Shuru
Apke Nagar Ki App…
Looking to Buy Brand : Samsung A03 City / Locality : kottur Device Category : Smartphone Variant (RAM / Storage) : 4GB / 256GB Body Condition : Like new Network Connectivity : 4G VoLTE interested
Ramu Maregowdru
Looking to Buy Brand : Samsung A03 City / Locality : kottur Device Category : Smartphone Variant (RAM / Storage) : 4GB / 256GB Body Condition : Like new Network Connectivity : 4G VoLTE interested
More news from Karnataka and nearby areas
- ದವಳಗಿರಿ ಬಡಾವಣೆ: ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್; ಕತ್ತಲಲ್ಲಿ ಮುಳುಗಿದ ನಿವಾಸಿಗಳು! ದವಳಗಿರಿ ಬಡಾವಣೆ: ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್; ಕತ್ತಲಲ್ಲಿ ಮುಳುಗಿದ ನಿವಾಸಿಗಳು! ಚಿತ್ರದುರ್ಗ : ನಗರದ ದವಳಗಿರಿ ಬಡಾವಣೆಯ ಮೂರನೇ ಹಂತದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿರುವ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ) ಪೆಟ್ಟಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮವಾಗಿ ಇಡೀ ಬಡಾವಣೆಯಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸ್ಥಳೀಯರ ಆತಂಕ: ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಟ್ರಾನ್ಸ್‌ಫಾರ್ಮರ್‌ನಿಂದ ಭಾರಿ ಪ್ರಮಾಣದಲ್ಲಿ ಕಿಡಿಗಳು ಸಿಡಿದು, ಹೊಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳ ಗಮನಕ್ಕೆ ಮನವಿ:ವಿದ್ಯುತ್ ಕೈಕೊಟ್ಟಿರುವುದರಿಂದ ಇಡೀ ಬಡಾವಣೆ ಕತ್ತಲಲ್ಲಿ ಮುಳುಗಿದೆ. ಬೆಸ್ಕಾಂ (BESCOM) ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು. ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್ ಅನ್ನು ದುರಸ್ತಿಗೊಳಿಸಿ, ಬಡಾವಣೆಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.3
- ಖಾಸಗಿ ವಾಹನಗಳ ಮೇಲೆ ‘ಪ್ರೆಸ್’ (PRESS) ಎಂದು ಹಾಕಿಕೊಂಡು ಸಂಚರಿಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ . ಮಾಧ್ಯಮ ರಂಗಕ್ಕೆ ಸಂಬಂಧಿಸಿಲ್ಲದ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ‘ಪ್ರೆಸ್’ (PRESS) ಎಂದು ಹಾಕಿಕೊಂಡು ಸಂಚರಿಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಪತ್ರಕರ್ತರು ಮತ್ತು ಮಾಧ್ಯಮ ಕ್ಷೇತ್ರದ ಸಿಬ್ಬಂದಿ ತಮ್ಮ ಗುರುತಿಗಾಗಿ ವಾಹನಗಳ ಮೇಲೆ ‘PRESS’ ಎಂಬ ನಾಮಫಲಕವನ್ನು ಬಳಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧವಿಲ್ಲದ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಹಾಗೂ ಇತರೆ ವಾಹನಗಳ ಮೇಲೆ ‘PRESS’ ಬೋರ್ಡ್ ಹಾಕಿಕೊಂಡು.ಸಂಚರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಸಾರ್ವಜನಿಕರು ನಂಬರ್ ಪ್ಲೇಟ್ ಹಾಗೂ ವಾಹನಗಳ ಮೇಲೆ ಅಕ್ರಮವಾಗಿ ‘ಪ್ರೆಸ್’ ಎಂದು ಬರೆಸಿಕೊಂಡು ಚಲಾಯಿಸುತ್ತಿರುವುದನ್ನು ತಡೆಯಲು ಜಿಲ್ಲಾದ್ಯಂತ ವಿಶೇಷ ಅಭಿಯಾನ ನಡೆಸಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ‘ಸ್ಪೆಷಲ್ ಡ್ರೈವ್’ ನಡೆಸುವ ಮೂಲಕ ಇಂತಹ ವಾಹನಗಳನ್ನು ಪತ್ತೆ ಹಚ್ಚಿ, ನಿಯಮ ಉಲ್ಲಂಘಿಸುವ ವಾಹನ ಚಾಲಕರು ಹಾಗೂ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.1
- Press ಎಂದು ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಪತ್ರಕರ್ತರು ರಂದು ಪ್ರೆಸ್ ಬೋರ್ಡ್ ಹಾಕಿಕೊಳ್ಳುವ ನಕಲಿ ಪತ್ರಕರ್ತರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಪತ್ರಕರ್ತರು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದವರು ತಮ್ಮ ಗುರುತಿಗಾಗಿ PRESS ಎಂಬ ನಾಮ ಫಲಕ ಹಾಕಿಸಿಕೊಂಡಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮೀಡಿಯಾ ಸಂಬಂಧಿಸಿದವರು ಹೊರತು ಪಡಿಸಿ ಅನಾಮಧೇಯ ವ್ಯಕ್ತಿಗಳು ಸಹ ತಮ್ಮ ಮೋಟಾರ್ ಸೈಕಲ್ ಗಳ ಮೇಲೆ ಪ್ರೆಸ್ (PRESS) ಎಂಬ ಬೋರ್ಡ್ ಹಾಕಿಕೊಂಡು ವಾಹನಗಳಲ್ಲಿ ಚಲಿಸುತ್ತಿದ್ದು ಕಂಡು ಬಂದಿರುತ್ತದೆ.1
- ಹಮ್ಮಿಗಿ ಗ್ರಾಮದಲ್ಲಿ ಸಣ್ಣದೊಂದು ಜನನ ಪ್ರಮಾಣ ಪತ್ರದ ತಿದ್ದುಪಡಿ ಗಾಗಿ ಅಂಗವಿಕಲ ಮಹಿಳೆಯೊಬ್ಬರು ನಾಲ್ಕು ದಿನಗಳಿಂದ ಅಲೆದಾಡುತ್ತಿರುವ ಘಟನೆ... ಹೌದು, ಹಮ್ಮಿಗಿ ಗ್ರಾಮದ ವೀರಮ್ಮ ಬಾಬುಸಾಬ ಮಡಿವಾಳರ ಎಂಬ ವಿಶೇಷ ಚೇತನ ಮಹಿಳೆ, ನವಿನ ಹಾಲಪ್ಪ ಈಟಿ ಅವರ ಜನನ ಪ್ರಮಾಣ ಪತ್ರಕ್ಕಾಗಿ ನಾಲ್ಕು ದಿನಗಳಿಂದ ನಿರಂತರವಾಗಿ ಅಲೆದಾಡುತ್ತಿದ್ದಾರೆ. ಎರಡು ಕಾಲು ಇಲ್ಲದೆ ನಡೆಯಲು ಶಕ್ತಿಯಿಲ್ಲದಿದ್ದರೂ, ಶ್ರಮಪಟ್ಟು ಕಚೇರಿಗೆ ಬಂದರೆ ತಲಾಠಿ ಮಾತ್ರ ಸ್ಥಳದಲ್ಲೇ ಇರುವುದಿಲ್ಲ! ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿ ಹೀಗೆ ನಾಪತ್ತೆಯಾಗುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳು ಹೀಗೆ ಬಡವರನ್ನು, ಅಂಗವಿಕಲರನ್ನು ಸತಾಹಿಸುವುದು ಎಷ್ಟು ಸರಿ ಎನ್ನುವುದು ಗ್ರಾಮಸ್ಥರ ಖಾರವಾದ ಪ್ರಶ್ನೆ.1
