ಭಕ್ತಿಯ ಸುಧೆ ಹರಿದ ಸಂಗೀತ ಸುಧೆ ಅಳ್ನಾವರ: ಶ್ರಾವಣ ಮಾಸದ ಪ್ರಯುಕ್ತ ಅಳ್ನಾವರ ವೀರಶೈವ ಸಮಾಜ ಹಾಗೂ ಅಕ್ಕಮಹಾದೇವಿ ಅಕ್ಕನ ಬಳಗದ ವತಿಯಿಂದ ವೀರಶೈವ ಕಲ್ಯಾಣ ಅಳ್ನಾವರ :ಸುದ್ದಿ ಅಳ್ನಾವರ: ಶ್ರಾವಣ ಮಾಸದ ಪ್ರಯುಕ್ತ ಅಳ್ನಾವರ ವೀರಶೈವ ಸಮಾಜ ಹಾಗೂ ಅಕ್ಕಮಹಾದೇವಿ ಅಕ್ಕನ ಬಳಗದ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಪವಾಡ ಪುರುಷರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತಿ ಮತ್ತು ಸಂಗೀತದ ಸುಧೆ ಹರಿದು, ನೆರೆದ ಭಕ್ತರ ಮನವನ್ನು ತಣಿಸಿತು. 12ನೇ ಶತಮಾನದ ಶರಣರು ಹಾಗೂ ಮಹನೀಯರನ್ನು ಸ್ಮರಿಸುವುದರೊಂದಿಗೆ ಹಾನಗಲ್ ಕುಮಾರಸ್ವಾಮಿಗಳನ್ನೂ ನೆನೆದು ಸಂಗೀತ ಸೇವೆ ಸಲ್ಲಿಸಲಾಯಿತು. ಸಂಗೀತ ಕಲಾವಿದ ಶೇಖರ ಹೇರೂರ ಅವರ ಗಾಯನಕ್ಕೆ ಪ್ರಶಾಂತ ಮುದ್ದೇಬಿಹಾಳ ಅವರು ತಬಲಾ ಸಾಥ್ ನೀಡಿದರು. ಪೂರ್ಣಿಮಾ ಮುತ್ನಾಳ ಹಾಗೂ ಸಂಗಡಿಗರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ‘ಆರಂಭಿಸಿದ ಭಕ್ತಿಯ ಪಯಣ’, ‘ಬಂದಾನ ನೋಡು ತಂಗಿ ಸಾಧು ಬಂದಾನ ನೋಡು’ ಸೇರಿದಂತೆ ವಿವಿಧ ಭಕ್ತಿಗೀತೆಗಳು ಹಾಗೂ ಹರಿನಾಮ ಸಂಕೀರ್ತನೆಯ ಮೂಲಕ ಕಲಾವಿದರು ಭಕ್ತಿಯ ಲೋಕವನ್ನೇ ಸೃಷ್ಟಿಸಿದರು. ತಬಲಾ ಮತ್ತು ಗಾಯನದ ಸುಮಧುರ ಸಂಗಮಕ್ಕೆ ಭಕ್ತರು ತಲೆದೂಗುತ್ತಾ ಸಂಗೀತದ ಸೊಗಡನ್ನು ಸವಿದರು. ಕಲಿಯುಗದಲ್ಲಿ ಹರಿನಾಮ ಸ್ಮರಣೆ ಹಾಗೂ ಬಸವಣ್ಣನವರ ತತ್ವಾದರ್ಶಗಳನ್ನು ನೆನೆಯುವುದರ ಮಹತ್ವವನ್ನು ಸಾರಿದ ಸಂಗೀತ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಭಾವ ಮೂಡಿಸಿತು. ಮಂಟಪದಲ್ಲಿ ಮೊಳಗಿದ ಭಕ್ತಿಗೀತೆಗಳ ನಿನಾದದಲ್ಲಿ ಭಕ್ತರು ಮಿಂದೆದ್ದು ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಸ್ವಾದಿಸಿದರು.
