logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ* *ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ* ​ಬೆಂಗಳೂರು :ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ತಕ್ಷಣವೇ ಅವರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ​ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ಸತತ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಮರಪಾದಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ​ನೇಪಾಳದಲ್ಲಿ ನಿಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದ್ದರೆ, ಸಾರ್ವಜನಿಕರು ನಾಪತ್ತೆಯಾದ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಮತ್ತು ಸಮಯ ಹಾಗೂ ಖಾಯಂ ವಿಳಾಸದ ವಿವರಗಳನ್ನು ಸರ್ಕಾರಕ್ಕೆ ತಕ್ಷಣವೇ ಒದಗಿಸಲು ಕೋರಲಾಗಿದೆ. ​ಈ ವಿವರಗಳನ್ನು ನಮೂದಿಸಲು ರಾಜ್ಯ ಸರ್ಕಾರವು ವಿಶೇಷ ಗೂಗಲ ಲಿಂಕ್ ಅನ್ನು ಸಹ ಒದಗಿಸಿದೆ. ​ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು (ಟೋಲ್ ಫ್ರೀ) ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು. ವಿಳಾಸಕ್ಕೆ ಕಳುಹಿಸಬಹುದಾಗಿದೆ. ​ಅಲ್ಲದೆ, ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ನೆರವು ನೀಡಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತುರ್ತು ವಾಟ್ಸಾಪ್ ಹಾಗೂ ಕರೆ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು +977 9851316807, +977 9709107500 ಅಥವಾ +977 9810326117 ಸಂಖ್ಯೆಗಳನ್ನು ನೇರವಾಗಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲು ಹಾಗೂ ನೆರವು ಕೋರಲು ಪ್ರಕಟಣೆಯಲ್ಲಿ ತಿಳಿಸಿದೆ.

1 hr ago
user_Nagesh BR Durgavara
Nagesh BR Durgavara
Photographer Chitradurga, Karnataka•
1 hr ago

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ* *ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ* ​ಬೆಂಗಳೂರು :ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ತಕ್ಷಣವೇ ಅವರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ​ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ಸತತ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಮರಪಾದಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ​ನೇಪಾಳದಲ್ಲಿ ನಿಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದ್ದರೆ, ಸಾರ್ವಜನಿಕರು ನಾಪತ್ತೆಯಾದ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಮತ್ತು ಸಮಯ ಹಾಗೂ ಖಾಯಂ ವಿಳಾಸದ ವಿವರಗಳನ್ನು ಸರ್ಕಾರಕ್ಕೆ ತಕ್ಷಣವೇ ಒದಗಿಸಲು ಕೋರಲಾಗಿದೆ. ​ಈ ವಿವರಗಳನ್ನು ನಮೂದಿಸಲು ರಾಜ್ಯ ಸರ್ಕಾರವು ವಿಶೇಷ ಗೂಗಲ ಲಿಂಕ್ ಅನ್ನು ಸಹ ಒದಗಿಸಿದೆ. ​ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು (ಟೋಲ್ ಫ್ರೀ) ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು. ವಿಳಾಸಕ್ಕೆ ಕಳುಹಿಸಬಹುದಾಗಿದೆ. ​ಅಲ್ಲದೆ, ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ನೆರವು ನೀಡಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತುರ್ತು ವಾಟ್ಸಾಪ್ ಹಾಗೂ ಕರೆ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು +977 9851316807, +977 9709107500 ಅಥವಾ +977 9810326117 ಸಂಖ್ಯೆಗಳನ್ನು ನೇರವಾಗಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲು ಹಾಗೂ ನೆರವು ಕೋರಲು ಪ್ರಕಟಣೆಯಲ್ಲಿ ತಿಳಿಸಿದೆ.

More news from ಕರ್ನಾಟಕ and nearby areas
  • ರಸ್ತೆಗೆ ಚಾಚಿದ ಕಳ್ಳೆ ಬೈಕ್ ಸವಾರರು ಸ್ವಲ್ಪ ಯಾಮಾರಿದರೆ ಕಳ್ಳೆಯೋಳಗೆ ಬೈಕ್.