- ಕಲ್ಯಾಣ ಕರ್ನಾಟಕ ಭಾಗದ 76 ನೂತನ ಪಿಡಿಒ ಅಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ; ಅಧಿಕಾರಿಗಳ ಸಂತಸ ಬೆಂಗಳೂರು: ಇಂದು 2024ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಳೆದ ಆರು ತಿಂಗಳಿನಿಂದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದ ಕಲ್ಯಾಣ ಕರ್ನಾಟಕ ಭಾಗದ 76 ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೇಮಕಾತಿ ಆದೇಶ ಪತ್ರಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಹಸ್ತಾಂತರಿಸಿದರು. ಈ ವೇಳೆ ನೂತನ ಪಿಡಿಓಗಳು ಅಧಿಕಾರಿಗಳು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.1
- ಬಂಗಿಕುಂಟಾ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗೆ ಬೆಂಕಿ., ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.. ರಾಯಚೂರು ನಗರದ ಬಂಗಿಕುಂಟಾ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಬಂಗಿಕುಂಟಾದಲ್ಲಿ ತಾಯಣ್ಣ ಎಂಬುವವರಿಗೆ ಸೇರಿದ ಟಿನ್ ಶಡ್‌ನಲ್ಲಿದ್ದ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿದ್ದ ಪೂಜಾ ಸಾಮಗ್ರಿಗಳು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದಾಗಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ತಾಯಣ್ಣ ಅವರು ಹೆಚ್ಚಿನ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್ ಇಟ್ಟುಕೊಂಡಿದ್ದರು. ಆದರೆ, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಬ್ಬದ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿವೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬೆಂಕಿ ಮತ್ತಷ್ಟು ವ್ಯಾಪಿಸದಂತೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದರು. ಘಟನೆ ಕುರಿತು ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗ್ನಿ ಅವಘಡದ ಕಾರಣ ಹಾಗೂ ನಷ್ಟದ ಪ್ರಮಾಣದ ಕುರಿತು ಪರಿಶೀಲನೆ ಮುಂದುವರಿದಿದೆ.2
- ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆ.ಇ.ಎ ಹೊರಡಿಸಿರುವ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ:* ***********" ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆ.ಇ.