logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ:ಜಿಲ್ಲೆಯಲ್ಲಿ 18.49 ಲಕ್ಷ ಮತದಾರರು. -ಇಕ್ರಂ ಶರೀಫ್ ಜಿಲ್ಲಾಧಿಕಾರಿ ಕಲಬುರಗಿ,ಅ.24(ಕ.ವಾ.) ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿ ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯಾದ್ಯಂತ 9,40,251 ಪುರುಷ, 9,09,121 ಮಹಿಳೆ ಹಾಗೂ 213 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 18,49,585 ಜನ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ. ಇದರಲ್ಲಿ 18-19 ವರ್ಷ ವಯಸ್ಸಿನ 14,125 ಮತ್ತು 24,817 ವಿಶೇಷಚೇತನರು ಮತದಾರರಿದ್ದಾರೆ. ಜನಸಂಖ್ಯೆವಾರು ನೋಡಿದಾಗ ಶೇ.56.14 ಮಯದಾರರ ಪ್ರಮಾಣವಿದ್ದು, ಪ್ರತಿ 1,000 ಪುರುಷರಿಗೆ 967 ಮಹಿಳಾ ಮತದಾರರು ಪಟ್ಟಿಯಲ್ಲಿದ್ದಾರೆ. ಎಸ್.ಐ.ಆರ್. ಪಕ್ರಿಯೆ ಆರಂಭಕ್ಕು ಮುನ್ನ ಜಿಲ್ಲೆಯಲ್ಲಿ ಒಟ್ಟು 23,71,542 ಮತದಾರರಿದ್ದು, ಇದೀಗ ಎಸ್.ಐ.ಆರ್. ಪ್ರಕ್ರಿಯೆ ನಂತರದ ಕರಡು ಪಟ್ಟಿಯಲ್ಲಿ 18,49,585 (ಶೇ.77.99) ಜನ ಮತದಾರರು ಮಾತ್ರ ನೊಂದಾಯಿತರಾಗಿದ್ದಾರೆ. ಪರಿಷ್ಕರಣೆಯಲ್ಲಿ 71,691 ಜನ ಮತದಾರರು ನಿಧನ, 47,445 ಮತದಾರರು ಮನೆಯಲ್ಲಿ ಇಲ್ಲದಿರುವ (ಗೈರು), 3,47,606 ಮತದಾರರು ಶಾಶ್ವತವಾಗಿ ಸ್ಥಳಾಂತರ, ಇತರೆ 21,816 ಹಾಗೂ 33,399 ಮತದಾರರು ಈಗಾಗಲೆ ನೋಂದಣಿಯಾಗಿದ್ದರಿಂದ ಹೀಗೆ ಒಟ್ಟು 5,21,957 (ಶೇ.22) ಮತದಾರರನ್ನು ಎ.ಎಸ್.ಡಿ.ಡಿ.ಓ ಎಂದು ಗುರುತಿಸಿದ್ದು, ಮತಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಎಸ್.ಐ.ಆರ್ ಪ್ರಕಿಯೆ ಕಳೆದ ಜೂನ್ 30 ರಿಂದ ಆಗಸ್ಟ್ 17ರ ವರೆಗೆ ಬಿ.ಎಲ್.ಓ. ಗಳು ಮನೆ ಮನೆಗೆ ಹೋಗಿ ಗಣತಿ ನಮೂನೆ ನೀಡಿ ಮತದಾರರಿಂದ ಮರಳಿ ಪಡೆದು ಗಣಕೀಕರಣ ಮಾಡಿದ ನಂತರ ಈ ಅಂಕಿ-ಸಂಖ್ಯೆಗಳು ಹೊರಬಿದ್ದಿವೆ. ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ ಕಚೇರಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಪ್ರಕಟಿತ ಕರಡು ಪಟ್ಟಿ ಸಾರ್ವಜನಿಕರು ವೀಕ್ಷಿಸಿ ಅಕ್ಷೇಪಣೆಗಳಿದಲ್ಲಿ ಸೆಪ್ಟೆಂಬರ್ 23 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಅಕ್ಟೋಬರ್ 22 ರೊಳಗೆ ವಿಲೇವಾರಿ ಮಾಡಿ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಡಿ.ಸಿ. ಇಕ್ರಮ ಶರೀಫ್ ಸ್ಪಷ್ಟಪಡಿಸಿದರು. *1,05 ಲಕ್ಷ ಮತದಾರರಿಗೆ ನೋಟಿಸ್,ಮತಗಟ್ಟೆ ಹಂತದಲ್ಲಿಯೇ ವಿಚಾರಣೆ:* ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಹೆಸರಿದ್ದು 2002ರ ಎಸ್.