    1
    ರಸ್ತೆಗೆ ಚಾಚಿದ ಕಳ್ಳೆ ಬೈಕ್ ಸವಾರರು ಸ್ವಲ್ಪ ಯಾಮಾರಿದರೆ  ಕಳ್ಳೆಯೋಳಗೆ ಬೈಕ್.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಚಿತ್ರದುರ್ಗದಲ್ಲಿ ‘ಸೀರತ್ ಅಭಿಯಾನ’! 🔥 ಪ್ರವಾದಿ ಮುಹಮ್ಮದ್ ﷺ ಸಂದೇಶ ಸಾರಲು ಸಜ್ಜು! #SeeratUnNabi #ಸೀರತ್_ಅಭಿಯಾನ #ಕ್ರಾಂತಿಯಜ್ಯೋತಿ #ಪ್ರವಾದಿಮುಹಮ್ಮದ್ﷺ #Muhammadﷺ #ProphetMuhammad #SeeratCampaign #JamaatEIslamiHind #ಚಿತ್ರದುರ್ಗ #Chitradurga #ChitradurgaNews #KarnatakaNews #KannadaNews #BreakingNews #ViralNews #LocalNews #CTownNews #CtownNews #NewsUpdate #ಸುದ್ದಿ #ಸುದ್ದಿವಾಹಿನಿ
    1
    ಚಿತ್ರದುರ್ಗದಲ್ಲಿ ‘ಸೀರತ್ ಅಭಿಯಾನ’! 🔥
ಪ್ರವಾದಿ ಮುಹಮ್ಮದ್ ﷺ ಸಂದೇಶ ಸಾರಲು ಸಜ್ಜು!
#SeeratUnNabi
#ಸೀರತ್_ಅಭಿಯಾನ
#ಕ್ರಾಂತಿಯಜ್ಯೋತಿ
#ಪ್ರವಾದಿಮುಹಮ್ಮದ್ﷺ
#Muhammadﷺ
#ProphetMuhammad
#SeeratCampaign
#JamaatEIslamiHind
#ಚಿತ್ರದುರ್ಗ
#Chitradurga
#ChitradurgaNews
#KarnatakaNews
#KannadaNews
#BreakingNews
#ViralNews
#LocalNews
#CTownNews
#CtownNews
#NewsUpdate
#ಸುದ್ದಿ
#ಸುದ್ದಿವಾಹಿನಿ
    user_Ctownnews16
    Ctownnews16
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
  • ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ನಗರದ ಗಾಂಧಿನಗರದ ಮಸೀದಿ ಬಳಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈದುಮಿಲಾದ್ ಹಬ್ಬವು ಪ್ರೀತಿ, ಸಹೋದರತೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಪವಿತ್ರ ದಿನವಾಗಿದೆ. ಸಮಾಜದಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು. ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಈ ವೇಳೆ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಈದುಮಿಲಾದ್ ಮೂಲಕ ಶಾಂತಿ, ಸಹೋದರತೆ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಚಳ್ಳಕೆರೆ ನಗರ ಗಮನ ಸೆಳೆಯಿತು.
    1
    ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ನಗರದ ಗಾಂಧಿನಗರದ ಮಸೀದಿ ಬಳಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈದುಮಿಲಾದ್ ಹಬ್ಬವು ಪ್ರೀತಿ, ಸಹೋದರತೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಪವಿತ್ರ ದಿನವಾಗಿದೆ. ಸಮಾಜದಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಈ ವೇಳೆ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.
ಈದುಮಿಲಾದ್ ಮೂಲಕ ಶಾಂತಿ, ಸಹೋದರತೆ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಚಳ್ಳಕೆರೆ ನಗರ ಗಮನ ಸೆಳೆಯಿತು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
  • ಶೀತ, ಕೆಮ್ಮು, ಜ್ವರ ಹೆಚ್ಚಳ: ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ ಚಿತ್ರದುರ್ಗ:ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಶೀತ, ಕೆಮ್ಮು ಹಾಗೂ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲೂ ಸಾಮಾನ್ಯ ಶೀತ, ಕೆಮ್ಮು ಮತ್ತು ಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಈ ರೋಗಲಕ್ಷಣಗಳು ಉಸಿರಾಟ, ಸೋಂಕಿತ ವ್ಯಕ್ತಿ ಉಪಯೋಗಿಸಿದ ವಸ್ತುಗಳು ಹಾಗೂ ಗಾಳಿಯಲ್ಲಿನ ಕಣಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈದ್ ಮಿಲಾದ್, ಗೌರಿ ಗಣೇಶ ಚತುರ್ಥಿ, ಓಣಂ, ದಸರಾ ಹಾಗೂ ದೀಪಾವಳಿ ಮುಂತಾದ ಹಬ್ಬಗಳು ಬರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮೂಹಿಕವಾಗಿ ಸೇರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಪ್ರಕರಣಗಳು ಕಂಡುಬರುವ ಅಪಾಯವಿದೆ. ಈ ಸಾಂಕ್ರಾಮಿಕ ರೋಗ ಹತೋಟಿಗಾಗಿ ಸಾರ್ವಜನಿಕರು ರೋಗಲಕ್ಷಣಗಳು ಕಂಡುಬಂದಲ್ಲಿ ಕೆಮ್ಮುವಾಗ ಅಥವಾ ಸೀನುವಾಗ ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತ್ರ ಧರಿಸಬೇಕು, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಹಾಗೂ ರೋಗಲಕ್ಷಣಗಳಿಗೆ ಅನುಸಾರವಾಗಿ ಪರೀಕ್ಷೆಗೆ ಒಳಗಾಗಬೇಕು. ಸರ್ಕಾರಿ ಕಚೇರಿ, ವಸತಿ ಸಮುಚ್ಚಯ, ಹೋಟೆಲ್, ದೇವಸ್ಥಾನ, ರೆಸ್ಟೋರೆಂಟ್, ಬಸ್ ಹಾಗೂ ರೈಲ್ವೆ ನಿಲ್ದಾಣ, ವಿದ್ಯಾ ಸಂಸ್ಥೆಗಳು ಮತ್ತು ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಸೋಂಕಿತ ವ್ಯಕ್ತಿಗಳು ಅಂತರ ಕಾಯ್ದುಕೊಳ್ಳಬೇಕು ಹಾಗೂ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು. ರೋಗಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಬ್ಬರೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್ ಕೋರಿದ್ದಾರೆ. (ಫೋಟೋ ಕಳುಹಿಸಿದೆ) ======== ಆ.28ರಂದು ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ******** ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಆಗಸ್ಟ್ 28ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಮಾರಂಭ ಏರ್ಪಡಿಸಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಉದ್ಘಾಟನೆ ನೆರವೇರಿಸುವರು. ಹೊಸದುರ್ಗ ಶಾಸಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ, ಸಂಸದ ಗೋವಿಂದ ಎಂ.ಕಾರಜೋಳ ಘನ ಉಪಸ್ಥಿತಿ ವಹಿಸುವರು. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಮಂಜಪ್ಪ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅರ್.ಶಿವಣ್ಣ, ಕೊರಮ ಸಮಾಜ ಜಿಲ್ಲಾ ಅಧ್ಯಕ್ಷ ಕೆ.ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಜಿಲ್ಲಾ ಆರ್ಯ ಈಡಿಗರ ಸಂಘ ಅಧ್ಯಕ್ಷ ಹೆಚ್.ಜೀವನ್, ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ್, ಜಿಲ್ಲಾ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಅನುರಾಧ ರವಿಕುಮಾರ್, ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗರ ಸಂಘ ಹಾಗೂ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ, ಆರ್ಯ ಈಡಿಗರ ಸೇವಾ ಸಂಘ ಅಧ್ಯಕ್ಷ ಇ.ಎನ್.ಲಕ್ಷ್ಮೀಕಾಂತ ಭಾಗವಹಿಸುವರು. ಚಿತ್ರದುರ್ಗದ ಉಮೇಶ್ ಪತ್ತಾರ ಮತ್ತು ತಂಡ ಹಾಗೂ ಆಯಿತೋಳು ಯಶವಂತ್ ಕುಮಾರ್ ಮತ್ತು ತಂಡದವರಿಂದ ಗೀತಗಾಯನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದ್ದಾರೆ. ===========
    1
    ಶೀತ, ಕೆಮ್ಮು, ಜ್ವರ ಹೆಚ್ಚಳ: ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ

ಚಿತ್ರದುರ್ಗ:ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಶೀತ, ಕೆಮ್ಮು ಹಾಗೂ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲೂ ಸಾಮಾನ್ಯ ಶೀತ, ಕೆಮ್ಮು ಮತ್ತು ಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
ಈ ರೋಗಲಕ್ಷಣಗಳು ಉಸಿರಾಟ, ಸೋಂಕಿತ ವ್ಯಕ್ತಿ ಉಪಯೋಗಿಸಿದ ವಸ್ತುಗಳು ಹಾಗೂ ಗಾಳಿಯಲ್ಲಿನ ಕಣಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈದ್ ಮಿಲಾದ್, ಗೌರಿ ಗಣೇಶ ಚತುರ್ಥಿ, ಓಣಂ, ದಸರಾ ಹಾಗೂ ದೀಪಾವಳಿ ಮುಂತಾದ ಹಬ್ಬಗಳು ಬರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮೂಹಿಕವಾಗಿ ಸೇರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಪ್ರಕರಣಗಳು ಕಂಡುಬರುವ ಅಪಾಯವಿದೆ.
