logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದೇಶ ಮುನ್ನಡೆಸಲು ಪ್ರಧಾನಿಗೆ ಮತ್ತಷ್ಟು ಶಕ್ತಿ ಸಿಗಲಿ: ಚಳ್ಳಕೆರೆ ಬಿಜೆಪಿ ಮಂಡಲದಿಂದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಸಂಕಲ್ಪ ಪೂಜೆ ಚಳ್ಳಕೆರೆ: ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಚಳ್ಳಕೆರೆ ಮಂಡಲ ಬಿಜೆಪಿ ವತಿಯಿಂದ ನಗರದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಕಲ್ಪ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಮಂಡಲದ ಅಧ್ಯಕ್ಷರಾದ ಸುರೇಶ್ ಅವರ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಮುನ್ನಡೆಸಲು ಭಗವಂತನು ಅವರಿಗೆ ಹೆಚ್ಚಿನ ಬಲ, ಆಯುರಾರೋಗ್ಯ ಹಾಗೂ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಈ ಶುಭ ಸಂದರ್ಭದಲ್ಲಿ ಬಿಜೆಪಿ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾ ಸದಸ್ಯರು, ಸಂಚಾಲಕರಾದ ಪ್ರಕಾಶ್ ಟಿ., ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಮರಾಜು ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

59 min ago
user_Kiran M J
Kiran M J
Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
59 min ago
1a5e9e65-80b0-42ce-a682-f83236e38d2e

ದೇಶ ಮುನ್ನಡೆಸಲು ಪ್ರಧಾನಿಗೆ ಮತ್ತಷ್ಟು ಶಕ್ತಿ ಸಿಗಲಿ: ಚಳ್ಳಕೆರೆ ಬಿಜೆಪಿ ಮಂಡಲದಿಂದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಸಂಕಲ್ಪ ಪೂಜೆ ಚಳ್ಳಕೆರೆ: ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಚಳ್ಳಕೆರೆ ಮಂಡಲ ಬಿಜೆಪಿ ವತಿಯಿಂದ ನಗರದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಕಲ್ಪ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಮಂಡಲದ ಅಧ್ಯಕ್ಷರಾದ ಸುರೇಶ್ ಅವರ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ

ecb6a067-763c-4ae8-8c5f-8d095971a6d8

ಮೋದಿಯವರು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಮುನ್ನಡೆಸಲು ಭಗವಂತನು ಅವರಿಗೆ ಹೆಚ್ಚಿನ ಬಲ, ಆಯುರಾರೋಗ್ಯ ಹಾಗೂ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಈ ಶುಭ ಸಂದರ್ಭದಲ್ಲಿ ಬಿಜೆಪಿ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾ ಸದಸ್ಯರು, ಸಂಚಾಲಕರಾದ ಪ್ರಕಾಶ್ ಟಿ., ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಮರಾಜು ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

More news from ಕರ್ನಾಟಕ and nearby areas
  • ಪ್ರಧಾನಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಿದ ಯುವ ಕಾಂಗ್ರೆಸ್: ತರಕಾರಿ ಮಾರಿ ಕೇಂದ್ರದ ವಿರುದ್ಧ ವಿನೂತನ ಪ್ರತಿಭಟನೆ ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸುವ ಮೂಲಕ ಚಳ್ಳಕೆರೆ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, 'ಯುವಕರಿಗೆ ಉದ್ಯೋಗ – ದೇಶದ ಯುವಶಕ್ತಿಗೆ ಭವಿಷ್ಯದ ಭರವಸೆ' ಎಂಬ ಘೋಷವಾಕ್ಯದಡಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಉನ್ನತ ವ್ಯಾಸಂಗ ಮಾಡಿದ ಯುವಕರಿಗೆ ಉದ್ಯೋಗವಿಲ್ಲದೆ ಬೀದಿಯಲ್ಲಿ ತರಕಾರಿ ಮಾರುವ ಪರಿಸ್ಥಿತಿ ಬಂದೊದಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಯತ್ನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡರು,ಕೇಂದ್ರ ಸರ್ಕಾರವು ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನೇ ದಿನೇ ನಿರುದ್ಯೋಗ ಸಮಸ್ಯೆ ಮಿತಿಮೀರುತ್ತಿದ್ದು, ಪದವಿ ಪಡೆದ ಯುವಕರು ಅನಿವಾರ್ಯವಾಗಿ ತರಕಾರಿ ಮಾರುವ ಹಾಗೂ ಕೂಲಿ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೇರಿದ ಸರ್ಕಾರ, ಇದೀಗ ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪಟೇಲ್, ಉಪಾಧ್ಯಕ್ಷ ಎಸ್.ಜಿ. ವೀರೇಶ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಹರ್ಬರ್ಜ್, ಪುರುಷೋತ್ತಮ್, ಮಂಜುನಾಥ್ ಜಿ.ಕೆ., ನಿಂಗೇಗೌಡ, ಹರೀಶ್, ಅರುಣ್ ಯಾದವ್, ನಟರಾಜ್, ತಿರುಮಲೇಶ್, ಗಣೇಶ್, ಮನು ಚೌಳೂರು, ಪ್ರಭು, ಏಕಾಂತ್ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.
