ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಒತ್ತಾಯ ಕೆಜಿಎಫ್:ಆ:೨೬: ಬೋರಿಲಾಲ್‌ಪೇಟೆ ಬಳಿಯಿರುವ ರಾಜಕಾಲುವೆಯಲ್ಲಿ ಒತ್ತುವಾರಿ ಮಾಡಿಕೊಂಡು ಕಾಪೌಂಡ್ ಗೋಡೆ ನಿರ್ಮೀಸುತ್ತಿರುವುದನ್ನು ತಕ್ಷಣ ತೆರವುಗೊಳಿಸಬೇಕು ಎಂದು ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ನಗರಸಭೆ ವ್ಯಾಪ್ತಿಯ ಬೋರಿಲಾಲ್‌ಪೇಟೆಯಲ್ಲಿರುವ ರಾಜಕಾಲುವೆಯನ್ನು ಒತ್ತುವಾರಿ ಮಾಡಿಕೊಂಡು ಪಕ್ಕದಲ್ಲಿ ಲೇಔಟ್ ನಿರ್ಮೀಸಲಾಗುತ್ತಿದ್ದು ಇದುವರೆಗೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಮೌನಕ್ಕೆ ಒಳಗಾಗಿರುವುದು ಸರಿಯಲ್ಲ ಎಂದು ಅಧಿಕಾರಿಗಳ ನಡೆ ವಿರುದ್ಧ ಅಸಮಾಧನ ವ್ಯಕ್ತಪಡಿಸಿದರು. ರಾಜಕಾಲುವೆ ಕೆರೆ ಪ್ರದೇಶಗಳಲ್ಲಿ ಬಫರ್ ಝನ್ ಆಗಿ ಸರ್ಕಾರ ಘೋಷಣೆ ಮಾಡಿದ್ದು ರಾಜಕಾಲುವೆಗೆ ಅಡ್ಡವಾಗಿ ಗೋಡೆ ನಿರ್ಮೀಸಿದರೆ ನಾಳೆ ರಾಜಕಾಲುವೆಯನ್ನು ಸ್ವಚ್ಚಗೊಳಿಸಲು ಅಥಾವ ರಾಜಕಾಲುವೆಯಲ್ಲಿ ಯಾವುದಾದರು ಪ್ರಾಣಿ,ಮನುಷ್ಯರ ಬಿದ್ದರೆ ಅವರನ್ನು ಕಾಪಾಡುವುದು ಹೇಗೆ ಎಂಬ ಚಿಂತನೆ ಅಧಿಕಾರಿಗಳು ನಡೆಸಬೇಕು ಎಂದು ಪ್ರಶ್ನೆ ಮಾಡಿದರು. ಈ ವಿಚಾರವಾಗಿ ಶಾಸಕಿ ರೂಪಶಶಿಧರ್ ಜೋತೆಯಲ್ಲಿ ಮಾತನಾಡಿದ್ದು ಅಧಿಕಾರಿಗಳಿಗೆ ತೆರವುಗೊಳಿಸುವಂತೆ ಆದೇಶ ಸಹ ನೀಡಿದ್ದಾರೆ ತಕ್ಷಣ ನಗರಸಭೆ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

- ಮುಳಬಾಗಿಲು : ಸೆ 13ರಿಂದ 18ರವರೆಗೆ ಕುರುಡುಮಲೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಹಿನ್ನಲೆ ಪೂರ್ವಭಾವಿ ಸಭೆ.!2
- *ದೇವರ ನಿಶ್ಚಯದಂತೆ ನಾವುಗಳು ಕೆಲಸ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದೇವೆ:ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣಗೌಡ* ಹಲವಾರು ಸಮುದಾಯದ ಜನರು ವಾಸಿಸುವ ಕಮ್ಯೂನಿಟಿಗಳಲ್ಲಿ ದೇವಾಲಯ ನಿರ್ಮಾಣ ಕಷ್ಟ ಸಾಧ್ಯ ಆದರೂ ಪ್ರೆಸ್ಟೀಜ್ ಗ್ಲೆನ್ ವುಡ್ ಕಮ್ಯೂನಟಿಯ ಜನರ ಆಶಯ ಹಾಗೂ ಸಂಕಲ್ಪ ದಂತೆ ಶ್ರೀ ವರಸಿದ್ಧಿ ವಿನಾಯಕ ದೇವಾಲಯವ ನಿರ್ಮಾಣದ ಬಗ್ಗೆ ಎರಡು ವರ್ಷದ ಹಿಂದಿನಿಂದಲೂ ಮಾಡುತ್ತಿದ್ದರೂ ದೇವಾಲಯವ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ 45 ದಿನಗಳಲ್ಲಿ ಅದರಲ್ಲೂ ಕೇವಲ 30 ದಿನಗಳು ಕೆಲಸ ಮಾಡಿ ಪೂರ್ಣಗೊಳಿಸಿರುವುದು ಗಿನ್ನಿಸ್ ದಾಖಲೆ ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದರು ಎಂದು ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ಲಕ್ಷ್ಮಣಗೌಡರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಬಿದರಹಳ್ಳಿ ಹೋಬಳಿ ಭೂದಿಗೆರೆ ರಸ್ತೆಯ ಮಂಡೂರುಗ್ರಾಮದ ಪ್ರೆಸ್ಟೀಜ್ ಗ್ಲೆನ್ ವುಡ್ ನ ಶ್ರೀ ವರಸಿದ್ಧ ವಿನಾಯಕ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಮಾಡಬೇಕಾದರೂ ನಾವು ನಿಮಿತ್ತ ಮಾತ್ರ ಎಲ್ಲಾ ದೇವರ ಕೃಪೆಯಿಂದ ನಡೆಯುತ್ತದೆ.ದೇವಾಲಯದ ಕೆಲಸ ಹಾಗೂ ಪ್ರತಿಷ್ಠಾಪನೆ ವಿನಾಯಕನ ಕೃಪೆಯಿಂದ ಸಾಂಗವಾಗಿ ನೆರವೇರಿದೆ ಎಂದು ಹೇಳಿದರು. ದೇವತಾ ಕಾರ್ಯದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ಹಿತವಚನಗಳನ್ನು ತಿಳಿಸಿದರು. ಅವರೊಂದಿಗೆ ಮುಖಂಡರುಗಳಾದ ಕಾಟ್ಮನೂರು ಪಾಪಣ್ಣ,ಕ್ರಾಸ್ ಮಂಜು,,ಜ್ಯೋತಿ ಪುರ ವೇಣು ರವರುಗಳು ಆಗಮಿಸಿ ಶುಭಕೋರಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು. ದೇವಾಲಯ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಶ್ರೀ ವರಸಿದ್ಧಿ ವಿನಾಯಕ ಎಲ್ಲರ ಕಷ್ಟಗಳ ನಿವಾರಣೆ ಮಾಡಲಿ ಹಾಗೂ ಕಲವರ ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕಲಿ ಎಂದು ಆಶಿಸಿದರು ಹಾಗೂ ದೇವಾಲಯದ ಶುಚಿತ್ವ ಕಾಪಾಡಿಕೊಂಡು ಮುನ್ನಡಿಸಿಕೊಂಡು ಹೋಗ ಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಪಿಳ್ಳಪ್ಪ,ಸ್ಥಳೀಯ ನಿವಾಸಿಗಳಾದ ಜನಾರ್ದನ್, ಪರಿಷಿತ್,ನಿಕುನ್,ಚೌಧರಿ,ರಣವೀರ್, ರಂಚಿತ್,ಕೃಷ್ಣಾ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರುಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.3
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು2
- ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ1
- ಸಂಪುಟ ಬದಲಾವಣೆ ವಿಚಾರ: ನನಗೇನೂ ಗೊತ್ತಿಲ್ಲ, ಖರ್ಗೆ ಸ್ಪಷ್ಟನೆ. ಬೆಂಗಳೂರು: ಸಂಪುಟ ಪುನಾರಚನೆ ಅಥವಾ ಬದಲಾವಣೆ ಕುರಿತು ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಬಗ್ಗೆ ತಮಗೆ ಏನಾದರೂ ತಿಳಿದಿದ್ದರೆ ಹೇಳಿ, ನನಗೇನೂ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಸಂಪುಟ ಬದಲಾವಣೆ ಹಾಗೂ ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಗಳ ದೆಹಲಿ ಭೇಟಿಯ ವಿಚಾರವಾಗಿ ಮಾತನಾಡುತ್ತಾ, "ನಾನು ಸದ್ಯ ಕಲಬುರಗಿಯಲ್ಲಿದ್ದೇನೆ. ಯಾರೇ ಆದರೂ ದೆಹಲಿಗೆ ತೆರಳುವುದಕ್ಕೂ ಮುನ್ನ ನನ್ನ ಬಳಿಯೇ ಬರಬೇಕಲ್ಲವೇ?" ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಖರ್ಗೆ, ಸರ್ಕಾರದ ಪ್ರಮುಖ ಕಡತಗಳು ಹಾಗೂ ನಿರ್ಧಾರಗಳ ಕುರಿತು ಪ್ರತಿಕ್ರಿಯಿಸುತ್ತಾ, "ಯಾವುದೇ ಮಹತ್ವದ ಕಡತಗಳು ನನ್ನ ಗಮನಕ್ಕೆ ಬಾರದೆ ಹೋಗುವುದಿಲ್ಲ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಅಥವಾ ಯಾರನ್ನು ಕೈಬಿಡಬೇಕು ಎಂಬ ಪ್ರಕ್ರಿಯೆಗಳು ನನ್ನ ಬಳಿಯೇ ಬರಬೇಕು. ಅಂತಹ ಯಾವುದೇ ಕಡತಗಳು ಅಥವಾ ಪ್ರಸ್ತಾವನೆಗಳು ಅಧಿಕೃತವಾಗಿ ನನ್ನ ಬಳಿಗೆ ಬಂದಾಗ, ಖಂಡಿತವಾಗಿಯೂ ನಿಮಗೆ ತಿಳಿಸುತ್ತೇನೆ" ಎಂದು ತಿಳಿಸಿದರು.1
- ನಂಜನಗೂಡು : ಮಾದಕ ಜಾಲಕ್ಕೆ ಕಡಿವಾಣ ಹಾಕಿ.! ಪೊಲೀಸ್ ಇಲಾಖೆ ವಿರುದ್ಧ ಮಾಜಿ ಶಾಸಕ ಹರ್ಷವರ್ಧನ್ ವಾಗ್ದಾಳಿ.!?2