logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ಯಾರಂಟಿ ಯೋಜನೆಗಳ ಸರ್ವೇ ಕಾರ್ಯ: ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಫಾ ಅಮರನಾಥ್ ಮಂಗಳೂರು ಗ್ಯಾರಂಟಿ ಯೋಜನೆ ಬಡವರ, ಮಧ್ಯಮ ವರ್ಗದವರ ಜೀವನಾಡಿ. ಅವರ ಜೀವನಕ್ಕೆ ಒಂದಷ್ಟು ಆಸರೆಯಾಗಿ ರಾಜ್ಯದಲ್ಲಿ ಅನುಷ್ಟಾನವಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು. ಅವರು ಕಡಬ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ, ಗ್ರಾಮ ಪಂಚಾಯತ್ ಬಿಳಿನೆಲೆ ಸಂಯುಕ್ತ ಆಶ್ರಯದಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ನೋಂದಣಿಗೆ ಬಾಕಿ ಇರುವ ಮತ್ತು ತಿರಸ್ಕøತ ಅರ್ಜಿಗಳ ವಿಲೇವಾರಿ ಶಿಬಿರ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆ ಮೂಲಕ ಶಿಕ್ಷಣ, ಮನೆಗೆ ಬೆಳಕು, ಮಹಿಳೆಯವರಿಗೆ ಉಚಿತ ಪ್ರಯಾಣ, ಹೊಟ್ಟೆ ತುಂಬಿಸುವ, ನಿರುದ್ಯೊಗಿಗಳಿಗೆ ಒಂದಿಷ್ಟು ಆಸರೆಯಾಗುವ ಕಾರ್ಯ ಆಗಿದೆ. ಗ್ಯಾರಂಟಿ ಯೋಜನೆಯನ್ನು ಪಡೆಯುತ್ತಿರುವವರ ಬಗ್ಗೆ ಗ್ರಾಮ ಮಟ್ಟದಿಂದ ಮಾಹಿತಿ ಪಡೆಯುವ ಸರ್ವೆ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಅರ್ಹರಿಗೆ ಮಾತ್ರವೇ ಸಿಗಬೇಕಾದ ಗ್ಯಾರಂಟಿ ಯೋಜನೆಯನ್ನು ಉಳ್ಳವರು ಪಡೆಯುತ್ತಿದ್ದಾರೆಯೇ ಎಂಬ ಬಗ್ಗೆಯೂ ಸರ್ವೆಯಲ್ಲಿ ಮಾಹಿತಿ ಸಿಗಲಿದೆ ಎಂದರು. ಸಂವಿಧಾನದಿಂದ ಮಹಿಳೆಯರಿಗೂ ಅಧಿಕಾರ ಸಿಕ್ಕಿದೆ. ವಿಧಾನ ಸಭೆ, ಸಂಸತ್‍ಗೂ ಮಹಿಳೆಯರ ಪ್ರವೇಶ ಆಗಬೇಕಾಗಿದ್ದು, ಕೇಂದ್ರದ ಮಹಿಳಾ ಮೀಸಲಾತಿ ಕೇವಲ ಪತ್ರಕ್ಕೆ ಸೀಮಿತವಾಗಿದ್ದು, ಇದು ಆದಷ್ಟು ಬೇಗ ಅನುಷ್ಟಾನ ಆಗಬೇಕಿದ್ದು, ಮಹಿಳೆಯವರಿಗೂ ಮೀಸಲಾತಿ ಸಿಗುತ್ತದೆ ಎಂಬ ಆಶಯ ಇದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಯಿಂದ ನಮಗೆ ಜನರ ಸೇವೆ ಮಾಡುವ ಸೌಭಾಗ್ಯ ದೊರೆತಿದೆ. ಪ್ರಾಮಾಣಿಕವಾಗಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ ಎಂದು ಹೇಳಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಇಂದು ಸಶಕ್ತರಾಗಿದ್ದಾರೆ ಎಂದು ಹೇಳಿದರು. ಪುತ್ತೂರು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸತೀಶ್ ಭಟ್, ಬಿಳಿನೆಲೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಶಾರದಾ ದಿನೇಶ್, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಚೆಲುವ ರಂಗಪ್ಪ, ಅಭಿಲಾಷ್ ಪಿ.ಕೆ. ಸಮಿತಿ ಸದಸ್ಯರಾದ ಸತೀಶ್ ಪಿ. ದೀಕ್ಷಿತ್ ಡಿ.ಜಿ, ಉಷಾ ಅಂಚನ್, ಕೆ. ಮಾಧವ ಪೂಜಾರಿ, ಭವಾನಿಶಂಕರ್ ಬಿ., ಜಗದೀಶ್ .ಕೆ, ಸೈಮನ್ ಸಿ.ಜೆ, ಎ.ಕೆ.ಬಶೀರ್, ಮಹಮ್ಮದ್ ಹನೀಫ್, ಹರಿಣಾಕ್ಷಿ, ಟಿ.ರಾಘವೇಂದ್ರ, ಗಂಗಾಧರ ಶೆಟ್ಟಿ, ಅವಿನಾಶ್ ಬಿ.ಎಸ್. ಗೌರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಪಿ.ಡಿ.ಒ ಚಂದ್ರಾವತಿ ವಂದಿಸಿದರು. ಶಿಕ್ಷಕ ಲೋಕನಾಥ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ನೋಂದಾವಣಿಗೆ ಬಾಕಿ ಇರುವ ಮತ್ತು ತಿರಸ್ಕøತ ಅರ್ಜಿಗಳ ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಹಾಗೂ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

