Shuru
Apke Nagar Ki App…
ಕಾಂಗ್ರೆಸ್ ನಾಯಕರು ತೀವ್ರವಾಗಿ ಭಯಭೀತರಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಅಲ್ಪಸಂಖ್ಯಾತರ, ಬಡವರ ಇಲ್ಲವೇ ದಲಿತ ಮತಗಳು ಕೈತಪ್ಪುತ್ತವೆ ಎಂಬ ಭಯವಿಲ್ಲ. ಬದಲಿಗೆ, ರಾಹುಲ್ ಗಾಂಧಿ ಅವರು ಎರಡು ಪೌರತ್ವ ಹೊಂದಿದ್ದು, ಆ ಗುಟ್ಟು ರಟ್ಟಾದರೆ ಅವರ ಲೋಕಸಭಾ ಸದಸ್ಯತ್ವ ಕೈತಪ್ಪಿ ಹೋಗುತ್ತದೆ ಎಂಬ ಭಯ ರಾಹುಲ್ ಗಾಂಧಿ ಅವರಿಗೆ ಉಂಟಾಗಿದೆ. ಇದೇ ಕಾರಣಕ್ಕಾಗಿಯೇ ಅವರು ದೇಶದಾದ್ಯಂತ ಇಂತಹ ಗಲಾಟೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಲ್ಲದೆ, SIRನಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಮುಖಂಡರು ಭಯಭೀತರಾಗಿದ್ದಾರೆ ಎಂದು ಪಕ್ಷದ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.
Vinay P palekar
ಕಾಂಗ್ರೆಸ್ ನಾಯಕರು ತೀವ್ರವಾಗಿ ಭಯಭೀತರಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಅಲ್ಪಸಂಖ್ಯಾತರ, ಬಡವರ ಇಲ್ಲವೇ ದಲಿತ ಮತಗಳು ಕೈತಪ್ಪುತ್ತವೆ ಎಂಬ ಭಯವಿಲ್ಲ. ಬದಲಿಗೆ, ರಾಹುಲ್ ಗಾಂಧಿ ಅವರು ಎರಡು ಪೌರತ್ವ ಹೊಂದಿದ್ದು, ಆ ಗುಟ್ಟು ರಟ್ಟಾದರೆ ಅವರ ಲೋಕಸಭಾ ಸದಸ್ಯತ್ವ ಕೈತಪ್ಪಿ ಹೋಗುತ್ತದೆ ಎಂಬ ಭಯ ರಾಹುಲ್ ಗಾಂಧಿ ಅವರಿಗೆ ಉಂಟಾಗಿದೆ. ಇದೇ ಕಾರಣಕ್ಕಾಗಿಯೇ ಅವರು ದೇಶದಾದ್ಯಂತ ಇಂತಹ ಗಲಾಟೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಲ್ಲದೆ, SIRನಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಮುಖಂಡರು ಭಯಭೀತರಾಗಿದ್ದಾರೆ ಎಂದು ಪಕ್ಷದ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.