ಐ.ಆರ್. ಪಟ್ಟಿಯ ಮಾಹಿತಿ ನೀಡದ 53,788 ಜನ ಮತದಾರರನ್ನು ನೋ ಮ್ಯಾಪಿಂಗ್ ಮತ್ತು 2002ರ ಎಸ್.ಐ.ಆರ್. ಪಟ್ಟಿಯ ದಾಖಲೆಗೆ ತಾಳೆಯಾಗದ 51,705 ಜನ ಮತದಾರರನ್ನು ಅನೋಮಲೀಸ್ ಎಂದು ಪರಿಗಣಿಸಿದ್ದು, ಇಂತಹ ಒಟ್ಟು 1,05,493 ಮತದಾರರನ್ನು ಇಂದಿನಿಂದ ಅಕ್ಟೋಬರ್ 22ರ ವರೆಗೆ ನೋಟಿಸ್ ನೀಡಿ ಮತಗಟ್ಟೆ ಹಂತದಲ್ಲಿಯೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತದೆ. ತ್ವರಿತ ವಿಚಾರಣೆ ನಡೆಸಿ ವಿಲೇವಾರಿಗೆ ಈಗಿರುವ 9 ಜನ ಎ.ಇ.ಆರ್.ಓ.ಗಳ ಜೊತೆಗೆ ಹೆಚ್ಚುವರಿಯಾಗಿ 77 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಮತದಾರರು ನಿಗದಿತ ದಿನದಂದು ನಡೆಯುವ ವಿಚಾರಣೆಗೆ ಅಗತ್ಯ ದಾಖಲಾತಿಯೊಂದಿಗೆ ಹಾಜರಾಗುವ ಮೂಲಕ ಸಹಕಾರ ನೀಡಬೇಕೆಂದರು. ನೋಟಿಸ್ ಪಡೆದ ಮತದಾರರು 01-07-1987ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಚುನಾವಣಾ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸಬೇಕು. 01-.07-1987 ರಿಂದ 02-12-2004ರ ವರೆಗೆ ಭಾರತದಲ್ಲಿ ಜನಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಮತ್ತು ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸಬೇಕು. ಅದೇ ರೀತಿ 02-12-2004ರ ನಂತರದಲ್ಲಿ ಭಾರತದಲ್ಲಿ ಜನಿಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಜೊತೆಗೆ ತಂದೆ ಮತ್ತು ತಾಯಿಗೆ ಸಂಬಂಧಿಸಿದಂತೆ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ. *ಕ್ಷೇತ್ರವಾರು ಮತದಾರರ ವಿವರ:* ಕರಡು ಮತದಾರರ ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,05,645 ಪುರುಷ, 98,738 ಮಹಿಳೆ, ಇತರೆ 18 ಸೇರಿ 2,04,401, ಜೇವರ್ಗಿಯಲ್ಲಿ 1,10,580 ಪುರುಷ, 1,05,253 ಮಹಿಳೆ, ಇತರೆ 13 ಸೇರಿ 2,15,846, ಚಿತ್ತಾಪೂರದಲ್ಲಿ 98,756 ಪುರುಷ, 96,956 ಮಹಿಳೆ, ಇತರೆ 14 ಸೇರಿ 1,95,726, ಸೇಡಂನಲ್ಲಿ 96,875 ಪುರುಷ, 98,391 ಮಹಿಳೆ, ಇತರೆ 29 ಸೇರಿ 1,95,295, ಚಿಂಚೋಳಿಯಲ್ಲಿ 94,574 ಪುರುಷ, 89,849 ಮಹಿಳೆ, ಇತರೆ 10 ಸೇರಿ 1,84,433, ಗುಲಬರ್ಗಾ ಗ್ರಾಮೀಣದಲ್ಲಿ 1,14,753 ಪುರುಷ, 1,06,739 ಮಹಿಳೆ, ಇತರೆ 21 ಸೇರಿ 2,21,513, ಗುಲಬರ್ಗಾ ದಕ್ಷಿಣದಲ್ಲಿ 96,481 ಪುರುಷ, 1,00,008 ಮಹಿಳೆ, ಇತರೆ 33 ಸೇರಿ 1,96,522, ಗುಲಬರ್ಗಾ ಉತ್ತರದಲ್ಲಿ 