    3
    ಪ್ರಧಾನಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಿದ ಯುವ ಕಾಂಗ್ರೆಸ್: ತರಕಾರಿ ಮಾರಿ ಕೇಂದ್ರದ ವಿರುದ್ಧ ವಿನೂತನ ಪ್ರತಿಭಟನೆ
ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸುವ ಮೂಲಕ ಚಳ್ಳಕೆರೆ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, 'ಯುವಕರಿಗೆ ಉದ್ಯೋಗ – ದೇಶದ ಯುವಶಕ್ತಿಗೆ ಭವಿಷ್ಯದ ಭರವಸೆ' ಎಂಬ ಘೋಷವಾಕ್ಯದಡಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಉನ್ನತ ವ್ಯಾಸಂಗ ಮಾಡಿದ ಯುವಕರಿಗೆ ಉದ್ಯೋಗವಿಲ್ಲದೆ ಬೀದಿಯಲ್ಲಿ ತರಕಾರಿ ಮಾರುವ ಪರಿಸ್ಥಿತಿ ಬಂದೊದಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡರು,ಕೇಂದ್ರ ಸರ್ಕಾರವು ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನೇ ದಿನೇ ನಿರುದ್ಯೋಗ ಸಮಸ್ಯೆ ಮಿತಿಮೀರುತ್ತಿದ್ದು, ಪದವಿ ಪಡೆದ ಯುವಕರು ಅನಿವಾರ್ಯವಾಗಿ ತರಕಾರಿ ಮಾರುವ ಹಾಗೂ ಕೂಲಿ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೇರಿದ ಸರ್ಕಾರ, ಇದೀಗ ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪಟೇಲ್, ಉಪಾಧ್ಯಕ್ಷ ಎಸ್.ಜಿ. ವೀರೇಶ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಹರ್ಬರ್ಜ್, ಪುರುಷೋತ್ತಮ್, ಮಂಜುನಾಥ್ ಜಿ.ಕೆ., ನಿಂಗೇಗೌಡ, ಹರೀಶ್, ಅರುಣ್ ಯಾದವ್, ನಟರಾಜ್, ತಿರುಮಲೇಶ್, ಗಣೇಶ್, ಮನು ಚೌಳೂರು, ಪ್ರಭು, ಏಕಾಂತ್ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.
    user_Kiran M J
    Kiran M J
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    37 min ago
  • ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.
    1
    ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ

ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ
ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ
ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ
ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ
ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್  ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.