ಭಕ್ತಿಯ ಸುಧೆ ಹರಿದ ಸಂಗೀತ ಸುಧೆ ಅಳ್ನಾವರ: ಶ್ರಾವಣ ಮಾಸದ ಪ್ರಯುಕ್ತ ಅಳ್ನಾವರ ವೀರಶೈವ ಸಮಾಜ ಹಾಗೂ ಅಕ್ಕಮಹಾದೇವಿ ಅಕ್ಕನ ಬಳಗದ ವತಿಯಿಂದ ವೀರಶೈವ ಕಲ್ಯಾಣ ಅಳ್ನಾವರ :ಸುದ್ದಿ ಅಳ್ನಾವರ: ಶ್ರಾವಣ ಮಾಸದ ಪ್ರಯುಕ್ತ ಅಳ್ನಾವರ ವೀರಶೈವ ಸಮಾಜ ಹಾಗೂ ಅಕ್ಕಮಹಾದೇವಿ ಅಕ್ಕನ ಬಳಗದ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಪವಾಡ ಪುರುಷರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತಿ ಮತ್ತು ಸಂಗೀತದ ಸುಧೆ ಹರಿದು, ನೆರೆದ ಭಕ್ತರ ಮನವನ್ನು ತಣಿಸಿತು. 12ನೇ ಶತಮಾನದ ಶರಣರು ಹಾಗೂ ಮಹನೀಯರನ್ನು ಸ್ಮರಿಸುವುದರೊಂದಿಗೆ ಹಾನಗಲ್ ಕುಮಾರಸ್ವಾಮಿಗಳನ್ನೂ ನೆನೆದು ಸಂಗೀತ ಸೇವೆ ಸಲ್ಲಿಸಲಾಯಿತು. ಸಂಗೀತ ಕಲಾವಿದ ಶೇಖರ ಹೇರೂರ ಅವರ ಗಾಯನಕ್ಕೆ ಪ್ರಶಾಂತ ಮುದ್ದೇಬಿಹಾಳ ಅವರು ತಬಲಾ ಸಾಥ್ ನೀಡಿದರು. ಪೂರ್ಣಿಮಾ ಮುತ್ನಾಳ ಹಾಗೂ ಸಂಗಡಿಗರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ‘ಆರಂಭಿಸಿದ ಭಕ್ತಿಯ ಪಯಣ’, ‘ಬಂದಾನ ನೋಡು ತಂಗಿ ಸಾಧು ಬಂದಾನ ನೋಡು’ ಸೇರಿದಂತೆ ವಿವಿಧ ಭಕ್ತಿಗೀತೆಗಳು ಹಾಗೂ ಹರಿನಾಮ ಸಂಕೀರ್ತನೆಯ ಮೂಲಕ ಕಲಾವಿದರು ಭಕ್ತಿಯ ಲೋಕವನ್ನೇ ಸೃಷ್ಟಿಸಿದರು. ತಬಲಾ ಮತ್ತು ಗಾಯನದ ಸುಮಧುರ ಸಂಗಮಕ್ಕೆ ಭಕ್ತರು ತಲೆದೂಗುತ್ತಾ ಸಂಗೀತದ ಸೊಗಡನ್ನು ಸವಿದರು. ಕಲಿಯುಗದಲ್ಲಿ ಹರಿನಾಮ ಸ್ಮರಣೆ ಹಾಗೂ ಬಸವಣ್ಣನವರ ತತ್ವಾದರ್ಶಗಳನ್ನು ನೆನೆಯುವುದರ ಮಹತ್ವವನ್ನು ಸಾರಿದ ಸಂಗೀತ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಭಾವ ಮೂಡಿಸಿತು. ಮಂಟಪದಲ್ಲಿ ಮೊಳಗಿದ ಭಕ್ತಿಗೀತೆಗಳ ನಿನಾದದಲ್ಲಿ ಭಕ್ತರು ಮಿಂದೆದ್ದು ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಸ್ವಾದಿಸಿದರು.
- ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ ಲೋಕಾಯುಕ್ತರಿಗೆ ದೂರು ಮಾನ್ಯ ಲೋಕಾಯುಕ್ತರು ಶ್ರೀ ಬಿ ಎಸ್ ಪಾಟೀಲ್ ಸರ್ ಅವರಿಗೆ ಹಾವೇರಿ ಜಿಲ್ಲೆಯಲ್ಲಿ ಎನ್ ಆರ್ ಎಲ್ ಎಂ ಥೀಮ್ ನಲ್ಲಿ ಆಗಿರುವ ಹಗರಣ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನಡೆದಿರುವ ಹಗರಣ, ಹಾಗೂ ಅಕ್ಷರ ದಾಸೋಹ ಯೋಜನೆಯಹಳ್ಳಿ ನಡೆದಿರುವ ಹಗರಣ ಹಾಗೂ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕಾಗಿನೆಲೆ ರೋಡ ಹಗರಣ, ಕನವಳ್ಳಿಯಲ್ಲಿ ಮೊಲನ ಆಜಾದ್ ಮಾದರಿ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ 21 ಲಕ್ಷ ಹಗರಣ, ಜಮ್ ಪೋರ್ಟಲ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಡಿರುವ ಹಗರಣ, ಮತ್ತು ಎಂ ಜಿ ಎನ್ ಆರ್ ಜಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಇಂಜಿನಿಯರ್ಗಳನ್ನು ರುಚಿಯಿಂದಾಲ್ ಮೇಡಂ ಅವರು ವರ್ಗಾವಣೆ ಮಾಡಿರುವ ಆದೇಶವನ್ನು ತಡೆ ಹಿಡಿದಿರುವ ವಿರೋಧಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ದೂರನ್ನು ನೀಡಲಾಯಿತು. ಹಾವೇರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ ಮತ್ತು ವಿವಿಧ ಹಳ್ಳಿಗಳಲ್ಲಿ ಇರುವ ಗೋಮಾಳ ಜಾಗವನ್ನು ಖಾಸಗಿ ವ್ಯಕ್ತಿಗಳು ತಮ್ಮ ಹೆಸರಿಗೆ ಮಾಡಿಕೊಳ್ಳುವುದನ್ನು ಖಂಡಿಸಿ ಮತ್ತು ವೈದ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರ ವೈದ್ಯಕೀಯ ನಿರ್ಲಕ್ಷತೆ ವಿರುದ್ಧ, ಹಿರೇಕೆರೂರು ತಾಲೂಕ್ ಎಳವಾಳ ಗ್ರಾಮದ ಗೋಮಾಳ ಆಸ್ತಿಯನ್ನು ಒಬ್ಬರು ತಮ್ಮ ವೈಯಕ್ತಿಕ ಹೆಸರಿನಲ್ಲಿ ಮಾಡಿಕೊಂಡಿರುವ ವಿರುದ್ಧ ಮತ್ತು ಬ್ಯಾಡಗಿ ತಾಲೂಕ್ ಸುಭಾಷ್ ತುಪ್ಪದ್ ಇವರ ಮಗಳಾದ ವಂದನಾ ಅವರ ಚಿರಾಯು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷತೆಯಿಂದ ಆಗಿರುವ ಸಾವನ್ನು ಖಂಡಿಸಿ ಮತ್ತು ರಟ್ಟಿಹಳ್ಳಿ ತಾಲೂಕ ಚಾಂದ್ ಪೀರ್ 6 ವರ್ಷದ ಮಗು ಜಿಲ್ಲಾ ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷತೆಯಿಂದ ಕೋಮಾದಲ್ಲಿ ಹೋಗಿರುವುದನ್ನು ಖಂಡಿಸಿ ಮಾನ್ಯ ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ತನಿಖೆಯನ್ನು ನಡೆಸಲು ಆಗ್ರಹಿಸಲಾಯಿತು1
- ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 🎙️ ನಿಮ್ಮ ಸಿಂಪಲ್ ಸಿದ್ದು ವಾಹಿನಿ “ನಿಮ್ಮ ನಾಯಕ – ನಿಮ್ಮ ಮುಂದೆ” ವಿಶೇಷ ಸಂದರ್ಶನ ಕಾರ್ಯಕ್ರಮ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 9743340230 shuru news ನಿಮ್ಮ ಸಿಂಪಲ್ ಸಿದ್ದು 97433402301