1,14,271 ಪುರುಷ, 1,15,685 ಮಹಿಳೆ, ಇತರೆ 41 ಸೇರಿ 2,29,997 ಹಾಗೂ ಆಳಂದನಲ್ಲಿ 1,08,316 ಪುರುಷ, 97,502 ಮಹಿಳೆ, ಇತರೆ 34 ಸೇರಿ 2,05,852 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಇಕ್ರಮ್ ಶರೀಫ್ ಮಾಹಿತಿ ನೀಡಿದರು. *ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮುಕ್ತ ಅವಕಾಶ:* ಕರಡು ಮತದಾರರ ಪಟ್ಟಿಯಿಂದ ಯಾರೇ ಅರ್ಹ ಮತದಾರರು ಹೊರಗುಳಿದಲ್ಲಿ ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲಾತಿಯೊಂದಿಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಈಗಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿರಲಿದೆ. ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದು ಎಂದಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಇಂತಹವರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಪಟ್ಟಿಯಲ್ಲಿ ಸೇರಿಸಲು ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ ಇದ್ದರು.

11 hrs ago
user_R. Koasti
R. Koasti
Kalaburagi, Karnataka•
11 hrs ago
9f8bb4ae-5508-43db-9cf5-f46021560243

ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ:ಜಿಲ್ಲೆಯಲ್ಲಿ 18.49 ಲಕ್ಷ ಮತದಾರರು. -ಇಕ್ರಂ ಶರೀಫ್ ಜಿಲ್ಲಾಧಿಕಾರಿ ಕಲಬುರಗಿ,ಅ.24(ಕ.ವಾ.) ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿ ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯಾದ್ಯಂತ 9,40,251 ಪುರುಷ, 9,09,121 ಮಹಿಳೆ ಹಾಗೂ 213 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 18,49,585 ಜನ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ. ಇದರಲ್ಲಿ 18-19 ವರ್ಷ ವಯಸ್ಸಿನ 14,125 ಮತ್ತು 24,817 ವಿಶೇಷಚೇತನರು ಮತದಾರರಿದ್ದಾರೆ. ಜನಸಂಖ್ಯೆವಾರು ನೋಡಿದಾಗ ಶೇ.56.14 ಮಯದಾರರ ಪ್ರಮಾಣವಿದ್ದು, ಪ್ರತಿ 1,000 ಪುರುಷರಿಗೆ 967 ಮಹಿಳಾ ಮತದಾರರು ಪಟ್ಟಿಯಲ್ಲಿದ್ದಾರೆ. ಎಸ್.ಐ.ಆರ್. ಪಕ್ರಿಯೆ ಆರಂಭಕ್ಕು ಮುನ್ನ ಜಿಲ್ಲೆಯಲ್ಲಿ ಒಟ್ಟು 23,71,542 ಮತದಾರರಿದ್ದು, ಇದೀಗ ಎಸ್.ಐ.