ರೇಣುಕಾಸ್ವಾಮಿ ಕೊಲೆ ಆರೋಪಿ ವಿನಯ್ ಹಾಗೂ ವಕೀಲರ ನಡುವೆ ಕೋರ್ಟ್ ಆವರಣದಲ್ಲಿಯೇ ದೊಡ್ಡ ಗಲಾಟೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ವಿನಯ್ ಹಾಗೂ ವಕೀಲರ ನಡುವೆ ಕೋರ್ಟ್ ಆವರಣದಲ್ಲಿಯೇ ದೊಡ್ಡ ಗಲಾಟೆಯಾಗಿದೆ. ಈ ಗಲಾಟೆಯ ಬಳಿಕ ವಿನಯ್ ಗೆ ವಕೀಲರಿಂದಾನೇ ಕಪಾಳ ಮೋಕ್ಷವಾಗಿದೆ. ವಿನಯ್ ಸೇರಿದಂತೆ ಕೆಲವರು ಸದ್ಯ ಜೈಲಿನಿಂದ ಹೊರಗಿದ್ದಾರೆ. ವಕೀಲರ ಬದಲಾವಣೆ ವಿಚಾರದಲ್ಲಿ ಇಬ್ಬರಿಗೂ ಜಗಳ ನಡೆದಿದ್ದು, ವಕೀಲರು ಕೋಪಕ್ಕೆ ಕಪಾಳಕ್ಕೆ ಹೊಡೆದಿದ್ದಾರೆ ಘಟನೆ ನಡೆದಿರೋದು ಕೋರ್ಟ್ ಕಾರಿಡಾರ್ ನಲ್ಲಿಯೇ. ಒಂದೆರಡು ಬಾರಿ ಅಲ್ಲ ಐದಾರು ಭಾರೀ ಕಪಾಳ ಮೋಕ್ಷ ಮಾಡಿದ್ದಾರೆ. ವಕೀಲರ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇ ಕಪಾಳ ಮೋಕ್ಷಕ್ಕೆ ಕಾರಣವಾಗಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಟ್ರಯಲ್ ನಡೀತಾ ಇದೆ. ಈ ಕೇಸ್ ಗೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ನಡೀತಾ ಇದೆ. ಟ್ರಯಲ್ ಎಲ್ಲಾ ಮುಗಿದ ಮೇಲೆ ಆರೋಪಿಗಳ ಆರೋಪ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತಿಳಿದು, ಬಳಿಕ ಶಿಕ್ಷೆಯ ಪ್ರಮಾಣವನ್ನ ಘೋಷಣೆ ಮಾಡಲಿದ್ದಾರೆ. ಆದರೆ ಸದ್ಯಕ್ಕೆ ಕೆಲವೊಂದು ಟ್ರಯಲ್ ನಲ್ಲಿ ತನಿಖಾಧಿಕಾರಿಗಳಿಂದಾನೇ ಯಡವಟ್ಟಾಗಿರೋದು ಬೆಳಕಿಗೆ ಬಂದಿದೆ..
ರೇಣುಕಾಸ್ವಾಮಿ ಕೊಲೆ ಆರೋಪಿ ವಿನಯ್ ಹಾಗೂ ವಕೀಲರ ನಡುವೆ ಕೋರ್ಟ್ ಆವರಣದಲ್ಲಿಯೇ ದೊಡ್ಡ ಗಲಾಟೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ವಿನಯ್ ಹಾಗೂ ವಕೀಲರ ನಡುವೆ ಕೋರ್ಟ್ ಆವರಣದಲ್ಲಿಯೇ ದೊಡ್ಡ ಗಲಾಟೆಯಾಗಿದೆ. ಈ ಗಲಾಟೆಯ ಬಳಿಕ ವಿನಯ್ ಗೆ ವಕೀಲರಿಂದಾನೇ ಕಪಾಳ ಮೋಕ್ಷವಾಗಿದೆ. ವಿನಯ್ ಸೇರಿದಂತೆ ಕೆಲವರು ಸದ್ಯ ಜೈಲಿನಿಂದ ಹೊರಗಿದ್ದಾರೆ. ವಕೀಲರ ಬದಲಾವಣೆ ವಿಚಾರದಲ್ಲಿ ಇಬ್ಬರಿಗೂ ಜಗಳ ನಡೆದಿದ್ದು, ವಕೀಲರು ಕೋಪಕ್ಕೆ ಕಪಾಳಕ್ಕೆ ಹೊಡೆದಿದ್ದಾರೆ ಘಟನೆ ನಡೆದಿರೋದು ಕೋರ್ಟ್ ಕಾರಿಡಾರ್ ನಲ್ಲಿಯೇ. ಒಂದೆರಡು ಬಾರಿ ಅಲ್ಲ ಐದಾರು ಭಾರೀ ಕಪಾಳ ಮೋಕ್ಷ ಮಾಡಿದ್ದಾರೆ. ವಕೀಲರ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇ ಕಪಾಳ ಮೋಕ್ಷಕ್ಕೆ ಕಾರಣವಾಗಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಟ್ರಯಲ್ ನಡೀತಾ ಇದೆ. ಈ ಕೇಸ್ ಗೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ನಡೀತಾ ಇದೆ. ಟ್ರಯಲ್ ಎಲ್ಲಾ ಮುಗಿದ ಮೇಲೆ ಆರೋಪಿಗಳ ಆರೋಪ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತಿಳಿದು, ಬಳಿಕ ಶಿಕ್ಷೆಯ ಪ್ರಮಾಣವನ್ನ ಘೋಷಣೆ ಮಾಡಲಿದ್ದಾರೆ. ಆದರೆ ಸದ್ಯಕ್ಕೆ ಕೆಲವೊಂದು ಟ್ರಯಲ್ ನಲ್ಲಿ ತನಿಖಾಧಿಕಾರಿಗಳಿಂದಾನೇ ಯಡವಟ್ಟಾಗಿರೋದು ಬೆಳಕಿಗೆ ಬಂದಿದೆ..