on 11 March
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•

More news from ಕರ್ನಾಟಕ and nearby areas
  • ಚಿತ್ರದುರ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ತಡೆಗೋಡೆ ದ್ವಂಸಗೊಂಡ ಘಟನೆ ನಡೆದಿದೆ. ಹೊಳಲ್ಕೆರೆ ರಸ್ತೆಯ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ತಡೆಗೋಡೆಗೆ ಡಿಕ್ಕಿ ಹೊಡೆದು ಘಟನೆ ನಡೆದಿದ್ದು ವೃತ್ತದ ಸುತ್ತಲೂ ಸ್ಟೀಲ್ ರೀಲ್ ಮಾಡಲಾಗಿತ್ತು ಅಪರಿಚತ ವಾಹನ ಡಿಕ್ಕಿ ಹೊಡದ ಪರಿಣಾಮ ಸ್ಟೀಲ್ ರೀಲ್ ಧ್ವಂಸಗೊಂಡಿದೆ.
    1
    ಚಿತ್ರದುರ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ತಡೆಗೋಡೆ ದ್ವಂಸಗೊಂಡ ಘಟನೆ ನಡೆದಿದೆ. ಹೊಳಲ್ಕೆರೆ ರಸ್ತೆಯ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ತಡೆಗೋಡೆಗೆ ಡಿಕ್ಕಿ ಹೊಡೆದು ಘಟನೆ  ನಡೆದಿದ್ದು ವೃತ್ತದ ಸುತ್ತಲೂ ಸ್ಟೀಲ್ ರೀಲ್ ಮಾಡಲಾಗಿತ್ತು ಅಪರಿಚತ ವಾಹನ ಡಿಕ್ಕಿ ಹೊಡದ ಪರಿಣಾಮ ಸ್ಟೀಲ್ ರೀಲ್ ಧ್ವಂಸಗೊಂಡಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ. ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. 10-04-2026.
    1
    ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... 
ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ.
ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. 
ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
10-04-2026.
    user_B Patil B Patil
    B Patil B Patil
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    3 hrs ago
  • ಬಳಿಯ ಕದಿರೇನಹಳ್ಳಿ ಆಟದ ಮೈದಾನದಲ್ಲಿ ನಡೆಯಲಿದೆ. ಬಾಬಾಸಾಹೇಬರ ವಿಚಾರಗಳ ಜಾಗೃತಿ ಮೂಡಿಸಲು ಬೈಕ್ ಮತ್ತು ಕಾರ್ ರ‍್ಯಾಲಿ ಕೂಡಾ ಹಮ್ಮಿಕೊಳ್ಳಲಾಗಿದೆ. KRS ಪಕ್ಷ ಬಾಬಾಸಾಹೇಬರು ತೋರಿಸಿರುವ ದಾರಿಯಲ್ಲಿ ಅಕ್ಷರಶ: ನಡೆಯುತ್ತಿದೆ, ಬಡವರಿಗೆ ಅಸಹಾಯಕರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ.
    1
    ಬಳಿಯ ಕದಿರೇನಹಳ್ಳಿ ಆಟದ ಮೈದಾನದಲ್ಲಿ ನಡೆಯಲಿದೆ. ಬಾಬಾಸಾಹೇಬರ ವಿಚಾರಗಳ ಜಾಗೃತಿ ಮೂಡಿಸಲು ಬೈಕ್ ಮತ್ತು ಕಾರ್ ರ‍್ಯಾಲಿ  ಕೂಡಾ ಹಮ್ಮಿಕೊಳ್ಳಲಾಗಿದೆ.
KRS ಪಕ್ಷ ಬಾಬಾಸಾಹೇಬರು ತೋರಿಸಿರುವ ದಾರಿಯಲ್ಲಿ ಅಕ್ಷರಶ: ನಡೆಯುತ್ತಿದೆ, ಬಡವರಿಗೆ ಅಸಹಾಯಕರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ. 