More news from ಕರ್ನಾಟಕ and nearby areas
- ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮತಕ್ಷೇತ್ರದ ಸುಲ್ತಾನಿಪುರ ಗ್ರಾಮದಲ್ಲಿ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ ಚಂದ್ರಪ್ಪ ಅವರು ಇಂದು ಚಾಲನೆ ನೀಡಿದ್ದಾರೆ. ₹1 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರಸ್ತೆ ಕಾಮಗಾರಿಯನ್ನು ಅತ್ಯಂತ ಉತ್ತಮ ಗುಣಮಟ್ಟದಲ್ಲಿ ಮಾಡಿ ಮುಗಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಶಾಸಕ ಎಂ ಚಂದ್ರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.1
- ಚಿತ್ರದುರ್ಗದಲ್ಲಿ ಕರಡಿಯೊಂದು ಓಡಿ ಬಂದಾಗ, ಜನರು ಅದರಿಂದ ದೂರ ಓಡುವ ಬದಲು ಅದರ ಹಿಂದೆಯೇ ಓಡಿದ್ದಾರೆ. ಇಲ್ಲಿ ಕರಡಿಯನ್ನು ನೋಡಿ ಹೆದರಿ ಓಡುವ ಬದಲು ಗ್ರಾಮಸ್ಥರೇ ಅದರ ಬೆನ್ನತ್ತಿ ಹಿಂದೆ ಓಡಿರುವ ಘಟನೆ ನಡೆದಿದೆ.1
- ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಭದ್ರಾ ಮೇಲ್ದಂಡೆ ಯೋಜನೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂವಾದ ಕಾರ್ಯಕ್ರಮಕ್ಕೂ ಮುನ್ನ, ಕಲಾ ಸರಸ್ವತಿ ಗಾನಕೋಗಿಲೆ ಎಸ್ ಜಾನಕಿ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಅಧಿಕಾರಿಗಳು, ರೈತ, ಕನ್ನಡ ಹಾಗೂ ಕಾರ್ಮಿಕ ಸಂಘಟನೆಗಳು ಮೌನಾಚರಣೆ ನಡೆಸುವ ಮೂಲಕ ತಮ್ಮ ಗೌರವವನ್ನು ಸೂಚಿಸಿದರು.1
- ರಾಜ್ಯದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಅದರ ನೀರು ಇದೇ ಮೊದಲ ಬಾರಿಗೆ ಕೂಡ್ಲಿಗಿ ತಾಲೂಕಿಗೆ ತಲುಪಿದೆ. ರಾಜವಾಳ ಜಾಕ್‌ವೆಲ್ ಮೂಲಕ ಈ ನೀರನ್ನು ತಾಲೂಕಿಗೆ ಯಶಸ್ವಿಯಾಗಿ ಹರಿಸಲಾಗಿದ್ದು, ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ತಾಲೂಕಿನ ಪ್ರಮುಖ ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭವಾಗಲಿದ್ದು, ಇದು ರೈತರಿಗೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ದೊಡ್ಡ ಆಶಾಕಿರಣವಾಗಿದೆ.1
- ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ರಾಜವಾಳ ಬಳಿ ಕೂಡ್ಲಿಗಿ ತಾಲ್ಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್‌ವೆಲ್ ಬಳಿ ಶನಿವಾರ ಪೈಪ್‌ಲೈನ್ ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಪೈಪ್‌ಲೈನ್ ಒಡೆದು ಸೋರಿಕೆ ಉಂಟಾಗಿರುವುದರಿಂದ ಭಾರಿ ಪ್ರಮಾಣದ ನೀರು ಕೃಷಿ ಜಮೀನುಗಳಿಗೆ ಹರಿದು ಹೋಗಿದ್ದು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ಹಾನಿಯಾಗಿದೆ. ಇದರೊಂದಿಗೆ ಪಕ್ಕದ ವಿದ್ಯುತ್ ಘಟಕಕ್ಕೂ ನೀರು ನುಗ್ಗಿದೆ. ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೋಟಾರ್‌ಗಳನ್ನು ಮೊನ್ನೆಯಷ್ಟೇ ಆರಂಭಿಸಲಾಗಿತ್ತು ಎಂದು ಸಿಂಗಟಾಲೂರು ಯೋಜನೆ ಉಪ ವಿಭಾಗದ ಎಇಇ ರಾಘವೇಂದ್ರ ತಿಳಿಸಿದ್ದಾರೆ. ಪೈಪ್‌ಲೈನ್ ಸೋರಿಕೆಯಿಂದ ನೀರು ಪೋಲಾಗಿದ್ದು, ಈಗಾಗಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.1
- ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆರಿಗೆ ವಾರ್ಡಿನಲ್ಲಿ ತೀವ್ರ ಅವ್ಯವಸ್ಥೆ ಇರುವುದು ಬೆಳಕಿಗೆ ಬಂದಿದೆ. ಇಲ್ಲಿನ ಹೆರಿಗೆ ವಾರ್ಡಿನ ಬಾತ್ ರೂಮ್ ನಲ್ಲಿ ಬಲ್ಬ್ ಹಾಳಾಗಿದ್ದು, ಬಾಣಂತಿಯರು ಕತ್ತಲೆಯಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹೆರಿಗೆ ವಾರ್ಡಿನಲ್ಲಿ ವಾಟರ್ ಫಿಲ್ಟರ್ ಕೆಟ್ಟು ಮೂರು ದಿನ ಕಳೆದಿದ್ದರೂ ಸಹ ಅದನ್ನು ದುರಸ್ತಿ ಮಾಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಆಸ್ಪತ್ರೆಯ ವಾರ್ಡುಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಕೆಟ್ಟು ಹೋಗಿರುವ ವಾಟರ್ ಫಿಲ್ಟರ್ ಅನ್ನು ತಕ್ಷಣವೇ ಸರಿಪಡಿಸುವಂತೆ ಡಾ. ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಗಮನಕ್ಕೆ ತರಲಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸಲ್ಮಾನ್, ರೂಪಾ ನಾರಾಯಣ್, ಅನಿತಾ ಚಂದ್ರು, ಮಂಜು ಹಾಗೂ ಐಸಾಕ್ ಲಿಂಕನ್ ಉಪಸ್ಥಿತರಿದ್ದರು. ಭದ್ರಾವತಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕೊಠಡಿಗಳು ಕತ್ತಲೆಮಯವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.3
- ಭಾರತೀಯ ಸಂಗೀತ ಲೋಕದ ಅಮೂಲ್ಯ ರತ್ನ, ಗಾನ ಕೋಗಿಲೆ ಡಾಕ್ಟರ್ ಎಸ್. ಜಾನಕಿ ಅಮ್ಮ ಅವರ ಅಂತಿಮ ದರ್ಶನ ಪಡೆದು ಹಲವಾರು ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದು, ಈ ವೇಳೆ ಸಮಾಜಮುಖಿ ವ್ಯಕ್ತಿತ್ವ ಹಾಗೂ ಯುವ ಉದ್ಯಮಿ ಜಿಮ್ ರವಿ ಅವರೂ ಸಹ ಆಗಮಿಸಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಸಂಗೀತ ಲೋಕಕ್ಕೆ ಜಾನಕಿ ಅಮ್ಮ ಅವರು ನೀಡಿದ ಅಪಾರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಜಿಮ್ ರವಿ ಅವರು, ಅವರ ಅಗಲಿಕೆಯು ಇಡೀ ದೇಶದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.1
- ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗೌರಸಮುದ್ರ ಗ್ರಾಮದ ಕೆರೆಯ ಸಮೀಪ ಕಾಣಿಸಿಕೊಂಡ ಈ ಕರಡಿಯು ಕಳೆದ ಎರಡು ದಿನಗಳಿಂದ ಗ್ರಾಮದ ಸುತ್ತಮುತ್ತಲೇ ಸಂಚರಿಸುತ್ತಿದೆ ಎಂದು ಹೇಳಲಾಗಿದೆ. ಹಾಡುಹಗಲೇ ಕಾಣಿಸಿಕೊಂಡ ಕರಡಿಯನ್ನು ಕಂಡು ಭಯಭೀತರಾಗಿರುವ ಗ್ರಾಮಸ್ಥರು, ಜೋರಾಗಿ ಕೂಗಾಟ ನಡೆಸಿ ಹಾಗೂ ವಿವಿಧ ಶಬ್ದಗಳನ್ನು ಮಾಡುವ ಮೂಲಕ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕರಡಿಯನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಓಡಿಸಬೇಕು ಮತ್ತು ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.1