    user_Nagesh BR Durgavara
    Nagesh BR Durgavara
    Photographer Chitradurga, Karnataka•
    3 hrs ago
  • ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ​ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ತದ ನಂತರ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ, ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ" ಎಂದರು. ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. "ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ. ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ​ಪಧವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ, ಜಯಪ್ಪ ತಾಲೂಕು ಮುಖಂಡರಾದ ನಾಗರಾಜಯ್ಯ, ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ಚಿತ್ತಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ನೌಕರ ಸಂಘದ ಕಾರ್ಯದರ್ಶಿ ಶ್ರೀಧರ್, ಮೃತ್ಯುಂಜಯಪ್ಪ, ಮದ್ದೇರು ಶಿವಕುಮಾರ್, ಮಲ್ಲೇಶಪ್ಪ, ಉಪ್ಪರಿಗೇನಹಳ್ಳಿ ಹೇಮಂತ್ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
    1
    ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ​ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ತದ ನಂತರ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ,  ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ" ಎಂದರು. ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. "ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ. ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ​ಪಧವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ, ಜಯಪ್ಪ ತಾಲೂಕು ಮುಖಂಡರಾದ ನಾಗರಾಜಯ್ಯ, ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ಚಿತ್ತಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ನೌಕರ ಸಂಘದ ಕಾರ್ಯದರ್ಶಿ ಶ್ರೀಧರ್, ಮೃತ್ಯುಂಜಯಪ್ಪ, ಮದ್ದೇರು ಶಿವಕುಮಾರ್, ಮಲ್ಲೇಶಪ್ಪ, ಉಪ್ಪರಿಗೇನಹಳ್ಳಿ ಹೇಮಂತ್ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ ಹಲವು ಸರ್ವ ಧರ್ಮ ಸಮಾನತೆ ಸಾರುವ. ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.
    1
    ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ
ಹಲವು ಸರ್ವ ಧರ್ಮ ಸಮಾನತೆ ಸಾರುವ.
ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ  ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
  • ಮೈದಾನದ ರಕ್ಷಣೆಗಾಗಿ ಕಾಂಪೌಂಡ್ ಹಾಗೂ ಬೆಳಕಿಗಾಗಿ ಹೈಮಾಸ್ಕ್ ಲೈಟ್ ಅಳವಡಿಕೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಒತ್ತಾಯ
    1
    ಮೈದಾನದ ರಕ್ಷಣೆಗಾಗಿ ಕಾಂಪೌಂಡ್ ಹಾಗೂ ಬೆಳಕಿಗಾಗಿ ಹೈಮಾಸ್ಕ್ ಲೈಟ್ ಅಳವಡಿಕೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಒತ್ತಾಯ
