ಮಹಿಳಾ ದಿನಚರಣೆ ಅಂಗವಾಗಿ ರಾಜಮಾತೆ ಕೆಂಪನಂಜಮಣಿ ಸ್ಮರಿಸಿದ ವೀರ ಸಾವರ್ಕರ್ ಯುವ ಬಳಗ. ಮೈಸೂರು: ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ರಾಜಮಾತೆ ಕೆಂಪನಂಜಮಣ್ಣಿ ರವರನ್ನು ಸ್ಮರಿಸಿದರು. ಭಾರತ್ ಮಾತೆ ಹಾಗೂ ಕೆಂಪನಂಜಮಣ್ಣಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬಿಜೆಪಿ ಸಹ ಪ್ರಭಾರಿಗಳಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಮೈಸೂರು ನಗರಕ್ಕೆ ರಾಜಮಾತೆ ಕೊಡುಗೆ ಅಪಾರ ,ಕೆ.ಆರ್.ಎಸ್. ಅಣೆಕಟ್ಟು ಕಟ್ಟುವಾಗ ಹಣಕಾಸಿನ ಕೊರತೆಯಾದಾಗ ತಮ್ಮ ಮೈ ಮೇಲಿದ್ದ ಒಡವೆ ಮಾರಿ ಅಣೆಕಟ್ಟು ಪೂರ್ಣಗೊಳ್ಳಲು ಸಹಾಯ ಮಾಡಿದ ನಮ್ಮ ಹೆಮ್ಮೆಯ ಮಹಾರಾಣಿ ಕೆಂಪ ನಂಜಮ್ಮಣ್ಣಿ ಯವರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. ಮೈಸೂರು ನಗರದ ವಿಸ್ತರಣೆ ಹಾಗೂ ಪೈಪ್ ಗಳಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ, ಭಾರತದಲ್ಲಿಯೇ ಮೊದಲ ಬಾರಿಗೆ ಶಿವನ ಸಮುದ್ರ ವಿದ್ಯುತ್ ಉತ್ಪಾದನೆ, ರೈತರ ಅನೂಕೂಲಕ್ಕಾಗಿ ಚೆತ್ರದುರ್ಗದಲ್ಲಿ ಮಾರಿ ಕಣಿವೆ ಅಣೆಕಟ್ಟು, ಮಹಿಳೆಯರ ವಿದ್ಯಭ್ಯಾಸಕ್ಕೆ ಅನುಕೂಲಕ್ಕಾಗಿ ಮಹಾರಾಣಿ ಕಾಲೇಜು ಸ್ಧಾಪನೆ, ಬೆಂಗಳೂರಿನಲ್ಲಿ ಇಂಡಿಯನ್ ಇನ್ಸೂಟ್ಯೂಟ್ ಆಫ್ ಸೈನ್ಸ್ ಪ್ರಾಂರಂಭಸಿರುವುದು ಇವರ ಕಾರ್ಯಕ್ಕೆ ಉತ್ತಮ ಸಾಕ್ಷಿಯಾಗಿದೆ. ಅವರು ಕಟ್ಟಾ ಹಿಂದೂ ಧರ್ಮದ ಅನುಯಾಯಿ ಯಾಗಿದ್ದರು, ಇಂತಹ ಮಹಾನ್ ಸಾಧಕೀಯರು ಇಂದಿನ ಮಹಿಳೆಯರಿಗೆ ಸ್ಪೂರ್ತಿದಾಯಕರು ಎಂದು ಡಾ.ಈ.ಸಿ.ನಿಂಗರಾಜ್ ಗೌಡರವರು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪರಮೇಶ್ ಗೌಡ, ಮುಖಂಡರಾದ ಬಾಲಣ್ಣ, ಸಂದೇಶ್, ಉಮೇಶ್, ಪ್ರಮೋದ್ ಗೌಡ, ಭೈರಪ್ಪ, ಗಂಗಣ್ಣ, ಗೋಪಾಲ್, ಅಶ್ವಥ್, ಜಯಪ್ಪ, ಕೆ.ಎನ್. ಸಂತೋಷ್, ಮಂಜುನಾಥ್ ಎಸ್. ಗೌಡ, ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವಸಂತ ಮನೀಶ್, ಚಂದ್ರಕಲಾ, ರಶ್ಮಿ, ಮಧು, ಗೀತಾ, ಒಕ್ಕಲಿಗರ ಸಂಘದ ನಿರ್ದೇಶಕರಾದ ಚೇತನ್ ಗೌಡ , ಪ್ರವೀಣ್, ರಾಜಣ್ಣ, ವಿಜಯ್, ಅಭಿ, ವಿನೋದ, ವಿ ಎಸ್ ಕಿರಣ್, ಬ್ರಹ್ಮಚಾರ್, ಯೋಗೇಶ್, ನಾಗೇಶ್, ಅನೋಜ್, ರಾಜೇಶ್, ಮೋಹಿತ್ ಗೌಡ, ಚೇತನ್ ಗೌಡ ಟಿಎಸ್ ಅರುಣ್, ವಿನೋದ್ ಅರಸ್, ಮಂಜುನಾಥ್, ಮೋಹನ್, ಹಾಗೂ ಇನ್ನಿತರರು ಹಾಜರಿದ್ದರು.

- ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದ್ದು, ಮೈಸೂರಿನ ಹೋಟೆಲ್ ಉದ್ಯಮಕ್ಕೆ ಆತಂಕ ಉಂಟಾಗಿದೆ. ಈಗಾಗಲೇ ಕಳೆದ ಮೂರು ವಾರಗಳಲ್ಲಿ ಅನಿಲದ ಬೆಲೆ ಏರಿಕೆಯಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 1500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಉದ್ಯಮದ ಮೇಲೆ ಅವಲಂಬಿತರಿದ್ದಾರೆ. ಅನಿಲ ಪೂರೈಕೆ ಸಮಸ್ಯೆ ಮುಂದುವರಿದರೆ ಹಲವಾರು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಸಂಘ ಮನವಿ ಮಾಡಿದೆ.1
- *ಭಾರತ ನಲ್ಲಿ ವೈರಲ್*1
- ಹನೂರು: ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪ್ರಥಮ ಬಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅತ್ಯಂತ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಮಧ್ಯಾಹ್ನ ಜರುಗಿದ ರಥೋತ್ಸವದಲ್ಲಿ ದೇವರನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣಿ ಹಾಕಲಾಯಿತು. ರಥೋತ್ಸವ ಜರುಗುತ್ತಿದ್ದಂತೆ ಗರುಡ ಎರಡು ಬಾರಿ ಹಾರಾಡಿದ್ದು ವಿಶೇಷವಾಗಿತ್ತು. ನೆರೆದಿದ್ದ ಸಾವಿರಾರು ಭಕ್ತರು ಜಯ ಘೋಷ ಕೂಗಿದರು. ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಹರಕೆ ತೀರಿಸಿದರು.1
- ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..1
- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್ ನಿದ್ದೋಡಿ ಅವರನ್ನು ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು... ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ✍️ವರದಿ: ಸುರೇಂದ್ರ ಶಿವಮೊಗ್ಗ.....2
- ಭಾಲ್ಕಿ :-ನಾಗಮೋಹನದಾಸ ವರದಿ ಧಿಕ್ಕರಿಸಿ, ಭಾಲ್ಕಿ ಪಟ್ಟಣದಲ್ಲಿ ಬೃಹತ ಪ್ರತಿಭಟನೆ ರ‍್ಯಾಲಿ.1
- ಬೆಂಗಳೂರಿನ ಹೆಣ್ಣೂರು ಗಾರ್ಡನ್ಸ್‌ನ ಪ್ರಕೃತಿ ಲೇಔಟ್‌ನಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದರೆ, ಮತ್ತೊಂದು ಗುಂಪು ಕಿತ್ತಾಟದಲ್ಲಿ ತೊಡಗಿದೆ. ಅಷ್ಟರಲ್ಲಿ ಬುಲೆಟ್ ಸವಾರನೊಬ್ಬ ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಒದ್ದು ಪುಂಡಾಟಿಕೆ ಮೆರೆದಿದ್ದಾನೆ. ಒಂದೇ ಸ್ಕೂಟಿಯಲ್ಲಿ ಮೂವರು ಸವಾರಿ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಸವಾಲು ಹಾಕುವಂತಿರುವ ಈ ರೌಡಿಸಂ ಮತ್ತು ಅಶಿಸ್ತಿನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.1
- *ಭಾರತ ನಲ್ಲಿ ವೈರಲ್*1