24 ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಎ.ಐ ತಂತ್ರಜ್ಞಾನ ಎಷ್ಟೆ ಬೆಳೆದರೂ, ಶಿಕ್ಷಕರನ್ನು ಮೀರಿಸಲು ಸಾಧ್ಯವಿಲ್ಲ- ಸಚಿವ ಪ್ರಿಯಾಂಕ್ ಖರ್ಗೆ ಕರೆ ಕಲಬುರಗಿ- ಇಂದಿನ ದಿನಮಾನದಲ್ಲಿ ಎ.ಐ ತಂತ್ರಜ್ಞಾನ (ಕೃತಕ ಬುದ್ದಿಮತೆ) ಎಷ್ಟೆ ಬೆಳೆದರು, ಶಿಕ್ಷಕರನ್ನು ಬದಲಿಯಾಗಿ ಬೋಧನೆ ಮಾಡಲು ಸಾಧ್ಯವಿಲ್ಲ. ಪ್ರಶ್ನೆ ಕೇಳಿದರೆ ತಂತ್ರಜ್ಞಾನ ಉತ್ತರಿಸಬಹುದು ಹೊರತು ಮಕ್ಕಳಲ್ಲಿ ಪ್ರಶ್ನೆ ಕೇಳುವ ಸಾಮರ್ಥ್ಯ ಬೆಳೆಸಲು ಎ.ಐ.ನಿಂದ ಸಾಧ್ಯವಿಲ್ಲ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಲಬುರಗಿ ನಗರದ ಡಾ. ಎಸ್.ಎಮ್. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದಲ್ಲದೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬಿತ್ತಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಎ.ಐ. ತಂತ್ರಜ್ಣಾನ ಬಂದರೂ ನಿಮ್ಮ ಜವಾಬ್ದಾರಿ ಕಡಿಮೆಯಾಗಲ್ಲ. ಬದಲಿಗೆ ದಿನದಿಂದದಿನಕ್ಕೆ ಹೆಚ್ಚುತ್ತಲೆ ಇರುತ್ತೆ ಎಂದರು. ಮಕ್ಕಳಿಗೆ ಸರಿ-ತಪ್ಪು ಯಾವುದು ಎಂಬುವ ಪ್ರಜ್ಞೆ ಬರಲು ಮಕ್ಕಳಿಗೆ ಶಿಕ್ಷಕರೆ ಬೋಧಿಸಬೇಕಾಗುತ್ತದೆ. ಸ್ಮಾರ್ಟ್ ಕ್ಲಾಸ್ ನಿರ್ಮಾಣದಿಂದ ಮಕ್ಕಳು ಸ್ಮಾರ್ಟ್ ಆಗಲ್ಲ. ಮಕ್ಕಳಿಗೆ ಪುರಾಣ, ಪ್ರವಚನ ಜೊತೆಗೆ ವೈಜ್ಞಾನಿಕ ಚಿಂತನೆ, ಕುತೂಹಲ ಹೆಚ್ಚಿಸುವ ಶಿಕ್ಷಣ ನೀಡಿದಾಗ, ಪ್ರಶ್ನೆ ಮಾಡುವ ಧೈರ್ಯ ಮಕ್ಕಳು ತೋರಿದಾಗಲೆ ಮಕ್ಕಳನ್ನು ಸ್ಮಾರ್ಟ್ ಎನ್ನಲು ಸಾಧ್ಯ ಎಂದರು.

- ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು. “ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ ಶುಭ ಹಾರೈಸಿದರು. ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.1
- ಕಲಬುರಗಿ: ಬಿಜೆಪಿ ಅವರು ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ರಾಜಿನಾಮೆ ನೀಡ್ತೆನೆ- ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ-B.Y ವಿಜಯೇಂದ್ರ , R. ಅಶೋಕ್ ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ನೀಡ್ತೆನೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಮಾತನಾಡಿ ವಂದೇ ಮಾತರಂ ಎರಡು ಚರಣ ಹಾಡಲು ಸರ್ಕಾರ ನಿರ್ಣಯ ಮಾಡಿತು, ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಬಿಜೆಪಿಯವರಿಗೆ ಹೋರಾಟ ಮಾಡಲು ಯಾವ ವಿಷಯ ಇಲ್ಲ ಹಾಗಾಗಿ ವಂದೇ ಮಾತರಂ ಗೀತೆಯ ಬಗ್ಗೆ ಹೋರಾಟ ಮಾಡಲು ಹೊರಟಿದ್ದಾರೆ. ವಿಜಯೇಂದ್ರ ಹಾಗೂ ಅಶೋಕ್ ಅವರು ಯಾವುದೇ ಪೇಪರ್, ಟೆಲಿ ಪ್ರಾಂಪ್ಟರ್ ಬಳಸಿಕೊಳ್ಳದೆ ನಾಲ್ಕು ಚರಣ ತಕ್ಷಣ ಹಾಡಿ ತೋರಿಸಲಿ. ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದುರು ಇನ್ನು ಬಿಜೆಪಿ ಶಾಸಕರಿಗೂ ಕೂಡ ವಿಧಾನ ಸಭೆಯಲ್ಲಿ ಪ್ರತ್ಯೇಕವಾಗಿ ವಂದೇ ಮಾತರಂ ಹಾಡಲು ಅನುವು ಮಾಡಿಕೊಂಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಅವೆರಲ್ಲರೂ ಕೂಡ ಕಂಠ ಪಾಠ ಮಾಡಿ ಹಾಡಲಿ ಎಂದ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು1
- ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಪರಮೇಶ್ವರ ಬೆನಕಿನಪಳ್ಳಿ ಸಂಗೀತ ಗಾಯಕ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಕಾಳಗಿ(ಇಂಗನಕಲ್) ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀ ಪೂಜ್ಯ ಗುರುಗಳಾದ ವೀರಭದ್ರಯ್ಯ ಸ್ವಾಮೀಜಿ ಗಾಯಕರು ಸಂಗೀತ ಗಾಯಕ ಪರಮೇಶ್ವರ ಬೆನಕಿನಪಳ್ಳಿ ಪ್ರಸಿದ್ಧ ಡೋಲು ವಾದಕರು ಸಿದ್ದಣ್ಣ ಮಗಿ ಮಲ್ಲಿಕಾರ್ಜುನ ಮಾನಕಾರ ಗಾಯಕ ಶಿವಲಿಂಗಣ್ಣ ಪಾಟೀಲ್ ಶಾಂತಪ್ಪಗೌಡ ಬಿರಾದಾರ ಕಂಠೆಪ್ಪಾ ಬಸವಂತರಾವ ಮಾನಕಾರ ಬಸವರಾಜ ಮಾವನೂರ ಶರಣಪ್ಪಾ ಚಂದ್ರಶೇಖರ ರವೀಂದ್ರ ಹಾಲಕಾಯಿ ಮಲ್ಲಣ್ಣ ಸಂತೋಷ ಬಿರಂಜಗಿ ಹಣಮಂತ ಶರಣು ಮಂಗಲಗಿ ನಾಗಣ್ಣ ಜಗದೇವಪ್ಪ ಬಡಿಗೇರ ಅನೇಕ ಭಕ್ತರು ಸಹಕಾರ ಕೊಟ್ಟು ಸುಗಮವಾಗಿ ಸಂಗೀತ ಜೊತೆಗೆ ಭಜನೆ ನಡೆಸಿಕೊಟ್ಟರು1
- ಬ್ಯಾನರ್ ವಿವಾದ: ಇದು ಅಧಿಕಾರಿಗಳ ತಪ್ಪು, ಮುಂದೆ ಪ್ರೋಟೋಕಾಲ್ ಪಾಲಿಸಬೇಕು - ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ1
- ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ. #ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ. DK Shivakumar Star Kannada News 24×7 Star Kannada News 24×7 Yash1
- ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ.! ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ.!1
- ಮಧ್ಯರಾತ್ರಿ ಬಂದು ರೈತರ ಮನವಿ ಪಡೆದ ಕಲಬುರಗಿ ಜಿಲ್ಲಾಧಿಕಾರಿ, ಎಸ್ಪಿ ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟಕ್ಕೆ ಮಣಿದು ಕಡೆಗೂ ಕಲಬುರಗಿ ಜಿಲ್ಲಾಧಿಕಾರಿಗಳು ಸೇಡಂಗೆ ಮಧ್ಯರಾತ್ರಿ ಭೇಟಿ ನೀಡಿ ಮನವಿ ಪಡೆದಿದ್ದಾರೆ. ಸೇಡಂ ತಾಲೂಕನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿರುವುದು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ಚಿಂಚೋಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.1
- ಹುಮನಾಬಾದ : BSSK ಬಚಾವ್ ಪಾದಯಾತ್ರೆಯಲ್ಲಿ ರೈತರ ಕಾರ್ಮಿಕರ ಮಾತು1