    user_MSMEDIACHANNEL
    MSMEDIACHANNEL
    Social Media Manager ಪಾವಗಡ, ತುಮಕೂರು, ಕರ್ನಾಟಕ•
    40 min ago
  • ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ *ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ ನಂತರ , ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ
*ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ  ಭಾಗಿಯಾಗಿದ ನಂತರ ,  ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ
ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು  ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    2 hrs ago
  • ಸೆಪ್ಟೆಂಬರ್ 20: .ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ ಉಡುಪಿ : ಉಡುಪಿ ಮಳಯಾಳಿಗಳ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆಯಾದ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ) ಉಡುಪಿ, ಸಂಸ್ಥೆಯು ಕೇರಳದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಉದ್ಯೋಗವನ್ನರಸುತ್ತಾ ಉಡುಪಿಗೆ ಬಂದು ನೆಲೆಸಿದ ಮಲೆಯಾಳಿಗಳು ಒಟ್ಟು ಸೇರಿ ಕಟ್ಟಿದ ಸಂಘಟನೆಯಾಗಿದೆ . ಕೆಸಿಎಸ್ ಸಿ. ಹಲವಾರು ದಶಕಗಳಿಂದ ಇಲ್ಲಿಯೇ ಇರುವುದರಿಂದ ಅವರ ಮಕ್ಕಳು ಮೊಮ್ಮಕ್ಕಳಿಗೆ ಮಲೆಯಾಳಕ್ಕಿಂತ ಹೆಚ್ಚು ಕನ್ನಡದ ಸಂಸ್ಕೃತಿಯ ಪರಿಚಯವೇ ಹೆಚ್ಚು. ಹುಟ್ಟೂರ ಮಣ್ಣಿನ ಸಂಸ್ಕೃತಿ , ಸಂಪ್ರದಾಯ ಹಾಗೂ ಜೀವನಕ್ರಮದ ಪರಿಚಯವನ್ನು ಮಕ್ಕಳಿಗೆ ಮಾತ್ರವಲ್ಕದೆ ತಾವು ಬದುಕುತ್ತಿರುವ ಪರಿಸರದಲ್ಲಿರುವ ಇತರರಿಗೂ ಪರಿಚಯಿಸುವ ಸದುದ್ದೇಶದಿಂದ ಈ ಸಂಘವು ಓಣಂ ಆಚರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಕಳೆದ ೩೨ ವರ್ಷಗಳಿಂದ ಆಚರಿಸುತ್ತ ಬಂದಿದೆ.. ಈ ಬಾರಿಯೂ ಕೂಡ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ನ 32ನೆ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆ ಸೆಪ್ಟೆಂಬರ್ 20 ರಂದು ವಿಜೃಂಭಣೆ ಯಿಂದ ನಡೆಯಲಿದೆ ಎಂದು ಕೆ ಸಿ ಎಸ್ ಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ ಪಾರ್ವತಿ ಐತಾಳ್ ತಿಳಿಸಿದರು ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಅರೋಗ್ಯ ಸಚಿವ ಯು ಟಿ ಖಾದರ್ ಪರೀದ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ ಕೆ. ಐ ಎ ಎಸ್ , ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿ ಹರಿರಾಮ್ ಶಂಕರ್ ಐ ಪಿ ಎಸ್, ಮಾಹೆ ಹೆಲ್ತ್ ಸೈನ್ಸ್ ಪ್ರೊ ವೈಸ್ ಚಾನ್ಸೆಲ್ಲರ್ ಡಾ ಮಾತ್ಯುಸ್ ಜಾಕೋಬ್, ನೋರ್ಕ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಕೆ, ಕೇರಳ ಸಮಾಜo ಮಂಗಳೂರು ಅಧ್ಯಕ್ಷ ಟಿ ಕೆ ರಾಜನ್, ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್, ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ, ಕೋಶಾಧಿಕಾರಿ ಶಾಜಿ ವಿ ಕರುಣ್, ಕೆ ಸಿ ಎಸ್ ಸಿ ನಿಕಟ ಪೂರ್ವ ಅಧ್ಯಕ್ಷ ಸುಗುಣ ಕುಮಾರ್ ಎಂ ಜೆ ಎಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಪಿಲಿಪ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ ವಿನೋದ್ ವಿ ತೋಮಸ್, ಅರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಡಾ ರಾಜೇಶ್ ನಾಯರ್, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಎಂ ಎಲ್ ಜೋಸೆಫ್, ಕಲೆ ಸಂಸ್ಕೃತಿ ಕ್ಷೇತ್ರದಲ್ಲಿ ಸಿ ಸಾಧನೆಗೈದ ಲಿಯಾಕತ್ ಅಲಿ, ಯುವ ನ್ರತ್ಯಗಾತಿ ಸಾನ್ವಿ ರಾಜೇಶ್ ರವರಿಗೆ 2026ರ ಸಾಲಿನ ಕೆ ಸಿ ಎಸ್ ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಕೆ ಸಿ ಎಸ್ ಸಿ ಸದಸ್ಯರ ಕುಟುಂಬದ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ.   ಅಶಕ್ತರಿಗೆ ಧನ ಸಹಾಯ,  ಕೇರಳದಿಂದ ಇಲ್ಲಿಗೆ ಬಂದು ದಾರಿ ತಪ್ಪಿದವರನ್ನು ಊರಿನವರೊಂದಿಗೆ ಸೇರಿಸುವ ಸಹಾಯ ಮತ್ತು ಅಗತ್ಯ ಬಂದಾಗ ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಿದೆ.  ಮಲೆಯಾಳಂ ಮಿಶನ್ ಮೂಲಕ ಮಲೆಯಾಳ ಭಾಷೆಯನ್ನು ಕಲಿಸುವ ವ್ಯವಸ್ಥೆ, ಕೇರಳ ಸರಕಾರವು ಪರವೂರಿನಲ್ಲಿ ನೆಲೆಸಿದವರಿಗೆ ನೀಡುವ  ನೋರ್ಕಾ ಮೂಲಕ ನೀಡುವ ಹೆಲ್ತ್ ಇನ್ಶುರೆನ್ಸ್ ಅನ್ನು ಈ ಬಾರಿ ಸಂಘದ ಸದಸ್ಯರ ಕುಟುಂಬಗಳಿಗೆ ಪಡೆಯುವ ವ್ಯವಸ್ಥೆಯನ್ನು ಸಂಘದ ಮುಖಂತರ ನೀಡುವ ವ್ಯವಸ್ಥೆ ಮಾಡಲಾಗುವುದು ಎಪ್ಪತ್ತು ಮತ್ತು ಎಪ್ಪತ್ತಕ್ಕಿಂತ ಹೆಚ್ಚು ವಯಸ್ಸಾದ ಜತೆ ಜತೆಯಾಗಿ ಉಲ್ಲಾಸದಿಂದ ಬದುಕುವ ವ್ಯವಸ್ಥೆ ಮಾಡಲು "ಸೂಪರ್ ಸೆವೆಂಟಿ" ಎಂಬ ಒಂದು ಶಾಖೆಯನ್ನೂ ಸಂಘವು ಸದಾ ಕಾಲ ಲವಲವಿಕೆಯಿಂದ ಕೂಡಿರಲು ಹಾಗೂ ನಮ್ಮ ಯುವ ಸಮುದಾಯ ಸಮಾಜ ಸೇವಾ ಚಟುವಟಿಕೆ ತೊಡಗಿಸಿಕೊಳ್ಳಲು ಪೂರಕವಾಗಿ "ಯೂಥ್ ವಿಂಗ" ನ್ನು ಆರಂಭಿಸುತ್ತಿದೆ. ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಕಲಾ ಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ನಡೆಯಲಿದೆ ಕೆ ಸಿ ಎಸ್ ಸಿ ಕುಟುಂಬ ಸದಸ್ಯರಿಂದ ಸ್ವಾಗತ ನ್ರತ್ಯ, ಪುಷ್ಪಾoಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಟ್ಟo, ಫುಷನ್ ಡಾನ್ಸ್, ಕೊಯಿತು ಪಾಟ್ಟು ಡಾನ್ಸ್, ಕೈಕೊಟ್ಟಿಕಲಿ, ಮಹಾಭಾರತ ಥೀಮ್, ಸಿನೆಮಾಟಿಕ್ ಡಾನ್ಸ್ ನಡೆಯಲಿದೆ ಕಾಲೇಜು ವಿದ್ಯಾರ್ಥಿನಿಯರಿಗಾಗಿ "ಅತ್ತಾಪೂಕಲಂ" ಹೂವಿನ ರಂಗೋಲಿ ಸ್ಪರ್ಧೆ ನಡೆಯಲಿದೆ ಬೆಳಿಗ್ಗೆ 10.00ರಿಂದ 12.30 ರವರೆಗೆ ಮಿತ್ರ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ ಮಧ್ಯಾಹ್ನ ಓಣo ಸದ್ಯ-ಅಂದರೆ ಕೇರಳದ ಅಪರೂಪದ ಖಾದ್ಯ ಪದಾರ್ಥಗಳ ಭರ್ಜರಿ ಭೋಜನವಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್, ಕೆ ಸಿ ಎಸ್ ಸಿ ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್, ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ,ಕಾರ್ಯಕಾರಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಉಪಸ್ಥಿತರಿದ್ದರು
    2
    ಸೆಪ್ಟೆಂಬರ್ 20: .ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ 