ಆರ್. ಪ್ರಕ್ರಿಯೆ ನಂತರದ ಕರಡು ಪಟ್ಟಿಯಲ್ಲಿ 18,49,585 (ಶೇ.77.99) ಜನ ಮತದಾರರು ಮಾತ್ರ ನೊಂದಾಯಿತರಾಗಿದ್ದಾರೆ. ಪರಿಷ್ಕರಣೆಯಲ್ಲಿ 71,691 ಜನ ಮತದಾರರು ನಿಧನ, 47,445 ಮತದಾರರು ಮನೆಯಲ್ಲಿ ಇಲ್ಲದಿರುವ (ಗೈರು), 3,47,606 ಮತದಾರರು ಶಾಶ್ವತವಾಗಿ ಸ್ಥಳಾಂತರ, ಇತರೆ 21,816 ಹಾಗೂ 33,399 ಮತದಾರರು ಈಗಾಗಲೆ ನೋಂದಣಿಯಾಗಿದ್ದರಿಂದ ಹೀಗೆ ಒಟ್ಟು 5,21,957 (ಶೇ.22) ಮತದಾರರನ್ನು ಎ.ಎಸ್.ಡಿ.ಡಿ.ಓ ಎಂದು ಗುರುತಿಸಿದ್ದು, ಮತಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಎಸ್.ಐ.ಆರ್ ಪ್ರಕಿಯೆ ಕಳೆದ ಜೂನ್ 30 ರಿಂದ ಆಗಸ್ಟ್ 17ರ ವರೆಗೆ ಬಿ.ಎಲ್.ಓ. ಗಳು ಮನೆ ಮನೆಗೆ ಹೋಗಿ ಗಣತಿ ನಮೂನೆ ನೀಡಿ ಮತದಾರರಿಂದ ಮರಳಿ ಪಡೆದು ಗಣಕೀಕರಣ ಮಾಡಿದ ನಂತರ ಈ ಅಂಕಿ-ಸಂಖ್ಯೆಗಳು ಹೊರಬಿದ್ದಿವೆ. ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ ಕಚೇರಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಪ್ರಕಟಿತ ಕರಡು ಪಟ್ಟಿ ಸಾರ್ವಜನಿಕರು ವೀಕ್ಷಿಸಿ ಅಕ್ಷೇಪಣೆಗಳಿದಲ್ಲಿ ಸೆಪ್ಟೆಂಬರ್ 23 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಅಕ್ಟೋಬರ್ 22 ರೊಳಗೆ ವಿಲೇವಾರಿ ಮಾಡಿ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಡಿ.ಸಿ. ಇಕ್ರಮ ಶರೀಫ್ ಸ್ಪಷ್ಟಪಡಿಸಿದರು. *1,05 ಲಕ್ಷ ಮತದಾರರಿಗೆ ನೋಟಿಸ್,ಮತಗಟ್ಟೆ ಹಂತದಲ್ಲಿಯೇ ವಿಚಾರಣೆ:* ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಹೆಸರಿದ್ದು 2002ರ ಎಸ್.ಐ.ಆರ್. ಪಟ್ಟಿಯ ಮಾಹಿತಿ ನೀಡದ 53,788 ಜನ ಮತದಾರರನ್ನು ನೋ ಮ್ಯಾಪಿಂಗ್ ಮತ್ತು 2002ರ ಎಸ್.ಐ.ಆರ್. ಪಟ್ಟಿಯ ದಾಖಲೆಗೆ ತಾಳೆಯಾಗದ 51,705 ಜನ ಮತದಾರರನ್ನು ಅನೋಮಲೀಸ್ ಎಂದು ಪರಿಗಣಿಸಿದ್ದು, ಇಂತಹ ಒಟ್ಟು 1,05,493 ಮತದಾರರನ್ನು ಇಂದಿನಿಂದ ಅಕ್ಟೋಬರ್ 22ರ ವರೆಗೆ ನೋಟಿಸ್ ನೀಡಿ ಮತಗಟ್ಟೆ ಹಂತದಲ್ಲಿಯೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತದೆ. ತ್ವರಿತ ವಿಚಾರಣೆ ನಡೆಸಿ ವಿಲೇವಾರಿಗೆ ಈಗಿರುವ 9

69642c66-66dc-42ac-928b-6d0b1ccfd369

ಜನ ಎ.ಇ.ಆರ್.ಓ.ಗಳ ಜೊತೆಗೆ ಹೆಚ್ಚುವರಿಯಾಗಿ 77 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಮತದಾರರು ನಿಗದಿತ ದಿನದಂದು ನಡೆಯುವ ವಿಚಾರಣೆಗೆ ಅಗತ್ಯ ದಾಖಲಾತಿಯೊಂದಿಗೆ ಹಾಜರಾಗುವ ಮೂಲಕ ಸಹಕಾರ ನೀಡಬೇಕೆಂದರು. ನೋಟಿಸ್ ಪಡೆದ ಮತದಾರರು 01-07-1987ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಚುನಾವಣಾ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸಬೇಕು. 