ಎ ಹೊರಡಿಸಿರುವ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಅಭ್ಯರ್ಥಿಗಳಿಗೆ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ಸಿಸಿಟಿವಿ ಕಣ್ಗಾವಲು ಮತ್ತು ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಸೇರಿದಂತೆ ಬಹು ಗುರುತಿನ ಪರಿಶೀಲನೆಗೆ ಅಭ್ಯರ್ಥಿಗಳು ಒಳಪಡಬೇಕು. ಇದಕ್ಕೆ ಅನುವಾಗುವಂತೆ ಪರೀಕ್ಷೆ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಯಾವುದೇ ರೀತಿಯ ಪಠ್ಯ ಸಾಮಗ್ರಿಗಳು, ಚೀಟಿಗಳು, ಜಾಮಿಟ್ರಿ, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಪೆನ್‍ಡ್ರೈವ್‍ಗಳು, ಎರೆಸೇರ್, ಲಾಗ್ ಟೇಬಲ್ ಸೇರಿದಂತೆ ಎಲೆಕ್ಟ್ರಾನಿಕ್ ಪೆನ್ ಸ್ಕ್ಯಾನರ್, ವಾಲೆಟ್, ಗಾಗಲ್ಸ್, ಕೈ ಚೀಲಗಳು, ಬೆಲ್ಟ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಮುಂತಾದ ಸಂವಹನ ಸಾಧನಗಳನ್ನು ಮರೆಮಾಡುವ ಮೂಲಕ ನ್ಯಾಯೋಚಿತವಲ್ಲದ ವಿಧಾನಗಳಿಗೆ ಬಳಸಬಹುದಾದ ಇತರೆ ವಸ್ತುಗಳು, ಮೊಬೈಲ್, ಬ್ಲೂಟೂತ್, ಇಯರ್ ಪೋನ್, ಮೈಕ್ರೋಫೋನ್, ಪೇಜರ್ ಸೇರಿದಂತೆ ಆಧುನಿಕ ಸಂವಹನ ಸಾಧನಗಳು, ಯಾವುದೇ ರೀತಿಯ ಗಡಿಯಾರ, ಕೈ ಗಡಿಯಾರ, ಬಳೆ, ಕ್ಯಾಮರಾ, ತೆರೆದಿರುವ ಅಥವಾ ಪ್ಯಾಕ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು, ನೀರಿನ್ ಬಾಟೆಲ್ ನಿಷೇಧಿತ ವಸ್ತುಗಳಾಗಿವೆ. ಅಭ್ಯರ್ಥಿಗಳು ಉದ್ದ ತೋಳಿನ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಅರ್ಧ ತೋಳಿನ ಬಟ್ಟೆಗಳನ್ನು ಮಾತ್ರ ಧರಿಸಿರಬೇಕು. ಶಿರೋವಸ್ತ್ರ ಹಾಗೂ ಮುಖ ಮುಚ್ಚುವ ಉಡುಪುಗಳು, ಟೋಪಿ ಅಥವಾ ಯಾವುದೇ ರೀತಿಯ ತಲೆ ಹೊದಿಕೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ. ಯಾವುದೇ ರೀತಿಯ ಲೋಹದ ವಸ್ತುಗಳು ಅಥವಾ ಆಭರಣಗಳನ್ನು ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಶೂ ಧರಿಸುವುದಕ್ಕೆ ಅವಕಾಶವಿರುವುದಿಲ್ಲ. ತೆಳುವಾದ ಅಡಿಭಾಗವಿರುವ ಸ್ಯಾಂಡಲ್ಸ್ ಅಥವಾ ಚಪ್ಪಲಿಗಳನ್ನು ಮಾತ್ರ ಧರಿಸಬೇಕು. ಶ್ರವಣ ಸಾಧನಗಳು ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಯುಡಿಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಶ್ರವಣ ಸಾಧನ ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಸಾಧನಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಇದರೊಂದಿಗೆ ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆದರೆ ಜನಿವಾರ, ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.2