- *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ಆರಂಭದಲ್ಲೇ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕೋರಲಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಪಡೆಯಲು ಕೊಂಚ ವಿಳಂಬವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು. ವಿಜಯಪುರ ವಿಮಾನ ನಿಲ್ದಾಣವನ್ನು ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ₹618.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಕೆಎಸ್‌ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು. ಲೋಕೋಪ ಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರನ್ನಾಗಿ (PMC) ನೇಮಕ ಮಾಡಲಾಗಿದೆ ಎಂದರು. ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಹಾಗೂ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮೂರು ವಾರಗಳ ಹಿಂದೆಯಷ್ಟೇ ತಡೆಯಾಜ್ಞೆ ತೆರವಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.1
- ದಲಿತರು ಬೇಕಾ?ನಾಗೇಂದ್ರ ಬೇಕಾ? ವಿಪಕ್ಷಗಳ ಪ್ರಶ್ನೆಗೆ ಉತ್ತರವೇ ಸಿಗ್ಲಿಲ್ಲ1
- "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏4
- ಕಾಕಿ ತೊಟ್ಟ ತಕ್ಷಣ ಎಲ್ಲವನ್ನು ಅಳಬಹುದು ಎಂಬ ಮುಟ್ಟಾಳತನಕ್ಕೆ ಏನನ್ನಬೇಕು? ಹಿರಿಯ ನಾಗರಿಕ ಅನ್ನುವ ವಿವೇಚನೆ ಇಲ್ಲದೆ ಕೈ ಮಾಡಿದ ಇಲ್ಲೊಬ್ಬ ಭ್ರಷ್ಟ ನೋಡಿ!?1
- ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ1
- ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ, ಎಂ ಎನ್ ನಾಯಕ್ ನೇತೃತ್ವದಲ್ಲಿ ಲೋಕಾಯುಕ್ತರಿಗೆ ಮನವಿ. ಹಾವೇರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ ಮತ್ತು ವಿವಿಧ ಹಳ್ಳಿಗಳಲ್ಲಿ ಇರುವ ಗೋಮಾಳ ಜಾಗವನ್ನು ಖಾಸಗಿ ವ್ಯಕ್ತಿಗಳು ತಮ್ಮ ಹೆಸರಿಗೆ ಮಾಡಿಕೊಳ್ಳುವುದನ್ನು ಖಂಡಿಸಿ ಮತ್ತು ವೈದ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರ ವೈದ್ಯಕೀಯ ನಿರ್ಲಕ್ಷತೆ ವಿರುದ್ಧ, ಹಿರೇಕೆರೂರು ತಾಲೂಕ್ ಎಳವಾಳ ಗ್ರಾಮದ ಗೋಮಾಳ ಆಸ್ತಿಯನ್ನು ಒಬ್ಬರು ತಮ್ಮ ವೈಯಕ್ತಿಕ ಹೆಸರಿನಲ್ಲಿ ಮಾಡಿಕೊಂಡಿರುವ ವಿರುದ್ಧ ಮತ್ತು ಬ್ಯಾಡಗಿ ತಾಲೂಕ್ ಸುಭಾಷ್ ತುಪ್ಪದ್ ಇವರ ಮಗಳಾದ ವಂದನಾ ಅವರ ಚಿರಾಯು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷತೆಯಿಂದ ಆಗಿರುವ ಸಾವನ್ನು ಖಂಡಿಸಿ ಮತ್ತು ರಟ್ಟಿಹಳ್ಳಿ ತಾಲೂಕ ಚಾಂದ್ ಪೀರ್ ಆರು ವರ್ಷದ ಮಗು ಜಿಲ್ಲಾ ಕೋಮಾದಲ್ಲಿ ಹೋಗಿರುವುದನ್ನು ಖಂಡಿಸಿ ಮಾನ್ಯ ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ತನಿಖೆಯನ್ನು ನಡೆಸಲು ಆಗ್ರಹಿಸಲಾಯಿತು.1