01-.07-1987 ರಿಂದ 02-12-2004ರ ವರೆಗೆ ಭಾರತದಲ್ಲಿ ಜನಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಮತ್ತು ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸಬೇಕು. ಅದೇ ರೀತಿ 02-12-2004ರ ನಂತರದಲ್ಲಿ ಭಾರತದಲ್ಲಿ ಜನಿಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಜೊತೆಗೆ ತಂದೆ ಮತ್ತು ತಾಯಿಗೆ ಸಂಬಂಧಿಸಿದಂತೆ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ. *ಕ್ಷೇತ್ರವಾರು ಮತದಾರರ ವಿವರ:* ಕರಡು ಮತದಾರರ ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,05,645 ಪುರುಷ, 98,738 ಮಹಿಳೆ, ಇತರೆ 18 ಸೇರಿ 2,04,401, ಜೇವರ್ಗಿಯಲ್ಲಿ 1,10,580 ಪುರುಷ, 1,05,253 ಮಹಿಳೆ, ಇತರೆ 13 ಸೇರಿ 2,15,846, ಚಿತ್ತಾಪೂರದಲ್ಲಿ 98,756 ಪುರುಷ, 96,956 ಮಹಿಳೆ, ಇತರೆ 14 ಸೇರಿ 1,95,726, ಸೇಡಂನಲ್ಲಿ 96,875 ಪುರುಷ, 98,391 ಮಹಿಳೆ, ಇತರೆ 29 ಸೇರಿ 1,95,295, ಚಿಂಚೋಳಿಯಲ್ಲಿ 94,574 ಪುರುಷ, 89,849 ಮಹಿಳೆ, ಇತರೆ 10 ಸೇರಿ 1,84,433, ಗುಲಬರ್ಗಾ ಗ್ರಾಮೀಣದಲ್ಲಿ 1,14,753 ಪುರುಷ, 1,06,739 ಮಹಿಳೆ, ಇತರೆ 21 ಸೇರಿ 2,21,513, ಗುಲಬರ್ಗಾ ದಕ್ಷಿಣದಲ್ಲಿ 96,481 ಪುರುಷ, 1,00,008 ಮಹಿಳೆ, ಇತರೆ 33 ಸೇರಿ 1,96,522, ಗುಲಬರ್ಗಾ ಉತ್ತರದಲ್ಲಿ 1,14,271 ಪುರುಷ, 1,15,685 ಮಹಿಳೆ, ಇತರೆ 41 ಸೇರಿ 2,29,997 ಹಾಗೂ ಆಳಂದನಲ್ಲಿ 1,08,316 ಪುರುಷ, 97,502 ಮಹಿಳೆ, ಇತರೆ 34 ಸೇರಿ 2,05,852 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಇಕ್ರಮ್ ಶರೀಫ್ ಮಾಹಿತಿ ನೀಡಿದರು. *ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮುಕ್ತ ಅವಕಾಶ:* ಕರಡು ಮತದಾರರ ಪಟ್ಟಿಯಿಂದ ಯಾರೇ ಅರ್ಹ ಮತದಾರರು ಹೊರಗುಳಿದಲ್ಲಿ ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲಾತಿಯೊಂದಿಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಈಗಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿರಲಿದೆ. ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದು ಎಂದಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಇಂತಹವರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಪಟ್ಟಿಯಲ್ಲಿ ಸೇರಿಸಲು ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ ಇದ್ದರು.

