Shuru
Apke Nagar Ki App…
ಸಿಡಿಲಿಗೆ ಬಲಿಯಾದ ಕೋಳಿ ಫಾರಂ ಮಾಲೀಕ: ಶಿವಮೊಗ್ಗದ ಹಾರನಹಳ್ಳಿಯಲ್ಲಿ ದುರ್ಘಟನೆ ಸಿಡಿಲಿಗೆ ಬಲಿಯಾದ ಕೋಳಿ ಫಾರಂ ಮಾಲೀಕ: ಶಿವಮೊಗ್ಗದ ಹಾರನಹಳ್ಳಿಯಲ್ಲಿ ದುರ್ಘಟನೆ ಶಿವಮೊಗ್ಗಜಿಲ್ಲೆಯ ಹಾರನಹಳ್ಳಿ ರಾಮನಗರ ಗ್ರಾಮದಲ್ಲಿ ಭಾರೀ ಸಿಡಿಲು ಬಡಿದ ಪರಿಣಾಮ 47 ವರ್ಷದ ಮುಜೀಬ್ ಎಂಬವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ. ಮೃತ ಮುಜೀಬ್ ಅವರು ಕೋಳಿ ಫಾರಂ ನಡೆಸುತ್ತಿದ್ದು, ಘಟನೆ ಸಂಭವಿಸಿದ ವೇಳೆ ಅಂಗಡಿಯಲ್ಲಿ ಇದ್ದರು. ಇದೇ ವೇಳೆ ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಸಿಡಿಲಿನ ಆಘಾತದಿಂದ ಕೋಳಿ ಫಾರಂನಲ್ಲಿದ್ದ ಹಲವಾರು ಕೋಳಿಗಳೂ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಯ ಬಳಿಕ ಮೃತದೇಹವನ್ನು ಆಯನೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಪರಿಶೀಲಿಸಿ ಮುಜೀಬ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಆಯನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ
ಇರ್ಫಾನ್ ಕನ್ನಡಿಗ
ಸಿಡಿಲಿಗೆ ಬಲಿಯಾದ ಕೋಳಿ ಫಾರಂ ಮಾಲೀಕ: ಶಿವಮೊಗ್ಗದ ಹಾರನಹಳ್ಳಿಯಲ್ಲಿ ದುರ್ಘಟನೆ ಸಿಡಿಲಿಗೆ ಬಲಿಯಾದ ಕೋಳಿ ಫಾರಂ ಮಾಲೀಕ: ಶಿವಮೊಗ್ಗದ ಹಾರನಹಳ್ಳಿಯಲ್ಲಿ ದುರ್ಘಟನೆ ಶಿವಮೊಗ್ಗಜಿಲ್ಲೆಯ ಹಾರನಹಳ್ಳಿ ರಾಮನಗರ ಗ್ರಾಮದಲ್ಲಿ ಭಾರೀ ಸಿಡಿಲು ಬಡಿದ ಪರಿಣಾಮ 47 ವರ್ಷದ ಮುಜೀಬ್ ಎಂಬವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ. ಮೃತ ಮುಜೀಬ್ ಅವರು ಕೋಳಿ ಫಾರಂ ನಡೆಸುತ್ತಿದ್ದು, ಘಟನೆ ಸಂಭವಿಸಿದ ವೇಳೆ ಅಂಗಡಿಯಲ್ಲಿ ಇದ್ದರು. ಇದೇ ವೇಳೆ ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಸಿಡಿಲಿನ ಆಘಾತದಿಂದ ಕೋಳಿ ಫಾರಂನಲ್ಲಿದ್ದ ಹಲವಾರು ಕೋಳಿಗಳೂ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಯ ಬಳಿಕ ಮೃತದೇಹವನ್ನು ಆಯನೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಪರಿಶೀಲಿಸಿ ಮುಜೀಬ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಆಯನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ
More news from ಕರ್ನಾಟಕ and nearby areas
- ಶಿವಮೊಗ್ಗ: ಮಳೆಯ ಅವಾಂತರಕ್ಕೆ ಇಂದು ನಗರದ ವಿನೋಬನಗರ ಬಡಾವಣೆಯ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಮಳೆಗಾಲದ ಸಮಯದಲ್ಲಿ ಎಷ್ಟೇ ಸುರಕ್ಷಿತವಾಗಿದ್ದರು ಅಪಾಯಗಳು ತಪ್ಪೋದಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಮತ್ತೊಂದು ಘಟನೆ ಹೊಸ ಮನೆ ಬಡಾವಣೆಯ 4ನೇ ತಿರುವಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವಘಡ ನಡೆದಿದೆ.1
- ಸೊರಬದಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ನೂತನ ಬ್ರಹ್ಮ ರಥ ಸಮರ್ಪಣೆ ಅಂಗವಾಗಿ ಇದೇ ಪ್ರಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಅರ್ಚಕರಾದ ವೇ.ಬ್ರ. ನಾರಾಯಣ ಭಟ್ ಮರಾಟೆ ನೇತೃತ್ವದಲ್ಲಿ ಹಲವಾರು ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರೀನಿವಾಸ ಕಲ್ಯಾಣವನ್ನು ಕಣ್ತುಂಬಿಕೊಂಡರು.1
- ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್ ಚನ್ನಗಿರಿ ದಾಟಿ ಕಾಗೆಹಳ್ಳದ ಬಳಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪತನಗೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದು, ಮೂವರು-ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಕಾಲು ಮುರಿದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.3