ಈ ಸಾಂಕ್ರಾಮಿಕ ರೋಗ ಹತೋಟಿಗಾಗಿ ಸಾರ್ವಜನಿಕರು ರೋಗಲಕ್ಷಣಗಳು ಕಂಡುಬಂದಲ್ಲಿ ಕೆಮ್ಮುವಾಗ ಅಥವಾ ಸೀನುವಾಗ ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತ್ರ ಧರಿಸಬೇಕು, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಹಾಗೂ ರೋಗಲಕ್ಷಣಗಳಿಗೆ ಅನುಸಾರವಾಗಿ ಪರೀಕ್ಷೆಗೆ ಒಳಗಾಗಬೇಕು.
ಸರ್ಕಾರಿ ಕಚೇರಿ, ವಸತಿ ಸಮುಚ್ಚಯ, ಹೋಟೆಲ್, ದೇವಸ್ಥಾನ, ರೆಸ್ಟೋರೆಂಟ್, ಬಸ್ ಹಾಗೂ ರೈಲ್ವೆ ನಿಲ್ದಾಣ, ವಿದ್ಯಾ ಸಂಸ್ಥೆಗಳು ಮತ್ತು ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಸೋಂಕಿತ ವ್ಯಕ್ತಿಗಳು ಅಂತರ ಕಾಯ್ದುಕೊಳ್ಳಬೇಕು ಹಾಗೂ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು.
ರೋಗಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಬ್ಬರೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್ ಕೋರಿದ್ದಾರೆ.
(ಫೋಟೋ ಕಳುಹಿಸಿದೆ)
========
ಆ.28ರಂದು ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
********
ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.25:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಆಗಸ್ಟ್ 28ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಮಾರಂಭ ಏರ್ಪಡಿಸಲಾಗಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಉದ್ಘಾಟನೆ ನೆರವೇರಿಸುವರು. ಹೊಸದುರ್ಗ ಶಾಸಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ, ಸಂಸದ ಗೋವಿಂದ ಎಂ.ಕಾರಜೋಳ ಘನ ಉಪಸ್ಥಿತಿ ವಹಿಸುವರು. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಮಂಜಪ್ಪ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅರ್.ಶಿವಣ್ಣ, ಕೊರಮ ಸಮಾಜ ಜಿಲ್ಲಾ ಅಧ್ಯಕ್ಷ ಕೆ.ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಜಿಲ್ಲಾ ಆರ್ಯ ಈಡಿಗರ ಸಂಘ ಅಧ್ಯಕ್ಷ ಹೆಚ್.ಜೀವನ್, ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ್, ಜಿಲ್ಲಾ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಅನುರಾಧ ರವಿಕುಮಾರ್, ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗರ ಸಂಘ ಹಾಗೂ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ, ಆರ್ಯ ಈಡಿಗರ ಸೇವಾ ಸಂಘ ಅಧ್ಯಕ್ಷ ಇ.ಎನ್.ಲಕ್ಷ್ಮೀಕಾಂತ ಭಾಗವಹಿಸುವರು. ಚಿತ್ರದುರ್ಗದ ಉಮೇಶ್ ಪತ್ತಾರ ಮತ್ತು ತಂಡ ಹಾಗೂ ಆಯಿತೋಳು ಯಶವಂತ್ ಕುಮಾರ್ ಮತ್ತು ತಂಡದವರಿಂದ ಗೀತಗಾಯನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದ್ದಾರೆ.
===========
    user_ನ್ಯೂಸ್ ಕಿಂಗ್
    ನ್ಯೂಸ್ ಕಿಂಗ್
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    18 hrs ago
  • ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್ ಜಗಳೂರು.25 ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಕೇಂದ್ರ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು. ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು. ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು. ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು. ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ. ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.
    2
    ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್
ಜಗಳೂರು.25
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ  ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ  ಡಯಾಲೀಸಿಸ್ ಕೇಂದ್ರ ಅತ್ಯುತ್ತಮ
ಕಾರ್ಯನಿರ್ವಹಣೆ  ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು.
ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು.
ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು.
ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. 
ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. 
ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು.
ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು
ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು.
ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ.
ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.
    user_Basavaraja B Press Reporter AP
    Basavaraja B Press Reporter AP
    Social Media Manager ಜಗಳೂರು, ದಾವಣಗೆರೆ, ಕರ್ನಾಟಕ•
    3 hrs ago
  • ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು
    1
    ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು
    user_ವ್ಯಾವಹಾರಿಕ
    ವ್ಯಾವಹಾರಿಕ
    Farmer ಚನ್ನಗಿರಿ, ದಾವಣಗೆರೆ, ಕರ್ನಾಟಕ•
    21 min ago
  • ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು  ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು. ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು. ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು. ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು
    1
    ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು
ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ  ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ  ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು 
ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ
ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು.
ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು.
ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು.
ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    2 hrs ago
  • ಕೆಲವೇ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ ರಘುಮೂರ್ತಿ
    1
    ಕೆಲವೇ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ  ಟಿ ರಘುಮೂರ್ತಿ
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.