- ಧರ್ಮಸ್ಥಳ ಬುರುಡೇ ಕೇಸ್ ಫಂಡಿಂಗ್ ಆರೋಪದಿಂದ ರಮಾ ನಾಗರಾಜ್ ನಿರ್ದೋಷಿ ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಚಿತ್ರದುರ್ಗದ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಇನ್ನೂ ಧರ್ಮಸ್ಥಳದ ಬುರುಡೆ ಕೇಸ್ ಗೆ ಚಿತ್ರದುರ್ಗದ ರಮಾ ನಾಗರಾಜ್ ಫಂಡಿಂಗ್ ಮಾಡಿದ್ದಾಗಿ ಮಾಸ್ಕ್ ಮ್ಯಾನ್ ಚನ್ನಯ್ಯ ಆರೋಪ ಮಾಡಿದ್ದು ಈ ಆರೋಪ ಸುಳ್ಳು ಎಂದು ಉಚ್ಚ ನ್ಯಾಯಾಲಯದಿಂದ ರಮಾ ನಾಗರಾಜ್ ನಿರ್ದೋಷಿ ಎಂದು ತೀರ್ಪು ನೀಡಿದೆ. ರಮಾ ನಾಗರಾಜ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ, ಜಯಂತಿ, ವಿಠ್ಠಲ ಗೌಡ, ಪ್ರಕಾಶ್ ರೈ ಆರೋಪ ಮುಕ್ತ ಎಂದು ಹೈಕೋರ್ಟ್ ಆದೇಶ ನೀಡಿದ್ದು ಈ ಕುರಿತು ಚಿತ್ರದುರ್ಗದಲ್ಲಿ ರಮಾ ನಾಗರಾಜ್ ಹಾಗೂ ಗಿರೀಶ್ ಮಟ್ಟಣ್ಣನವರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು ಈ ವೇಳೆ ಸಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಅವರು ಮಾತನಾಡಿದ್ದು ಧರ್ಮಸ್ಥಳ ಸಂಘದ ಬಗ್ಗೆ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ವಿನಾಃ ಕಾರಣ ಆರೋಪ ಮಾಡಿದ್ದರು ಎಂದು ರಮಾ ನಾಗರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.1
- ಸಾರ್ವಜನಿಕ ಸ್ಥಳದಲ್ಲಿ ನಿದ್ರೆಗೆ ಜಾರುವ ವ್ಯಕ್ತಿಗಳಿಗೆ ಅತಿ ಹೆಚ್ಚು ದಣಿವು, ನಿದ್ರಾಹೀನತೆ ಅಥವಾ ಆರೋಗ್ಯದ ಸಮಸ್ಯೆ ಮತ್ತು ಮಧ್ಯದ ಪ್ರಭಾವ ಕಾರಣವಿರಬಹುದು. ನಿದ್ರಾದೇವಿ ಆವರಿಸಿದಾಗ ಇವೆಲ್ಲವನ್ನೂ ಮರೆತು ಎಂಥದೆ ಸ್ಥಳದಲ್ಲಿಯೂ ಸಹ ತನ್ನನ್ನು ತಾನು ಮರೆತು ನಿದ್ರೆಗೆ ಜಾರುವ ಕೆಲವು ವ್ಯಕ್ತಿಗಳು ಇದ್ದಾರೆ .. ಹೌದು ಆತ್ಮೀಯ ವೀಕ್ಷಕರೇ ಚಳ್ಳಕೆರೆ ನಗರದ ನೆಹರು ಸರ್ಕಲ್ ಬಳಿಯ ರಸ್ತೆಯ ಪಕ್ಕದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಒಬ್ಬ ವ್ಯಕ್ತಿ ಮೊಬೈಲ್ ಹಾಗೂ ಬ್ಯಾಗನ್ನು ಮರೆತು ನಿದ್ರೆ ಮಾಡುವುದು ಕಂಡು ಬಂತು ಅಲ್ಲಿ ತಕ್ಷಣ ಆ ವ್ಯಕ್ತಿಯನ್ನು ಎಚ್ಚರಿಸಿ ಮಾತನಾಡಿಸಿ ಮೊಬೈಲ್ ಹಾಗೂ ಬ್ಯಾಗ್ ಗಳ ಜೋಪಾನತೆಗೆ ಎಚ್ಚರಿಕೆಯನ್ನು ನೀಡಿಲಾಯ್ತು ಸಾರ್ವಜನಿಕ ಸ್ಥಳದಲ್ಲಿ ನಿದ್ರೆಗೆ ಜಾರುವ ವ್ಯಕ್ತಿಗಳಿಗೆ ಅತಿ ಹೆಚ್ಚು ದಣಿವು, ನಿದ್ರಾಹೀನತೆ ಅಥವಾ ಆರೋಗ್ಯದ ಸಮಸ್ಯೆ ಮತ್ತು ಮಧ್ಯದ ಪ್ರಭಾವ ಕಾರಣವಿರಬಹುದು. ಹೀಗೆ ನಿದ್ದೆ ಮಾಡುವ ವೇಳೆ ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ನಿದ್ದೆ ಮಾಡುವ ವೇಳೆ ತುಂಬಾ ಜಾಗೃತೆ ವಹಿಸಬೇಕು ಮೊಬೈಲ್ ಬ್ಯಾಗ್ ಗಳು ಇತರೆ ವಸ್ತುಗಳನ್ನ ಕಾಣುವ ರೀತಿಯಲ್ಲಿ ಇಟ್ಟುಕೊಂಡು ನಿದ್ರೆ ಮಾಡಿದರೆ ಆ ವಸ್ತುಗಳು ಕಳೆದು ಹೋದರೆ ಯಾರು ಹೊಣೆ ಆಗ್ತಾರೆ ಅಲ್ವೇ ಸ್ನೇಹಿತರೇ..1