Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- Post by AAJ KI DASTAK NEWS KARNATAKA1
- ಮಳವಳ್ಳಿ ತಾಲೂಕಿನ ಪೂರಿಗಾಲಿ ಶಾಸಕರ ನಿವಾಸಕ್ಕೆ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಶೋಭಾರಾಣಿ ಭೇಟಿ ಶಾಸಕರಿಗೆ ಅಭಿನಂದನೆ ಮಂಡ್ಯ ಜಿಲ್ಲೆಗೆ ನೂತನವಾಗಿ ನೇಮಕವಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀಮತಿ ವಿ.ಜೆ. ಶೋಭಾರಾಣಿ ಅವರು ಇಂದು ನನ್ನನ್ನು ಭೇಟಿ ಮಾಡಿ, ಅಭಿನಂದಿಸಿ, ಆರೋಗ್ಯವಿಚಾರಿಸಿದರು. ಈ ವೇಳೆ ಡಿವೈಎಸ್ಪಿ ಯಶ್ವಂತ್ ಕುಮಾರ್ ಅವರು ಹಾಗೂ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀಧರ್ ಅವರು ಉಪಸ್ಥಿತರಿದ್ದರು.1
- ಹನೂರು: ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತಕ್ಕೆ ಭಾನುವಾರ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬಂದಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಕಲ್ಲುಬಂಡೆಗಳ ನಡುವೆ ವೇಗವಾಗಿ ಹರಿಯುವ ಕಾವೇರಿ ನದಿಯ ರುದ್ರ–ರಮಣೀಯ ದೃಶ್ಯವನ್ನು ಸವಿದರು. ಜಲಪಾತ ವೀಕ್ಷಣೆ ಬಳಿಕ ಸ್ಥಳೀಯ ಮೀನು ಖಾದ್ಯಗಳನ್ನು ಸವಿಯಲು ಜನಸಂದಣಿ ಕಂಡುಬಂದಿತು. ಈ ವೇಳೆ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನದಿಯ ಅಪಾಯಕರ ಪ್ರದೇಶಗಳಿಗೆ ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.1
- ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ 1. 1 ಮೆಗಾ ವ್ಯಾಟ್ ಸೋಲಾರ್ ಘಟಕವನ್ನು ಶಾಸಕ ಎಂ.ಆರ್ ಮಂಜುನಾಥ್ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಮಲೆ ಮಹದೇಶ್ವರ ಪ್ರಾಧಿಕಾರಕ್ಕೆ ಅನುಕೂಲವಾಗುವ ನಟ್ಟಿನಲ್ಲಿ ಸುಮಾರು ರೂ 8.50ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 1.1 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯವುಳ್ಳ ಸೋಲಾರ್ ಪ್ಲಾಂಟ್ ಗೆ ಇಂದು ಚಾಲನೆಯನ್ನು ನೀಡಿದ್ದು ಇದರಿಂದ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ವ್ಯಾಪ್ತಿಗೆ ದಿನದ 24 ಗಂಟೆಯೂ ಸಹ ವಿದ್ಯುತ್ ಸಂಪರ್ಕ ಸಿಗಲಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಎಂಆರ್ ಮಂಜುನಾಥ್ ರವರು ತಿಳಿಸಿದರು. 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಇದೇ ತಿಂಗಳ ಅಂತ್ಯದೊಳಗೆ ಈ ಕಾಮಗಾರಿಯನ್ನು ಸಂಪೂರ್ಣ ಮುಗಿಸಿ ಸಾರ್ವಜನಿಕರ ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದರು. ವಜ್ರ ಮಲೆ ಭವನಕ್ಕೆ ಪೀಠೋಪಕರಣಗಳ ಸಾಮಗ್ರಿಗಳನ್ನು ಶಾಸಕ ಎಂಆರ್ ಮಂಜುನಾಥ್ ಪರಿಸರ ನಡೆಸಿ ಗುಣಮಟ್ಟ ಉಳ್ಳಂತಹ ಸಾಮಗ್ರಿಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು ... ಮಲೆ ಮಹದೆಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಮಾಸ್ಟರ್ ಪ್ಲಾನ್ ಆವರಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿದರು. ಇತ್ತೀಚಿನ ದಿನಗಳಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತಿದ್ದು, ಭಕ್ತರಿಗೆ ಮೂಲಬುತ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಮಾಸ್ಟರ್ ಪ್ಲಾನ್ ಆವರಣವನ್ನು ಅಭಿವೃದ್ದಿ ಪಡಿಸಬೇಕು. ಇದಲ್ಲದೆ ಬೆಟ್ಟದ ಸುತ್ತಮುತ್ತಲಿನ ವರವಲಯದ ಭಾಗಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ತಾಕಿತು ಮಾಡಿದರು. ಈಗಾಗಲೆ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೆಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ನಂತರ ದೇವಸ್ಥಾನದ ಒಳ ಪ್ರಾಂಗಣ, ಹೊರ ಪ್ರಾಂಗಣದ ಸುತ್ತಲೂ ಉತ್ಸವ ಕೌಂಟರ್, ರಥಗಳನ್ನು ನಿಲ್ಲಿಸುವ ಸ್ಥಳ, ಆನೆ ಶೆಡ್ಡು, ಲಗ್ಗೇಜ್ ಅಂಡ್ ಸ್ಲಿಪ್ಪರ್ ಕೌಂಟರ್ಗಳ ಸ್ಥಳ ಪರಿಶೀಲನೆ ಮಾಡಿ, ಹಾಗೂ ಭಕ್ತಾದಿಗಳು ಸರಾಗವಾಗಿ ವಾಹನಗಳಲ್ಲಿ ಓಡಾಡಲು ರಸ್ತೆ ಅಗಲೀಕರಣ ರಿಂಗ್ ರೋಡ್ ನಿರ್ಮಾಣ ಹಾಗೂ ಇಂಟರ್ನಲ್ ರೋಡ್ ಗಳ ಸ್ಥಳ ಪರಿಶೀಲನೆ ಹಾಗೂ ನೂತನ ದಾಸೋಹ ಭವನದ ಬಗೆಯೂ ಚರ್ಚಿಸಲಾಯಿತು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಈ ನಿಟ್ಟಿನಲ್ಲಿ ಆಧುನಿಕತೆಯಿಂದ ಕುಡಿದ ಸೊಸಜ್ಜಿತ ದಾಸೋಹ ಭವನವನ್ನು ನಿರ್ಮಿಸಲು ಈಗಾಗಲೇ ಉದ್ದೇಶಸಲಾಗಿದ್ದು ಟೆಂಡರ್ ಅಂತದಲ್ಲಿದೆ ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಿಸಿ ದಾಸೋಹ ಭವನ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೆ ಭಕ್ತರು ಸುಗಮವಾಗಿ ತೆರಳಿ ದೇವರ ದರ್ಶನ ಪಡೆಯಲು ಉದ್ದೇಶಿಸಿರುವ ಸಾರಥಿ ಸಾಲಿನ ಸಂಕೀರ್ಣಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಇದೇ ವೇಳೆ ಶಾಸಕರು ಸೂಚಿಸಿದರು. ಇದೇ ಸಮಯದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ.ಇ ರಘು ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಎಇಇ ಚಿನ್ನಣ್ಣ, ಇಂಜಿನಿಯರ್ ಸಂತೋಷ್ ಇಂಜಿನಿಯರ್ ಸಂತೋಷ್, ಸೇಲ್ವಗಣಪತಿ,ವಿಸ್ತಾರ ಕನ್ಸಲ್ಟೆಂಟ್ಸ್, ಎಲ್ ಎಲ್ ಪಿ ಗಳಾದ ಶ್ರೀಧರ್,ಮನೋಜ್, ಕೃಷ್ಣನ್,ಮುಖಂಡರುಗಳಾದ ಚಿನ್ನವೆಂಕಟ, ಡಿಕೆ ರಾಜು, ಗೋವಿಂದ ವಿಜಯ್ ಕುಮಾರ್, ಎಸ್.ಆರ್ ಮಹದೇವ್ ಸುರೇಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.3
- ಶಿಡ್ಲಘಟ್ಟ ತಾಲೂಕಿನ ಕಾಚಹಳ್ಳಿ ಅಂಕತಟ್ಟಿ ಗ್ರಾಮಗಳಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ಬೂದು ನೀರು ನಿರ್ವಹಣಾ ಘಟಕಕ್ಕೆ ಲೋಕಾರ್ಪಣೆ2
- ಜನವರಿ 13 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ ಇಲಾಖೆಯ ಪ್ರಕಟಣೆ ದಿನಾಂಕ 13.01.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರಿಯಲ್ ಮತ್ತು 11ಕೆವಿ ದತ್ತನಗರ ಫೀಡರ್‌ಗಳಲ್ಲಿ ವ್ಯವಸ್ಥೆ ಸುದಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬಿಕರ್ನಕಟ್ಟೆ, ಕಲಾಯಿ, ಕಂಡೆಟ್ಟು, ಜಯಶ್ರೀಗೇಟ್, ನಾಯ್ಗರಲೇನ್, ದತ್ತನಗರ, ಮಲ್ಲಕುಮೇರ್, ಪದವು, ಶರ್ಬತ್ ಕಟ್ಟೆ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ವರದಿ: ಶಂಶೀರ್ ಬುಡೋಳಿ1
- *ಭಾರತ ನಲ್ಲಿ ವೈರಲ್*1