ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ: ವಿಜಯಪುರದಲ್ಲಿ 6,267 ಪ್ರಕರಣ, ₹30.52 ಲಕ್ಷ ದಂಡ ವಿಜಯಪುರ, ಆ. 24: ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಜಯಪುರ ಜಿಲ್ಲಾ ಪೊಲೀಸರು ನಡೆಸಿದ ವಿಶೇಷ ಸಂಚಾರ ಅಭಿಯಾನದಲ್ಲಿ ಒಟ್ಟು 6,267 ಪ್ರಕರಣಗಳನ್ನು ದಾಖಲಿಸಿ ₹30,52,550 ದಂಡ ವಸೂಲಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರ ನಿರ್ದೇಶನದಂತೆ ಬೆಳಗಾವಿ ವಲಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಆ.17ರಿಂದ 23ರವರೆಗೆ ವಿಶೇಷ ಸಂಚಾರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವಿಜಯಪುರ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ 1,634 ಪ್ರಕರಣಗಳಿಗೆ ₹8.17 ಲಕ್ಷ, ಸೀಟ್ ಬೆಲ್ಟ್ ಧರಿಸದ 916 ಪ್ರಕರಣಗಳಿಗೆ ₹4.62 ಲಕ್ಷ, ಟ್ರಿಪಲ್ ರೈಡಿಂಗ್‌ನ 513 ಪ್ರಕರಣಗಳಿಗೆ ₹2.56 ಲಕ್ಷ ಹಾಗೂ ಅಪಾಯಕಾರಿ ರೀತಿಯಲ್ಲಿ ವಾಹನ ನಿಲುಗಡೆ ಮಾಡಿದ 134 ಪ್ರಕರಣಗಳಿಗೆ ₹67 ಸಾವಿರ ದಂಡ ವಿಧಿಸಲಾಗಿದೆ. ಅದೇ ರೀತಿ, ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಿದ 1,055 ಪ್ರಕರಣಗಳು, ದಾಖಲೆ/ಸಮವಸ್ತ್ರ ಇಲ್ಲದ 365 ಪ್ರಕರಣಗಳು, ಲೇನ್ ಶಿಸ್ತು ಉಲ್ಲಂಘನೆಯ 120 ಪ್ರಕರಣಗಳು, ಅತಿವೇಗದ 25 ಪ್ರಕರಣಗಳು, ನಂಬರ್ ಪ್ಲೇಟ್ ಇಲ್ಲದ 170 ಪ್ರಕರಣಗಳು ಹಾಗೂ ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಯ 807 ಪ್ರಕರಣಗಳನ್ನು ದಾಖಲಿಸಲಾಗಿದೆ. ದೋಷಪೂರಿತ ನಂಬರ್ ಪ್ಲೇಟ್‌ಗೆ ಸಂಬಂಧಿಸಿದ 56 ಪ್ರಕರಣಗಳು ಸೇರಿದಂತೆ ಇತರ 313 ಪ್ರಕರಣಗಳ ಮೇಲೂ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗಿದೆ. ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಒಟ್ಟು 17,632 ಪ್ರಕರಣಗಳು ದಾಖಲಾಗಿದ್ದು, ₹78,58,150 ದಂಡ ವಸೂಲಿ ಮಾಡಲಾಗಿದೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. “ವೇಗ ಬೇಡ–ಜೀವ ಮುಖ್ಯ”, “ಸಂಚಾರ ನಿಯಮ ಪಾಲನೆ–ಜೀವ ರಕ್ಷಣೆಯ ಸಾಧನೆ”, “ಸೀಟ್ ಬೆಲ್ಟ್ ಹಾಕಿ–ಸುರಕ್ಷಿತ ಪ್ರಯಾಣ ಮಾಡಿ” ಹಾಗೂ “ಹೆಲ್ಮೆಟ್ ಧರಿಸಿ–ಜೀವ ಉಳಿಸಿ” ಎಂಬ ಸಂದೇಶಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. **“ಅಪಘಾತರಹಿತ ವಿಜಯಪುರ–ನಮ್ಮೆಲ್ಲರ ಸಂಕಲ್ಪ”**ದೊಂದಿಗೆ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ತಮ್ಮ ಹಾಗೂ ಇತರರ ಜೀವದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

- ಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿ ಸಿಂದಗಿ : ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿಬರಗಾಲ ಘೋಷಣೆ, ಬೆಳೆ ಪರಿಹಾರ ಹಾಗೂ ಸಾಲಮನ್ನಾಕ್ಕೆ ಪೀರು ಕೇರೂರ ಮನವಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಹೋರಾಟಗಾರ ಪೀರು ಕೇರೂರ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ರೈತರ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಕೇಂದ್ರ ಸರ್ಕಾರವೂ ರೈತರ ನೆರವಿಗೆ ಬಂದು ಅಗತ್ಯ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ರೈತರ ಸಮಸ್ಯೆಗಳನ್ನು ಮರೆತು ಕುಳಿತಿವೆ ಎಂದು ಪೀರು ಕೇರೂರ ಆರೋಪಿಸಿದರು. ರೈತರ ಸಂಕಷ್ಟಕ್ಕೆ ಸರ್ಕಾರಗಳು ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೀರು ಕೇರೂರ ಎಚ್ಚರಿಕೆ ನೀಡಿದರು.1
- ರೇವಣಸಿದ್ಧೇಶ್ವರ ಕೋರಿ ಮಠದಲ್ಲಿ ಗುಂಡಣ್ಣ ಡಿಗ್ಗಿ ಮಾತುಗಳಿಗೆ ಸಭಿಕರಿಂದ ಭರ್ಜರಿ ಚಪ್ಪಾಳೆ, ನಗೆ1
- ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ ರಾಜ ಹೇಳಿಕೆ1
- "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*1
- ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ1
- ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿ ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.1
- ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.2
- ಸ್ವ ಕ್ಷೇತ್ರದಲ್ಲೇ ಸಚಿವ ಡಾ. ಅಜಯ್ ಸಿಂಗ್ ವಿರುದ್ಧ ಧಿಕ್ಕಾರದ ಕೂಗು ಜೇವರ್ಗಿ: ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಚಿವ ಡಾ. ಅಜಯ್ ಸಿಂಗ್ ಅವರ ಸ್ವಕ್ಷೇತ್ರ ಜೇವರ್ಗಿಯಲ್ಲೇ ಕೆಲ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘಟನೆಗಳ ಕಾರ್ಯಕರ್ತರು ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಕ್ಷೇತ್ರದಲ್ಲೇ ಸಚಿವರ ವಿರುದ್ಧ ಧಿಕ್ಕಾರದ ಕೂಗು ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಹಾಗೂ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು. #ಜೇವರ್ಗಿ #ಅಜಯ್_ಸಿಂಗ್ #ಧಿಕ್ಕಾರದ_ಕೂಗು #ಆಕ್ರೋಶ #ಸಂಘಟನೆಗಳು1