- "ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ". ಚಳ್ಳಕೆರೆ:-ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಬೆಂಗಳೂರಿನ ಐ.ಐ.ಎಂ ನ ನಿವೃತ್ತ ಪ್ರೊಫೆಸರ್ ಡಾ.ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್,ಡಾ.ವೈ ನರಹರಿ, ಈಶ್ವರಗೆರೆ ರಂಗನಾಥ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ರವಿಶಂಕರ್ , ಯಾದಾಟಿ ಚೇತನ್, ದೇವರಾಜರೆಡ್ಡಿ, ರಾಮಚಂದ್ರಪ್ಪ , ಮಲ್ಲಿಕಾರ್ಜುನಪ್ಪ , ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸುಹಾಸ್,ವೈಭವ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ , ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.1
- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ವದ್ದಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ರಾಜ್ಯದ ಮೂಲೆಮೂಲೆಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಭಕ್ತರ ಜೈಘೋಷ, ಭಕ್ತಿ ಗೀತೆಗಳು ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳ ನಡುವೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲೆಂದೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿದ್ದಾರೆ ಎಂಬ ನಂಬಿಕೆ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಿಮೆ ಅಪಾರವೆಂದು ಭಕ್ತರು ಹೇಳಿಕೊಳ್ಳುತ್ತಾರೆ. ಈ ತಾಂತ್ರಿಕ ಯುಗದಲ್ಲಿಯೂ ವಿವಿಧ ರೋಗರುಜಿನಗಳಿಗೆ ಪರಿಹಾರ ನೀಡುವ ಭವರೋಗ ವೈದ್ಯರಾಗಿ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಎರೆನಾಡ ದೊರೆಯನ್ನು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ತಮ್ಮ ಮನೋಭಿಲಾಷೆಗಳನ್ನು ನೆರವೇರಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.1
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಬನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಲಿತರ ದುಡ್ಡು ಪಂಗನಾಮ ಸಂವಿಧಾನವನ್ನೇ ಬರೆದುಕೊಟ್ಟ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುಲಬಾಂಧವರಿಗೆ ಅನ್ಯಾಯ ಇದನ್ನು ಪ್ರಶ್ನೆ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆಯೇ ? ಜನ ಜನ ಜನ ಜನ ಕಾಂಚಣದಲ್ಲಿ ಅಮೆರಿಕಾದ ಲಾಂಛನದಲ್ಲಿ ಪರಂಗಿಯವರು ಮತ್ತೆ ಬಂದರೆ ನಾವು ನೀವು ಎಲ್ಲಾ ಮಾಯ ಪರಂಗಿಯವರು ಬಂದಿದ್ದಾರೆಯೇ? ನಾವು 300 ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರನೇ ಬಿಟ್ಟಿಲ್ಲ ಇನ್ನು ನಕ್ಲೇಟರ್ ನಕಲಿ ಬಿಲ್ಲು ಸೃಷ್ಟಿಸಿ ಪಂಗನಾಮ ಹಾಕುವವರನ್ನು ಬಿಡಬಹುದೇ ?1
- ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ರವಿವಾರ ಆರಂಭಗೊಂಡ ವಿಮಾನ ಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಂತೆ ಮುಂಬೈ ಪ್ರದೇಶಕ್ಕೆ ಆರು ವಿಮಾನಗಳು ಸಂಚರಿಸಲಿವೆ. ಸೋಮವಾರ ಮತ್ತು ಗುರುವಾರದಂದು ಮುಂಬೈ ಪ್ರದೇಶಕ್ಕೆ ಒಟ್ಟು 5 ವಿಮಾನಗಳು ಪ್ರಯಾಣಕ್ಕೆ ಲಭ್ಯವಾಗಲಿವೆ. ಈ ಪೈಕಿ ಇಂಡಿಗೋ ಸಂಸ್ಥೆಯಿಂದ ನವಿ ಮುಂಬೈ ಮತ್ತು ಮುಂಬೈಗೆ ತಲಾ ಎರಡು , ಏರ್ ಇಂಡಿಯಾ ಎಕ್ಸ್‌ನಿಂದ ಮುಂಬೈಗೆ 1 ವಿಮಾನ ಹಾರಾಟ ನಡೆಸಲಿದೆ.1
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಉಕ್ಕಿನ ನಗರ ಗುಡುಗು ಸಹಿತ ಸುಮಾರು ಒಂದು ಗಂಟೆಗಳ ಕಾಲ ಮಳೆಯಾಗಿದೆ. ಸಿಡಿಲು, ಗುಡುಗಿನ ಜೊತೆ ಭಾರಿ ಗಾಳಿ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಬಿಸಿಲು ಹೆಚ್ಚಾಗಿದ್ದು ಮಳೆ ಬರುವ ಮುನ್ಸೂಚನೆಗಳಿದ್ದವು. ಮಧ್ಯಾಹ್ನ 3-30 ರ ವೇಳೆಹೆ ಗುಡುಗು ಮಿಂಚುವಿನೊಂದಿಗೆ ಸುರಿದ ಮಳೆಗೆ ಇಳೆ ತಂಪಾಗಿದೆ. ಇತ್ತ ಶಿವಮೊಗ್ಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.1