- ಚಳ್ಳಕೆರೆ, ಮಾ.10 : ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ಕೈಗೊಂಡಿದ್ದ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ತಾಲ್ಲೂಕಿನ ಗರಣಿ ಕ್ರಾಸ್ ಬಳಿ ಮಂಗಳವಾರ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಕೂದಲೆಳೆ ಅಂತರದಲ್ಲಿಯೇ ರೈತಸಂಘದ ಕಾರ್ಯಕರ್ತರು ಮಾ.2ರಂದು ಉಪವಾಸ ಆರಂಭಿಸಿ ಐದು ದಿನಗಳ ಕಾಲ ಮುಂದುವರಿಸಿದ್ದರೂ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಮನವೊಲಿಸುವ ಸಣ್ಣ ಪ್ರಯತ್ನವನ್ನೇ ಮಾಡಲಿಲ್ಲ ಎಂದು ದೂರಿದರು. ಪ್ರತಿದಿನ ವಿವಿಧ ಸಂಘಟನೆಗಳು ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದರು ಸರ್ವಾಧಿಕಾರಿ ರೀತಿ ವರ್ತಿಸಿದ್ದಾರೆ. ಪರಿಣಾಮ ರೈತನಾಯಕ ಉಪವಾಸ ಸತ್ಯಾಗ್ರಹದಿಂದ ಕುಸಿದುಬಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತçಚಿಕಿತ್ಸೆಗೆ 15 ಲಕ್ಷ ರೂ. ವೆಚ್ಚವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ತಿಪ್ಪೇಸ್ವಾಮಿ ಅವರ ಆರೋಗ್ಯ ವಿಚಾರಿಸುವ ಮಾನವೀಯತೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾಡಿಲ್ಲದಿರುವುದು ಹೋರಾಟಗಾರರಿಗೆ ಅಪಮಾನ ಮಾಡುವ ನಡೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಸಾರ್ವಜನಿಕರ ಸಂಕಷ್ಟ, ಹೋರಾಟಗಾರರ ಕೂಗಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಐದು ದಿನಗಳಿಂದ ಉಪವಾಸ ನಿರತರಾಗಿದ್ದ ತಿಪ್ಪೇಸ್ವಾಮಿ ಅವರನ್ನು ಅತ್ಯಂತ ಅಪಮಾನಕರವಾಗಿ ಜಿಲ್ಲಾಧಿಕಾರಿ ನಡೆಸಿಕೊಂಡಿದ್ದಾರೆ. ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸದ ಪರಿಣಾಮ ಉಪವಾಸ ಮುಂದುವರಿಸಿದ್ದೇ ಅನಾರೋಗ್ಯಕ್ಕೆ ಒಳಗಾಗಲು ಮುಖ್ಯ ಕಾರಣ ಎಂದರು. ರೈತನಾಯಕ ಅನಾರೋಗ್ಯಕ್ಕೆ ಒಳಗಾಗಲಿ ಎಂಬ ಉದ್ದೇಶದಿಂದಲೇ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿಲ್ಲವೆಂಬ ಸಂಶಯ ಮೂಡುತ್ತದೆ. ಇದೊಂದು ಸರ್ಕಾರಿ ವ್ಯವಸ್ಥೆ ಪರೋಕ್ಷವಾಗಿ ಕೊಲೆ ಯತ್ನ ನಡೆಸಿದೆ ಎಂದು ದೂರಿದರು. ಆಸ್ಪತ್ರೆಗೆ ಸೇರಿ ಐದು ದಿನಗಳಾಗಿದ್ದರೂ ಇಲ್ಲಿಯವರೆಗೂ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸ ಅಧಿಕಾರಿಗಳು ಮಾಡಿಲ್ಲ. ಅಧಿಕಾರಿಗಳ ನಡೆ ಉದ್ಧಟನದಿಂದ ಕೂಡಿದೆ. ಇಂತಹ ಡಿಸಿಯನ್ನು ಯಾವುದೇ ಕಾರಣಕ್ಕೂ ಚಿತ್ರದುರ್ಗದಲ್ಲಿ ಇರಲು ಬಿಡಬಾರದು ಎಂದರು. ಟಿ.