More news from ಕರ್ನಾಟಕ and nearby areas
  • ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿ ಸಂಭ್ರಮದ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಕಾಳಗಿ: ತಾಲೂಕಿನ ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿರುವ ಸುಕ್ಷೇತ್ರ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಅಪಾರ ಭಕ್ತ ಸಮೂಹವು‌ ಭಕ್ತಿಯಿಂದ ಕನ್ನಡಗಿ ಮಲ್ಲಿಕಾರ್ಜುನ ಮಾಹರಾಜ ಕೀ ಜೈ ಎಂಬ ಜಯಘೋಷಗಳನ್ನು ಕೂಗುತ್ತಾ ಮಲ್ಲಿಕಾರ್ಜುನ ಮೂರ್ತಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರಾವಣ ಮಾಸದ ಎರಡನೇ ಸೋಮವಾರ ನಸುಕಿನ‌ ಜಾವ ಕನ್ನಡಗಿ ಮಲ್ಲಿಕಾರ್ಜುನ ಮೂಲ ಕರ್ತೃ ಗದ್ದುಗೆಗೆ ಹಾಗೂ ದೇವಸ್ಥಾನವನ್ನು ವಿವಿಧ ಪುಷ್ಪಾಲಾಂಕರಗಳಿಂದ ಅಲಂಕಾರ ಮಾಡಲಾಗಿತ್ತು. ಮೂಲ ಕತೃ ಗದ್ದುಗೆಗೆ ಅರ್ಚಕರ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ, ಮಹಾ ಮಂಗಳಾರತಿ ಜರುಗಿತು. ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಮುಖಂಡ ಬಸವರಾಜ ಪಾಟೀಲ ಹೇರೂರ ನೇತೃತ್ವದಲ್ಲಿ ಭಜನಾ ಮಂಡಳಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಅಲಂಕೃತ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳ, ಭಜನೆ, ನಂದಿಕೋಲು, ಪುರವಂತರ ಕುಣಿತದೊಂದಿಗೆ ದೇವಸ್ಥಾನ ಸುತ್ತಲು ಐದು ಸುತ್ತು ಭವ್ಯ ಮೆರವಣಿಗೆ ಜರುಗಿತು. ಭಕ್ತರು 'ಕನ್ನಡಗಿ ಮಲ್ಲಿಕಾರ್ಜುನ ಮಹಾರಾಜ ಕೀ ಜೈ' ಎಂದು ಜಯಘೋಷ ಕೂಗುತ್ತಾ ಪಲ್ಲಕ್ಕಿ ಉತ್ಸವಕ್ಕೆ ಉತ್ತುತ್ತಿ, ಬಾಳೆ ಹಣ್ಣು, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಗ್ರಾಮಗಳಿಂದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ,‌ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಕಾಯಿಕರ್ಪೂರ ಮಾಡಿ, ನೈವೇದ್ಯ ಅರ್ಪಿಸಿದರು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಭಕ್ತ ಜಗಧೀಶ್ ಜವಳಿ ರಾಜನಾಳ ಅವರು ದೇವಸ್ಥಾನವನ್ನು ಸಂಪೂರ್ಣವಾಗಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿರುವುದು ನೇರೆದಿದ್ದ ಭಕ್ತರಿಗೆ ಆಕರ್ಷಿಣಿಯವಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಮಾಲಿಪಾಟೀಲ ಕನ್ನಡಗಿ, ಮುಖಂಡರಾದ ಬಸವರಾಜ ಪಾಟೀಲ ಹೇರೂರ, ಸಿದ್ದಣ್ಣ ತಳವಾರ, ಶಿವಕುಮಾರ್ ಪಾಟೀಲ ಹೇರೂರ, ವಿಜಯಕುಮಾರ್ ಪಾಟೀಲ, ಚನ್ನವೀರಪ್ಪ ಮಾಲಿಪಾಟೀಲ, ವಿಜಯಕುಮಾರ ಪೂಜಾರಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ, ಮಲ್ಲಣ್ಣ ನಾಯಕೋಡಿ, ಶಾಂತಕುಮಾರ ತಳವಾರ, ಎಚ್.ಬಿ. ಪಾಟೀಲ, ಮಲ್ಲಿಕಾರ್ಜುನ ವಕೀಲರು ಹಾಗೂ ಕಲಬುರಗಿ, ಹೆರೂರ (ಕೆ), ನಾಗೂರ, ಶೆಳ್ಳಗಿ, ಸಾವತಖೇಡ, ಜೀವನ ಮಾರಡಗಿ, ಹೆಬ್ಬಾಳ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾಳಗಿ ಪೊಲೀಸ್ ಠಾಣೆ ಪಿಎಸ್‌ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.