ಉಡುಪಿ : ಉಡುಪಿ ಮಳಯಾಳಿಗಳ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆಯಾದ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ) ಉಡುಪಿ, ಸಂಸ್ಥೆಯು 
ಕೇರಳದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಉದ್ಯೋಗವನ್ನರಸುತ್ತಾ ಉಡುಪಿಗೆ ಬಂದು ನೆಲೆಸಿದ ಮಲೆಯಾಳಿಗಳು ಒಟ್ಟು ಸೇರಿ ಕಟ್ಟಿದ ಸಂಘಟನೆಯಾಗಿದೆ . ಕೆಸಿಎಸ್ ಸಿ. ಹಲವಾರು ದಶಕಗಳಿಂದ ಇಲ್ಲಿಯೇ ಇರುವುದರಿಂದ ಅವರ ಮಕ್ಕಳು ಮೊಮ್ಮಕ್ಕಳಿಗೆ ಮಲೆಯಾಳಕ್ಕಿಂತ ಹೆಚ್ಚು ಕನ್ನಡದ ಸಂಸ್ಕೃತಿಯ ಪರಿಚಯವೇ ಹೆಚ್ಚು. ಹುಟ್ಟೂರ ಮಣ್ಣಿನ ಸಂಸ್ಕೃತಿ , ಸಂಪ್ರದಾಯ ಹಾಗೂ ಜೀವನಕ್ರಮದ ಪರಿಚಯವನ್ನು ಮಕ್ಕಳಿಗೆ ಮಾತ್ರವಲ್ಕದೆ ತಾವು ಬದುಕುತ್ತಿರುವ ಪರಿಸರದಲ್ಲಿರುವ ಇತರರಿಗೂ ಪರಿಚಯಿಸುವ  ಸದುದ್ದೇಶದಿಂದ ಈ ಸಂಘವು ಓಣಂ ಆಚರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು   ಕಳೆದ ೩೨ ವರ್ಷಗಳಿಂದ  ಆಚರಿಸುತ್ತ ಬಂದಿದೆ.. ಈ ಬಾರಿಯೂ ಕೂಡ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ನ 32ನೆ ವಾರ್ಷಿಕೋತ್ಸವ ಹಾಗೂ 
ಓಣಂ ಆಚರಣೆ ಸೆಪ್ಟೆಂಬರ್ 20 ರಂದು ವಿಜೃಂಭಣೆ ಯಿಂದ ನಡೆಯಲಿದೆ ಎಂದು ಕೆ ಸಿ ಎಸ್ ಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ ಪಾರ್ವತಿ ಐತಾಳ್ ತಿಳಿಸಿದರು 
ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು  ಕಾರ್ಯಕ್ರಮದಲ್ಲಿ ಅರೋಗ್ಯ ಸಚಿವ ಯು ಟಿ ಖಾದರ್ ಪರೀದ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ ಕೆ. ಐ ಎ ಎಸ್ , ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿ ಹರಿರಾಮ್ ಶಂಕರ್ ಐ ಪಿ ಎಸ್, ಮಾಹೆ ಹೆಲ್ತ್ ಸೈನ್ಸ್ ಪ್ರೊ ವೈಸ್ ಚಾನ್ಸೆಲ್ಲರ್ ಡಾ ಮಾತ್ಯುಸ್ ಜಾಕೋಬ್, ನೋರ್ಕ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಕೆ, ಕೇರಳ ಸಮಾಜo ಮಂಗಳೂರು ಅಧ್ಯಕ್ಷ ಟಿ ಕೆ ರಾಜನ್, ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್,   ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ, ಕೋಶಾಧಿಕಾರಿ ಶಾಜಿ ವಿ ಕರುಣ್, ಕೆ ಸಿ ಎಸ್ ಸಿ ನಿಕಟ ಪೂರ್ವ ಅಧ್ಯಕ್ಷ ಸುಗುಣ ಕುಮಾರ್ ಎಂ ಜೆ ಎಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ 
ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಪಿಲಿಪ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ   ಡಾ ವಿನೋದ್ ವಿ ತೋಮಸ್, ಅರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಡಾ ರಾಜೇಶ್ ನಾಯರ್, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಎಂ ಎಲ್ ಜೋಸೆಫ್, ಕಲೆ ಸಂಸ್ಕೃತಿ ಕ್ಷೇತ್ರದಲ್ಲಿ  ಸಿ ಸಾಧನೆಗೈದ ಲಿಯಾಕತ್ ಅಲಿ, ಯುವ ನ್ರತ್ಯಗಾತಿ ಸಾನ್ವಿ ರಾಜೇಶ್ ರವರಿಗೆ 2026ರ  ಸಾಲಿನ ಕೆ ಸಿ ಎಸ್ ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಕೆ ಸಿ ಎಸ್ ಸಿ ಸದಸ್ಯರ ಕುಟುಂಬದ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ.  
