ಕಾಮುಕನಿಂದ 6 ವರ್ಷ ಮಗುವನ್ನು ರಕ್ಷಿಸಿದ ಮಹಿಳೆ...!!........ ಆ ಹೆಣ್ಮಗಳು ಆತನನ್ನು ಗಮನಿಸದೆ ಹೋಗಿದ್ದರೆ ಒಂದು ಘೋರ ದುರಂತವೇ ನಡೆದು ಹೋಗ್ತಾ ಇತ್ತು, 6 ವರ್ಷದ ಆ ಹೆಣ್ಮಗಳನ್ನು ಆ ಕಾಮುಕನಿಂದ ರಕ್ಷಣೆ ಮಾಡದೆ ಹೋಗಿದ್ದರೆ ದೇವರೆ ಊಹಿಸುವುದಕ್ಕೂ ಕಷ್ಟವಾಗುತ್ತೆ, ಅಂಥದ್ದೊಂದು ಘಟನೆ ನಡೆಯುವುದನ್ನು ತಡೆಯುವುದಕ್ಕೆ ಸಾಧ್ಯವಾಗಿದ್ದು ಈ ಹೆಣ್ಮಗಳು ತೋರಿದ ಧೈರ್ಯದಿಂದ. ಈಕೆ ತನ್ನ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಜೊತೆಗೆ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿರುತ್ತಾಳೆ. ಈಕೆಯ ಎದುರುಗಡೆಯ ಸೀಟಿನಲ್ಲಿ ಕುಳಿತ ವ್ಯಕ್ತಿಯ ವರ್ತನೆ ಏಕೋ ಅಷ್ಟು ಸರಿಯಿಲ್ಲ ಅನಿಸುತ್ತೆ, ಏಕೆಂದ್ರೆ ಈಕೆ ನಿದ್ದೆಗೆ ಜಾರಿದಾಗ ಯಾರದೋ ಕಾಲು ತನ್ನ ಕಾಲನ್ನು ಟಚ್ ಮಾಡುತ್ತಿದೆ ಎಂದನಿಸಿ ಕಣ್ಬಿಟ್ಟು ನೋಡಿದರೆ ಎದುರುಗಡೆಯ ವ್ಯಕ್ತಿಯ ಕಾಲು, ಆತ ಬೈ ಮಿಸ್ಟೇಕ್ ತಾಗಿದ್ದು ಅಂತ ಹೇಳಿದಾಗ ಸುಮ್ಮನಾಗುತ್ತಾಳೆ. ಆಕೆ ಮತ್ತೆ ಕಣ್ಮುಚ್ಚಿದಾಗ ಅದೇ ರೀತಿಯ ಸ್ಪರ್ಶ, ಈಕೆಗೆ ಕೋಪ ಬಂದು ಆತನನ್ನು ಗುರಾಯಿಸುತ್ತಾಳೆ. ನಂತರ ಆಕೆ ನಿದ್ದೆ ಮಾಡುವುದಿಲ್ಲ. ಅವರಿದ್ದ ಸೀಟಿನ ಸ್ವಲ್ಪ ದೂರದಲ್ಲಿ ಒಂದು ಕುಟುಂಬ ನಿದ್ದೆಗೆ ಜಾರಿರುತ್ತೆ, ಅವರ ಜೊತೆ ಇರುವ 6 ವರ್ಷದ ಮಗಳನ್ನು ಕೂಡ ಒಂದು ತೆಳು ಶಾಲು ಹೊದಿಸಿ ಮಲಗಿಸಿರುತ್ತಾರೆ. ಈತ ಎದ್ದು ಹೋಗಿ ಆ ಮಗುವನ್ನು ಎತ್ತಿಕೊಂಡು ಬರ್ತಾನೆ, ಈಕೆಗೆ ಒಂದು ಕ್ಷಣ ಈ ಮಗು ಈತನ ಮಗುವಾಗಿರಬಹುದೇ ಅನಿಸುತ್ತೆ, ಮಗು ಗಾಢ ನಿದ್ದೆಯಲ್ಲಿತ್ತು, ಈ ವ್ಯಕ್ತಿ ಈಕೆ ತನ್ನನ್ನು ಗಮನಿಸುತ್ತಿದ್ದಾಳೆ ಎಂದು ಮಗುವನ್ನು ಮೆಲ್ಲನೆ ತಟ್ಟಿ ನಿದ್ದೆ ಮಾಡಿಸುವಂತೆ ಮಾಡ್ತಾನೆ, ಇವಳಿಗೆ ತುಂಬಾ ಗೊಂದಲ ಈ ಮಗು ಈತನದ್ದೇ ಆಗಿರಬಹುದಾ? ಇಲ್ಲದಿದ್ದರೆ ಅಷ್ಟು ಸಲೀಸಾಗಿ ಹೇಗೆ ಎತ್ತಿಕೊಂಡು ಬರ್ತಾನೆ ಅಥವಾ ಈತನ ಸಂಬಂಧಿಕರ ಮಗು ಆಗಿರಬಹುದಾ ಎಂದೆಲ್ಲಾ ನೂರೆಂಟು ಪ್ರಶ್ನೆ... ಆಕೆ ನಿದ್ದೆ ಮಾಡದೆ ಈತ ಏನು ಮಾಡ್ತಾನೆ ಎಂಬುವುದನ್ನು ಗಮನಿಸುತ್ತಾಳೆ. ಆತ ಮಗುವಿಗೆ ಹೊದಿಸಿದ್ದ ಆ ಶಾಲು ತೆಗೆದು ತನ್ನ ತೋಳಿಗೆ ಹಾಕ್ತಾನೆ, ಮಗುವನ್ನು ಅವನ ತೊಡೆಯಲ್ಲಿ ಮಲಗಿಸಿರುತ್ತಾನೆ, ಶಾಲಿನಿಂದ ಮಗು ಹಾಗೂ ತನ್ನ ಕೈ ಕವರ್ ಮಾಡಿ ಮಗುವನ್ನು