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ.
    user_874792
    874792
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    3 hrs ago
  • ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು ಬೆಳಗ್ಗೆ ಗಂಗೆ ಹೋಗುವುದರಿಂದ ಪ್ರಾರಂಭವಾಯಿತು ಮಧ್ಯಾಹ್ನ ಮುಳ್ಳು ಪವಾಡ ಸಾಯಂಕಾಲ ಅಗ್ನಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು
    1
    ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು ಬೆಳಗ್ಗೆ ಗಂಗೆ ಹೋಗುವುದರಿಂದ ಪ್ರಾರಂಭವಾಯಿತು ಮಧ್ಯಾಹ್ನ ಮುಳ್ಳು ಪವಾಡ ಸಾಯಂಕಾಲ ಅಗ್ನಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    4 hrs ago
  • ಶಾಸಕರ ದೆಹಲಿ ಭೇಟಿ ಅವರ ಹಕ್ಕು - ಸಚಿವ ಎಚ್.ಕೆ. ಪಾಟೀಲ್ ​ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಈಗ ಭಾರಿ ಚರ್ಚೆಗೆ ಪ್ರತಿಕ್ರಿಯಿಸಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು, ಶಾಸಕರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. "ದೆಹಲಿಗೆ ಹೋಗುವುದು ಅವರ ಹಕ್ಕು" ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ​ ​ದೆಹಲಿಗೆ ಹೋಗುವುದು ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ಶಾಸಕರಿಗಿರುವ ಮುಕ್ತ ಅವಕಾಶ. ​ಅಸಮಾಧಾನದ ಪ್ರಶ್ನೆಯಿಲ್ಲ: ಈ ಭೇಟಿಯನ್ನು ಕೇವಲ ಅಸಮಾಧಾನ ಅಥವಾ ಬಂಡಾಯ ಎಂದು ಬಿಂಬಿಸುವುದು ತಪ್ಪು. ​ಕ್ಷೇತ್ರದ ಅಭಿವೃದ್ಧಿ ಅಥವಾ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿರುತ್ತಾರೆ. ​ ಗದಗ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಎಚ್.ಕೆ. ಪಾಟೀಲ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ಹಲವು ಕಾಂಗ್ರೆಸ್ ಶಾಸಕರು ತಂಡೋಪತಂಡವಾಗಿ ದೆಹಲಿಗೆ ತೆರಳುತ್ತಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದರು.
    1
    ಶಾಸಕರ ದೆಹಲಿ ಭೇಟಿ ಅವರ ಹಕ್ಕು - ಸಚಿವ ಎಚ್.ಕೆ. ಪಾಟೀಲ್
​
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಈಗ ಭಾರಿ ಚರ್ಚೆಗೆ ಪ್ರತಿಕ್ರಿಯಿಸಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು, ಶಾಸಕರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. "ದೆಹಲಿಗೆ ಹೋಗುವುದು ಅವರ ಹಕ್ಕು" ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.
​
​ದೆಹಲಿಗೆ ಹೋಗುವುದು ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ಶಾಸಕರಿಗಿರುವ ಮುಕ್ತ ಅವಕಾಶ.
​ಅಸಮಾಧಾನದ ಪ್ರಶ್ನೆಯಿಲ್ಲ: ಈ ಭೇಟಿಯನ್ನು ಕೇವಲ ಅಸಮಾಧಾನ ಅಥವಾ ಬಂಡಾಯ ಎಂದು ಬಿಂಬಿಸುವುದು ತಪ್ಪು.
​ಕ್ಷೇತ್ರದ ಅಭಿವೃದ್ಧಿ ಅಥವಾ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿರುತ್ತಾರೆ.
​
ಗದಗ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಎಚ್.ಕೆ. ಪಾಟೀಲ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ಹಲವು ಕಾಂಗ್ರೆಸ್ ಶಾಸಕರು ತಂಡೋಪತಂಡವಾಗಿ ದೆಹಲಿಗೆ ತೆರಳುತ್ತಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದರು.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    5 hrs ago
  • ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ತಾಲೂಕಿನ ಅಳದಂಗಡಿಯಲ್ಲಿ ನಡೆದಿದೆ. ದೇವಪ್ಪ(37) ಮೃತಪಟ್ಟವರು. ಇವರು ಇಂದು ಬೆಳಗ್ಗೆ ಅಳದಂಗಡಿ ಬಳಿ ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮಾಡಿ ವಾಪಸ್ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡಬಂದ ಪರಿಣಾಮ ಆಟೋ ರಿಕ್ಷಾ ಉರುಳಿಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ದೇವಪ್ಪ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
    1
    ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ತಾಲೂಕಿನ ಅಳದಂಗಡಿಯಲ್ಲಿ ನಡೆದಿದೆ. ದೇವಪ್ಪ(37) ಮೃತಪಟ್ಟವರು.
ಇವರು ಇಂದು ಬೆಳಗ್ಗೆ ಅಳದಂಗಡಿ ಬಳಿ ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮಾಡಿ ವಾಪಸ್ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡಬಂದ ಪರಿಣಾಮ ಆಟೋ ರಿಕ್ಷಾ ಉರುಳಿಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ದೇವಪ್ಪ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    3 hrs ago
  • ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಬಳಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘಟನೆ ಸಿಐಟಿಯು ವತಿಯಿಂದ ಪ್ರವಾಸಿ ಮಂದಿರದಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಬಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
    1
    ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಬಳಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘಟನೆ ಸಿಐಟಿಯು ವತಿಯಿಂದ ಪ್ರವಾಸಿ ಮಂದಿರದಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಬಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.