    1
    ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿ ಸಂಭ್ರಮದ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ
ಕಾಳಗಿ: ತಾಲೂಕಿನ ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿರುವ ಸುಕ್ಷೇತ್ರ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಅಪಾರ ಭಕ್ತ ಸಮೂಹವು‌ ಭಕ್ತಿಯಿಂದ ಕನ್ನಡಗಿ ಮಲ್ಲಿಕಾರ್ಜುನ ಮಾಹರಾಜ ಕೀ ಜೈ ಎಂಬ ಜಯಘೋಷಗಳನ್ನು ಕೂಗುತ್ತಾ ಮಲ್ಲಿಕಾರ್ಜುನ ಮೂರ್ತಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರಾವಣ ಮಾಸದ ಎರಡನೇ ಸೋಮವಾರ ನಸುಕಿನ‌ ಜಾವ ಕನ್ನಡಗಿ ಮಲ್ಲಿಕಾರ್ಜುನ ಮೂಲ ಕರ್ತೃ ಗದ್ದುಗೆಗೆ ಹಾಗೂ ದೇವಸ್ಥಾನವನ್ನು ವಿವಿಧ ಪುಷ್ಪಾಲಾಂಕರಗಳಿಂದ ಅಲಂಕಾರ ಮಾಡಲಾಗಿತ್ತು. ಮೂಲ ಕತೃ ಗದ್ದುಗೆಗೆ ಅರ್ಚಕರ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ, ಮಹಾ ಮಂಗಳಾರತಿ ಜರುಗಿತು.
ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಮುಖಂಡ ಬಸವರಾಜ ಪಾಟೀಲ ಹೇರೂರ ನೇತೃತ್ವದಲ್ಲಿ ಭಜನಾ ಮಂಡಳಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಅಲಂಕೃತ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳ, ಭಜನೆ, ನಂದಿಕೋಲು, ಪುರವಂತರ ಕುಣಿತದೊಂದಿಗೆ ದೇವಸ್ಥಾನ ಸುತ್ತಲು ಐದು ಸುತ್ತು ಭವ್ಯ ಮೆರವಣಿಗೆ ಜರುಗಿತು. ಭಕ್ತರು 'ಕನ್ನಡಗಿ ಮಲ್ಲಿಕಾರ್ಜುನ ಮಹಾರಾಜ ಕೀ ಜೈ' ಎಂದು ಜಯಘೋಷ ಕೂಗುತ್ತಾ ಪಲ್ಲಕ್ಕಿ ಉತ್ಸವಕ್ಕೆ ಉತ್ತುತ್ತಿ, ಬಾಳೆ ಹಣ್ಣು, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು.
ವಿವಿಧ ಗ್ರಾಮಗಳಿಂದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ,‌ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಕಾಯಿಕರ್ಪೂರ ಮಾಡಿ, ನೈವೇದ್ಯ ಅರ್ಪಿಸಿದರು. ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಭಕ್ತ ಜಗಧೀಶ್ ಜವಳಿ ರಾಜನಾಳ ಅವರು ದೇವಸ್ಥಾನವನ್ನು ಸಂಪೂರ್ಣವಾಗಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿರುವುದು ನೇರೆದಿದ್ದ ಭಕ್ತರಿಗೆ ಆಕರ್ಷಿಣಿಯವಾಗಿತ್ತು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಮಾಲಿಪಾಟೀಲ ಕನ್ನಡಗಿ, ಮುಖಂಡರಾದ ಬಸವರಾಜ ಪಾಟೀಲ ಹೇರೂರ, ಸಿದ್ದಣ್ಣ ತಳವಾರ, ಶಿವಕುಮಾರ್ ಪಾಟೀಲ ಹೇರೂರ, ವಿಜಯಕುಮಾರ್ ಪಾಟೀಲ,   ಚನ್ನವೀರಪ್ಪ ಮಾಲಿಪಾಟೀಲ, ವಿಜಯಕುಮಾರ ಪೂಜಾರಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ, ಮಲ್ಲಣ್ಣ ನಾಯಕೋಡಿ, ಶಾಂತಕುಮಾರ ತಳವಾರ, ಎಚ್.ಬಿ. ಪಾಟೀಲ, ಮಲ್ಲಿಕಾರ್ಜುನ ವಕೀಲರು ಹಾಗೂ ಕಲಬುರಗಿ, ಹೆರೂರ (ಕೆ), ನಾಗೂರ, ಶೆಳ್ಳಗಿ, ಸಾವತಖೇಡ, ಜೀವನ ಮಾರಡಗಿ, ಹೆಬ್ಬಾಳ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾಳಗಿ ಪೊಲೀಸ್ ಠಾಣೆ ಪಿಎಸ್‌ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.