ವೆAಕಟೇಶ್ ಜಿಲ್ಲೆಗೆ ಆಗಮಿಸಿ ಎರಡೂವರೆ ವರ್ಷ ಆಗಿದ್ದರೂ ಇಲ್ಲಿಯವರೆಗೂ ಯಾವ ಕಾರಣಕ್ಕೆ ಅವರನ್ನೇ ಮುಂದುವರಿಸಲಾಗುತ್ತಿದೆ ಎಂದು ಪ್ರಶ್ನೀಸಿದ ಬಸವರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಟಿಎಂ ರೀತಿ ಬೆಂಬಲವಾಗಿ ನಿಂತಿದ್ದಾರೆ. ಈ ಕಾರಣಕ್ಕೆ ವೆಂಕಟೇಶ್ ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಕೊನೇ ಪಕ್ಷ ಹೋರಾಟಗಾರರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಲಿ. ಜಿಲ್ಲೆಯ ಜನರ ಹಿತಕ್ಕಾಗಿ ಯಾವುದೇ ವ್ಯಕ್ತಿ ಚಳವಳಿ ಕೈಗೊಂಡರೇ ಅವರ ಮನವಿ ಆಲಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತ ಉಪವಾಸ ಕುಳಿತ ತಕ್ಷಣವೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕಾಗಿತ್ತು. ಆದರೆ, ಅವರು ನಿರ್ಲಕ್ಷö್ಯ ತೋರಿದ್ದರ ಪರಿಣಾಮ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ಕುಸಿದುಬಿದ್ದು ಆಸ್ಪತ್ರೆ ಸೇರುವಂತಾಗಿದೆ. ಈಗಲಾದರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮಾನವೀಯತೆ ಪ್ರದರ್ಶಿಸಲಿ ಎಂದು ತಿಳಿಸಿದರು. ತಾಲ್ಲೂಕಾಧ್ಯಕ್ಷ ಮಲ್ಲಸಮುದ್ರ ಗಂಗಾಧರ್, ಮುಖಂಡರಾದ ಸೂರಮ್ಮನಹಳ್ಳಿ ರಾಜಣ್ಣ, ಪ್ರಶಾಂತ್‌ರೆಡ್ಡಿ, ಮಿಠ್ಯಾನಾಯ್ಕ, ಓಬನಾಯ್ಕ್, ಚಂದ್ರಶೇಖರ ನಾಯಕ, ಹೀರೇಹಳ್ಳಿ ತಿಪ್ಪೇಸ್ವಾಮಿ, ಎದ್ದಲು ತಿಪ್ಪೇಸ್ವಾಮಿ, ಪಾಪಯ್ಯ, ಬಸವರಾಜ್, ರಾಜಣ್ಣ ಇತರರಿದ್ದರು. .1
- ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಬಳಿ ಮೃತ ಮಹಿಳೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಧಾಖಲಾಗಿದ್ದ ಮಹಿಳೆ ಹೆರಿಗೆ ನಂತರ ಮೃತಪಟ್ಟಿದ್ದು ಮಗು ಚಿಕಿತ್ಸೆ ಪಡೆಯುತ್ತಿದ್ದು ಶಿಲ್ಪ ಎಂಬ ಮಹಿಳೆ ಸಾವನ್ನಪ್ಪಿದ್ದು ಮಹಿಳೆ ಸಾವಿಗೆ ವೈದ್ಯರು ಹಾಗೂ ಜಿಲ್ಲಾ ಸರ್ಜನ್ ಅವರೆ ಕಾರಣ ಎಂದು ಆರೋಪಿಸಿದ್ದಾರೆ1
- ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಭಕ್ತರ ಹರಿವು – ಕಾಯಿನ್ ಅಂಟಿಸಿ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ ಹೌದು ಇದು ಚಳ್ಳಕೆರೆ ತಾಲೂಕಿನ ಮಧ್ಯಾಹ್ನದ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕಾಗಿ ಮಂಗಳವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು. ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಯ ಗರ್ಭಗುಡಿಯ ಹಿಂಭಾಗದಲ್ಲಿ ಕಾಯಿನ್ ಅಂಟಿಸುವ ಮೂಲಕ ಅರಕೆ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ದೇವಿಯ ಕೃಪೆಯಿಂದ ಮನಸಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹಲವರು ಈ ವಿಧಿ ಪಾಲಿಸುತ್ತಿದ್ದಾರೆ. ಇದೇ ವೇಳೆ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಮಕ್ಕಳ ಜವಳ, ನಾಮಕರಣ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಬಾಡೂಟ ಮಾಡಿಸುವ ಸಂಪ್ರದಾಯವೂ ನಡೆಯುತ್ತಿತ್ತು. ಬಂಧು-ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.1
- Post by Harisha Y1
- ಬಳ್ಳಾರಿ ನಗರದ 3ನೇ ವಾರ್ಡ್ ವ್ಯಾಪ್ತಿಯ ಮುಸ್ಲಿಂ ಖಬರಸ್ತಾನದ ಕಂಪೌಂಡ್ ನಿರ್ಮಾಣ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಡ್ಡರಬಂಡೆ ಪ್ರದೇಶದಲ್ಲಿ ಶೀಘ್ರದಲ್ಲೇ ಶಾದಿ ಮಹಲ್ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಸಹಯೋಗದಲ್ಲಿ ನಗರದಲ್ಲಿ ಎರಡು ಶಾದಿ ಮಹಲ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಬಡ ಕುಟುಂಬಗಳ ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಶಾದಿ ಮಹಲ್ ಸಹಾಯಕವಾಗಲಿದೆ ಎಂದರು. ಇದೇ ವೇಳೆ ಈದ್ಗಾ ಮತ್ತು ಖಬರಸ್ತಾನದ ಸ್ವಚ್ಛತೆ ಹಾಗೂ ಹಸೀರಿಕರಣದಲ್ಲಿ ತೊಡಗಿದ್ದ ಯುವಕರ ಕಾರ್ಯವನ್ನು ಮೆಚ್ಚಿ ಯೂತ್ ರೆವಲ್ಯೂಷನ್ ತಂಡದ ಸದಸ್ಯರನ್ನು ಸನ್ಮಾನಿಸಿದರು.1
- ಬಳ್ಳಾರಿ ಕೋಟೆಯ ಪ್ರದೇಶದಲ್ಲಿ ಬೆಂಕಿ ಅವಘಡ.1
- ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲೂಕು ವರದಿಗಾರರು ಬೇಕಾಗಿದ್ದಾರೆ ಆಸಕ್ತಿಯುಳ್ಳ ಅಭ್ಯರ್ಥಿ ಸಂಪರ್ಕಿಸಿ1
- ರೈತ ಮುಖಂಡ ಕೆ ಟಿ ತಿಪ್ಪೇಸ್ವಾಮಿ ಅಸ್ವಸ್ಥರಾಗಲು ಜಿಲ್ಲಾಡಳಿತ ಹೊಣೆ ಎಂದು ಆರೋಪಿಸಿ ಹೆದ್ದರಿ ತಡೆದು ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಭದ್ರೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ನಿರತ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಮುಗಿಸುವಂತೆ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು1