ಸೋಯಾಬಿನ್ ಮಳೆಯಾಶ್ರಿತ ಬೆಳೆಯ ಬೆಳೆ ವಿಮೆಯಲ್ಲಿ ಎಐಸಿ ವಿಮಾ ಕಂಪನಿಯವರು ಮೋಸ : ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ .. ಶಿಗ್ಗಾವಿ : ೨೦೨೫-೨೬ ನೇ ಸಾಲಿನ ಮುಂಗಾರು ಋತುವಿನ ಶಿಗ್ಗಾವಿ ಹೋಬಳಿಯ ಸೋಯಾಬಿನ್ ಮಳೆಯಾಶ್ರಿತ ಬೆಳೆಯ ಬೆಳೆ ವಿಮೆಯಲ್ಲಿ ಎಐಸಿ ವಿಮಾ ಕಂಪನಿಯವರು ಮೋಸ ಮಾಡುವ ಉದ್ದೇಶದಿಂದ ತಪ್ಪು ಲೆಕ್ಕಾಚಾರ ಮಾಡಿ ವಂಚಿಸಿರುವುದು ಕಂಡು ಬಂದಿದ್ದು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ ಎಂದು ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅವರು, ೨೦೨೫-೨೬ನೇ ಸಾಲಿನ ಶಿಗ್ಗಾವಿ ಹೋಬಳಿಯ ಮಳೆಯಾಶ್ರಿತ ಸೋಯಾಬಿನ್ ಬೆಳೆಯು ಅತಿ ಹೆಚ್ಚು ಮಳೆಯಾಗಿ ಸೋಯಾಬಿನ್ ಬೆಳೆಯ ಇಳುವರಿಯಲ್ಲಿ ತುಂಬಾ ಕಡಿಮೆಯಾಗಿದ್ದು ಮತ್ತು ಕೆಲವೊಂದು ಹೊಲಗಳಲ್ಲಿ ನೀರು ನಿಂತು ಸಂಪೂರ್ಣ ಕೆಟ್ಟು ಹೋಗಿದೆ, ಹೀಗಿದ್ದು ಕೂಡಾ ಎಐಸಿ ವಿಮೆ ಅಧಿಕಾರಿಗಳು ಸೋಯಾಬಿನ್ ಬೆಳೆಯನ್ನು -೯ ಎಂದು ಶಾರ್ಟಫಾಲ್ ಬಿಟ್ಟಿರುತ್ತಾರೆ. ಇದನ್ನು ಹೇಗೆ ಲೆಕ್ಕಾಚಾರ ಮಾಡಿದ್ದಾರೆ ಅಂದರೆ ರೈತರಿಗೆ ಯಾವುದೇ ಕಾರಣಕ್ಕೂ ಬೆಳೆವಿಮೆ ಹಣ ಬರಬಾರದು ಎಂಬುದು ಅವರ ಉದ್ದೇಶವಾಗಿದೆ. ನಾವು ಅನೇವರಿ ಮಾಡುವ ಸಂದರ್ಭದಲ್ಲಿ ಈ ವಿಮೆ ಅಧಿಕಾರಿಗಳ ವರ್ತನೆಗಳನ್ನು ನೋಡಿದರೆ ಅವಾಗಲೂ ಸಹ ಬಹಳ ರಿಸ್ಕ ಮಾಡಿ ಅಲ್ಲಿದ್ದ ಪ್ರೈಮರಿ ವರ್ಕರ ಮತ್ತು ರೈತರಿಗೆ ತಪ್ಪು ಸಂದೇಶವನ್ನು ಕೊಟ್ಟು ಬೇಕಂತಲೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ, ಅದನ್ನು ನಾವುಗಳು ಕಣ್ಣಾರೆ ನೋಡಿದ್ದೇವೆ. ನಮ್ಮ ಲೆಕ್ಕಾಚಾರದಲ್ಲಿ ೨.೫ಕೆ.ಜಿ. ಸರಾಸರಿ ಇಳುವರಿ ಬಂದಿರುತ್ತದೆ. ಮತ್ತು ಇವರು ಚಿಕ್ಕಬೆಂಡಿಗೇರಿ ಗ್ರಾಮದ ಎರಡು ಪ್ರಯೋಗಗಳು ಅತಿ ಕಡಿಮೆ ಇಳುವರಿ ಬಂದಾಗ ಅದನ್ನು ತಕರಾರು ಮಾಡುವ ಮುಖಾಂತರ ತಮ್ಮ ಆಫೀಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಮ್ಮ ಸರ್ಕಾರಿ ಅಧಿಕಾರಿಗಳು ಕಾನೂನು ಪ್ರಕಾರ ವಿಚಾರ ಮಾಡಿ ಅವರು ಮಾಡಿದ ತಕರಾರನ್ನು ತೆಗೆದುಹಾಕಿ ರೈತರಿಗೆ ನ್ಯಾಯ ಒದಗಿಸಿದರು ಎಂದರು. ಈಗ ೧೫ ದಿನಗಳ ಹಿಂದೆ ಹುಲಗೂರು ಗ್ರಾಮದ ರೈತರಾದ ನಿರ್ಮಲಾದೇವಿ ಸೋಮಶೇಖರಗೌಡ ಪಾಟೀಲ ಇವರ ಸೋಯಾಬಿನ್ ಬೆಳೆವಿಮಾ ಅರ್ಜಿ ಸಂಖ್ಯೆ ಹಾಕಿ ಚೆಕ್ ಮಾಡಿದಾಗ -೮೨% ಅಂತಾ ತೋರಿಸಿದ್ದು ಇರುತ್ತದೆ. ಇದನ್ನು ಅಂದೆ ತೆಗೆದು ಹಾಕಿದ್ದಾರೆ. ಮತ್ತೆ ಒಂದು ವಾರ ಬಿಟ್ಟು ೪೨% ಶಾರ್ಟಫಾಲ್ ಬಿಟ್ಟಿರುತ್ತಾರೆ ಅದನ್ನು ಸಹ ಒಂದೇ ದಿನದಲ್ಲಿ ಡಿಲಿಟ್ ಮಾಡಿ ಈಗ -೯% ಅಂತಾ ಶಾರ್ಟಫಾಲ್ ಬಿಟ್ಟಿದ್ದಾರೆ. ಇವರಿಗೆ ಸರಿಯಾಗಿ ಲೆಕ್ಕ ಮಾಡಲು ಬರುತ್ತದೆಯೋ ಅಥವಾ ಇಲ್ಲವೋ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಏಕೆಂದರೆ ಎಲ್ಲಾ ೧೦ಪ್ರಯೋಗಗಳು ಇಳುವರಿಯನ್ನು ನೋಡಿದರೆ ೨ ರಿಂದ ೨.೫ಕೆ.ಜಿ. ಸರಾಸರಿ ಇಳುವರಿ ಇದೆ. ಇದರ ಪ್ರಕಾರ ರೈತರಿಗೆ ೪೦ರಿಂದ ೪೫% ಶಾರ್ಟಫಾಲ್ ಬಿಡಬೇಕು ಆದ್ದರಿಂದ ವಿಮಾ ಅಧಿಕಾರಿಗಳನ್ನು ಕರೆಯಿಸಿ ರೈತರು ಮತ್ತು ನಿಮ್ಮ ಅಧಿಕಾರಿಗಳ ಸಮಕ್ಷ ಇನ್ನೊಮ್ಮೆ ೧೦ ಪ್ರಯೋಗಗಳ ಇಳುವರಿ ಮತ್ತು ಟಿ,ವೈ. ಯನ್ನು ಲೆಕ್ಕ ಮಾಡಿ ರೈತರಿಗೆ ಆದ ಅನ್ಯಾಯವನ್ನು ತಕ್ಷಣ ಸರಿ ಮಾಡಿ ಕೊಡಬೇಕು ಇಲ್ಲವಾದರೆ ರೈತರೆಲ್ಲರೂ ಕೂಡಿಕೊಂಡು ಎಐಸಿ ವಿಮಾ ಕಂಪನಿ ವಿರುದ್ಧ ನಿಮ್ಮ ಕಛೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ. ಇದಕ್ಕೆ ತಾವುಗಳು ಅವಕಾಶ ಕೊಡದೆ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ತಿಳಿಲಾಗಿದೆ ಎಂದಿದ್ದಾರೆ.

- ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.1
- ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಹಾಲಿಂಗಪ್ಪ ಮಳವಳ್ಳಿ (41) ಎಂಬುವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ನಡೆದ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಮಧ್ಯರಾತ್ರಿ 1ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಎಸ್ಪಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆ ಕಾರಣ ಪತ್ತೆಗೆ ತನಿಖೆ ಆರಂಭವಾಗಿದೆ.1
- ಹಾವೇರಿ ಜಲ್ಲಾ ಹಾನಗಲ್1
- ಖಾಲಿ ಹುದ್ದೆಗಳ ಭರ್ತಿ ಹಾಗೂ ಹಗರಣಗಳ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದರು. ಅನುಮತಿ ಇಲ್ಲದ ಕಾರಣ ಪ್ರತಿಭಟನೆ ಕೈಬಿಡಲು ಪೊಲೀಸರು ಮನವೊಲಿಸಿದರೂ ಒಪ್ಪದಿದ್ದಾಗ ಅವರನ್ನು ವಶಕ್ಕೆ ಪಡೆಯಲಾಯಿತು.1
- ತಮಿಳುನಾಡಿನಲ್ಲಿ ನೂತನ ಸಿಎಂ ಆಗಿ ವಿಜಯ್ ಗೆ ರಾಹುಲ್ ಗಾಂಧಿ ಸಾತ್ ನೀಡಿದರು1
- ಗದಗ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ನಗರದ ತೋಂಟದಾರ್ಯ ಇಂಜನೀಯರ್ ಕಾಲೇಜ್ ಬಳಿ ಲಾರಿಯನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಸುಮಾರು 14 ಲಕ್ಷ ಮೌಲ್ಯದ ಅಂದಾಜು 34,720 ಕೆಜಿ ಅನ್ನಭಾಗ್ಯ ಅಕ್ಕಿ, ಹಾಗೂ ಮಧ್ಯಪ್ರದೇಶ ಮೂಲದ MP-09 DN-7251 ನಂಬರಿನ 29 ಲಕ್ಷ ಮೌಲದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ. ಈ ಲಾರಿಯು ವಿಜಯನಗರ ಜಿಲ್ಲೆ ಹರಪನಹಳ್ಳಿ ಕಡೆಯಿಂದ ಇಳಕಲ್ ಮಾರ್ಗವಾಗಿ ಗುಜರಾತ್'ಗೆ ಹೊರಟಿತ್ತು ಎಂದು ತಿಳಿದಿದೆ, ಈಗ ಸಧ್ಯ ಲಾರಿ ಚಾಲಕನನ್ನು ಪೊಲೀಸ್ ವಶಕ್ಕೆಪಡೆದಿದ್ದಾರೆ. ಅಲ್ಲದೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ವಶಕ್ಕೆ ಪಡೆದ ಅಕ್ಕಿ ಮೂಟೆಗಳನ್ನು KFCSC ಗೋಡೌನ್ ಗೆ ಸಾಗಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿಗೆ ಎಸ್ಪಿ ರೋಹನ್ ಜಗದೀಶ್, ಗದಗ ಬೆಟಗೇರಿ ಆಹಾರ ನೀರಿಕ್ಷಕ ಜಗದೀಶ್ ಅಮಾತಿ ಅವರು ಭೇಟಿ ಪರಿಶೀಲನೆ ನೆಡೆಸಿದ್ದಾರೆ.1
- ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ *ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು. ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ ತಮ್ಮಣ್ಣ ನವರು. ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ , ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- Post by H M ಹರಕುಣಿ1