ಅಶಕ್ತರಿಗೆ ಧನ ಸಹಾಯ,  ಕೇರಳದಿಂದ ಇಲ್ಲಿಗೆ ಬಂದು ದಾರಿ ತಪ್ಪಿದವರನ್ನು ಊರಿನವರೊಂದಿಗೆ ಸೇರಿಸುವ ಸಹಾಯ ಮತ್ತು ಅಗತ್ಯ ಬಂದಾಗ ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಿದೆ.  ಮಲೆಯಾಳಂ ಮಿಶನ್ ಮೂಲಕ ಮಲೆಯಾಳ ಭಾಷೆಯನ್ನು ಕಲಿಸುವ ವ್ಯವಸ್ಥೆ, ಕೇರಳ ಸರಕಾರವು ಪರವೂರಿನಲ್ಲಿ ನೆಲೆಸಿದವರಿಗೆ ನೀಡುವ  ನೋರ್ಕಾ ಮೂಲಕ ನೀಡುವ ಹೆಲ್ತ್ ಇನ್ಶುರೆನ್ಸ್  ಅನ್ನು ಈ ಬಾರಿ ಸಂಘದ ಸದಸ್ಯರ ಕುಟುಂಬಗಳಿಗೆ 
ಪಡೆಯುವ ವ್ಯವಸ್ಥೆಯನ್ನು ಸಂಘದ ಮುಖಂತರ ನೀಡುವ ವ್ಯವಸ್ಥೆ ಮಾಡಲಾಗುವುದು 
ಎಪ್ಪತ್ತು ಮತ್ತು ಎಪ್ಪತ್ತಕ್ಕಿಂತ ಹೆಚ್ಚು ವಯಸ್ಸಾದ ಜತೆ ಜತೆಯಾಗಿ ಉಲ್ಲಾಸದಿಂದ ಬದುಕುವ ವ್ಯವಸ್ಥೆ ಮಾಡಲು "ಸೂಪರ್ ಸೆವೆಂಟಿ" ಎಂಬ ಒಂದು ಶಾಖೆಯನ್ನೂ
ಸಂಘವು ಸದಾ ಕಾಲ ಲವಲವಿಕೆಯಿಂದ ಕೂಡಿರಲು ಹಾಗೂ ನಮ್ಮ ಯುವ ಸಮುದಾಯ ಸಮಾಜ ಸೇವಾ ಚಟುವಟಿಕೆ
ತೊಡಗಿಸಿಕೊಳ್ಳಲು ಪೂರಕವಾಗಿ "ಯೂಥ್ ವಿಂಗ" ನ್ನು ಆರಂಭಿಸುತ್ತಿದೆ. 
ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಕಲಾ ಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ನಡೆಯಲಿದೆ 
ಕೆ ಸಿ ಎಸ್ ಸಿ ಕುಟುಂಬ ಸದಸ್ಯರಿಂದ ಸ್ವಾಗತ ನ್ರತ್ಯ, ಪುಷ್ಪಾoಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಟ್ಟo, ಫುಷನ್ ಡಾನ್ಸ್, ಕೊಯಿತು ಪಾಟ್ಟು ಡಾನ್ಸ್, ಕೈಕೊಟ್ಟಿಕಲಿ, ಮಹಾಭಾರತ ಥೀಮ್, ಸಿನೆಮಾಟಿಕ್ ಡಾನ್ಸ್ ನಡೆಯಲಿದೆ 
ಕಾಲೇಜು ವಿದ್ಯಾರ್ಥಿನಿಯರಿಗಾಗಿ "ಅತ್ತಾಪೂಕಲಂ" ಹೂವಿನ ರಂಗೋಲಿ ಸ್ಪರ್ಧೆ ನಡೆಯಲಿದೆ 
ಬೆಳಿಗ್ಗೆ 10.00ರಿಂದ 12.30 ರವರೆಗೆ ಮಿತ್ರ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ 
ಮಧ್ಯಾಹ್ನ ಓಣo ಸದ್ಯ-ಅಂದರೆ ಕೇರಳದ ಅಪರೂಪದ ಖಾದ್ಯ ಪದಾರ್ಥಗಳ ಭರ್ಜರಿ ಭೋಜನವಿದೆ ಎಂದರು  
ಪತ್ರಿಕಾಗೋಷ್ಠಿಯಲ್ಲಿ ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್, ಕೆ ಸಿ ಎಸ್ ಸಿ 
ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್,   ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ,ಕಾರ್ಯಕಾರಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಉಪಸ್ಥಿತರಿದ್ದರು
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    2 hrs ago
  • ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದ ಹಿಂಭಾಗ: ಶಕ್ತಿ ಬಾಲ ಗಣೇಶ ಯುವಕ ಸಂಘದಿಂದ ಶಾಲಾ ಮಕ್ಕಳಿಗೆ ನೆರವು ಚಳ್ಳಕೆರೆ: ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಶಕ್ತಿ ಬಾಲ ಗಣೇಶ ಯುವಕ ಸಂಘದ ವತಿಯಿಂದ, ಕನ್ನಡ ಶಾಲೆ ಹಾಗೂ ಬೆಳಕು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ನೀರಿನ ಕ್ಯಾನ್ ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್, ಪೆನ್ಸಿಲ್ ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಜೊತೆಗೆ, 'ಬೆಳಕು' ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಿನ ಕ್ಯಾನ್‌ಗಳನ್ನು ಸಹ ಕೊಡುಗೆಯಾಗಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ಗೌರವಾಧ್ಯಕ್ಷರಾದ ಸಿ. ಭೋಜರಾಜ, ಸುರಕ್ಷಾ ಪಾಲಿ ಕ್ಲಿನಿಕ್‌ನ ಬಿ. ಫರೀದ್ ಖಾನ್ ಉಪಸ್ಥಿತರಿದ್ದು, ಮಕ್ಕಳನ್ನು ಹುರಿದುಂಬಿಸಿದರು. ಶ್ರೀ ಶಕ್ತಿ ಬಾಲ ಗಣೇಶ ಯುವಕ ಸಂಘದ ಹಾಗೂ ಕರವೇ ಅಧ್ಯಕ್ಷರಾದ ಪಿ. ಮಂಜುನಾಥ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದರ್ಶನ್ ಸಿ.ಬಿ., ಮಹಾಂತೇಶ್, ಈಶ್ವರ್, ಪಿ. ಕುಮಾರ್ ಹಾಗೂ ನಾಯಕನಹಟ್ಟಿ ಹೋಬಳಿ ಕರವೇ ಅಧ್ಯಕ್ಷರಾದ ಬೋರಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
    1
    ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದ ಹಿಂಭಾಗ: ಶಕ್ತಿ ಬಾಲ ಗಣೇಶ ಯುವಕ ಸಂಘದಿಂದ ಶಾಲಾ ಮಕ್ಕಳಿಗೆ ನೆರವು
ಚಳ್ಳಕೆರೆ: ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಶಕ್ತಿ ಬಾಲ ಗಣೇಶ ಯುವಕ ಸಂಘದ ವತಿಯಿಂದ, ಕನ್ನಡ ಶಾಲೆ ಹಾಗೂ ಬೆಳಕು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ನೀರಿನ ಕ್ಯಾನ್ ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್, ಪೆನ್ಸಿಲ್ ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಜೊತೆಗೆ, 'ಬೆಳಕು' ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಿನ ಕ್ಯಾನ್‌ಗಳನ್ನು ಸಹ ಕೊಡುಗೆಯಾಗಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ಗೌರವಾಧ್ಯಕ್ಷರಾದ ಸಿ. ಭೋಜರಾಜ, ಸುರಕ್ಷಾ ಪಾಲಿ ಕ್ಲಿನಿಕ್‌ನ ಬಿ. ಫರೀದ್ ಖಾನ್ ಉಪಸ್ಥಿತರಿದ್ದು, ಮಕ್ಕಳನ್ನು ಹುರಿದುಂಬಿಸಿದರು.
ಶ್ರೀ ಶಕ್ತಿ ಬಾಲ ಗಣೇಶ ಯುವಕ ಸಂಘದ ಹಾಗೂ ಕರವೇ ಅಧ್ಯಕ್ಷರಾದ ಪಿ. ಮಂಜುನಾಥ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದರ್ಶನ್ ಸಿ.ಬಿ., ಮಹಾಂತೇಶ್, ಈಶ್ವರ್, ಪಿ. ಕುಮಾರ್ ಹಾಗೂ ನಾಯಕನಹಟ್ಟಿ ಹೋಬಳಿ ಕರವೇ  ಅಧ್ಯಕ್ಷರಾದ ಬೋರಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
    user_Kiran M J
    Kiran M J
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    54 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.