    user_Bheemaraya kuddalli
    Bheemaraya kuddalli
    ಕಳಗಿ, ಕಲಬುರಗಿ, ಕರ್ನಾಟಕ•
    20 hrs ago
  • ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ. ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
    1
    ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    50 min ago
  • ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಕುಂಬಾರ ರವರ 46ನೇ ಜನ್ಮದಿನ ಅದ್ದೂರಿ ಆಚರಣೆ
    1
    ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಕುಂಬಾರ ರವರ 46ನೇ ಜನ್ಮದಿನ ಅದ್ದೂರಿ ಆಚರಣೆ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    12 hrs ago
  • ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಗುಂಡಣ್ಣ ಡಿಗ್ಗಿ ಮಾತುಗಳಿಗೆ ಸಭಿಕರಿಂದ ಭರ್ಜರಿ ಚಪ್ಪಾಳೆ, ನಗೆ
    1
    ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಗುಂಡಣ್ಣ ಡಿಗ್ಗಿ ಮಾತುಗಳಿಗೆ ಸಭಿಕರಿಂದ ಭರ್ಜರಿ ಚಪ್ಪಾಳೆ, ನಗೆ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    19 hrs ago
  • ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ ಬೀದರ್: ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ
    1
    ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ
ಬೀದರ್: ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    10 hrs ago
  • "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    1
    "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ 

ಕಲ್ಯಾಣ ವಾರ್ತೆ -ಯಾದಗಿರಿ 
ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. 
೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು.
*ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ 
೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು  ಕೋಲಿ ಸಮಾಜದ ಆಶಯವಾಗಿದೆ*-"
*ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    12 hrs ago
  • ಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿ ಸಿಂದಗಿ : ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಹೋರಾಟಗಾರ ಪೀರು ಕೇರೂರ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ರೈತರ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಕೇಂದ್ರ ಸರ್ಕಾರವೂ ರೈತರ ನೆರವಿಗೆ ಬಂದು ಅಗತ್ಯ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ರೈತರ ಸಮಸ್ಯೆಗಳನ್ನು ಮರೆತು ಕುಳಿತಿವೆ ಎಂದು ಪೀರು ಕೇರೂರ ಆರೋಪಿಸಿದರು. ರೈತರ ಸಂಕಷ್ಟಕ್ಕೆ ಸರ್ಕಾರಗಳು ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೀರು ಕೇರೂರ ಎಚ್ಚರಿಕೆ ನೀಡಿದರು.
    1
    ಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿ
ಸಿಂದಗಿ : ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಹೋರಾಟಗಾರ ಪೀರು ಕೇರೂರ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ರೈತರ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಕೇಂದ್ರ ಸರ್ಕಾರವೂ ರೈತರ ನೆರವಿಗೆ ಬಂದು ಅಗತ್ಯ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ರೈತರ ಸಮಸ್ಯೆಗಳನ್ನು ಮರೆತು ಕುಳಿತಿವೆ ಎಂದು ಪೀರು ಕೇರೂರ ಆರೋಪಿಸಿದರು.
ರೈತರ ಸಂಕಷ್ಟಕ್ಕೆ ಸರ್ಕಾರಗಳು ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೀರು ಕೇರೂರ ಎಚ್ಚರಿಕೆ ನೀಡಿದರು.
    user_NERA NUDI NEWS
    NERA NUDI NEWS
    ಸಿಂದಗಿ, ವಿಜಯಪುರ, ಕರ್ನಾಟಕ•
    23 hrs ago
  • ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು. ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು.
    1
    ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು.
ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    58 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.