ಸ್ಪರ್ಶಿಸಲು ಪ್ರಾರಂಭಿಸುತ್ತಾನೆ, ಅದನ್ನು ನೋಡಿದ ಈಕೆಗೆ ಶಾಕ್. ತಂದೆಯಾದ್ರೆ ಮಗಳಿಗೆ ಹೀಗೆ ಮಾಡಲ್ಲ, ಅದನ್ನು ತನ್ನ ಮೊಬೈಲ್‌ನಲ್ಲಿನ ರೆಕಾರ್ಡ್ ಮಾಡಿ ನಂತರ ಎದ್ದು ನಿಂತು ಈ ಮಗು ನಿನ್ನದಾ? ಅಂತ ಜೋರಾಗಿ ಕೇಳುತ್ತಾಳೆ... ಆಕೆ ಕಿರುಚಿದ ಶಬ್ದಕ್ಕೆ ಈ ಬೋಗಿಯಲ್ಲಿದ್ದವರಿಗೆ ಎಚ್ಚರವಾಗುತ್ತೆ, ಈತ ಅಲ್ಲ ಸಂಬಂಧಿಕರದ್ದು ಅಂತಾನೆ. ನೀನೇನು ಮಾಡ್ತಾ ಇದ್ದೀಯ ಅಂತ ಏರು ಧ್ವನಿಯಲ್ಲಿ ಈಕೆ ಕೇಳಿದಾಗ ಆತ ನಾನು ಏನೂ ಮಾಡಿಲ್ಲ ಅಂತಾನೆ ಅಷ್ಟರಲ್ಲಿಯೇ ಆ ಮಗುವಿನ ತಂದೆ-ತಾಯಿ ಅಲ್ಲಿಗೆ ಬರ್ತಾರೆ, ಬಂದವರೆ ಮಗುವನ್ನು ಅವನ ಕೈಯಿಂದ ಕಸಿದು ಇವನು ಯಾರೂ ಅಂತ ಗೊತ್ತೇ ಇಲ್ಲ ಅಂತಾರೆ. ಆವಾಗ ಆ ಬೋಗಿಯಲ್ಲಿದ್ದವರು ಈತನಿಗೆ ಸರಿಯಾಗಿ ಪಾಠ ಕಲಿಸಿ, ರೈಲ್ವೆ ಪೊಲೀಸರಿಗೆ ಒಪ್ಪಿಸುತ್ತಾರೆ. ಈ ಮಹಿಳೆ ಈ ಕ್ರೂರಿಯನ್ನು ಗಮನಿಸದೆ ಹೋಗಿದ್ದರೆ ಆತ ಆ ಮಗುವನ್ನು ಏನು ಮಾಡ್ತ ಇದ್ದ ಅಂತ ಊಹಿಸಲೂ ಭಯವಾಗುತ್ತೆ. ಮಕ್ಕಳ ಜೊತೆಗೆ ಹೀಗೆ ಬಸ್, ರೈಲು ಇವುಗಳಲ್ಲಿ ಪ್ರಯಾಣಿಸುವಾಗ ಅವರ ಸುರಕ್ಷತೆಯ ಬಗ್ಗೆ ಗಮನಹರಿಸಿ, ಎಲ್ಲಿ ರಣ ಹದ್ದುಗಳು ಹೊಂಚು ಹಾಕಿ ಕಾಯ್ತಾ ಇರುತ್ತದೋ ಹೇಳುವುದು ಕಷ್ಟ... #women #childprotection #railway #kannada #awareness

- ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.1
- ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ *ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು. ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ ತಮ್ಮಣ್ಣ ನವರು. ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ , ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ1
- ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.1
- ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.2
- ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.1
- ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ. ಇದೇ ಸಂಘಟನೆಯ ಸಹ ಸದಸ್ಯ ವೈಭವ್ ಬಾ ಎಂಬಾತ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ.1