚರಂಡಿ ತುಂಬಿ ರೋಡ್ ನಲ್ಲಿ ಓಡಾಡುವ ದುರ್ವ್ಯವಸ್ಥೆಯಾಗಿದ್ದು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಹಿಡಿ ಗುಡೆಕೋಟೆ ಒಂದೇ ಚರಂಡಿಯಲ್ಲಿ ಬರುತ್ತಿದ್ದು ಪೇಪರ್ ಮತ್ತು ಊರಿನ ಎಲ್ಲಾ ಗಲೀಜ್ ತುಂಬಿ ತುಳುಕಾಡುತ್ತಿದ್ದು ಗುಡೆಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ ವರದಿ2
- ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.16ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತರುವ ಮುಹೂರ್ತದೊಂದಿಗೆ ಜಾತ್ರೆಗೆ ಕ್ಷಣಗಣನೆ ನಡೆದಿದೆ. ಪ್ರತಿ ಬಾರಿ ರಥ ಕಟ್ಟುವ ಸ್ಥಳದಲ್ಲಿ ಒಂದಲ್ಲ ಒಂದು ಬಿಲ್ವಪತ್ರೆ, ತುಳಸಿ, ಹೂವುಗಳು ಭೂಸ್ಪರ್ಶ ಮಾಡುತ್ತಿದ್ದು ಈ ಬಾರಿ ಮಲ್ಲಿಗೆ ಮತ್ತು ಬಿಲ್ವಪತ್ರೆಯೊಂದು ಭೂ ಸ್ಪರ್ಶ ಮಾಡಿ ಜಾತ್ರೆಗೆ ಪೂರ್ಣಾನುಗ್ರಹ ಸೂಚಿಸಿದೆ. ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಮಲ್ಲಿಗೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಅರ್ಚಕರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.1
- ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ರೋಣ ಪಟ್ಟಣದಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ್ ರಿಗೆ ಮನವಿ ಸಲ್ಲಿಸಲಾಯಿತು, ಕರ್ನಾಟಕ ರಾಜ್ಯದಲ್ಲಿ ಕಳೆದ 3-4 ವರ್ಷಗಳಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಜೊತೆಗೆ ನಿಲ್ಲಬೇಕಾದ ಸರ್ಕಾರ ಕುಂಭನಿದ್ರೆಗೆ ಜಾರಿದೆ,ಸರಕಾರದ ಹತ್ತಿರ ಯಾವುದೇ ದೂರದೃಷ್ಟಿಯ ಯೋಜನೆಗಳು ಇಲ್ಲದೆ ಸಮಸ್ಯೆಗಳು ಬಂದಾಗ ಅವುಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ,ಸರಕಾರಿ ಹುದ್ದೆಗಳ ನೇಮಕಾತಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನ ಮಾಡಿಕೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಾತಿಗಳನ್ನು ಮಾಡದೆ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ, ರಾಜ್ಯದಲ್ಲಿ ಒಟ್ಟು 43 ಇಲಾಖೆಗಳಲ್ಲಿ 284,881 ಹುದ್ದೆಗಳು ಖಾಲಿ ಇದೆ,ಲಕ್ಷಾಂತರ ಅಭ್ಯರ್ಥಿಗಳು ಕಳೆದ ಐದಾರು ವರ್ಷಗಳಿಂದ ಸರ್ಕಾರ ನೇಮಕಾತಿಗಳನ್ನ ಮಾಡುತ್ತೆ ಎಂಬ ನಂಬಿಕೆಯೊಂದಿಗೆ ಪ್ರತಿ ತಿಂಗಳು ಹಣವನ್ನು ಖರ್ಚು ಮಾಡಿಕೊಂಡು ತರಬೇತಿಯನ್ನು ಪಡೆಯುತ್ತಾ ಸರಕಾರಿ ಸೇವೆಯನ್ನು ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಅಂತಹ ಸಾವಿರಾರು ಅಭ್ಯರ್ಥಿಗಳ ವಯಸ್ಸು ಕೂಡಾ ಮೀರುತ್ತಿದೆ, ಆದರೆ ಸರಕಾರಕ್ಕೆ ಈ ಯಾವುದೇ ತೊಂದರೆಗಳನ್ನು ಗಮನಿಸದೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ,ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 79,694 ಹುದ್ದೆಗಳು, ಉನ್ನತ ಶಿಕ್‌ಷಣ ಇಲಾಖೆಯಲ್ಲೂ 13,599 ಹುದ್ದೆಗಳು ಖಾಲಿ ಇದ್ದು ಇದರಿಂದ ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ,ಸರ್ವರಿಗೂ ಶಿಕ್ಷಣವನ್ನು ನೀಡಬೇಕಾದದ್ದು ಸರಕಾರಗಳ ಕರ್ತವ್ಯ ಆದರೆ ಸರಕಾರಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸರಕಾರ ಅನ್ಯಾಯ ಮಾಡುತ್ತಿದೆ,ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಶೋಚನೀಯವಾಗಿದೆ. ಕರ್ನಾಟಕ ರಾಜ್ಯದ ವಿಶ್ವವಿದ್ಯಾಗಳ ಸ್ಥಿತಿಗತಿ ಶೋಚನೀಯವಾಗಿದೆ, ಕರ್ನಾಟಕ ರಾಜ್ಯ ಮೊದಲು ಉನ್ನತ ಶಿಕ್ಷಣಕ್ಕೆ ಹೆಸರುವಾಸಿ ಆದ ರಾಜ್ಯ ಪ್ರತಿಷ್ಠಿತ ವಿವಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿತ್ತು , ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಗಳನ್ನು ಸರಕಾರ ಕಡೆಗಣಿಸಿದೆ, ವಿವಿಗಳಿಗೆ ಯಾವುದೇ ಅನುದಾನ ನೀಡದೇ ಅವುಗಳನ್ನು ಕೇವಲ ವಿದ್ಯಾರ್ಥಿಗಳ ಶುಲ್ಕದ ಮೇಲೆ ನಡೆಸುವಂತೆ ಮಾಡುತ್ತಿದೆ, ಇದರಿಂದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಮೇಲೆ ಹಲವಾರು ಶುಲ್ಕಗಳನ್ನು ಹೇರುತ್ತಿದೆ,ಹಿಂದಿನ ಸರ್ಕಾರ ಸ್ನಾಪಿಸಿದ 09 ವಿಶ್ವ ವಿದ್ಯಾಲಯಗಳು ಮುಚ್ಚುವ ಸ್ತಿತಿಯನ್ನು ಸರಕಾರ ನಿರ್ಮಾಣ ಮಾಡುತ್ತಿದೆ, ಖಾಯಂ ಹುದ್ದೆಗಳ ನೇಮಕಾತಿ ಇಲ್ಲದ ಕಾರಣ ಸಕಾಲಕ್ಕೆಅಂಕಪಟ್ಟಿ, ಫಲಿತಾಂಶ, ಹಾಗೂ ಇನ್ನಿತರ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ,ವಿದ್ಯಾರ್ಥಿ ವೇತನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಿದ್ಯಾರ್ಥಿವೇತನವನ್ನು ನೀಡುವ ಯೋಜನೆಯನ್ನು ಸರಕಾರ ಪ್ರಾರಂಭ ಮಾಡಿವೆ ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನವನ್ನು ತಲುಪಿಸುತ್ತಿಲ್ಲ,ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಹೊಡೆತ ಬೀಳುತ್ತಿದೆ,ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಾರಂಭ ಮಾಡಬೇಕು,ವಿಶ್ವ ವಿದ್ಯಾಲಯಗಳಿಗೆ ಅನುದಾನ ನೀಡಬೇಕು,ಸಮರ್ಪಕವಾಗಿ ವಿದ್ಯಾರ್ಥಿ ವೇತನವನ್ನು ತಲುಪಿಸಬೇಕು,ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಫಲಿತಾಂಶ, ಅಂಕಪಟ್ಟಿ ನೀಡಬೇಕು,ವಿವಿಧ ಇಲಾಖೆಗಳಿಗೆ ನೇಮಕಾತಿ ಮಾಡುವಾಗ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು ಎಂದು ಮನವಿ ಸಲ್ಲಿಸಿದರು, ರೋಣ ಪಟ್ಟಣದ ಮುಲ್ಲಾನಬಾವಿ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಇದರಿಂದ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.1
- ಗುಡೇಕೋಟೆಯಿಂದ ರಾಮಸಾಗರ ಮತ್ತು ದಿಬ್ಬದಹಳ್ಳಿ ಗುಡೇಕೋಟೆಯಲ್ಲಿರುವ ಚರಂಡಿಯ ಮಾಡಿದ್ದು ಡ್ರೈಜಿನೆಸ್ ತುಂಬಿ ಇಂಚನಾ ಊರಿನಲ್ಲಿ ಇರಕಂತ ಕಸ ಮತ್ತು ಪೇಪರ್ ಗಳು ಚರಂಡಿ ತುಂಬಿ ತುಳುಕಾಡಿ ರೋಡಿನಲ್ಲಿ ಬಂದಿದ್ದು ಡ್ರೈನೇಜ್ ಕಾಮಗಾರಿ ಸ್ವಲ್ಪ ಮಟ್ಟಿಗೆ ಹಾಗಿದ್ದು ದೃವ್ಯವಸ್ಥೆ ಕಂಡಿದ್ದು ಕೂಡಲೆ ಕ್ರಮ ಕೈಗೊಳ್ಳಬೇಕು ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ ಪಂಚಾಯಿತಿ2